Breaking News

ಜಿಲ್ಲೆ

ರೈತರ ಆಕ್ರೋಶಕ್ಕೆ ಕಾರಣವಾಗಿದೆ ಲೈಲಾ ಶುಗರ್ಸ ಕಾರ್ಖಾನೆ

ಖಾನಾಪುರದ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಬ್ಬು ಪೂರೈಕೆ ಮಾಡಿದ ರೈತರು ಸಕ್ಕರೆ ಪಡೆಯಲು ಪರದಾಡಿದ ಘಟನೆ ನಡೆದಿದೆ. ಹೌದು ಮಹಾಲಕ್ಷ್ಮೀ ಗ್ರುಪ್ ಸಂಚಾಲಿತ ಲೈಲಾ ಶುಗರ್ಸ್ ಕಾರ್ಖಾನೆಯಲ್ಲಿ ಕಳೆದ ದಿನಾಂಕ 14ರಿಂದ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಪ್ರತಿ ಟನ್ 25 ರೂಪಾಯಿ ದರದಲ್ಲಿ ಸಕ್ಕರೆ ಪಡೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿತ್ತು. ಆದರೆ ತಾಲೂಕಿನ ಗಡಿಭಾಗ ಸೇರಿದಂತೆ ತಾಲೂಕಿನ ಬೇರೆ ಕಡೆಯಿಂದ ಬಂದು ತಮ್ಮ ಸ್ಲೀಪ್ ತೋರಿಸಿ ಆಧಾರ್ ಕಾರ್ಡ್ …

Read More »

ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಆಟಗಾರರು ಪದಕ ಬೇಟೆಯಾಡಿದ್ದಾರೆ.

ನೋಯ್ಡಾದಲ್ಲಿ ಜರುಗಿದ ಮೊದಲನೇ ಭಾರತೀಯ ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿ ಜಿಲ್ಲೆಯ ಆಟಗಾರರು ಪದಕ ಬೇಟೆಯಾಡಿದ್ದಾರೆ. ಇದೇ ನ.6ರಿಂದ 11ರವರೆಗೆ ನೋಯ್ಡಾದಲ್ಲಿ ನಡೆದ ಅಂತರರಾಷ್ಟ್ರೀಯ ವ್ಹೀಲ್‍ಚೇರ್ ಬಾಸ್ಕೇಟ್‍ಬಾಲ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಆಟಗಾರರಾದ ಬಸವರಾಜ್ ಸುಣಧೋಳಿ, ಲಲಿತಾ ಗವಸ, ಮಾಯಾ ಸಣ್ಣಲಿಂಗನ್ನವರ ಭಾರತ ತಂಡವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಕ್ರೀಡಾಪಟುಗಳ ಸಾಧನೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಸಿಇಓಗಳು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕ …

Read More »

ರಮೇಶ್ ಸಾಹುಕಾರ ಜೆಡಿಎಸ್ ಸೇರ್ಪಡೆ ಬಗ್ಗೆ ವಿಶ್ವಾಸ ವ್ಯಕ್ತಡಿಸಿದ್ರ H.D K.?

ಜೆಡಿಎಸ್ ಬಿಟ್ಟು ಕಾಂಗ್ರೆಸ್, ಬಿಜೆಪಿಗೆ ಹೋಗಿರುವ ಬಹಳಷ್ಟು ನಾಯಕರು ಮನಪರಿವರ್ತನೆಯಾಗಿ ವಾಪಸ್ ಜೆಡಿಎಸ್‍ಗೆ ಬರಬಹುದು ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಈ ಸಮಯದಲ್ಲಿ ಏನಾದ್ರೂ ರಾಜಕೀಯ ದ್ರುವೀಕರಣ ಆಗಿ ರಮೇಶ ಜಾರಕಿಹೊಳಿ ಅವರು ಜೆಡಿಎಸ್ ಸೇರ್ಪಡೆಯಾಗುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ ಕುಮಾರಸ್ವಾಮಿ ನನ್ನ ಮುಂದೆ ಈಗ ಅದ್ಯಾವುದೂ ಪ್ರಶ್ನೆ ಇಲ್ಲ. ಈಗ ನನ್ನ ಮುಂದೆ …

Read More »

ಮುಧೋಳದಲ್ಲಿ 3 ದಿನ ನಿಷೇಧಾಜ್ಞೆ; ತೀವ್ರತೆ ಪಡೆದ ಕಬ್ಬು ಬೆಳೆಗಾರರ ಹೋರಾಟ

ಬಾಗಲಕೋಟೆ: ಕಳೆದ 45 ದಿನಗಳಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಧೋಳದಲ್ಲಿ ಮೂರು ದಿನಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದೆ. ಇದರ ಮಧ್ಯೆಯೇ ನಿಷೇಧಾಜ್ಞೆ ಜಾರಿ ಬೆನ್ನಲ್ಲೇ ಮತ್ತಷ್ಟು ಆಕ್ರೋಶಗೊಂಡ ರೈತರು, ಹಳ್ಳಿ-ಹಳ್ಳಿಯಿಂದ ಮುಧೋಳಕ್ಕೆ ಆಗಮಿಸಿ ಹೋರಾಟ ಮತ್ತಷ್ಟು ತೀವ್ರಗೊಳಿಸಿದ್ದಾರೆ. ಮುಧೋಳದಿಂದ ವಿವಿಧ ಹಳ್ಳಿಗಳಿಗೆ ತೆರಳುವ ಪ್ರಮುಖ ರಸ್ತೆ-ಹೆದ್ದಾರಿಗಳನ್ನು ಬಂದ್‌ ಮಾಡಿ, ರಸ್ತೆಯಲ್ಲೇ ಒಲೆ ಹೂಡಿ ಅಡುಗೆ ಮಾಡಿ ಮಧ್ಯಾಹ್ನದ ಊಟ ಮಾಡಿದ್ದಾರೆ. ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ವರ್ಷ …

Read More »

ಹಿಂದೂ ಎಂಬುದು ಧರ್ಮವಲ್ಲ: ಸಿದ್ಧರಾಮಶ್ರೀ

ಬೆಳಗಾವಿ: ‘ಹಿಂದೂ ಎಂಬುದು ಧರ್ಮವಲ್ಲ, ಅದು ಜೀವನಕ್ರಮವೆಂದು ಡಾ.ಸರ್ವ‍ಪಲ್ಲಿ ರಾಧಾಕೃಷ್ಣನ್ ಅವರೇ ಹೇಳಿದ್ದಾರೆ. ಆದರೆ, ಇಂದು ವೈದಿಕ ಧರ್ಮಕ್ಕೆ ಹಿಂದೂ ಧರ್ಮ ಎನ್ನಲಾಗುತ್ತಿದೆ. ಹೀಗೆ ಉಚ್ಚರಿಸಿದರೆ ಲಿಂಗಾಯತರೇನು ಹಿಂದೂಗಳಾಗು ವುದಿಲ್ಲ’ ಎಂದು ಗದುಗಿನ ತೋಂಟದಾರ್ಯ ಮಠದ ಪೀಠಾಧಿಪತಿ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.   ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೇದ, ಆಗಮ, ಪುರಾಣವನ್ನು ವಿರೋಧಿಸಿದ ಲಿಂಗಾಯತ ಅವೈದಿಕ ಧರ್ಮವಾಗಿದೆ. ಲಿಂಗಾಯತರು ಮತ್ತು ಹಿಂದೂಗಳ ಆಚರಣೆಯಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ಇವೆ’ ಎಂದರು. ‘ಹಿಂದೂಗಳು …

Read More »

ರೈತನಿಗೆ ಪರಿಹಾರ ವಿಳಂಬ: ಅಧಿಕಾರಿಗಳ ವಾಹನ ಜಪ್ತಿ

ಚಿಕ್ಕೋಡಿ : ರಸ್ತೆ ನಿರ್ಮಿಸಲು ಸ್ವಾದೀನ ಪಡೆದಿದ್ದ ಭೂಮಿಗೆ ರೈತನಿಗೆ ₹11 ಲಕ್ಷ ಪರಿಹಾರಧನ ನೀಡಲು ವಿಳಂಬ ಹಿನ್ನೆಲೆಯಲ್ಲಿ ಕೋರ್ಟ್‌ ಆದೇಶದಂತೆ ಉಪವಿಭಾಗಾಧಿಕಾರಿ ಮತ್ತು ಲೋಕೋಪಯೋಗಿ ಇಲಾಖೆ ಎಇಇ ಅವರ ವಾಹನಗಳನ್ನು ಗುರುವಾರ ಜಪ್ತಿ ಮಾಡಲಾಗಿದೆ.   15 ವರ್ಷದ ಹಿಂದೆ ಚಿಕ್ಕೋಡಿ ತಾಲ್ಲೂಕಿನ ಮಾಂಗೂರ (ಈಗಿನ ನಿಪ್ಪಾಣಿ ತಾಲ್ಲೂಕು) ಗ್ರಾಮದ ರೈತ ಬುದ್ದಿರಾಜ ಶಾಂತಿನಾಥ ಪಾಟೀಲ ಅವರ 31 ಗುಂಟೆ ಭೂಮಿಯನ್ನು ಇಲಾಖೆ ಪಡೆದುಕೊಂಡಿತ್ತು. ಈವರೆಗೂ ರೈತನಿಗೆ ಪರಿಹಾರ ಧನ …

Read More »

ಕಾಫಿ ಪುಡಿ ಕಲಬೆರಕೆ: ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್‌

ಬೆಂಗಳೂರು: ಕಲಬೆರಕೆ ಕಾಫಿ ಪುಡಿ ಮಾರಾಟ ಮಾಡಿದ್ದ ಪ್ರಕರಣದ ಅಪರಾಧಿಗೆ ಹಾಸನದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್‌ ವಿಧಿಸಿದ್ದ ಜೈಲು ಶಿಕ್ಷೆಯನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ಶಿಕ್ಷೆ ರದ್ದು ಕೋರಿ ಸಕಲೇಶಪುರದ ‘ಸೆಲೆಕ್ಟ್ ಕಾಫಿ ವರ್ಕ್ಸ್‌’ ಮಾಲೀಕ ಸಯ್ಯದ್ ಅಹ್ಮದ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಬಿ.ಪ್ರಭಾಕರ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠ ವಜಾಗೊಳಿಸಿದೆ.   ಪ್ರಕರಣವೇನು?: ಪೊಟ್ಟಣದ ಮೇಲೆ ಬ್ಯಾಚ್ ಸಂಖ್ಯೆ ಹಾಗೂ ಎಕ್ಸ್‌ಪೈರಿ ದಿನಾಂಕ ನಮೂದಿಸದೆ ಕಾಫಿ ಪುಡಿ …

Read More »

ಉತ್ತರ ಕರ್ನಾಟಕ ಮಂದಿಗೆ ಸಿಹಿ ಸುದ್ದಿ: ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್ ರೈಲು

ಹುಬ್ಬಳ್ಳಿ ನವೆಂಬರ್ 16: ಉತ್ತರ ಕರ್ನಾಟಕದ ಮಂದಿಗೆ ಹೀಗೊಂದು ಸಿಹಿ ಸುದ್ದಿ. ಅದೇನೆಂದರೆ ಹೈ-ಸ್ಪೀಡ್ ವಂದೇ ಭಾರತ್ ರೈಲು ಸೇವೆಯನ್ನು ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಒದಗಿಸಲು ಯೋಜನೆ ರೂಪಸಲಾಗುತ್ತಿದೆ. ಇದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕರೆ ಮುಂದೊಂದು ದಿನ ಕರ್ನಾಟಕದಲ್ಲಿ ಎರಡನೇ ವಂದೇ ಭಾರತ್ ರೈಲು ಅದರಲ್ಲೂ ಉತ್ತರ ಕರ್ನಾಟಕದ ಕಡೆಗೆ ಪ್ರಯಾಣಿಸಲಿದೆ. ಕರ್ನಾಟಕದ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಹೊಸ ಹೈ-ಸ್ಪೀಡ್ ವಂದೇ ಭಾರತ್ ರೈಲು ಸೇವೆಯನ್ನು ಪ್ರಾರಂಭಿಸಲು ನೈಋತ್ಯ ರೈಲ್ವೆ (SWR) ರೈಲ್ವೇ …

Read More »

ಅರಮನೆಯಲ್ಲಿರುವ ಗುಂಬಜ್ ಮಾದರಿ ಗೋಪುರ ಕೆಡವಲು ತಾಕತ್ ಇದೆಯೇ?: ಸಿ.ಎಂ.ಇಬ್ರಾಹಿಂ ಪ್ರಶ್ನೆ

ಮೈಸೂರು: ಟಿಪ್ಪುಸುಲ್ತಾನ್ ಬಗ್ಗೆ ಬ್ರಿಟಿಷರು ಹಾಡಿ ಹೊಗಳಿದ್ದಾರೆ. ರಾಜಮನೆತನದವರು ಟಿಪ್ಪು ಹುತಾತ್ಮರಾದ ಮೇಲೆ ಹೇಳಿರುವ ಮಾತುಗಳು ಇತಿಹಾಸದಲ್ಲಿ ದಾಖಲಾಗಿದ್ದರೂ ಸಂಸದ ಪ್ರತಾಪ್ ಸಿಂಹ ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಡಬೇಕು. ಟಿಪ್ಪು ಬಗ್ಗೆ ಏನು ಅರಿಯದೆ ಸುಳ್ಳು ಹೇಳುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ದಾಳಿ ನಡೆಸಿದರು.   ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಟಿಪ್ಪುಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ನಾಯಕ. ಅವರ ಕಾಲದಲ್ಲಿ ನಡೆದಿರುವ ಕ್ರಾಂತಿಕಾರಕ ಯೋಜನೆಗಳು, ಅಭಿವೃದ್ಧಿ, ಹೋರಾಡಿದನ್ನು …

Read More »

ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಸರಕಾರದ ಹಂತಕ್ಕೆ

ಬೆಂಗಳೂರು: ಲೈಂಗಿಕ ಹಗರಣದಲ್ಲಿ ಸಿಲುಕಿರುವ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಶರಣರು ಜೈಲು ಸೇರಿರುವ ಹಿನ್ನೆಲೆಯಲ್ಲಿ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ ಈಗ ಸರ್ಕಾರದ ಹಂತಕ್ಕೆ ತಲುಪಿದೆ. ಮಠದ ಆಡಳಿತಾಧಿಕಾರಿ ನೇಮಕ ಪ್ರಕ್ರಿಯೆಗೆ ಸಂಬಂಧಪಟ್ಟಂತೆ ಚಿತ್ರದುರ್ಗ ಜಿಲ್ಲಾಧಿಕಾರಿ ಕಡತವನ್ನು ಸರ್ಕಾರ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದ್ದು, ಸರ್ಕಾರ ಶೀಘ್ರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.   ಈ‌ ಕಡತ ಈಗ ಕಂದಾಯ ಇಲಾಖೆ ಕಾರ್ಯದರ್ಶಿ ಕಚೇರಿಯನ್ನು ತಲುಪಿದ್ದು, …

Read More »