Breaking News

ಜಿಲ್ಲೆ

ವ್ಯಾಪಾರಿ ಅಪಹರಿಸಿ ಹಣ ಲೂಟಿ: ಏಳು ಮಂದಿ ಬಂಧನ

ಬೆಳಗಾವಿ: ಹೋಟೆಲ್‌ ವ್ಯಾಪಾರಿಯೊಬ್ಬರನ್ನು ಅಪಹರಣ ಮಾಡಿ ₹ 1 ಲಕ್ಷ ವಸೂಲಿ ಮಾಡಿದ್ದ ಏಳು ಆರೋಪಿಗಳನ್ನು ಮುರಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಾಳೇಶ ಹೊಂಡಪ್ಪನವರ, ಶ್ರೀಶೈಲ ಹೊಂಡಪ್ಪನವರ, ಬಂದೇನವಾಜ್ ಅತ್ತಾರ್, ರಮೇಶ ‌ಚಂದರಗಿ, ಮಲ್ಲಪ್ಪ ‌ಕೋಮರ್, ಇಮ್ರಾನ್ ಮುಲ್ಲಾ, ನಾಗಪ್ಪ ರಂಗಣ್ಣನವರ ಬಂಧಿತರು.   ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸೊಪ್ಪಾಡ್ಲ ಗ್ರಾಮದ ಸಾಬಣ್ಣ ಮೆಗಾಡಿ ಅವರನ್ನು ವಾರದ ಹಿಂದೆ ಸಾಬಣ್ಣ ಅವರನ್ನು ಯರಗಟ್ಟಿಯಲ್ಲಿ ಅಪಹರಿಸಿದ ಆರೋಪಿಗಳು, ಬೈಲಹೊಂಗಲ ತಾಲ್ಲೂಕಿನ ನೇಸರಗಿಗೆ …

Read More »

ಖಾನಾಪುರ | ಕಾಡಾನೆ ಹಿಂಡು ದಾಳಿ: ಅಪಾರ ಬೆಳೆ ಹಾನಿ

ಖಾನಾಪುರ: ತಾಲ್ಲೂಕಿನ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಸುತ್ತಲಿನ ಕೃಷಿ ಜಮೀನುಗಳಲ್ಲಿ ಶನಿವಾರ ನಸುಕಿನಜಾವ 16 ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಬೆಳೆ ತಿಂದು, ತುಳಿದು ನಾಶ ಮಾಡಿವೆ. ಇದರಿಂದ ಗ್ರಾಮಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.   ಶುಕ್ರವಾರ ರಾತ್ರಿಯೇ ದಾಂಡೇಲಿ ಅರಣ್ಯದಿಂದ ಬಂದ ನಾಲ್ಕು ಮರಿ ಹಾಗೂ 12 ದೊಡ್ಡ ಆನೆಗಳು ತಾವರಗಟ್ಟಿ, ಚುಂಚವಾಡ ಮಾರ್ಗವಾಗಿ ಭೂರಣಕಿ ಗ್ರಾಮದ ಕಡೆ ಬಂದವು. ಮಧ್ಯರಾತ್ರಿಯಿಂದ ಶನಿವಾರ ನಸುಕಿನಜಾವದವರೆಗೆ …

Read More »

ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಆಹಾರ, ಉಡುಗೆ – ತೋಡುಗೆಯಲ್ಲಿ ವಿನೂತನ ಕಲಿಕಾ ಶೈಲಿ….

ಬೆಳಗಾವಿ ಶನಿವಾರ ದಿನಾಂಕ 10/12/22 ರಂದು ನಗರದ ಪೋರ್ಟ್ ರಸ್ತೆಯಲ್ಲಿ ಇರುವ ವಿಟ್ಟಲಾಚಾರ್ಯ ಶಿವಣಗಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ವಿಶೇಷ ಕಲಿಕಾ ಕಾರ್ಯಕ್ರಮದ ಕೊನೆಯ ದಿನವಾಗಿತ್ತು… ಶಾಲೆಯ ಎಲ್ ಕೆಜಿ ಹಾಗೂ ಯುಕೆಜಿ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಆರು ದಿನಗಳ ಕಾಲ ಆರು ಬಣ್ಣಗಳ ಉಡುಗೆ ತೊಟ್ಟು ಬರುವಂತೆ ಹೇಳಲಾಗಿತ್ತು, ಅದೇರೀತಿ, ಅದೇ ಬಣ್ಣದ ಆಹಾರ ತರುವುದನ್ನು ಹೇಳಲಾಗಿತ್ತು, ಆ ಪ್ರಕಾರ ಪೋಷಕರ ಸಹಾಯದಿಂದ ಮಕ್ಕಳೆಲ್ಲ ಅದೇ ಬಣ್ಣಗಳ …

Read More »

ಡಿಸೆಂಬರ್ 19ರ ಒಳಗೆ ಮೀಸಲಾತಿ ಸಿಗದಿದ್ದರೆ, 22 ಕ್ಕೆ ಸುವರ್ಣ ಸೌಧಕ್ಕೆ ಮುತ್ತಿಗೆ

ಬೆಳಗಾವಿ: ಡಿ.19 ರ ಒಳಗಾಗಿ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮಿಸಲಾತಿ ನೀಡಬೇಕು. ಸರ್ಕಾರ ತಾನೇ ಕೊಟ್ಟ ಗಡುವಿನ ಪ್ರಕಾರ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ಡಿ.22 ನೇ ತಾರಿಕು ಸುವರ್ಣಸೌದದ ಎದುರು ಪಂಚಮಸಾಲಿ ವಿರಾಠ ಪಂಚಮ ಶಕ್ತಿ ಪ್ರದರ್ಶನ ಮಾಡಿ 25 ಲಕ್ಷ ಜನ ಸೇರಿಸುತ್ತೇವೆ ಎಂದು ಬಸವ ಶ್ರೀ ಜಯಮೃತ್ಯುಂಜಯ ಸ್ವಾಮಿ ಹೇಳಿದರು. ‌ ನಗರದ ಗಾಂಧಿ ಭವನದಲ್ಲಿ 2 ಮೀಸಲಾತಿಗಾಗಿ ನಡೆಸಿದ ಸಭೆ ಬಳಿಕ ಮಾದ್ಯಮಗೋಷ್ಠಿ ನಡೆಸಿ …

Read More »

ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ: ಅಧಿಕಾರಿಗಳ ಜತೆ ಕಾಗೇರಿ ಸಭೆ

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಡಿ.19 ರಿಂದ 30 ರವರೆಗೆ ವಿಧಾನ ಮಂಡಲ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅವಧಿಯಲ್ಲಿ ವಸತಿ, ಊಟೋಪಾಹಾರ, ಸಾರಿಗೆ ಮತ್ತಿತರ ವ್ಯವಸ್ಥೆಯು ಪ್ರತಿ ಬಾರಿಯಂತೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು ಎಂದು ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   ವಿಧಾನಮಂಡಲದ ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಸತಿ, ಊಟ, …

Read More »

ಮಹಾರಾಷ್ಟ್ರದ ಪ್ರತಿಭಾವಂತ ಬಡ ವಿದ್ಯಾರ್ಥಿಗೆ ಎಂ.ಬಿ.ಪಾಟೀಲ್ ನೆರವು

ವಿಜಯಪುರ : ಆರ್ಥಿಕ ಸಂಕಷ್ಟದಿಂದ ವೈದ್ಯಕೀಯ ಪ್ರವೇಶ ಸಿಕ್ಕರೂ ಪ್ರವೇಶ ಪಡೆಯಲಾಗದ ಮತ್ತೋರ್ವ ವಿದ್ಯಾರ್ಥಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರ್ಥಿಕ ನೆರವು ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಗೆ ಭಾಷಾ ಸಂಕುಚಿತತೆ ಎಲ್ಲೆ ಮೀರಿ ಮಾನವೀಯತೆ ಮೆರೆದಿದ್ದಾರೆ.   ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನೆಲೆಸಿರುವ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ಮೂಲತ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮುಚ್ಚಂಡಿ ಗ್ರಾಮದವರು. …

Read More »

ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಯಲ್ಲಿ ಕಳ್ಳತನ

ಬೆಳಗಾವಿ: ತಹಶೀಲ್ದಾರರೊಬ್ಬರು ಚುನಾವಣಾ ಕರ್ತವ್ಯಕ್ಕೆ ತೆರಳಿದ್ದನ್ನು ತಿಳಿದು ಮನೆಗೆ ಹೊಕ್ಕಿದ್ದ ಕಳ್ಳರು 25 ತೊಲ ಚಿನ್ನ ಮಾತ್ರವಲ್ಲದೆ ಇತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಈ ಕಳ್ಳತನ ನಡೆದಿದೆ. ಗೋಕಾಕ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಚುನಾವಣೆ ಕರ್ತವ್ಯ ನಿಮಿತ್ತ ಅವರು ಮನೆಗೆ ಬೀಗ ಹಾಕಿ ತೆರಳಿದ್ದನ್ನು ತಿಳಿದ ಕಳ್ಳರು ಮನೆಗೆ ಹೊಕ್ಕಿದ್ದರು. ತಡರಾತ್ರಿಯಲ್ಲಿ ಕಳ್ಳರು ಬೀಗ ಒಡೆದು ಒಳಹೊಕ್ಕಿದ್ದರು. ಗೋಕಾಕದ ಲೋಕೋಪಯೋಗಿ ಇಲಾಖೆಯ …

Read More »

ಶಾಲಾ ಪ್ರವಾಸದ ವೇಳೆ ಕಾಲು ಜಾರಿ ಬಿದ್ದು ವಿದ್ಯಾರ್ಥಿನಿ ಸಾವು

ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಕೆ ಬೆಳಗಲ್ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಕೈಗೊಳ್ಳಲಾಗಿದ್ದ ಪ್ರವಾಸ ಸಮಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾಳೆ. 10ನೇ ತರಗತಿಯಲ್ಲಿ ಓದುತ್ತಿದ್ದ ನಾಗಲಕ್ಷ್ಮಿ(16) ಮೃತ ವಿದ್ಯಾರ್ಥಿನಿ. ಶ್ರವಣಬೆಳಗೊಳದಲ್ಲಿ ಮೆಟ್ಟಿಲು ಹತ್ತುವಾಗ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿರುವುದಾಗಿ ಬಿ.ಇ.ಒ ಗುರಪ್ಪ ತಿಳಿಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕೆ.ಬೆಳಗಲ್ ಗ್ರಾಮಕ್ಕೆ ತೆರಳಿ ಘಟನೆ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ …

Read More »

ಜಾತ್ರೆ: ವಸ್ತುಪ್ರದರ್ಶನಕ್ಕೆ ಚಾಲನೆ

ರಾಮದುರ್ಗ: ‘ಜಾತ್ರೆಗಳಲ್ಲಿ ಆಯೋಜಿಸುವ ವಸ್ತುಪ್ರದರ್ಶನ ರೈತರಿಗೆ ಮತ್ತು ಯಾತ್ರಿಕರಿಗೆ ಉಪಯುಕ್ತವಾಗುವಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ಕಾಟಾಚಾರದ ವಸ್ತುಪ್ರದರ್ಶನ ಮಾಡಬಾರದು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.   ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಗ್ರಾಮ ಪಂಚಾಯ್ತಿ ಏರ್ಪಡಿಸಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಕೃಷಿಗೆ ಉತ್ತೇಜನ ನೀಡುವಂಥ ಮಳಿಗೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೃಷಿ , ತೋಟಗಾರಿಕೆ, ಅರಣ್ಯ ಇಲಾಖೆಗಳು ರೈತರಿಗೆ ನೂತನ ತಾಂತ್ರಿಕತೆಯ ಪರಿಚಯ ಮಾಡಿಕೊಡಬೇಕು’ ಎಂದರು. ತಹಶೀಲ್ದಾರ್‌ …

Read More »

ಗುರ್ಲಾಪುರ: ಯೋಧನ ಅಂತ್ಯಕ್ರಿಯೆ

ಮೂಡಲಗಿ: ಬಹು ಅಂಗಾಂಗ ವೈಫಲ್ಯದಿಂದ ದೆಹಲಿಯಲ್ಲಿ ಮಂಗಳವಾರ ನಿಧನರಾದ ಭಾರತೀಯ ಸೇನೆಯ ಹವಾಲ್ದಾರ್ ಪ್ರಕಾಶ ಉದ್ದಪ್ಪ ಇವ್ವಕ್ಕಿ ಅವರ ಅಂತ್ಯಕ್ರಿಯೆ ತಾಲ್ಲೂಕಿನ ಗುರ್ಲಾಪುರ ಗ್ರಾಮದಲ್ಲಿ ಗುರುವಾರ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು.   ದೆಹಲಿಯಿಂದ ಬೆಳಗಾವಿಯ ವಿಮಾನನಿಲ್ದಾಣಕ್ಕೆ ಬಂದ ಯೋಧನ ಪಾರ್ಥಿವಶರೀರವನ್ನು ಭಾರತೀಯ ಸೇನಾ ವಾಹನದ ಮೂಲಕ ಮಧ್ಯಾಹ್ನ 12ಕ್ಕೆ ಮೂಡಲಗಿಗೆ ತರಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ಗುರ್ಲಾಪುರ ಗ್ರಾಮಕ್ಕೆ ತರಲಾಯಿತು. ದಾರಿಯುದ್ದಕ್ಕೂ ‘ಭಾರತ ಮಾತಾಕೀ ಜೈ, ಅಮರ್‌ …

Read More »