Breaking News

ಜಿಲ್ಲೆ

ವಿದ್ಯಾರ್ಥಿನಿಯರನ್ನು ಬಾರ್ ಮುಂದೆ ಇಳಿಸಿದ ಸಾರಿಗೆ ಚಾಲಕ

ಬೆಳಗಾವಿ ತಾಲೂಕಿನ ಸುಳಗಾ ಶಾಲೆಯ ಮಕ್ಕಳು ಕುದುರೆಮನೆಯ ಮಾರ್ಗವಾಗಿ ಬರುವ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸರಿಯಾದ ಬಸ್ ನಿಲ್ದಾಣಕ್ಕೆ ನಿಲ್ಲಿಸದೆ ಚಾಲಕ ಬಾರ್ ಅಂಗಡಿ ಮುಂದೆ ನಿಲ್ಲಿಸಿದ್ದಕ್ಕೆ ಗ್ರಾಮಸ್ಥರು ಬಸ್ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಎಂದಿನಂತೆ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಮರಳಿ ಸಾರಿಗೆ ಬಸ್ ನಲ್ಲಿ ಬರುವಾಗ ಸುಮಾರು 16 ವಿದ್ಯಾರ್ಥಿನಿಯರು ಸುಳಗಾಕ್ಕೆ ಇಳಿಸದೆ ಬಾರ್ ವೊಂದರ ಮುಂದೆ …

Read More »

ಬೆಳಗಾವಿ ಅಧಿವೇಶನದಲ್ಲಿ ಪೂರ್ಣ ಹಾಜರಾತಿ ಕಡ್ಡಾಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಳಗಾವಿ: ‘ಇದೇ 19ರಿಂದ 30ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನ ಅತ್ಯಂತ ಮಹತ್ವ ಪಡೆದಿದೆ. ಇದರಲ್ಲಿ ಪೂರ್ಣ ಹಾಜರಾತಿ ಇರಬೇಕೆಂದು ಎಲ್ಲ ಶಾಸಕರಿಗೂ ಸೂಚಿಸಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.   ಅಧಿವೇಶನದ ಪೂರ್ವಸಿದ್ಧತೆಗಳನ್ನು ಸೋಮವಾರ ಪರಿಶೀಲಿಸಿದ ನಂತರ ಮಾತನಾಡಿದ ಅವರು, ‘ಕೆಲ ಸಚಿವರು, ಶಾಸಕರು ಅಧಿವೇಶನದ ವೇಳೆ ಗೋವಾ, ಮಹಾರಾಷ್ಟ್ರ ಕಡೆಗೆ ಪ್ರವಾಸಕ್ಕೆ ಹೋಗುತ್ತಾರೆ. ಗಂಭೀರ ವಿಷಯಗಳ ಚರ್ಚೆಯಲ್ಲಿ ಗೈರಾಗುತ್ತಾರೆ ಎಂದು ಹಲವರು ದೂರಿದ್ದಾರೆ. …

Read More »

ಕಬ್ಬು ತೂಕದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ: ಕಲಕೇರಿ

ಬೆಳಗಾವಿ: ಜಿಲ್ಲೆಯ ಎಂಟು ಸಕ್ಕರೆ ಕಾರ್ಖಾನೆಗಳ ಮೇಲೆ ಬುಧವಾರ ದಾಳಿ ನಡೆಸಲಾಗಿದ್ದು, ಯಾವುದೇ ಕಾರ್ಖಾನೆಯಲ್ಲಿ ತೂಕದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶನಾಲಯದ ಆಯುಕ್ತ ಶಿವಾನಂದ ಕಲಕೇರಿ ತಿಳಿಸಿದ್ದಾರೆ.   ‘ತೂಕದಲ್ಲಿ ಮೋಸ ಮಾಡಲಾಗುತ್ತಿದೆ ಎಂದು ರೈತರು ನೀಡಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ದಾಳಿ ಮಾಡಲಾಗಿದೆ. ಬೀದರ್‌ನಿಂದ ಕಾರವಾರವರೆಗೆ ಒಟ್ಟು 21 ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆದಿದೆ. ಇದರಲ್ಲಿ ಬೆಳಗಾವಿ ಜಿಲ್ಲೆಯ ಎಂಟು ಕಾರ್ಖಾನೆಗಳಲ್ಲಿ ಯಾವುದೇ …

Read More »

ರೋಹಿತ್‌ ಪವಾರ್‌ ಗೋಪ್ಯ ಸಭೆ

ಬೆಳಗಾವಿ: ಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಅವರ ಸಹೋದರ ಸಂಬಂಧಿ, ಮಹಾರಾಷ್ಟ್ರದ ಶಾಸಕ ರೋಹಿತ್‌ ಪವಾರ್‌ ಅವರು ಮಂಗಳವಾರ ಬೆಳಗಾವಿಯ ಎಂಇಎಸ್‌ ಮುಖಂಡರ ಜತೆ ಗೋಪ್ಯ ಸಭೆ ನಡೆಸಿದರು. ‘ಗಡಿ ವಿಚಾರವಾಗಿ ನಡೆದ ಬೆಳವಣಿಗೆಗಳ ಮಾಹಿತಿ ಪಡೆಯಲು, ಮಹಾ ವಿಕಾಸ ಅಘಾಡಿ ನಾಯಕರ ಸೂಚನೆ ಮೇರೆಗೆ ರೋಹಿತ್ ಅವರು ಸೋಮವಾರ ಸಂಜೆ ಬೆಳೆಗಾವಿಗೆ ಬಂದರು. ಇಲ್ಲಿನ ಮರಾಠಿಗರ ಸ್ಥಿತಿಗತಿಗಳ ಮಾಹಿತಿ ಪಡೆದರು’ ಎಂದು ಎಂಇಎಸ್‌ನ ಮುಖಂಡರು ತಿಳಿಸಿದ್ದಾರೆ. ಮಂಗಳವಾರ ಸಮೀಪದ ಹಿಂಡಲಗಾ …

Read More »

ಕೆಪಿಟಿಸಿಎಲ್ ಪರೀಕ್ಷೆ ಮತ್ತೊಬ್ಬ ಪರಾರಿಯಾದ ಆರೋಪಿ ಅಂದರ್

ಗೋಕಾಕ ಶಹರ ಪೊಲೀಸ್ ಠಾಣೆ  ಪ್ರಕರಣದಲ್ಲಿ ತನಿಖಾಧಿಕಾರಿ ಶ್ರೀ ವೀರೇಶ್ ತಿ ದೊಡಮನಿ DYSP DCRB ಇವರು ತನಿಖೆ ಮುಂದುವರೆಸಿ  ದಿನಾಂಕ 14-12-2022 ರಂದು ಈ ಕೇಸಿನಲ್ಲಿಯ ಪರಾರಿ ಇದ್ದ ಇನ್ನೊಬ್ಬ ಪ್ರಮುಖ ಆರೋಪಿ ಸೋಮನಗೌಡ ಶಂಕರಗೌಡ ಪಾಟೀಲ ಬಂಧಿಸಿದ್ದಾರೆ ವಯಸ್ಸು 36 ವರ್ಷ ರಾಯಭಾಗ ಇವನಿಗೆ ದಸ್ತಗೀರ ಮಾಡಿದ್ದು ಈತನು ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗೆ ನೇಮಕಾತಿ ನಡೆದ ಪರೀಕ್ಷೆಯ ಕಾಲಕ್ಕೆ ಗದಗ …

Read More »

ಸಂಕ್ರಾಂತಿ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಫೈನಲ್: ಸಿದ್ದರಾಮಯ್ಯ

ಬಾಗಲಕೋಟೆ : ಜನವರಿ 15 ರಂದು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆಳಗಲ್ಲ ಗ್ರಾಮದಲ್ಲಿ ಬಳಿ ಎಸ್ ಆರ್ ಕೆ ಶುಗರ್ ಕಾರ್ಖಾನೆ ಯ ಅಡಿಗಲ್ಲು ಸಮಾರಂಭ ಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡುತ್ತಾ, ಜನವರಿ ಡಿಕೆ ಶಿವಕುಮಾರ್ ಹಾಗೂ ನನ್ನ ನೇತೃತ್ವದಲ್ಲಿ ಎರಡು ತಂಡಗಳನ್ನು ರಚನೆ ಮಾಡಿ,ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ದಲ್ಲಿ ಪ್ರವಾಸ …

Read More »

ಮೊಸಳೆ ಕಂಡು ಶಾಕ್ ಆದ ಜನ

ಬೃಹತ್ ಮೊಸಳೆಯೊಂದು ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡ ಪಟ್ಟಣದ ಎದುರಿನ ಚಿನಿವಾಲರ ಖಾಲಿ ಜಾಗದಲ್ಲಿರುವ ಬಾವಿಯಲ್ಲಿ ಪತ್ತೆ ಆಗಿದೆ. ಬಾವಿ ಒಂದರಲ್ಲಿ ಬೃಹತ್ ಆಕಾರದ ಮೊಸಳೆ ಹಲವಾರು ದಿನಗಳಿಂದ ವಾಸಿಸುತ್ತಿದೆ‌ ಅಲ್ಲದೇ, ಹಲವು ಬಾರಿ ಅರಣ್ಯ ಇಲಾಖೆಯವರಿಗೆ ಹೇಳಿದರು ಪ್ರಯೋಜನ ಆಗಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕರಿಗೆ ಸಮಸ್ಯೆ ಆಗುವ ಮುನ್ನವೇ ಮೊಸಳೆ ಬೇರೆಡೆಗೆ ಸ್ಥಳಾಂತರ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Read More »

ಕನ್ನಡದಲ್ಲಿ ಮಾತನಾಡಿದ ರಾಜ್ಯ ಸಭಾ ಸದಸ್ಯ ಕಡಾಡಿ

ಬೆಳಗಾವಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡುತ್ತಾ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪನೆ ಮಾಡುವಂತೆ ಒತ್ತಾಯಿಸಿದ್ದಾರೆ. ದೇಶದ ಜನ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಎಲ್ಲ ವೀರ ಯೋಧರ ತ್ಯಾಗ, ಬಲಿದಾನಗಳ ಸ್ಮರಣೆಗಾಗಿ ಹಾಗೂ ಸೇನೆಯಲ್ಲಿ ಯೋಗದಾನ ನೀಡುತ್ತಿರುವ ನಮ್ಮೆಲ್ಲ ಸೈನಿಕರ ಗೌರವಾರ್ಥವಾಗಿ ಸೇನೆಯಲ್ಲಿ ಕರ್ನಾಟಕ ಹೆಸರಿನ ರೆಜಿಮೆಂಟ್ ಸ್ಥಾಪಿಸಲು ಆಗ್ರಹಿಸಿದರು. ಕಡಾಡಿ ಮಾತನಾಡುತ್ತಿರುವಾಗ ಸದನದವು ಗದ್ದಲ ಗೂಡಾಗಿತ್ತು.

Read More »

ಆಕ್ಟರ್‌ ಆಗ್ಬೇಕು ಅಂತ ಭಾಳ ಹುಚೈತ್ರಿ.: ಶಿವಪುತ್ರಪ್ಪ, ಮಲ್ಲು

ಬೆಂಗಳೂರು : ಟ್ಯಾಲೆಂಟ್ ಯಾರಪ್ಪನ ಮನೆಯ ಆಸ್ತಿ ಅಲ್ಲ ಎನ್ನುವ ಮಾತು ಎಷ್ಟು ನಿಜ ಅಲ್ವಾ. ನಿಮ್ಮ ಹತ್ರ ಪ್ರತಿಭೆ ಇತ್ತು ಅಂದ್ರೆ ಸಾಧನೆ ಮಾಡುವುದರಿಂದ ನಿಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಸಾಧನೆ ಮಾಡಲು ಬಡತನ, ಶ್ರೀಮಂತಿಕೆ ಅಂತ ಭೇದ ಭಾವ ಇಲ್ಲ. ಆತ್ಮ ವಿಶ್ವಾಸ ಬಹಳ ಮುಖ್ಯ ಅಷ್ಟೆ. ಅದೇ ರೀತಿ ಉತ್ತರ ಕರ್ನಾಟಕ ಪ್ರತಿಭೆ ಶಿವಪುತ್ರಪ್ಪ, ಮಲ್ಲು ಜಮಖಂಡಿ ಕೂಡ. ತಮ್ಮದೆ ಶೈಲಿಯಲ್ಲಿ ವಿಡಿಯೋ ಮಾಡಿ ಇಂದು ಖ್ಯಾತಿ …

Read More »

ರಾಷ್ಟ್ರ ಧ್ವಜಗಳ ಬಾಕಿ ಪಾವತಿಗೆ ಡಿ.ಸಿ.ಗಳಿಗೆ ಪತ್ರ

ಬಳ್ಳಾರಿ: ಸ್ವಾತಂತ್ರ್ಯದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಡೆದ ಮೂರು ದಿನಗಳ ‘ಹರ್‌ ಘರ್‌ ತಿರಂಗಾ ಅಭಿಯಾನ’ಕ್ಕೆ ಕೇಂದ್ರ ಸರ್ಕಾರ ಪೂರೈಸಿದ್ದ ರಾಷ್ಟ್ರಧ್ವಜಗಳ ₹ 4,39,92,843 ಬಾಕಿಯನ್ನು ತಕ್ಷಣ ಪಾವತಿಸುವಂತೆ ತಾಕೀತು ಮಾಡಿ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಎರಡನೇ ಪತ್ರ ಬರೆದಿದೆ.   ಆಗಸ್ಟ್ 13ರಿಂದ 15ರವರೆಗೆ ಮನೆಗಳು, ಕಚೇರಿಗಳು ಹಾಗೂ ವಾಹನಗಳ ಮೇಲೆ ರಾಷ್ಟ್ರ ಧ್ವಜ ಹಾರಾಡಿದ್ದವು. ‘ಏಳು ದಶಕಗಳಿಂದ ಬಳಸುತ್ತಿದ್ದ ಖಾದಿ ಬಟ್ಟೆಯ ತ್ರಿವರ್ಣ ಧ್ವಜಗಳಿಗೆ ಇತಿಶ್ರೀ ಹೇಳಿ, ತೆಳು …

Read More »