ಚಿಕ್ಕಮಗಳೂರು: ಸ್ನೇಹಿತನ ಮದುವೆಗೆ ಬಂದಿದ್ದ ಯುವಕನೊಬ್ಬ ಭದ್ರಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಎನ್.ಆರ್.ಪುರ ತಾಲೂಕಿನ ಬನ್ನೂರು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಗದಗ (Gadag) ಮೂಲದ ಅಭಿಷೇಕ್ (27) ಎಂದು ಗುರುತಿಸಲಾಗಿದೆ. ಬನ್ನೂರು ಸಮೀಪದ ಭದ್ರಾ ರೆಸಾರ್ಟ್‌ನಲ್ಲಿ ಆತ ತಂಗಿದ್ದ. ಏ.5ರ ಸಂಜೆ ಭದ್ರಾ ನದಿಯಲ್ಲಿ ಆತ ನಾಪತ್ತೆಯಾಗಿದ್ದ. ಬಳಿಕ ಬಾಳೆಹೊನ್ನೂರು ಪೊಲೀಸರು ಹಾಗೂ ಸ್ಥಳಿಯರು ಶೋಧ ನಡೆಸಿದ್ದರು. ಭಾನುವಾರ ಕತ್ತಲಾಗಿದ್ದರಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಇಂದು (ಏ.6) ಶೋಧ …
Read More »ಶೃಂಗೇರಿ ವಿಧಾನಸಭಾ ಚುನಾವಣೆಯ ಪೋಸ್ಟಲ್ ಬ್ಯಾಲೆಟ್ ಮತ ಮರುಪರಿಶೀಲಿಸಿ, ಹೊಸದಾಗಿ ಫಲಿತಾಂಶ ಪ್ರಕಟಿಸುವಂತೆ ಹೈಕೋರ್ಟ್ ಆದೇಶ
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿಯ ಕ್ಷೇತ್ರದಲ್ಲಿ ಮತದಾನವಾಗಿರುವ ಒಟ್ಟು ಪೋಸ್ಟಲ್ ಬ್ಯಾಲೆಟ್ನಲ್ಲಿ ತಿರಸ್ಕೃತಗೊಂಡಿರುವ 279 ಮತಗಳನ್ನು ಮರುಪರಿಶೀಲನೆ ನಡೆಸಿ, ಹೊಸದಾಗಿ ಫಲಿತಾಂಶ ಪ್ರಕಟ ಮಾಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ. ಶೃಂಗೇರಿ ಕ್ಷೇತ್ರದಿಂದ ಜಯ ಗಳಿಸಿರುವ ಟಿ. ಡಿ. ರಾಜೇಗೌಡ ಅವರ ಆಯ್ಕೆ ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಪರಾಜಿತ ಅಭ್ಯರ್ಥಿ ಡಿ. ಎನ್. ಜೀವರಾಜ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್. …
Read More »ವೇಗವಾಗಿ ಬಂದು ಕಾರು ಡಿಕ್ಕಿ – ರಸ್ತೆ ದಾಟುತ್ತಿದ್ದ 9 ವರ್ಷದ ಬಾಲಕ ದುರ್ಮರಣ
ಬೀದರ್: ರಸ್ತೆ ದಾಟುವಾಗ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ 9 ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ನಗರದ ಮಾಂಗರ್ ವಾಡಿ ಗಲ್ಲಿ ಬಳಿ ನಡೆದಿದೆ. 9 ವರ್ಷದ ರುದ್ರ ಮೃತ ಬಾಲಕ. ಮಾರುತಿ ಸೂಜುಕಿ ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಮೃತ ಬಾಲಕ ಅಂಗಡಿಯಿಂದ ಮನೆಗೆ ವಾಪಸ್ಸಾಗುತ್ತಿದ್ದ. ಈ ವೇಳೆ ಕಾರೊಂದು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಾರು ಚಾಲಕ …
Read More »ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಭ್ರಷ್ಟ ಅಧಿಕಾರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿಮುಟ್ಟಿಸಿದ್ದಾರೆ. ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ. ಮಾಜಿ ಅಕೌಂಟೆಂಟ್ ಸುಶೀಲಮ್ಮ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಶೀಲಮ್ಮ ವರ್ಷದ ಹಿಂದೆ ವಿಆರ್‌ಎಸ್ ಪಡೆದಿದ್ದರು. ಅಕೌಂಟೆಂಟ್ ಆಗಿದ್ದ ವೇಳೆ ಸುಶೀಲಮ್ಮ ಭ್ರಷ್ಟಾಚಾರ ಮಾಡಿದ್ದು, ಆದಾಯ ಮೀರಿ ಹಣ, ಆಸ್ತಿ ಗಳಿಕೆ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಚಿತ್ರದುರ್ಗದ ಮೆದೇಹಳ್ಳಿ …
Read More »ಸರ್ಕಾರಿ ಶಾಲಾ ಶಿಕ್ಷಕಿಯ ಬರ್ಬರ ಹತ್ಯೆ
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಕಲ್ಮಡ ಗ್ರಾಮದ ಹೊರವಲಯದಲ್ಲಿ ಸರ್ಕಾರಿ ಶಾಲಾ ಶಿಕ್ಷಕಿ ಜ್ಯೋತಿ ಕಪಾಳೆ ಹಿರೇಮಠ (57) ಅವರ ಕೊಲೆ ನಡೆದಿದೆ. ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ, ನಂತರ ಶವವನ್ನು ಪೆಟ್ರೋಲ್ ಸುರಿದು ಸುಟ್ಟುಹಾಕಿದ್ದಾರೆ. ಕಲಬುರಗಿಯ ಆನಂದ್ ಕಾಲೋನಿ ನಿವಾಸಿಯಾದ ಜ್ಯೋತಿ, ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ವಾರಕ್ಕೊಮ್ಮೆ ಕಲಬುರಗಿಗೆ ಬಂದು ಹೋಗುತ್ತಿದ್ದ ಅವರು, ಕಲಬುರಗಿಯಿಂದ ಬೀದರ್ಗೆ ತೆರಳುವ ಮಾರ್ಗಮಧ್ಯೆ ಕಲ್ಮಡದಲ್ಲಿನಿನ್ನೆ ಈ ಘಟನೆ …
Read More »ವಿಶ್ವೇಶ್ವರಯ್ಯ ಪ್ರಶಸ್ತಿ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಲಿಂಗೈಕ್ಯ
ಬೆಳಗಾವಿಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಲೋಕದ ಧ್ರುವತಾರೆ ಅಸ್ತಮಿಸಿದೆ. ಬಸವ ಪಥದಲ್ಲಿ ನಡೆದು, ಅಕ್ಕನ ಬಳಗ ಹಾಗೂ ಲಿಂಗಾಯತ ಸಂಘಟನೆಗಳ ಮೂಲಕ ಮನೆಮಾತಾಗಿದ್ದ ಶರಣೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ನಿಧನರಾದರು. ಬೆಳಗಾವಿಯ ಹಿರಿಯ ಸಮಾಜ ಸೇವಕಿ ಹಾಗೂ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ‘ವಿಶ್ವೇಶ್ವರಯ್ಯ ಪ್ರಶಸ್ತಿ’ ಪುರಸ್ಕೃತೆ ಶಾಂತಾ ಶ್ರೀಶೈಲಪ್ಪ ಸೊಬರದ ಅವರು ಇಂದು ಮಧ್ಯಾನ್ಹ ಲಿಂಗೈಕ್ಯರಾಗಿದ್ದಾರೆ. ಮಹಾಲಕ್ಷ್ಮಿ ಮಹಿಳಾ ಮಂಡಳದ ಅಧ್ಯಕ್ಷರಾಗಿ, ಬಸವ ಸಮಿತಿಯ ಅಕ್ಕನ ಬಳಗದ …
Read More »ಬೆಳಗಾವಿ ಜೆಎನ್‌ಎಂಸಿ ಆವರಣದಲ್ಲಿ ತಂಬಾಕು ನಿಯಂತ್ರಣ ಕೋಶದ ‘ಸರ್ಜಿಕಲ್ ಸ್ಟ್ರೈಕ್’: 40 ಪ್ರಕರಣ ದಾಖಲು!
ಬೆಳಗಾವಿಯ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿವೆ. ಕೋಟ್ಪಾ (COTPA) ಕಾಯ್ದೆ ಉಲ್ಲಂಘಿಸಿದವರ ವಿರುದ್ಧ ಗುಡುಗಿರುವ ಅಧಿಕಾರಿಗಳು, ಸ್ಥಳದಲ್ಲೇ ದಂಡ ವಿಧಿಸಿ ಬಿಸಿ ಮುಟ್ಟಿಸಿದ್ದಾರೆ. ನಗರದ ಜೆಎನ್‌ಎಂಸಿ ವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಕೋಟ್ಪಾ-2003 ಕಾಯ್ದೆಯಡಿ ದಿಢೀರ್ ದಾಳಿ ನಡೆಸಲಾಯಿತು. ಜಿಲ್ಲಾ ಜಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ …
Read More »ಸಾವಿನಲ್ಲಿಯೂ ಒಂದಾದ ಗಂಡ, ಹೆಂಡತಿ,ಬೆಳಗಾವಿ ಜಿಲ್ಲೆಯಲ್ಲಿ ಹ್ರದಯವಿದ್ರಾವಕ ಘಟನೆ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದಲ್ಲಿ ಮನಸ್ಸು ಕಲುಕುವ ದಾರುಣ ಘಟನೆ ಸಂಭವಿಸಿದ್ದು, ಪತಿ, ಪತ್ನಿ ಒಂದೇ ದಿನ ಸಾವಿಗೀಡಾದ ಘಟನೆ ನಡೆದಿದೆ. ಮಧುರಾ ಕರೆಪ್ಪ ಮಾದರ (30) ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ಈ ಹಿನ್ನೆಲೆಯಲ್ಲಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಈ ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನೊಂದೆಡೆ, ಪತ್ನಿಯ ಸಾವಿನ ಸುದ್ದಿ ತಿಳಿದು ಆತಂಕಗೊಂಡ ಅವರ ಪತಿ ಕರೆಪ್ಪ …
Read More »ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ಆರ್ಭಟ – ಆರೋಗ್ಯ ಇಲಾಖೆ ಅಲರ್ಟ್
ಯಾದಗಿರಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ಭಾರೀ ಹೆಚ್ಚಳವಾಗಿದೆ. ದಿನೇ ದಿನೇ ಸೂರ್ಯನ ತಾಪ ಹೆಚ್ಚಾಗುತ್ತಿದ್ದು, ಜನರು ಹೊರಗೆ ಓಡಾಡುವುದೇ ಕಷ್ಟವಾಗಿದೆ. ಇದರಿಂದ ಎಚ್ಚೆತ್ತ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ಪ್ರತ್ಯೇಕ ವಾರ್ಡ್ ಆರಂಭ ಮಾಡಿದೆ. ಯಾದಗಿರಿ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ ಹೆಚ್ಚಾಗಿದೆ. ಸುಡುಬಿಸಿಲಿಗೆ ಜನರು ಮಧ್ಯಾಹ್ನದಿಂದ ಸಂಜೆವರಗೆ ಹೆಚ್ಚಿನ ಪ್ರಮಾಣದಲ್ಲಿ ಓಡಾಡದಂತಾಗಿದೆ. ಸೂರ್ಯನ ತಾಪಕ್ಕೆ ನವಜಾತ ಶಿಶುಗಳಿಗೆ ನಿರ್ಜಲೀಕರಣ ಸಮಸ್ಯೆ ಹಾಗೂ ವಯಸ್ಕರಿಗೆ ಕೂಡ ಅನಾರೋಗ್ಯ ಉಂಟಾಗುತ್ತಿದೆ. …
Read More »ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (KSOU) 2026ನೇ ಸಾಲಿನ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು, ಪ್ರತಿಷ್ಠಿತ ಕುಲಪತಿ ಹುದ್ದೆಯನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಮೈಸೂರಿನಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಹೊಂದಿರುವ ಮತ್ತು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವವಿರುವ ಶಿಕ್ಷಣ ತಜ್ಞರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಯು ಕರ್ನಾಟಕ ಸರ್ಕಾರದ ಮಾನದಂಡಗಳ ಅನ್ವಯ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ವೇತನ ಮತ್ತು ಸೌಲಭ್ಯಗಳನ್ನು ನೀಡಲಾಗುತ್ತದೆ. ಅರ್ಹತೆ ಮತ್ತು ಅರ್ಜಿ …
Read More »
Laxmi News 24×7