ಬೆಳಗಾವಿ: ರಾಷ್ಟ್ರೀಯ ಶಿಕ್ಷಣ ನೀತಿ ರದ್ದುಪಡಿಸುವ ಬಗ್ಗೆ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ. ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಶಿಕ್ಷಣ ನೀತಿ ಕಿತ್ತೆಸೆದು, ರಾಜ್ಯ ಶಿಕ್ಷಣ ನೀತಿ ಜಾರಿಗೆ ತರುತ್ತೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎರಡು ವರ್ಷದ ಹಿಂದೆ ನಮ್ಮ ರಾಜ್ಯದಲ್ಲಿ ಮಾತ್ರ ಹೊಸ ಶಿಕ್ಷಣ ನೀತಿ ಅನುಷ್ಠಾನಕ್ಕೆ ತರಲಾಗಿದೆ. ಅದಕ್ಕೆ ಬಹಳಷ್ಟು ಪೂರ್ವ ತಯಾರಿ ಆಗಬೇಕಿತ್ತು ಮತ್ತು …
Read More »12 ವರ್ಷಗಳ ನಂತರ ಗೋಚರಿಸಿದ ಪುರಾತನ ದೇವಾಲಯ
ಚಿಕ್ಕೋಡಿ (ಬೆಳಗಾವಿ): ಜೂನ್ ತಿಂಗಳು ಮುಗಿದರೂ ಮಳೆ ಮಾತ್ರ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಬರದ ಛಾಯೆ ಆವರಿಸಿ ಹಲವು ಜಿಲ್ಲೆಯಲ್ಲಿ ಬಹುತೇಕ ನದಿಗಳು ಬತ್ತಿ ಹೋಗಿವೆ. ಮಳೆಯಾಗದೇ ಇರುವುದರಿಂದ ಉತ್ತರ ಕರ್ನಾಟಕದ ಬಹುತೇಕ ಡ್ಯಾಂಗಳು ಖಾಲಿಖಾಲಿಯಾಗಿ ಗೋಚರಿಸುತ್ತಿವೆ. ಹಾಗೇ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನೀರು ಖಾಲಿಯಾಗಿದ್ದು, ಬರೋಬ್ಬರಿ 12 ವರ್ಷಗಳ ನಂತರ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿದೆ. ವಿಠ್ಠಲ ದೇವಾಲಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ …
Read More »ಮೊಬೈಲ್ ಕಳ್ಳರ ಕರಾಮತ್ತಿಗೆ ಕೇಂದ್ರದ CEIR ಕಡಿವಾಣ:
ಬೆಂಗಳೂರು: ದೇಶದಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ಮೊಬೈಲ್ ಕಳ್ಳತನ ಪ್ರಕರಣಗಳ ನಿಯಂತ್ರಣಕ್ಕೆ ಹಾಗೂ ಕದ್ದ ಮೊಬೈಲ್‌ಗಳ ದುರ್ಬಳಕೆ ತಪ್ಪಿಸಲು ಕೇಂದ್ರ ಗೃಹ ಇಲಾಖೆ ಹಾಗೂ ದೂರ ಸಂಪರ್ಕ ಇಲಾಖೆಗಳ ಸಹಭಾಗಿತ್ವದಲ್ಲಿ ಜಾರಿಗೆ ತಂದಿದ್ದ ಸೆಂಟ್ರಲ್ ಎಕ್ವಿಟ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ (ಸಿಇಐಆರ್) ಯೋಜನೆ ಫಲಪ್ರದವಾಗುತ್ತಿದೆ. ಇಂದಿನ ಹೈಟೆಕ್ ಜಮಾನದಲ್ಲಿ ಸ್ಮಾರ್ಟ್‌ಪೋನ್ ಬಳಸುವುದು ಸಾಮಾನ್ಯ. ಇದನ್ನೇ ತಮ್ಮ ದುಷ್ಕೃತ್ಯಕ್ಕೆ ಗುರಿಯಾಗಿಸಿಕೊಳ್ಳುತ್ತಿರುವ ಖದೀಮರು ಮೊಬೈಲ್ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕಳುವಾದ ಮೊಬೈಲ್ ದೊರೆತರೂ ದುರ್ಬಳಕೆ …
Read More »ನನ್ನ ಝಂಡಾ ಬದಲಾವಣೆ ಆಗಬಹುದು, ಅಜೆಂಡಾ ಬದಲಾಗಲ್ಲ: ಹೆಚ್.ವಿಶ್ವನಾಥ್
ಬೆಳಗಾವಿ: ನನ್ನ ಝಂಡಾ ಬದಲಾವಣೆ ಆಗಬಹುದು ಆದರೆ, ಅಜೆಂಡಾ ಬದಲಾಗದು ಎಂದು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ. ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಇದ್ದು, ಬಿಜೆಪಿ ತೊರೆಯುವ ಕಾಲ ಸನ್ನಿಹಿತವಾಗಿದೆ ಎಂಬ ಅವರ ಹೇಳಿಕೆ ಕುರಿತು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಂದರ್ಭಗಳು ಹಾಗು ಹಲವಾರು ಕಾರಣಗಳಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬೇಕಾಯಿತು ಎಂದರು. ವಲಸಿಗರಿಂದ ಬಿಜೆಪಿ ಹಾಳಾಯ್ತು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ ಎಂದು ಮಾಧ್ಯಮಗಳು ಕೇಳಿದ …
Read More »B.J.P. 40ರಷ್ಟು ಕಮಿಷನ್ ತಿನ್ನುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ.: M.B. ಪಾಟೀಲ
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷವು ಕೊನೆಯ ಅಂಶವನ್ನು ಎಣಿಸುತ್ತಿದೆ ಎಂದು ಟೀಕೆ ಮಾಡುತ್ತಲೇ, ಪಕ್ಷ ಶಕ್ತಿಯನ್ನು ಕಳೆದುಕೊಡಿದೆ ಎಂದು ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಹೇಳಿದರು ಮಾಧ್ಯಮಗಳೊಂದಿಗೆ ಮಾತನಾಡಿದ ಬೃಹತ್ ಮತ್ತು ಮಾಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು. ಬಿಜೆಪಿಗೆ ಜನ ತಕ್ಕ ಪಾಠ ಕಲಿಸಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಬಡವರಿಗೆ ಒಂದೇ ಒಂದು ಮನೆಯನ್ನು ನಿರ್ಮಿಸಿಕೊಟ್ಟಿಲ್ಲ. ರಾಜ್ಯದಲ್ಲಿ ಬಿಜೆಪಿ …
Read More »ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಥಣಿಯ 2 ವರ್ಷದ ಪುಟಾಣಿಯ ವಿಶೇಷ ಜ್ಞಾಪಕಶಕ್ತಿ!
ಚಿಕ್ಕೋಡಿ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ಅದರಂತೆ ಇಲ್ಲೊಬ್ಬ ಬಾಲಕನ ಜ್ಞಾಪಕಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಿಂದ ಪ್ರಶಸ್ತಿ ದೊರೆತಿದೆ. ಅಂದಹಾಗೆ ಇದು ಅಥಣಿಯ ಪುಟಾಣಿಯ ಸಾಧನೆ. 2 ವರ್ಷ 9 ತಿಂಗಳಿನ ಸ್ಕಂದ ಗುರುರಾಜ ಮಳಸಿದ್ದನವರ ಎಂಬ ಬಾಲಕ ವಾಹನ, ಬಣ್ಣ, ಸಂಕೇತಗಳನ್ನು ಗುರುತಿಸುವುದು, ರೈಮ್ಸ್, ಶ್ಲೋಕ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿ ಚಿಕ್ಕ ವಯಸ್ಸಿನಲ್ಲೇ ಪ್ರತಿಷ್ಟಿತ ಪ್ರಶಸ್ತಿ …
Read More »17 ವರ್ಷಗಳ ನಂತರ ನಡೆದಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವ ಸಕಲರಿಗೂ ದೇವಿ ಒಳ್ಳೆದನ್ನು ಮಾಡಲಿ:. ಬಾಲಚಂದ್ರ ಜಾರಕಿಹೊಳಿ
ಮೂಡಲಗಿ : 17 ವರ್ಷಗಳ ನಂತರ ಸಡಗರ ಸಂಭ್ರಮದಿಂದ ನಡೆದಿರುವ ಹಳ್ಳೂರ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುವ ಗ್ರಾಮದ ಮುಖಂಡರು ಮತ್ತು ಜಾತ್ರಾ ಕಮೀಟಿ ಪದಾಧಿಕಾರಿಗಳನ್ನು ಅಭಿನಂದಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಸಕಲರಿಗೂ ದೇವಿಯು ಒಳ್ಳೆಯದನ್ನು ಮಾಡಲಿ. ನಾಡು ಸಂಪದ್ಭರಿತವಾಗಿ ಹಚ್ಚ ಹಸಿರಿನಿಂದ ಕಂಗೊಳಿಸಲಿ ಎಂದು ಅವರು ಪ್ರಾರ್ಥಿಸಿದರು. ತಾಲೂಕಿನ ಹಳ್ಳೂರ ಗ್ರಾಮದ ಮಹಾಲಕ್ಷ್ಮೀದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಅವರು, …
Read More »ಬಿಪಿಎಲ್ ಕಾರ್ಡ್‌ದಾರರ ಆಧಾರ್ ಲಿಂಕ್ ಕಡ್ಡಾಯ: ಅನ್ನಭಾಗ್ಯದ ಹಣ ಪಡೆಯುವುದು ಹೇಗೆ ಗೊತ್ತೇ?
ಬೆಂಗಳೂರು : ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಕೊಡಬೇಕಿರುವ 5 ಕೆಜಿ ಅಕ್ಕಿ ಬದಲು ಹಣ ಕೊಡಲು ರಾಜ್ಯ ಸರ್ಕಾರ ಈಗಾಗಲೇ ನಿರ್ಧರಿಸಿದೆ. ಈ ಬೆನ್ನಲ್ಲೇ ಬಿಪಿಎಲ್ ಕಾರ್ಡ್‌ದಾರರಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಬಿಪಿಎಲ್ ಕುಟುಂಬದ ಪ್ರತಿಯೊಬ್ಬ ಸದಸ್ಯನ ಖಾತೆಗೆ 5 ಕೆಜಿ ಅಕ್ಕಿಯ ಜೊತೆ ಇನ್ನುಳಿದ 5 ಕೆಜಿ ಅಕ್ಕಿ ಬದಲಿಗೆ ಮಾಸಿಕ ತಲಾ 170 ರುಪಾಯಿ ಹಣ ನೀಡಲು …
Read More »ಕಳ್ಳರನ್ನು ಬಂಧಿಸಿ 925 ಗ್ರಾಂ ಬಂಗಾರ ವಶಪಡಿಸಿಕೊಂಡ ಹುಕ್ಕೇರಿ ಪೋಲೀಸರು.
ಕಳೆದ ನಾಲ್ಕು ತಿಂಗಳ ಹಿಂದೆ ಕಳುವಾದ ಭಾರಿ ಪ್ರಮಾಣದ ಚಿನ್ನಾಭರಣ ವಶಪಡಿಸಿಕೊಂಡು ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ ಹುಕ್ಕೇರಿ ಪೋಲೀಸರು. ಪೆಬ್ರವರಿ ನಾಲ್ಕರಂದು ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸುತ್ತಿದ್ದ ಚಿನ್ನದ ಆಭರಣ ವ್ಯಾಪಾರಸ್ಥ ಸಂಕೇಶ್ವರ ಹತ್ತಿರ ಬಸ್ಸ್ ನಿಂತಾಗ ಉಪಹಾರಕ್ಕೆ ತೇರಳಿದಾಗ ಬಸ್ಸಿನಲ್ಲಿ ಇಟ್ಟ ಚಿನ್ನಾಭರಣ ವಿದ್ದಬ್ಯಾಗ ಕಳ್ಳತನವಾಗಿತ್ತು ಇದನ್ನು ಗಂಭೀರವಾಗಿ ಪರಿಗಣಿಸಿದ ಬೆಳಗಾವಿ ಎಸ್ ಪಿ ಡಾ, ಸಂಜಿವ ಪಾಟೀಲ ಪ್ರಕರಣವನ್ನು ಹುಕ್ಕೇರಿ ಪೋಲಿಸ್ ಇನ್ಸಪೇಕ್ಟರ ರಫೀಕ ತಹಸಿಲ್ದಾರ ನೇತೃತ್ವದಲ್ಲಿ …
Read More »ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ
ದಾವಣಗೆರೆ: ಮದ್ಯಪಾನ ವ್ಯಸನಿಯಾಗಿದ್ದ ಪತಿರಾಯನೊಬ್ಬ ತನ್ನ ಪತ್ನಿ ಲೈಂಗಿಕ ಕ್ರಿಯೆಗೆ ಸಹಕಾರ ಮಾಡಿಲ್ಲ ಎಂದು ಕುತ್ತಿಗೆ ಸೀಳಿ ಕೊಲೆ ಮಾಡಿದ್ದು, ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 19/02/20ರಂದು ದಾವಣಗೆರೆ ಜಿಲ್ಲೆಯ ಅಮರಾವತಿ ಗ್ರಾಮದ ಮಲ್ಲಿಕಾರ್ಜುನ ಬಡಾವಣೆಯಲ್ಲಿ ಈ ಘಟನೆ ನಡೆದಿತ್ತು. ಮರಿಯಪ್ಪ(54) ಶಿಕ್ಷೆಗೊಳಗಾದ ಆರೋಪಿ. ಸೌಭಾಗ್ಯಮ್ಮ ಕೊಲೆಯಾದ ಪತ್ನಿ. ಆರೋಪಿ ಮರಿಯಪ್ಪ ಕುಡಿದು ಬಂದು ಮನೆಯಲ್ಲಿ ಹೆಂಡತಿ ಸೌಭಾಗ್ಯಮ್ಮ ಜೊತೆ ಕುಡಿಯುವುದಕ್ಕೆ ಹಣ ಕೊಡಲಿಲ್ಲ ಎಂದು ಮೊದಲಿಗೆ ಕ್ಯಾತೆ …
Read More »
Laxmi News 24×7