Breaking News

ಜಿಲ್ಲೆ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ

  ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ …

Read More »

ಅಧಿಕ ಶ್ರಾವಣ ಮಾಸದ ನಿಮಿತ್ತ ಶ್ರೀ ಸದ್ಗುರು ಸಾಯಿಬಾಬಾ ಜೀವನ ದರ್ಶನ ಮತ್ತು ಪ್ರವಚನ ಕಾರ್ಯಕ್ರಮ

ನಿಪ್ಪಾಣಿ :ನಿಪ್ಪಾಣಿ ನಗರದಲ್ಲಿ ಅಧಿಕ ಶ್ರಾವಣ ಮಾಸದ ನಿಮಿತ್ತ ಶ್ರೀ ಸದ್ಗುರು ಸಾಯಿಬಾಬಾ ಜೀವನ ದರ್ಶನ ಮತ್ತು ಪ್ರವಚನ ಕಾರ್ಯಕ್ರಮದಲ್ಲಿ ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಯವರು ಭಾಗವಹಿಸಿ, ಶ್ರೀ ಸಾಯಿಬಾಬಾ ದೇವರ ದರ್ಶನ ಪಡೆದರು. ಸಾಯಿಬಾಬಾ ಅವರು ಭಾರತ ಕಂಡ ಮಹಾನ್ ಸಂತರಲ್ಲಿ ಒಬ್ಬರು ಎಂದು ಅವರನ್ನು ಪೂಜಿಸಲ್ಪಡುತ್ತಾರೆ.ಅವರ ಜೀವನವು ನಮಗೆ ಧಾರ್ಮಿಕ ಬೆಳವಣಿಗೆ, ಪ್ರೇಮ, ದಯೆ, ಸೇವಾಭಾವನೆ …

Read More »

ಕಂಗಾಲಾಗಿದ್ದ ಬೆಳಗಾವಿ ರೈತರ ಮೊಗದಲ್ಲಿ ಮಂದಹಾಸ

ಬೆಳಗಾವಿ: ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬೆಳಗಾವಿ ರೈತರು ಕಂಗಾಲಾಗಿದ್ದರು. ಕಳೆದೊಂದು ವಾರದಿಂದ ಸುರಿಯಿತ್ತಿರುವ ಮಳೆಯಿಂದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಿಟ್ಟು ಬಿಡದೇ ಮಳೆಯಾಗುತ್ತಿರುವುದರಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ನೀರಿಲ್ಲದೇ ಕಮರುತ್ತಿದ್ದ ಭತ್ತದ ಸಸಿಗಳಿಗೆ ಸದ್ಯ ಜೀವ ಕಳೆ ಬಂದಂತಾಗಿದೆ. ನೀರಿಲ್ಲದೇ ಖಾಲಿ ಖಾಲಿಯಾಗಿದ್ದ ಬೆಳಗಾವಿ ಸುತ್ತಮುತ್ತಲಿನ ರೈತರ ಗದ್ದೆಗಳಲ್ಲಿ ಈಗ ಕಣ್ಣು ಹಾಯಿಸಿದಲ್ಲೆಲ್ಲ ನೀರು ಕಾಣಿಸುತ್ತಿದೆ. ರೈತರ ಪ್ರಾರ್ಥನೆಗೆ ವರುಣ ದೇವ ಕೃಪೆ ತೋರಿದ್ದಾನೆ. ಜಿಲ್ಲೆಯಾದ್ಯಂತ ವಾರದಿಂದ‌ ಬಿಟ್ಟು …

Read More »

ವಿವಿಗಳ ಆರ್ಥಿಕ ಸಮಸ್ಯೆ ಬಗ್ಗೆ ಚರ್ಚಿಸಲು ಅಧಿವೇಶನದ ಬಳಿಕ ಎಲ್ಲಾ ವಿಶ್ವವಿದ್ಯಾಲಯಗಳ ಕುಲಪತಿಗಳ ಸಭೆ

ಬೆಂಗಳೂರು: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸರ್ಕಾರದ ಬಾಕಿ ಪಾವತಿ ಸೇರಿದಂತೆ ಎಲ್ಲ ವಿವಿಗಳ ಆರ್ಥಿಕ ಸಮಸ್ಯೆ ಕುರಿತು ಅಧಿವೇಶನ ಮುಗಿಯುತ್ತಿದ್ದಂತೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ವಿವಿ ಕುಲಪತಿಗಳು ಹಾಗು ಆರ್ಥಿಕ ಇಲಾಖೆ ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ್ ತಿಳಿಸಿದ್ದಾರೆ. ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಎಸ್ ವಿ ಸಂಕನೂರು ಕುರಿತು ನಿಯಮ 72ರ ಅಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಕಳೆದ ಮೂರ್ನಾಲ್ಕು …

Read More »

ಅಂತರಾಷ್ಟ್ರೀಯ ಐರನ್-ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಪಿಐ ಶ್ರೀಶೈಲ ಬ್ಯಾಕೋಡ್ ಅವರಿಗೆ ಸತೀಶ್ ಜಾರಕಿಹೊಳಿ ಅವರು ಸತ್ಕರಿಸಿ ಅಭಿನಂದಿಸಿದರು.

ಗೋಕಾಕ: ಖಜಕಿಸ್ತಾನದಲ್ಲಿ ನಡೆದ ಅಂತರಾಷ್ಟ್ರೀಯ ಐರನ್-ಮ್ಯಾನ್ ಸ್ಪರ್ಧೆಯಲ್ಲಿ ವಿಜೇತರಾದ ಸಿಪಿಐ ಶ್ರೀಶೈಲ ಬ್ಯಾಕೋಡ್ ಅವರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸತ್ಕರಿಸಿ ಅಭಿನಂದಿಸಿದರು. ಅಂತರಾಷ್ಟ್ರೀಯ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಭಾಗವಹಿಸಿ 3.8 ಕಿ.ಮೀ ಈಜು, 180 ಕಿ. ಮೀ ಸೈಕ್ಲಿಂಗ್‍ ಹಾಗೂ 42 ಕೀ.ಮೀ. ಓಟವನ್ನು ​​​ 14 ಗಂಟೆ 30 ನಿಮಿಷದಲ್ಲಿ ಪೂರ್ತಿಗೊಳಿಸಿ ಅಂತರರಾಷ್ಟ್ರೀಯ ಐರನ್ ಮ್ಯಾನ್ ಆಗಿ ಹೊರಹೊಮ್ಮಿದ್ದ ಸಿಪಿಐ ಶ್ರೀಶೈಲ ಬ್ಯಾಕೋಡ ಅವರನ್ನು ಲೋಕೋಪಯೋಗಿ …

Read More »

ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ:

ಬೆಳಗಾವಿಯ ಸೇಂಟ್ ಕ್ಸೇವಿಯರ್ ಶಾಲೆ ಬಳಿಯ ಸೈನಿಕ ಆಸ್ಪತ್ರೆ ಕ್ಯಾಂಪ್ ಕಡೆಗೆ ಹೋಗುವ ರಸ್ತೆ ಕೆಸರಿನಿಂದ ಕೂಡಿದೆ, ಪಾದಚಾರಿಗಳು ಹಾಗೂ ವಾಹನ ಸವಾರರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುವಂತೆ ವಹಿಸುವಂತೆ ಸಾಮಾಜಿಕ ಕಾರ್ಯಕರ್ತ ಸಂತೋಷ ದಾರೆಕರ್ ಮನವಿ ಮಾಡಿದ್ದಾರೆ. ಸೇಂಟ್ ಕ್ಸೇವಿಯರ್ ಶಾಲೆ ಬಳಿಯ ಮಿಲಿಟರಿ ಆಸ್ಪತ್ರೆ ಕ್ಯಾಂಪ್ ಕಡೆಗೆ ಹೋಗುವ ರಸ್ತೆಯನ್ನು ಪ್ರಸ್ತುತ ಪೈಪ್ಲೈನ್ ಹಾಕಲು ರಸ್ತೆಯ ಉದ್ದಕ್ಕೂ ಅಗೆಯಲಾಗುತ್ತಿದೆ. ಹಾಗಾಗಿ ಈ ಸ್ಥಳದಲ್ಲಿ ಭಾರೀ ಯಂತ್ರೋಪಕರಣಗಳಿವೆ. ರಸ್ತೆ …

Read More »

ದೂಧ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಗೋವಾ ಪೊಲೀಸ

ಬೆಳಗಾವಿ: ದೂಧ್ ಸಾಗರ ನೋಡಲು ಹೋದ ಪ್ರವಾಸಿಗರಿಗೆ ಬಸ್ಕಿ ಹೊಡೆಸಿದ ಘಟನೆ ನಡೆದಿದ್ದು ಗೋವಾ ಪೊಲೀಸರ ವರ್ತನೆ ಖಂಡಿಸಿ ರೈಲ್ವೆ ಹಳಿಯ ಮೇಲೆ ಕುಳಿತು ಪ್ರವಾಸಿಗರ ಪ್ರತಿಭಟನೆ ನಡೆಸಿದ್ದಾರೆ. ಕರ್ನಾಟಕ- ಗೋವಾ ಗಡಿಭಾಗದಲ್ಲಿರುವ ದೂಧ್ ಸಾಗರ ಜಲಪಾತ ಘಟನೆ ನಡೆದಿದ್ದು ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆ ಹಿನ್ನಲೆಯಲ್ಲಿ ದೂದ್ ಸಾಗರ ನೋಡಲು ಜನಸಾಗರವೇ ಆಗಮಿಸಿದೆ. ಪ್ರವಾಸಿಗರು ಬರುತ್ತಿದ್ದಂತೆ ದೂಧ್ ಸಾಗರ ಪ್ರವೇಶಕ್ಕೆ ನಿಷೇಧವನ್ನು ಗೋವಾದ ಪೊಲೀಸರು ಹೇರಿದ್ದಾರೆ.ದೂದಸಾಗರದಲ್ಲಿ ಆಳವಾದ …

Read More »

ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರ ಅದು ನಮ್ಮ ಪಕ್ಷಕ್ಕೆ ಬಿಟ್ಟಿದ್ದು: ಬೊಮ್ಮಾಯಿ

ಹಾವೇರಿ: ಬಿಸಿಯೂಟ ಕಾರ್ಯಕರ್ತೆಯರು ಕೈ ಬಳೆ ಹಾಕುವಂತಿಲ್ಲಾ ಎಂಬ ಮಾರ್ಗಸೂಚಿಯನ್ನು ಸರ್ಕಾರ ಹೊರಡಿಸಿದೆ ಎಂಬ ವದಂತಿ ಹಬ್ಬುತ್ತಿದೆ. ಈ ವಿಚಾರ ಕುರಿತಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಾಡಲು ಬೇರೆ ಕೆಲಸ ಇಲ್ವಾ? ಎಂದು ಪ್ರಶ್ನಿಸಿದ್ದಾರೆ. ನಾನು ಸರ್ಕಾರಕ್ಕೆ ಪ್ರಶ್ನೆ ಕೇಳ್ತಿನಿ, ಈ ಹಿಂದೆ ಎಲ್ಲರೂ ಬಳೆ ಹಾಕಿಕೊಂಡು ಕೆಲಸ ಮಾಡಿದಾರೆ. ಅಂದು ಯಾವ ತೊಂದರೆ ಆಗಿಲ್ಲಾ. ಸರ್ಕಾರಕ್ಕೆ ಮಾಡಲು ಬೇರೆ …

Read More »

ಜೈನ ಮುನಿ ಮಹಾರಾಜರ ಕನಸುಗಳನ್ನು ಪೂರ್ಣ ಮಾಡುತ್ತೇವೆ: ಸಂಸದ ಅಣ್ಣಾಸಾಹೇಬ್ ಜೊಲ್ಲೆ

ಚಿಕ್ಕೋಡಿ (ಬೆಳಗಾವಿ) : ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ಆಘಾತ ಉಂಟು ಮಾಡಿದೆ. ಹಿರೇಕೋಡಿ ಎಂಬ ಸಣ್ಣ ಹಳ್ಳಿಯಲ್ಲಿ ಉತ್ತಮ ಆಶ್ರಮ ಕಟ್ಟಿ, ಶಿಕ್ಷಣ ಸಂಸ್ಥೆ ಮಾಡಿದರು. ಮುಂದೆ ಅವರು ಬಿಟ್ಟು ಹೋದ ಕನಸುಗಳನ್ನು ಪೂರ್ಣ ಮಾಡುತ್ತೇವೆ ಎಂದು ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹೇಳಿದರು. ಇಂದು ಜೈನಮುನಿ ಆಶ್ರಮಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಕುಮಾರ ನಂದಿ ಮಹಾರಾಜರು ಬಿಇ ಪದವೀಧರ ಆಗಿದ್ದು, 14 ಭಾಷೆಗಳಲ್ಲಿ ಪರಿಣಿತರಾಗಿದ್ದರು. …

Read More »

ಬೆಂಗಳೂರು – ಮೈಸೂರು ಹೈವೇಯ ದುಪ್ಪಟ್ಟು ಟೋಲ್ ವಿರೋಧಿಸಿ ಕರವೇ ಸ್ವಾಭಿಮಾನಿ ಸೇನೆ ಪ್ರತಿಭಟನೆ

ಬೆಂಗಳೂರು: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ದುಪ್ಪಟ್ಟು ಟೋಲ್ ವಸೂಲಿ ವಿರೋಧಿಸಿ ಹಾಗೂ ಅಪಘಾತದಲ್ಲಿ ಮೃತಪಟ್ಟಿರುವ ಕುಟುಂಬದವರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆ ಪ್ರತಿಭಟನೆ ನಡೆಸಿತು. ರಾಜ್ಯಾಧ್ಯಕ್ಷರಾದ ನಿಂಗರಾಜ್ ಗೌಡ ನೇತೃತ್ವದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ನೂರಾರು ಜನ ಕಾರ್ಯಕರ್ತರು ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಬಳಿ ಪ್ರತಿಭಟನೆ ನಡೆಸಿದ್ದಾರೆ‌. ಸಾರ್ವಜನಿಕರ ತೆರಿಗೆ ಹಣದಿಂದ ಎಕ್ಸ್‌ಪ್ರೆಸ್ ಹೈವೇ ನಿರ್ಮಾಣವಾಗಿದೆ. ಆದರೂ ಅದನ್ನ ಬಳಸಲು ದುಪ್ಪಟ್ಟು …

Read More »