Breaking News

ಜಿಲ್ಲೆ

ಬೆಳಗಾವಿ ಸಮರ್ಥನಗರದ ಗಣೇಶೋತ್ಸವ ಮಂಡಳದಿಂದ ಆಸನ ಪೂಜೆ…

ಬೆಳಗಾವಿ ಸಮರ್ಥನಗರದ ಗಣೇಶೋತ್ಸವ ಮಂಡಳದಿಂದ ಆಸನ ಪೂಜೆ… ಬೆಳಗಾವಿಯ ಸಮರ್ಥ ನಗರದ ಸಾರ್ವಜನಿಕ ಗಣೇಶೋತ್ಸವ ಶ್ರೀ ಏಕದಂತ ಯುವಕ ಮಂಡಳದ ವತಿಯಿಂದ ಸಂಕಷ್ಟಿಯಂದು ಭವ್ಯ ಆರತಿಯೊಂದಿಗೆ ಪಾದ್ಯ ಮತ್ತು ಆಸನ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಾಗರಿಕ ರಜತ್ ಪಾಟೀಲ್, ಅವರು ಇದು ತಮ್ಮ ಗಣೇಶೋತ್ಸವ ಮಂಡಳದ 5 ನೇ ವರ್ಷವಾಗಿದ್ದು, ಈ ಬಾರಿಯೂ ಗಣೇಶೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕು. ಅಲ್ಲದೆ, ಮಂಡಳದ ಅಧ್ಯಕ್ಷರು, ಕಡಿಮೆ …

Read More »

ಜೈಲಿನಿಂದ ಬಿಡುಗಡೆಯಾದ ದಿನವೇ ಹತ್ಯೆ

ಬೆಂಗಳೂರು: ಜೈಲಿನಿಂದ ಬಿಡುಗಡೆಯಾದವನನ್ನು ಮಾತುಕತೆಗೆಂದು ಕರೆಸಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ‌. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ದೀಪು (28) ಹಾಗೂ ಅರುಣ್ (27) ಎಂಬ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸುವ ಮೂಲಕ ಬಂಧಿಸಲಾಗಿದೆ. ಶನಿವಾರ ರಾತ್ರಿ ಜೆ. ಜೆ. ನಗರದ ಜನತಾ ಕಾಲೋನಿಯಲ್ಲಿ ವಿಜಯ್ (26) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಆರೋಪಿಗಳು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ …

Read More »

ನರೇಗಾದಲ್ಲಿ ಶಾಲಾ ಮೈದಾನ ನಿರ್ಮಾಣ, ವಿದ್ಯಾರ್ಥಿಗಳೇ ಕಾರ್ಮಿಕರು!

ವಿಜಯಪುರ, (ಜೂನ್ 14): ವಿಜಯಪುರ (Vijayapura) ಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿಯಲ್ಲಿ (kyadgi Gram panchayat) ನರೇಗಾ (nrega) ಯೋಜನೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದ್ದು, ಶಾಲಾ ಮಕ್ಕಳನ್ನೇ ಕಾರ್ಮಿಕರು ಎಂದು ದಾಖಾತಿಗಳಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಹೌದು.. ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಶಾಲಾ ಮೈದಾನ ನಿರ್ಮಾಣ ಕಾಮಗಾರಿ ಫೋಟೋ ಅಪ್ ಲೋಡ್ ಮಾಡಲಾಗಿದ್ದು, ಇದರಲ್ಲಿ ಮಕ್ಕಳ ಫೋಟೋಗಳು ಇವೆ. ಮಕ್ಕಳೇ ಕಾರ್ಮಿಕರೆಂದು ಬಿಂಬಿಸಿ ಕ್ಯಾಡಗಿ ಗ್ರಾಮ ಪಂಚಾಯತಿ ಪಿಡಿಓ ಬಿಲ್ ಪಾವತಿಸಿದ್ದಾರೆ. ಇದರ ಜೊತೆ ಇತರೆ ಬೇರೆ …

Read More »

ಗುಮ್ಮಟನಗರಿ ಹುಡುಗ ನೀಟ್​​ನಲ್ಲಿ ಕರ್ನಾಟಕಕ್ಕೆ ಫಸ್ಟ್​ ರ‍್ಯಾಂಕ್

ವಿಜಯಪುರ, ಜೂನ್​ 15: ವಿಜಯಪುರ (Vijayapura) ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ. ಎಷ್ಟೇ ಹಿಂದುಳಿದಿದ್ದರೂ ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಶನಿವಾರ ಪ್ರಕಟಗೊಂಡ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷಾ ಫಲಿತಾಂಶದಲ್ಲಿ (NEET UG Result) ಜಿಲ್ಲೆಯ ವಿದ್ಯಾರ್ಥಿ ಕರ್ನಾಟಕಕ್ಕೆ ಮೊದಲನೇ ಸ್ಥಾನ ಗಳಿಸಿದ್ದಾರೆ. ನಗರದ ವೈದ್ಯ ದಂಪತಿಯ ಪುತ್ರ ನಿಖಿಲ್ ಸೊನ್ನದ ನೀಟ್​ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 720 ಕ್ಕೆ 670 ಅಂಕ ವಿಜಯಪುರ ನಗರದ ವೈದ್ಯ ದಂಪತಿ …

Read More »

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ

ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ: ಕಠಿಣವಾದ ಪರಿಶ್ರಮ,ಶ್ರಧ್ದೆಯಿಂದ ಕಾಯಕದಲ್ಲಿ ತೋಡಗಿದರೆ ಯಶಸ್ಸು ನಿಶ್ಚಿತ,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ‌ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೇವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ‌ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ‌ಅತೀ ಹೆಚ್ಚು ಅಂಕ ಪಡೆದ ಚಿಕ್ಕೋಡಿ ‌ಶೈಕ್ಷಣಿಕ ಜಿಲ್ಲಾ ಮಟ್ಟದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ …

Read More »

ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರ ಬಂಧನ

ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರ ಬಂಧನಬೆಳಗಾವಿಯ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರನ್ನು ಬಂಧಿಸಿದ ಪೊಲೀಸರು ಒಟ್ಟು 34,250 ರೂಪಾಯಿ ಮೌಲ್ಯದ 694 ಗ್ರಾಂ ಗಾಂಜಾ, ಒಂದು ಕಾರ್, ಒಂದು ಬೈಕ್ ಮತ್ತು 5 ಮೊಬೈಲ್’ಗಳನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರದ ಶೌರ್ಯ ಸರ್ಕಲ್ ಬಳಿ ಗಾಂಜಾ …

Read More »

ಪರಿಸರ ಶುಚಿತ್ವ ಪ್ರತಿಯೊಬ್ಬರ ಧ್ಯೇಯವಾಗಿರಲಿ; ಜಿ.ಎಸ್. ಪಾಟೀಲ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ

ಪರಿಸರ ಶುಚಿತ್ವ ಪ್ರತಿಯೊಬ್ಬರ ಧ್ಯೇಯವಾಗಿರಲಿ; ಜಿ.ಎಸ್. ಪಾಟೀಲ ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಸನ್ಮಾನ ನೀರು, ಗಾಳಿ, ಭೂಮಿ, ಗುಡ್ಡ, ಬೆಟ್ಟಗಳು, ವನ್ಯಜೀವಿಗಳು ಪರಿಸರದ ಸಂರಕ್ಷಕಗಳು. ಅವುಗಳ ಶುಚಿತ್ವ ನಮ್ಮೆಲ್ಲರ ಆದ್ಯ ಕರ್ತವ್ಯ. ಎಲ್ಲೆಂದರಲ್ಲಿ ಕಸ,ಕಡ್ಡಿಗಳನ್ನು ಎಸೆಯುವದು, ಮಲಿನತೆಗೊಳಿಸಿ ಪರಿಸರಕ್ಕೆ ಧಕ್ಕೆ ಮಾಡುವದು ಅನಾಗರಿಕತನದ ಅನಾವರಣ ಎಂದು ಪರಿಸರ ಪ್ರೇಮಿ, ಬೆಳಗಾವಿ ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರರಾದ ಜಿ ಎಸ್ ಪಾಟೀಲ ಹೇಳಿದರು. ಧರ್ಮ ಪತ್ನಿ ನಿತ್ಯಮಂಗಲ ರೊಂದಿಗೆ ಆಗಮಿಸಿದ್ದ ಅವರು ಶನಿವಾರ …

Read More »

ಬೆಳಗಾವಿ ಚೊರ್ಲಾ-ಗೋವಾ ರಸ್ತೆ ಸಂಚಾರ ಬಂದ.

ಬೆಳಗಾವಿ ಚೊರ್ಲಾ-ಗೋವಾ ರಸ್ತೆ ಸಂಚಾರ ಬಂದ. ಬೆಳಗಾವಿಯಲ್ಲಿ ನಿರಂತರ ಮಳೆಯಿಂದಾಗಿ ಕೊಚ್ಚಿಕ್ಕೊಂಡ ಹೋದ ಸೇತುವೆ ಪಕ್ಕದ ರಸ್ತೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕುಸಮಳಿ ಗ್ರಾಮದ ಬಳಿ ನಡೆದ ಘಟನೆ. ಕುಸಮಳಿ ಗ್ರಾಮದ ಬಳಿ ಮಲಪ್ರಭಾ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿರುವ ಸೇತುವೆ. ವಾಹನ ಸಂಚಾರಕ್ಕೆ ಸರ್ವೀಸ್ ರಸ್ತೆ ನಿರ್ಮಾಣ ಹಿನ್ನಲೆ ಮಳೆರಾಯನ ಅರ್ಭಟಕ್ಕೆ ಕೊಚ್ಚಿಕ್ಕೊಂಡ ಹೋದ ರಸ್ತೆ. ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಅವಾಂತರ ಸೃಷ್ಟಿ. ಚೊರ್ಲಾ ರಸ್ತೆ …

Read More »

ಮಹಿಳೆಯರ ಸಾಧನೆಗೆ ಪುರುಷರು ಹೆಗಲು ಕೊಡುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಮಹಿಳೆಯರ ಸಾಧನೆಗೆ ಪುರುಷರು ಹೆಗಲು ಕೊಡುತ್ತಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್* * *ಮಹಿಳೆಯರು ಇಂದು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ* * *ಕನ್ನಡಪ್ರಭ, ಸುವರ್ಣ ನ್ಯೂಸ್ ವತಿಯಿಂದ ನಡೆದ ‘ಸುವರ್ಣ ಸಾಧಕಿ’ ಕಾರ್ಯಕ್ರಮದಲ್ಲಿ ಹೇಳಿಕೆ* *ಬೆಳಗಾವಿ:* 50 ವರ್ಷಗಳ ಹಿಂದೆ ಮಹಿಳೆಯರನ್ನು ಪುರುಷರು ಮನೆಯಿಂದ ಹೊರಹೋಗಲು ಬಿಡುತ್ತಿರಲಿಲ್ಲ. ಆದರೆ, ಇಂದು ಮಹಿಳೆಯರ ಯಶಸ್ಸಿಗೆ ಪುರುಷರೇ ಹೆಗಲು ಕೊಡುತ್ತಿದ್ದಾರೆ. ಇಂಥ ಸಹಕಾರದಿಂದಾಗಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂದು ಮಹಿಳಾ …

Read More »

ಸಿಸೇರಿಯನ್ ಹೆರಿಗೆಯಾದ ಎರಡೇ ದಿನಕ್ಕೆ ಬಾಣಂತಿ ಸಾವು

ದಾವಣಗೆರೆ: ಸಿಸೇರಿಯನ್​ ಹೆರಿಗೆ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಬಾಣಂತಿಯೊಬ್ಬರು ಎರಡೇ ದಿನದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟ ಘಟನೆ ಇಲ್ಲಿನ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣವೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ದುರ್ಗಮ್ಮ (21) ಎಂಬವರೇ ಮೃತ ಬಾಣಂತಿ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನಲ್ಲಿರುವ ತನ್ನ ತಾಯಿ ಮನೆಗೆ ಹೆರಿಗೆ ಬಂದಿದ್ದ ಅವರಿಗೆ ಮೂರು ದಿನಗಳ ಹಿಂದೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಪೋಷಕರು ತಕ್ಷಣ ಹತ್ತಿರದ ಹರಪನಹಳ್ಳಿ …

Read More »