ಬೆಳಗಾವಿ: ಖಾನಾಪುರ ಪೊಲೀಸ್ ತರಬೇತಿ ಶಾಲೆಯ 22 ಪ್ರಶಿಕ್ಷಣಾರ್ಥಿಗಳ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ವಿಷಪೂರಿತ ಆಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ. ಖಾನಾಪುರದಲ್ಲಿರುವ ಕರ್ನಾಟಕ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ 9 ತಿಂಗಳ ಬುನಾದಿ ತರಬೇತಿ ಪಡೆಯಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರಶಿಕ್ಷಣಾರ್ಥಿಗಳ ಪೈಕಿ 22 ಪ್ರಶಿಕ್ಷಣಾರ್ಥಿಗಳು ವಿಷಪೂರಿತ ಆಹಾರ ಸೇವಿಸಿದ್ದರಿಂದ ಅಸ್ವಸ್ಥಗೊಂಡಿದ್ದರು. ವಾಂತಿ ಬೇಧಿ, ಜ್ವರ ಮತ್ತು ಸುಸ್ತು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೋಮವಾರ ಬೆಳಗ್ಗೆ …
Read More »ಕೇಂದ್ರ ಸರ್ಕಾರ ಮಾಡುತ್ತಿರುವ ಜಾತಿಗಣತಿಗೂ ರಾಜ್ಯ ಸರ್ಕಾರ ಮಾಡುತ್ತಿರುವ ಸಮೀಕ್ಷೆಗೂ ವ್ಯತ್ಯಾಸವಿದೆ: ಸತೀಶ್ ಜಾರಕಿಹೊಳಿ
ರಾಯಚೂರು: ಕೇಂದ್ರ ಸರ್ಕಾರ ಕೇವಲ ಜನಗಣತಿ ಜೊತೆಗೆ ಜಾತಿಗಣತಿ ಮಾಡುತ್ತದೆ. ನಾವು ಶಿಕ್ಷಣ, ಸಾಮಾಜಿಕ ಆರ್ಥಿಕ ಸ್ಥಿತಿಗತಿ ಬಗ್ಗೆ ಸರ್ವೆ ಮಾಡುತ್ತಿದ್ದೇವೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಕ್ಷೆಯಲ್ಲಿ ಜಾತಿ ಒಂದು ಭಾಗವಷ್ಟೇ. 52 ಮಾನದಂಡದಲ್ಲಿ ಈ ಸಮೀಕ್ಷೆ ನಡೆಯುತ್ತೆ. ನಮ್ಮದು ಜಾತಿ ಸಮೀಕ್ಷೆ ಅಷ್ಟೇ ಅಲ್ಲ, ಸ್ಥಿತಿಗತಿ ಸಮೀಕ್ಷೆ ಆಗಿದೆ. ಆದಾಯ, ಉದ್ಯೋಗ, ಭೂಮಿ ಇದರ ಬಗ್ಗೆ ಕೇಂದ್ರ ಸಮೀಕ್ಷೆ …
Read More »*ಕುಡಚಿ ದರ್ಗಾಕ್ಕೆ 05 ಲಕ್ಷ ರೂ. ನಿಧಿಗೆ ಅನುಮೋದನೆ..:ಲಖನ್ ಜಾರಕಿಹೊಳಿ,
ಕುಡಚಿ: ಇಲ್ಲಿನ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ನಿಧಿ ಮಂಜೂರಾತಿ ಪತ್ರ ವಿತರಿಸಿದ ಎಂಎಲ್ಸಿ ಲಖನ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ವೀರಕುಮಾರ ಪಾಟೀಲ, ಶ್ಯಾಮ್ ಘಾಟಗೆ ಮತ್ತಿತರರು ಉಪಸ್ತಿತಿ. ಬೆಳಗಾವಿ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಇಲ್ಲಿನ ಗ್ರಾಮ ದೇವತೆ ಹಜರತ್ ಮಾಸಾಹೇಬಿ ದರ್ಗಾಕ್ಕೆ ಐದು ಲಕ್ಷ ರೂಪಾಯಿಗಳ ನಿಧಿಯನ್ನು ಅನುಮೋದಿಸಿದ್ದಾರೆ. ಭಾನುವಾರ ಬೆಳಿಗ್ಗೆ, ಶಾಸಕ ಲಖನ್ ಜಾರಕಿಹೊಳಿ ಅವರು ಕುಡ್ಚಿಯಲ್ಲಿರುವ ಗ್ರಾಮ ದೇವತೆ ಹಜರತ್ …
Read More »ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಇಬ್ಬರು ಯುವ ಡ್ಯಾನ್ಸರ್ಗಳು ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.
ನೆಲಮಂಗಲ(ಬೆಂ.ಗ್ರಾಮಾಂತರ): ಡ್ಯಾನ್ಸ್ ಇವೆಂಟ್ನ ಪೇಮೆಂಟ್ ಹಣ ತೆಗೆದುಕೊಂಡು ಬರುವಾಗ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವ ಡ್ಯಾನ್ಸರ್ ಜೋಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೆಲಮಂಗಲದ ಕುಣಿಗಲ್ ಬೈಪಾಸ್ ಬಳಿ ಸೋಮವಾರ(ಇಂದು) ಬೆಳಗ್ಗೆ ಘಟನೆ ಸಂಭವಿಸಿದೆ. ಬೆಂಗಳೂರಿನ ಶ್ರೀರಾಮಪುರದ ಪ್ರಜ್ವಲ್ (22) ಹಾಗೂ ಸಹನಾ (21) ಮೃತಪಟ್ಟವರು. ಇವರು ಕೆಲ ಸಿನಿಮಾಗಳಲ್ಲಿಯೂ ಡ್ಯಾನ್ಸರ್ಗಳಾಗಿ ಕೆಲಸ ಮಾಡಿದ್ದರು. ಹಲವು ಇವೆಂಟ್ಗಳಲ್ಲಿಯೂ ಜೋಡಿಯಾಗಿ ಡ್ಯಾನ್ಸ್ ಪ್ರದರ್ಶನ ನೀಡಿದ್ದರು. ತುಮಕೂರಿನ ಕುಣಿಗಲ್ನಲ್ಲಿ ನಡೆದ …
Read More »ಬೆಳಗಾವಿ ಸಮರ್ಥನಗರದ ಗಣೇಶೋತ್ಸವ ಮಂಡಳದಿಂದ ಆಸನ ಪೂಜೆ…
ಬೆಳಗಾವಿ ಸಮರ್ಥನಗರದ ಗಣೇಶೋತ್ಸವ ಮಂಡಳದಿಂದ ಆಸನ ಪೂಜೆ… ಬೆಳಗಾವಿಯ ಸಮರ್ಥ ನಗರದ ಸಾರ್ವಜನಿಕ ಗಣೇಶೋತ್ಸವ ಶ್ರೀ ಏಕದಂತ ಯುವಕ ಮಂಡಳದ ವತಿಯಿಂದ ಸಂಕಷ್ಟಿಯಂದು ಭವ್ಯ ಆರತಿಯೊಂದಿಗೆ ಪಾದ್ಯ ಮತ್ತು ಆಸನ ಪೂಜೆ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ನಾಗರಿಕ ರಜತ್ ಪಾಟೀಲ್, ಅವರು ಇದು ತಮ್ಮ ಗಣೇಶೋತ್ಸವ ಮಂಡಳದ 5 ನೇ ವರ್ಷವಾಗಿದ್ದು, ಈ ಬಾರಿಯೂ ಗಣೇಶೋತ್ಸವವನ್ನು ಅತ್ಯಂತ ಉತ್ಸಾಹದಿಂದ ಆಚರಿಸಬೇಕು. ಅಲ್ಲದೆ, ಮಂಡಳದ ಅಧ್ಯಕ್ಷರು, ಕಡಿಮೆ …
Read More »ಜೈಲಿನಿಂದ ಬಿಡುಗಡೆಯಾದ ದಿನವೇ ಹತ್ಯೆ
ಬೆಂಗಳೂರು: ಜೈಲಿನಿಂದ ಬಿಡುಗಡೆಯಾದವನನ್ನು ಮಾತುಕತೆಗೆಂದು ಕರೆಸಿ ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾರಕಾಸ್ತ್ರಗಳನ್ನು ಬಳಸಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದ ದೀಪು (28) ಹಾಗೂ ಅರುಣ್ (27) ಎಂಬ ಆರೋಪಿಗಳಿಬ್ಬರ ಕಾಲಿಗೆ ಗುಂಡು ಹಾರಿಸುವ ಮೂಲಕ ಬಂಧಿಸಲಾಗಿದೆ. ಶನಿವಾರ ರಾತ್ರಿ ಜೆ. ಜೆ. ನಗರದ ಜನತಾ ಕಾಲೋನಿಯಲ್ಲಿ ವಿಜಯ್ (26) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಆರೋಪಿಗಳು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ …
Read More »ನರೇಗಾದಲ್ಲಿ ಶಾಲಾ ಮೈದಾನ ನಿರ್ಮಾಣ, ವಿದ್ಯಾರ್ಥಿಗಳೇ ಕಾರ್ಮಿಕರು!
ವಿಜಯಪುರ, (ಜೂನ್ 14): ವಿಜಯಪುರ (Vijayapura) ಜಿಲ್ಲೆ ಕ್ಯಾಡಗಿ ಗ್ರಾಮ ಪಂಚಾಯತಿಯಲ್ಲಿ (kyadgi Gram panchayat) ನರೇಗಾ (nrega) ಯೋಜನೆಯಲ್ಲಿ ಬಾರೀ ಗೋಲ್ಮಾಲ್ ನಡೆದಿದ್ದು, ಶಾಲಾ ಮಕ್ಕಳನ್ನೇ ಕಾರ್ಮಿಕರು ಎಂದು ದಾಖಾತಿಗಳಲ್ಲಿ ಫೋಟೋ ಅಪ್ಲೋಡ್ ಮಾಡಲಾಗಿದೆ. ಹೌದು.. ಎನ್ ಎನ್ ಎಂ ಎಸ್ ತಂತ್ರಾಂಶದಲ್ಲಿ ಶಾಲಾ ಮೈದಾನ ನಿರ್ಮಾಣ ಕಾಮಗಾರಿ ಫೋಟೋ ಅಪ್ ಲೋಡ್ ಮಾಡಲಾಗಿದ್ದು, ಇದರಲ್ಲಿ ಮಕ್ಕಳ ಫೋಟೋಗಳು ಇವೆ. ಮಕ್ಕಳೇ ಕಾರ್ಮಿಕರೆಂದು ಬಿಂಬಿಸಿ ಕ್ಯಾಡಗಿ ಗ್ರಾಮ ಪಂಚಾಯತಿ ಪಿಡಿಓ ಬಿಲ್ ಪಾವತಿಸಿದ್ದಾರೆ. ಇದರ ಜೊತೆ ಇತರೆ ಬೇರೆ …
Read More »ಗುಮ್ಮಟನಗರಿ ಹುಡುಗ ನೀಟ್ನಲ್ಲಿ ಕರ್ನಾಟಕಕ್ಕೆ ಫಸ್ಟ್ ರ‍್ಯಾಂಕ್
ವಿಜಯಪುರ, ಜೂನ್ 15: ವಿಜಯಪುರ (Vijayapura) ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ. ಎಷ್ಟೇ ಹಿಂದುಳಿದಿದ್ದರೂ ಜಿಲ್ಲೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದಾರೆ. ಶನಿವಾರ ಪ್ರಕಟಗೊಂಡ ಅಖಿಲ ಭಾರತ ವೈದ್ಯಕೀಯ ಪ್ರವೇಶ ಪರೀಕ್ಷಾ ಫಲಿತಾಂಶದಲ್ಲಿ (NEET UG Result) ಜಿಲ್ಲೆಯ ವಿದ್ಯಾರ್ಥಿ ಕರ್ನಾಟಕಕ್ಕೆ ಮೊದಲನೇ ಸ್ಥಾನ ಗಳಿಸಿದ್ದಾರೆ. ನಗರದ ವೈದ್ಯ ದಂಪತಿಯ ಪುತ್ರ ನಿಖಿಲ್ ಸೊನ್ನದ ನೀಟ್ ಪರೀಕ್ಷೆಯಲ್ಲಿ ಮಹತ್ವದ ಸಾಧನೆ ಮಾಡುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. 720 ಕ್ಕೆ 670 ಅಂಕ ವಿಜಯಪುರ ನಗರದ ವೈದ್ಯ ದಂಪತಿ …
Read More »ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ
ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಚಿಕ್ಕೋಡಿ: ಕಠಿಣವಾದ ಪರಿಶ್ರಮ,ಶ್ರಧ್ದೆಯಿಂದ ಕಾಯಕದಲ್ಲಿ ತೋಡಗಿದರೆ ಯಶಸ್ಸು ನಿಶ್ಚಿತ,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೇವೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಪಟ್ಟಣದ ಲೋಕೋಪಯೋಗಿ ಸಭಾಭವನದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ …
Read More »ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರ ಬಂಧನ
ಬೆಳಗಾವಿ ಪೊಲೀಸರ ಯಶಸ್ವಿ ಕಾರ್ಯಾಚರಣೆ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರ ಬಂಧನಬೆಳಗಾವಿಯ ವಿವಿಧ 5 ಪ್ರಕರಣಗಳಲ್ಲಿ ಒಟ್ಟು 15 ಜನರನ್ನು ಬಂಧಿಸಿದ ಪೊಲೀಸರು ಒಟ್ಟು 34,250 ರೂಪಾಯಿ ಮೌಲ್ಯದ 694 ಗ್ರಾಂ ಗಾಂಜಾ, ಒಂದು ಕಾರ್, ಒಂದು ಬೈಕ್ ಮತ್ತು 5 ಮೊಬೈಲ್’ಗಳನ್ನು ಜಪ್ತಿ ಮಾಡಿದ್ದಾರೆ. ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ನಗರದ ಶೌರ್ಯ ಸರ್ಕಲ್ ಬಳಿ ಗಾಂಜಾ …
Read More »
Laxmi News 24×7