Breaking News

ಜಿಲ್ಲೆ

ಬ್ರೇಕ್ ಫೆಲ್ಯೂರ್ ಆಗಿ ಬೈಕ್ – ಕಾರಿಗೆ ಡಿಕ್ಕಿ ಹೊಡೆದ ಸ್ಕೂಲ್ ಬಸ್

ಬೆಂಗಳೂರು : ಬ್ರೇಕ್ ಫೆಲ್ಯೂರ್ ಆಗಿ ಶಾಲಾ ಬಸ್​ವೊಂದು ನಿಯಂತ್ರಣ ತಪ್ಪಿ ಕಾರು ಹಾಗೂ ಬೈಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ಬುಧವಾರ ಬೆಳಗ್ಗೆ ಮಹದೇವಪುರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಕನ್ನಮಂಗಲ ಗೇಟ್​ನಿಂದ ವೈಟ್ ಫೀಲ್ಡ್ ಕಡೆ ಹೋಗುವಾಗ ಈ ದುರ್ಘಟನೆ ನಡೆದಿದೆ. ಜೈನ್ ಹೆರಿಟೇಜ್ ಶಾಲೆಯ ಬಸ್ ಇದಾಗಿದೆ. ಮಕ್ಕಳನ್ನ ಶಾಲೆಗೆ ಬಿಟ್ಟು ಇಂಧನ ತುಂಬಿಸಿಕೊಳ್ಳಲು ಬಸ್ ಚಾಲಕ ಪೆಟ್ರೋಲ್ ಬಂಕ್​ಗೆ ಹೋಗುವಾಗ ಬ್ರೇಕ್ …

Read More »

ಇಸ್ರೇಲ್ ನಿಂದ ತವರಿಗೆ ಬಂದ ಕನ್ನಡಿಗರು

ಬೆಂಗಳೂರು : ಪೌರಾಡಳಿತ ಅಧ್ಯಯನಕ್ಕೆಂದು ಇಸ್ರೇಲ್ ಪ್ರವಾಸಕ್ಕೆ ರಾಜ್ಯದಿಂದ ತೆರಳಿದ್ದ 18 ಜನರ ತಂಡ ರಾಜ್ಯಕ್ಕೆ ಗುರುವಾರ ಹಿಂದಿರುಗಿದೆ. ಇಸ್ರೇಲ್ ದೇಶದಲ್ಲಿ ಪೌರಾಡಳಿತ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಅಧ್ಯಯನ ಮಾಡುವುದಕ್ಕಾಗಿ ರಾಜ್ಯದಿಂದ ಬಿ ಪ್ಯಾಕ್ ತಂಡದಲ್ಲಿ 18 ಜನರು ತೆರಳಿದ್ದರು. ಇರಾನ್​ -ಇಸ್ರೇಲ್​ ದೇಶಗಳ ನಡುವೆ ಕಳೆದ ಕೆಲ ದಿನಗಳಿಂದ ಭೀಕರ ಯುದ್ಧ ನಡೆಯುತ್ತಿದೆ. ಈ ಮಧ್ಯೆ ಇಸ್ರೇಲ್​ನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಇಸ್ರೇಲ್ ನಿಂದ ಕುವೈತ್​, ಕುವೈತ್​ನಿಂದ ಮುಂಬೈ …

Read More »

ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ

ಗೋಕಾಕ- ಜೂನ್ 21 ರಂದು ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆಯು ಮೂಡಲಗಿ ಪಟ್ಟಣದ ಆರ್ ಡಿ ಎಸ್ ಕಾಲೇಜಿನ ಮೈದಾನದಲ್ಲಿ ಜರುಗಲಿದ್ದು, ಪಟ್ಟಣದ ನಾಗರೀಕರು ಇದರಲ್ಲಿ ಭಾಗಿಯಾಗುವ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸುವಂತೆ ಅರಭಾವಿ ಶಾಸಕ ಮತ್ತು ಬೆಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳು ಮತ್ತು ಸಾರ್ವಜನಿಕಕರಲ್ಲಿ ಮನವಿ ಮಾಡಿಕೊಂಡರು. ಗುರುವಾರದಂದು ನಗರದ ಎನ್ ಎಸ್ ಎಫ್ ಕಚೇರಿಯಲ್ಲಿ ಮೂಡಲಗಿ ಪಟ್ಟಣದ ಮುಖಂಡರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ …

Read More »

ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ”

ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ಚಂಪಾ ಸಿರಿಗನ್ನಡ ಪ್ರಶಸ್ತಿ” ಬೆಂಗಳೂರಿನ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಪ್ರತಿವರ್ಷ ನೀಡುವ ” ಚಂಪಾ ಸಿರಿಗನ್ನಡ ಪ್ರಶಸ್ತಿ”ಯನ್ನು ಬೆಳಗಾವಿಯ ಅಶೋಕ ಚಂದರಗಿ ಅವರಿಗೆ ನೀಡಿ ಸನ್ಮಾನಿಸಲಾಯಿತು. ಇಂದು ಬುಧವಾರ ಜೂನ್ 18 ರಂದು ಬೆಂಗಳೂರಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ನಯನ ಸಭಾಂಗಣದಲ್ಲಿ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ವತಿಯಿಂದ ದಿ.ಚಂದ್ರಶೇಖರ ಪಾಟೀಲ ಅವರ ಸ್ಮರಣಾರ್ಥ ಖ್ಯಾತ ಸಾಹಿತಿ ಡಾ.ಬರಗೂರು …

Read More »

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ

ಬಾಗಲಕೋಟೆ ನೂತನ ಡಿಸಿಯಾಗಿ ಸಂಗಪ್ಪ ಎಂ. ಅಧಿಕಾರ ಸ್ವೀಕಾರ ಬಾಗಲಕೋಟೆ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಂಗಪ್ಪ ಎಂ. ಅವರು ಬುಧವಾರ ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ನೂತನ ಜಿಲ್ಲಾಧಿಕಾರಿಗೆ ಪುಷ್ಪ ನೀಡಿ ಸ್ವಾಗತಿಸುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪವಿಭಾಗ ಅಧಿಕಾರಿಗಳಾದ ಸಂತೋಷ ಜಗಲಾಸರ, ಶ್ವೇತಾ ಬೀಡಿಕರ ಸೇರಿದಂತೆ ಆಯಾ …

Read More »

ಅಂತರ್ಜಾತಿ ವಿವಾಹಗಳಿಗೆ ಬೆಳಗಾವಿ ಜಿಲ್ಲೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ

ಬೆಳಗಾವಿ: ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಜಾತಿ ಭೇದ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಸರ್ಕಾರ ಅಂತರ್ಜಾತಿ ವಿವಾಹಗಳಿಗೆ ಪ್ರೋತ್ಸಾಹಿಸುತ್ತಿದೆ. ಈ ರೀತಿ ಬೇರೆ ಜಾತಿಯ ವರ-ವಧು ಮದುವೆ ಆದಲ್ಲಿ ಅವರಿಗೆ ಸರ್ಕಾರ ಸಹಾಯಧನ ನೀಡಿ ಆರ್ಥಿಕ ಶಕ್ತಿ ತುಂಬುತ್ತಿದೆ. ಅಂತರ್ಜಾತಿ ವಿವಾಹ ಎಂದರೆ ವಧು ಮತ್ತು ವರ ಬೇರೆ ಬೇರೆ ಜಾತಿಗೆ ಸೇರಿದವರಾಗಿರಬೇಕು. ಹೀಗೆ ಮದುವೆ ಆಗಿರುವ ಆ ದಂಪತಿಗೆ ಸಹಾಯಧನವನ್ನು 1989ರಿಂದ ಕರ್ನಾಟಕ ರಾಜ್ಯದಲ್ಲಿ ನೀಡಲಾಗುತ್ತಿದೆ. ಆರಂಭದಲ್ಲಿ 12 ಸಾವಿರ …

Read More »

ಮಳೆಹಾನಿ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡಿದ ಸರ್ಕಾರ, ಯಾರಿಗೆ ಎಷ್ಟು ಹಣ ಸಿಗುತ್ತೆ?

ಬೆಂಗಳೂರು, (ಜೂನ್ 18): 2025-26ನೇ ಸಾಲಿನಲ್ಲಿ ಕರ್ನಾಟಕದ (Karnataka)ಬಹುತೇಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿಗದಿತ ಸಮಯಕ್ಕಿಂತ ಮೊದಲೇ ಮುಂಗಾರು ಮಳೆ  (Monsoon Rains) ಪ್ರಾರಂಭವಾಗಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ಥವಾಗಿದೆ. ಹೀಗಾಗಿ ರಾಜ್ಯ ಸರ್ಕಾರ, ಅತಿವೃಷ್ಟಿ / ಪ್ರವಾಹದಿಂದ ಹಾನಿಯಾದ ಮನೆಗಳ ಹಾಗೂ ಮನೆಯ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ಥರಿಗೆ ಪರಿಹಾರ ಬಿಡುಗಡೆ ಮಾಡಿದೆ. ನಿಯಾಮಾನುಸಾರ ಅರ್ಹತೆಯಂತೆ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಅವರ ಪಿ.ಡಿ. ಖಾತೆಯಲ್ಲಿ ಲಭ್ಯವಿರುವ ಅನುದಾನದಿಂದ ಪರಿಹಾರ ಪಾವತಿಸಲು ಆದೇಶ ಹೊರಡಿಸಿದೆ. 1-4-2025ರಿಂದ …

Read More »

ಬೆಳಗಾವಿಯ ಪ್ರವೇಶ ದ್ವಾರದಂತಿರುವ ಗಾಂಧಿನಗರ ಅಸ್ವಚ್ಛತೆಯಿಂದಾಗಿ ಈಗ ‘ಗಂಧಗಿ’ ನಗರದಂತಾಗಿದೆ….

ಬೆಳಗಾವಿಯ ಪ್ರವೇಶ ದ್ವಾರದಂತಿರುವ ಗಾಂಧಿನಗರ ಅಸ್ವಚ್ಛತೆಯಿಂದಾಗಿ ಈಗ ‘ಗಂಧಗಿ’ ನಗರದಂತಾಗಿದೆ…. ಚರಂಡಿ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿರುವ ಹಳೆ ಗಾಂಧಿನಗರ, ದೀಪಕ ಗಲ್ಲಿ ಸುಭಾಷ ಗಲ್ಲಿ ನಿವಾಸಿಗಳು ಸ್ಮಾರ್ಟ್ ಸಿಟಿ ಎಂದು ಹೇಳುತ್ತಿರುವ ಬೆಳಗಾವಿಯ ವಿವಿಧ ಬಡಾವಣೆಗಳು ಸಮಸ್ಯೆಯ ಆಗರಗಳಾಗಿವೆ ಹಳೆ ಗಾಂಧಿನಗರ, ದೀಪಕ್ ಗಲ್ಲಿ, ಸುಭಾಷ್ ಗಲ್ಲಿಯ ಚರಂಡಿ, ರಸ್ತೆಗಳು ದುರಸ್ತಿಯಾಗದೆ ಕಸದ ರಾಶಿಯಿಂದ ಬೇಸತ್ತ ನಾಗರಿಕರು ಪಾಲಿಕೆಯ ನಿರ್ಲಕ್ಷಕ್ಕೆ ಹಿಡಿ ಶಾಪ …

Read More »

ಬಂಧನ ಭೀತಿಯಿಂದ ಪಾರಾಗಲು ನಿರೀಕ್ಷಣಾ ಜಾಮೀನಿಗೆ ಮೊರೆ ಹೋದ ಲೋಕಾಯುಕ್ತ ಐಪಿಎಸ್

ಬೆಂಗಳೂರು: ಭ್ರಷ್ಟರ ವಿರುದ್ಧ ಸಮರ ಸಾರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳೇ ಭ್ರಷ್ಟರಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಹೆಡ್ ಕಾನ್ ಸ್ಟೇಬಲ್ ನಿಂಗಪ್ಪ ಜೊತೆ ಸಂಪರ್ಕದಲ್ಲಿದ್ದ ಲೋಕಾಯುಕ್ತ ಎಸ್ಪಿ-1 ಆಗಿದ್ದ ಶ್ರೀನಾಥ್ ಮಹದೇವನ್ ಜೋಷಿ ಅವರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಲೋಕಾಯುಕ್ತ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಲೋಕಾಯುಕ್ತದಲ್ಲಿ ಲಂಚಾವತಾರ ಆರೋಪ ಭುಗಿಲೆದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ …

Read More »

18 ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವಿಫಲ

ಬೆಳಗಾವಿ: ಬೆಳಗಾವಿ, ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ನಗರಗಳ ಸಾಲಿನಲ್ಲಿ ಅಗ್ರಸಾಲಿನಲ್ಲಿದೆ. ಕುಂದಾನಗರಿಯಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಅಧಿಕವಾಗಿದೆ. ಆದರೆ, ಕಳೆದ 18 ವರ್ಷಗಳಿಂದ ಬಡ ಮತ್ತು ಮಧ್ಯಮ ವರ್ಗಕ್ಕೆ ಕೈಗೆಟಕುವ ದರದಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸುವಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವಿಫಲವಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೌದು, ಬೆಳಗಾವಿ ಮಹಾನಗರದಲ್ಲಿ ಸ್ವಂತ ಸೂರಿನ ಕನಸು ಹೊತ್ತ ಮಧ್ಯಮ ವರ್ಗದವರ ಕನಸು ಕನಸಾಗಿಯೇ ಉಳಿದಿದೆ. ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ …

Read More »