ಬೆಳಗಾವಿಯ ವಿವಿಧ ಬಡಾವಣೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಆಸೀಫ್ ಸೇಠ್ ಬೆಳಗಾವಿಯ ಉಜ್ವಲ ನಗರ, ಶಾಮ್ಸ್ ಕಾಲೋನಿ ಹಾಗೂ ಅಮನ್ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಆಸೀಫ್ ಸೇಠ್ ಚಾಲನೆ ನೀಡಿ ಜನತಾದರ್ಶನದಲ್ಲಿ ಅಹವಾಲು ಸ್ವೀಕರಿಸಿದರು ಹಲವಾರು ವರ್ಷಗಳಿಂದ ಬೆಳಗಾವಿ ಉಜ್ವಲ ನಗರದಲ್ಲಿ ರಸ್ತೆಗಳು ಹದಗೆಟ್ಟಿದ್ದವು ಒಳಚರಂಡಿ ದುರಸ್ತಿ ಸೇರಿದಂತೆ ಹಲವಾರು ಸಮಸ್ಯೆಗಳಿದ್ದವು. ಸೋಮವಾರ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು …
Read More »ಕಾಲ್ತುಳಿತ ಪ್ರಕರಣ, ಅಮೈಕಾಸ್ ಕ್ಯೂರಿ ನೇಮಿಸಿದ ಹೈಕೋರ್ಟ್
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಐಪಿಎಲ್ ಜಯ ಗಳಿಸಿದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ (ಕೋರ್ಟ್‌ಗೆ ನೆರವಾಗುವವರು) ಯನ್ನಾಗಿ ಹಿರಿಯ ವಕೀಲರಾದ ಸುಶೀಲಾ ಅವರನ್ನು ನೇಮಕ ಮಾಡಿ ಹೈಕೋರ್ಟ್ ಆದೇಶಿಸಿದೆ. ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಅರ್ಜಿಯ ಸಂಬಂಧ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ.ಕಾಮೇಶ್ವರ ರಾವ್ …
Read More »ಅಪಹರಣಕ್ಕೊಳಗಾಗಿದ್ದ ಬಾಲಕಿಯನ್ನು ಪೋಷಕರಿಕೆ ಒಪ್ಪಿಸಿದ ಪೊಲೀಸರು
ಬೆಂಗಳೂರು: 5 ವರ್ಷದ ಬಾಲಕಿಯನ್ನು ಅಪಹರಿಸಿದ್ದ ಇಬ್ಬರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಸಮ್ಮ ಹಾಗೂ ಸುಲೋಚನಾ ಎಂಬಿಬ್ಬರನ್ನು 24 ಗಂಟೆಗಳೊಳಗೆ ಬಂಧಿಸಿದ ಪೊಲೀಸರು, ಬಾಲಕಿಯನ್ನು ರಕ್ಷಿಸಿ ಆಕೆಯ ಪೋಷಕರಿಗೊಪ್ಪಿಸಿದ್ದಾರೆ. ಜೂನ್ 21ರಂದು ವಿಶ್ವೇರಯ್ಯ ಲೇಔಟ್‌ನಲ್ಲಿ ಮನೆಯ ಬಳಿ ಆಟವಾಡುತ್ತಿದ್ದ ಬಾಲಕಿಯನ್ನು ಅಪಹರಿಸಿ, ಸಿಂಧನೂರಿಗೆ ಕರೆದೊಯ್ದಿದ್ದರು. ಸಿಂಧನೂರು ಮೂಲದವರೇ ಆದ ಬಾಲಕಿಯ ಪೋಷಕರು ಹಾಗೂ ಆರೋಪಿಗಳು ಪರಸ್ಪರ ಪರಿಚಿತರಾಗಿದ್ದು, 2 ವರ್ಷಗಳಿಂದಲೂ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಜೂನ್ …
Read More »ಸಾಂಬಾರ್ ಮಾಡುವ ವಿಚಾರಕ್ಕೆ ಸ್ನೇಹಿತರ (Friends) ನಡುವೆ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯವಾಗಿದೆ.
ಬೆಂಗಳೂರು, ಜೂನ್ 23: ಸಾಂಬಾರ್ ಮಾಡುವ ವಿಚಾರಕ್ಕೆ ಸ್ನೇಹಿತರ (Friends) ನಡುವೆ ಗಲಾಟೆಯಾಗಿ, ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ (Bengaluru) ತಲಘಟ್ಟಪುರದಲ್ಲಿ ರವಿವಾರ ತಡರಾತ್ರಿ ಘಟನೆ ನಡೆದಿದೆ. ನೇಪಾಳ ಮೂಲದ ಬಹದ್ದೂರ್ ಕೊಲೆಯಾದ ವ್ಯಕ್ತಿ. ಮಹೇಂದ್ರ ಕೊಲೆ ಮಾಡಿದ ಆರೋಪಿ. ಬಹದ್ದೂರ್ ಮತ್ತು ಮಹೇಂದ್ರ ನಡುವೆ ರವಿವಾರ (ಜೂ.22) ರಾತ್ರಿ ಸಾಂಬಾರ್ ಮಾಡುವ ವಿಚಾರಕ್ಕೆ ರೂಂನಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ತಾರಕಕ್ಕೆ ಏರಿದ್ದು ಬಹದ್ದೂರ್ ಮೇಲೆ ಮಹೇಂದ್ರ ಹಲ್ಲೆ ಮಾಡಿ ಕೊಲೆ ಮಾಡಿದ್ದಾನೆ. …
Read More »ಬೆಳಗಾವಿ ಅಂಚೆ ಇಲಾಖೆಯಿಂದ ಎಪಿಟಿ 2.0 ಸೇವೆ ಆರಂಭ…
ಬೆಳಗಾವಿ ಅಂಚೆ ಇಲಾಖೆಯಿಂದ ಎಪಿಟಿ 2.0 ಸೇವೆ ಆರಂಭ… ಇನ್ಮುಂದೆ ಗ್ರಾಹಕರಿಗೆ ತ್ವರಿತಗತಿಯಲ್ಲಿ ಸಿಗಲಿವೆ ಆನ್’ಲೈನ್ ಸೇವೆಗಳು ಭಾರತೀಯ ಅಂಚೆ ಇಲಾಖೆಯೂ ಭಾರತಾದ್ಯಂತ ಗ್ರಾಹಕರಿಗೆ ಶೀಘ್ರಗತಿಯಲ್ಲಿ ಸೇವೆಯನ್ನು ನೀಡುವ ಉದ್ಧೇಶದಿಂದ ಅಡ್ವಾನ್ಸ್ ಪೋಸ್ಟಲ್ ಟೆಕ್ನಾಲಜಿ 2.0 ಜಾರಿಗೊಳಿಸಿದ್ದು, ಇಂದು ಬೆಳಗಾವಿಯ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಈ ನೂತನ ಸೇವೆಯನ್ನು ಆರಂಭಿಸಲಾಯಿತು. ಇಂದು ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದಲ್ಲಿ ಬೆಳಗಾವಿ ಪ್ರಧಾನ ಅಂಚೆ ಕಾರ್ಯಾಲಯದ ಅಧೀಕ್ಷಕರಾದ ಎಸ್.ಕೆ. ಮುರನಾಲ್, ಸಹಾಯಕ ಅಧೀಕ್ಷಕರಾದ …
Read More »ಆಡಳಿತ ವ್ಯವಸ್ಥೆ ಕುಸಿದಿದೆ, ನಾನು 2 ದಿನದಲ್ಲಿ ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ: ಶಾಸಕ ರಾಜು ಕಾಗೆ
ಚಿಕ್ಕೋಡಿ(ಬೆಳಗಾವಿ): “ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಎರಡು ದಿನದಲ್ಲಿ ನಾನು ರಾಜೀನಾಮೆ ಕೊಟ್ಟರೂ ಆಶ್ಚರ್ಯವಿಲ್ಲ. ಶಾಸಕ ಬಿ.ಆರ್. ಪಾಟೀಲ್ ಹೇಳಿರುವುದು ಸುಳ್ಳಲ್ಲ” ಎಂದು ಹಿರಿಯ ಶಾಸಕ ರಾಜು ಕಾಗೆ ಸ್ವಪಕ್ಷ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅವರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, “ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಬಿ.ಆರ್. ಪಾಟೀಲ್ ಆಡಿರುವ ಮಾತುಗಳು ಸುಳ್ಳಲ್ಲ. ಅವರ ಆಡಿಯೋ ವೈರಲ್ ವಿಚಾರಕ್ಕೆ …
Read More »ಮಳೆಯಿಂದ ಕ್ಷೀರಧಾರೆಯಂತೆ ಧುಮ್ಮಿಕ್ಕುತ್ತಿರುವ ಅಂಬೋಲಿ ಜಲಪಾತ
ಬೆಳಗಾವಿ: ಪಶ್ಚಿಮಘಟ್ಟದಲ್ಲಿ ಉತ್ತಮ ಮಳೆ ಆಗುತ್ತಿದ್ದು, ಬೆಳಗಾವಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಜಲಪಾತಗಳಿಗೆ ಜೀವ ಕಳೆ ಬಂದಿದೆ. ಅದರಲ್ಲೂ ಕಡಿದಾದ ಹಚ್ಚ ಹಸಿರಿನ ಗುಡ್ಡದಿಂದ ಧುಮ್ಮಿಕ್ಕಿ ಹರಿಯುವ ಅಂಬೋಲಿ ಫಾಲ್ಸ್ ಜಲವೈಭವವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ಜಲಪಾತಗಳತ್ತ ಹರಿದು ಬರುತ್ತಿದೆ. ಹೌದು, ಮಾನ್ಸೂನ್ ಋತುವಿನಲ್ಲಿ ಪ್ರವಾಸಿಗರ ನೆಚ್ಚಿನ ತಾಣಗಳು ಎಂದರೆ ಜಲಪಾತಗಳು. ಅದರಲ್ಲೂ ಅಂಬೋಲಿ ಫಾಲ್ಸ್ ಪ್ರವಾಸಿಗರ ಪಾಲಿನ ಸ್ವರ್ಗ. ಹಸಿರು ಹೊದಿಕೆಯ ಗುಡ್ಡದಿಂದ ಧುಮ್ಮಿಕ್ಕಿ ಬರುವ ಜಲಧಾರೆ. ಹಾಲ್ನೊರೆಯಂತೆ ಹರಿಯುವ ನೀರಿನ …
Read More »ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಶಿವಾನಂದ ಪಾಟೀಲ್
ಹಾವೇರಿ : ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಶತ 7 ರಷ್ಟಾದರೂ ಆಗಿದೆಯಲ್ಲ. ಹೆಚ್. ಕೆ. ಪಾಟೀಲ್ ಇನ್ನಷ್ಟು ವೇಗ ಪಡೆಯಲಿ ಎಂದಿದ್ದಾರೆ. ತೃಪ್ತಿ ತಂದಿಲ್ಲ. ಆದರೆ ಅವರು ನೆನಪು ಮಾಡಿದ ನಂತರ ಮತ್ತಷ್ಟು ವೇಗ ಪಡೆಯುತ್ತೆ …
Read More »ಇರಾನ್ನಲ್ಲಿ ಸಿಲುಕಿದ್ದ ಕನ್ನಡಿಗರು ತಾಯ್ನಾಡಿಗೆ: ಒಂದೇ ಗ್ರಾಮದ 16 ಜನ ವಾಪಸ್
ಬೆಂಗಳೂರು, ಜೂನ್ 21: ಇರಾನ್ ಮತ್ತು ಇಸ್ರೇಲ್ (Iran and Israel) ನಡುವಿನ ಯುದ್ಧ ಮುಂದುವರೆಯುತ್ತಿದ್ದು ದಿನದಿಂದ ದಿನಕ್ಕೆ ಪರಿಸ್ಥಿತಿ ಉದ್ವಿಗ್ನವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇರಾನ್ನಲ್ಲಿ ಸಿಲುಕಿದ್ದ 18 ಜನ ಕನ್ನಡಿಗರು (Kannadigas) ಶನಿವಾರ (ಜೂ.21) ಕರ್ನಾಟಕಕ್ಕೆ (Karnataka) ವಾಪಸ್ ಆಗಿದ್ದಾರೆ. ಇರಾನ್ನಿಂದ ಬೆಂಗಳೂರಿಗೆ ಆಗಮಿಸಿದ ಕನ್ನಡಿಗರಿಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಳಿಯ ಶಾಸಕ ಹಾಗೂ ಕುಟುಂಬಸ್ಥರು ಅದ್ದೂರಿಯಾಗಿ ಸ್ವಾಗತಕೋರಿದರು. ತಾಯ್ನಾಡಿಗೆ ಮರಳಿದ ಕನ್ನಡಿಗರು ಮತ್ತು ಇವರ ಪೋಷಕರಿಗೆ ಶಾಸಕ …
Read More »ಸುಳ್ಳು ಸುದ್ದಿ, ದ್ವೇಷ ಭಾಷಣ ಮಾಡುವವರಿಗೆ ಜೈಲು, ದಂಡ:ರಾಜ್ಯ ಸರ್ಕಾರ
ಬೆಂಗಳೂರು, (ಜೂನ್ 22): ಕರ್ನಾಟಕದಲ್ಲಿ ಸುಳ್ಳು ಸುದ್ದಿ ((Fake News) , ದ್ವೇಷ ಭಾಷಣ ಹಾಗೂ ದ್ವೇಷದ ಅಪರಾಧ ತಡೆಗೆ ಪ್ರತ್ಯೇಕ ಕಾಯ್ದೆ ಜಾರಿ ಮಾಡಲು ರಾಜ್ಯ ಸರ್ಕಾರ ಮುಂದಾಗಿದ್ದು, ಮೊನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಕರಡು ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಾಥಮಿಕವಾಗಿ ಪ್ರಸ್ತಾಪಿಸಲಾಗಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು …
Read More »
Laxmi News 24×7