ಕೊಪ್ಪಳ: ಕೊರೊನಾ ಸೋಂಕಿತ ವ್ಯಕ್ತಿಯನ್ನ ನಡೆದುಕೊಂಡು ಮನೆಗೆ ಹೋಗಿ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಹೇಳುವ ಮೂಲಕ ಅಮಾನವೀಯವಾಗಿ ವರ್ತಿಸಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ನಿವಾಸಿಗೆ ಸಿಬ್ಬಂದಿ ಕೊರೊನಾ ಇರುವುದನ್ನು ದೃಢಪಡಿಸಿದ್ದಾರೆ. ಅಲ್ಲದೆ ಮನೆಗೆ ನಡೆದುಕೊಂಡು ಹೋಗಿ ಎಂದು ಹೇಳಿ ಕಳಿಸಿದ್ದಾರೆ ಎಂದು ಸೋಂಕಿತ ಆರೋಪಿಸುತ್ತಿದ್ದಾರೆ. ಮುದೇನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಈ ರೀತಿ ಅಮಾನವಿಯ ರೀತಿಯಲ್ಲಿ ನಡೆದುಕೊಂಡಿದ್ದಾರೆ …
Read More »ಆಗಸ್ಟ್ 5ರಿಂದ ಯೋಗ, ಜಿಮ್ ಓಪನ್ ಸೇರಿದಂತೆ ಆಗಸ್ಟ್ 31ರವರೆಗೆ ಶಾಲೆ ಕಾಲೇಜ್ ನಿರ್ಬಂಧ
ಬೆಂಗಳೂರು: ಕೇಂದ್ರ ಸರ್ಕಾರ ಅನ್‍ಲಾಕ್ 3ಗೆ ಮಾರ್ಗಸೂಚಿ ಪ್ರಕಟಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೆ ತರಲು ನಿರ್ಧರಿಸಿದೆ. ಇದರ ಜೊತೆಗೆ ಸಂಡೇ ಲಾಕ್‍ಡೌನ್, ಶನಿವಾರ ರಜೆ ದಿನವನ್ನೂ ರದ್ದುಗೊಳಿಸಿದೆ.ಕೇಂದ್ರದ ಮಾರ್ಗಸೂಚಿಯಂತೆ ಆಗಸ್ಟ್ 1ರಿಂದ ನೈಟ್ ಕರ್ಫ್ಯೂ ರದ್ದು, ಆಗಸ್ಟ್ 5ರಿಂದ ಯೋಗ, ಜಿಮ್ ಓಪನ್ ಸೇರಿದಂತೆ ಆಗಸ್ಟ್ 31ರವರೆಗೆ ಶಾಲೆ ಕಾಲೇಜ್ ನಿರ್ಬಂಧ ಮುಂದುವರಿಕೆಯನ್ನು ಪಾಲಿಸಿದೆ. ಜೊತೆಗೆ ಥಿಯೇಟರ್, ಬಾರ್, ರೆಸ್ಟೋರೆಂಟ್, ಮೆಟ್ರೋಗೆ ಅವಕಾಶ ಇಲ್ಲ ರಾಜಕೀಯ, ಧಾರ್ಮಿಕ …
Read More »ಕೊರೊನಾ ಮಹಾಮಾರಿಗೆ ಬಲಿಯಾದ ವ್ಯಕ್ತಿಗಳ ಅಂತಿಮ ಸಂಸ್ಕಾರವನ್ನು ಅವರ ಧರ್ಮದ ವಿಧಿ ವಿಧಾನಗಳಂತೆ ನೆರೆವೇರಿಸಿದರು.
ಗೋಕಾಕ: ನಗರದ ಅಂಬಿಗೇರ ಗಲ್ಲಿಯ ನಿವೃತ ಮುಖ್ಯೋಪಾದ್ಯರೊಬ್ಬರು ಕೊರೊನಾ ಮಹಾಮಾರಿಗೆ ಗುರುವಾರ ಬಲಿಯಾಗಿದ್ದು ,ಅವರ ಅಂತ್ಯ ಸಂಸ್ಕಾರವನ್ನು ನಗರಸಭೆ ಸಿಬ್ಬಂದ್ದಿ ಮತ್ತು ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನೆರೆವೇರಿಸಿದರು. ಕೊರೊನಾ ಮಹಾಮಾರಿಗೆ ಬಲಿಯಾದ ಮುಖ್ಯೋಪಾದ್ಯಯರ ಅಂತಿಮ ಸಂಸ್ಕಾರವನ್ನು ಅವರ ಧರ್ಮದ ವಿಧಿ ವಿಧಾನಗಳಂತೆ ನೆರೆವೇರಿಸಿದರು. ಪಿಏಫ್ಐ ಕಾರ್ಯಕರ್ತರು ಸ್ವಯಂ ಪ್ರೇರಣೆಯಿಂದ ಮುಖ್ಯೋಪಾದ್ಯಯವರ ಅಂತ್ಯ ಸಂಸ್ಕಾರ ನೆರೆವೇರಿಸಲು ನಗರಸಭೆ ಸಿಬ್ಬಂದ್ದಿಯೊಂದಿಗೆ ಮುಂದೆ ಬಂದು ಅಂತ್ಯ ಸಂಸ್ಕಾರ ಮಾಡಿರುವುದರಿಂದ ಪಿಎಫ್ಐ ಕಾರ್ಯಕರ್ತರು …
Read More »ಕೊವಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್ ಬೆಳಗಾವಿ ಆಸ್ಪತ್ರೆಯಲ್ಲಿ ಆರಂಭ
ಬೆಳಗಾವಿ, ಜುಲೈ 30: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಆಯ್ಕೆ ಮಾಡಿದ 12 ಕೇಂದ್ರಗಳಲ್ಲಿ ಒಂದಾದ ಬೆಳಗಾವಿ ಮೂಲದ ಜೀವನ್ ರೇಖಾ ಆಸ್ಪತ್ರೆಯಲ್ಲಿ ಬಿಬಿವಿ 152 ಕೋವಿಡ್ -19 ಲಸಿಕೆ ಅಥವಾ ಕೊವಾಕ್ಸಿನ್‌ನ ಮಾನವ ಕ್ಲಿನಿಕಲ್ ಪ್ರಯೋಗ ಪ್ರಾರಂಭವಾಗಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆಯಾದ ಕೊವಾಕ್ಸಿನ್‌ನ ಕ್ಲಿನಿಕಲ್ ಪರೀಕ್ಷೆಗಳು ಈಗಾಗಲೇ ಏಮ್ಸ್ ಸೇರಿದಂತೆ 12 ಕೇಂದ್ರಗಳಲ್ಲಿ ಪ್ರಾರಂಭವಾಗಿವೆ. ಜೀವನ್ ರೇಖಾ ನಿರ್ದೇಶಕ ಟಿ.ಎನ್.ಐ.ಇ ಅವರೊಂದಿಗೆ ಮಾತನಾಡಿದ ಡಾ.ಅಮಿತ್ ಭಾಟೆ, …
Read More »ಲೇಖಕಿಯರ ಸಂಘ: ಅಧಿಕಾರ ಹಸ್ತಾಂತರ
ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಹೇಮಾವತಿ ಸೋನೊಳಿ ಅವರಿಗೆ ನಿರ್ಗಮಿತ ಅಧ್ಯಕ್ಷೆ ಜ್ಯೋತಿ ಬದಾಮಿ ಅಧಿಕಾರ ಹಸ್ತಾಂತರಿಸಿದರು. ‘ತಮ್ಮ ಎರಡು ವರ್ಷಗಳ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ಕುಪ್ಪಳ್ಳಿ ಹಾಗೂ ನಿಡಸೋಸಿಯ ಶ್ರೀಮಠದ ಸಾಹಿತ್ಯ ಚಿಂತನ ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿಯಾಗಿ ಜನಪ್ರಿಯತೆ ಗಳಿಸಿತು’ ಎಂದು ಜ್ಯೋತಿ ತಿಳಿಸಿದರು. ಉಡುಪಿಯ ಉಪನ್ಯಾಸಕಿ ಸಂಧ್ಯಾ ಶೆಣೈ, ’20 ವರ್ಷಗಳ ಗಟ್ಟಿ ಹೆಜ್ಜೆಗುರುತು ಮೂಡಿಸುತ್ತಾ ಹಿರಿಯ …
Read More »ಅಂಜುಮನ್ ಸಂಸ್ಥೆಯಿಂದ ಆರೋಗ್ಯ ಸೇವೆ
ಬೆಳಗಾವಿ: ಇಲ್ಲಿನ ಅಂಜುಮನ್ ಎ ಇಸ್ಲಾಂ ಸಮಿತಿಯು ಸಾರ್ವಜನಿಕರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುವ ಮೂಲಕ ಕೋವಿಡ್ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಲು ಸಿದ್ಧತೆ ಮಾಡಿಕೊಂಡಿದೆ. ಲಕ್ಷಣಗಳಿಲ್ಲದಿದ್ದರೂ ಕೋವಿಡ್ ಪಾಸಿಟಿವ್ ಬಂದು ಮನೆಗಳಲ್ಲಿ ಆರೈಕೆಯಲ್ಲಿರುವವರಿಗೆ ಅಥವಾ ಇತರ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡವರಿಗೆ ಚಿಕಿತ್ಸಾ ಸೇವೆ ನೀಡಲಿದೆ. ರೋಗಿಗಳ ಮನೆಗಳಿಗೇ ಕಳುಹಿಸುವುದಕ್ಕೆಂದು ಈಗಾಗಲೇ 120 ಆಕ್ಸಿಜನ್ ಸಿಲಿಂಡರ್‌ಗಳನ್ನು ಖರೀದಿಸಿ ಸಂಗ್ರಹಿಸಿದೆ. ಸಿಲಿಂಡರ್ ಒಂದನ್ನು ₹ 9,500ಕ್ಕೆ ಖರೀದಿಸಲಾಗಿದೆ. …
Read More »ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರೊನಾ ಆತಂಕದ ಮಧ್ಯೆಯೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಧೈರ್ಯ ದಿಂದ ಗುರುವಾರ ಸಿಇಟಿ ಪರೀಕ್ಷೆ ಬರೆದರು.
ಚಿಕ್ಕೋಡಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಕೊರೊನಾ ಆತಂಕದ ಮಧ್ಯೆಯೂ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಧೈರ್ಯ ದಿಂದ ಗುರುವಾರ ಸಿಇಟಿ ಪರೀಕ್ಷೆ ಬರೆದರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಚಿಕ್ಕೋಡಿ- 6, ಗೋಕಾಕ-4. ಅಥಣೀ-3, ರಾಯಬಾಗ-1,ಮತ್ತು ಹುಕ್ಕೇರಿ-1 ಪರೀಕ್ಷಾ ಕೇಂದ್ರ ಸೇರಿದಂತೆ ಒಟ್ಟು 15 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳಳಾಗಿತ್ತು. ಒಟ್ಟು 6247 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬೇಕಿತ್ತು. ಅವರಲ್ಲಿ 690 ಗೈರು ಹಾಜರಾಗಿದ್ದು, 5557 ವಿದ್ಯಾರ್ಥಿಗಳು ಪರೀಕ್ಷೆ ಬರೆದರು …
Read More »ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ.
ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ. ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ …
Read More »ಒಂದೇ ದಿನದಲ್ಲಿ 50 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು – 10 ಲಕ್ಷ ಮಂದಿ ಕೊರೊನಾದಿಂದ ಗುಣಮುಖ
ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದ 52,123 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಈವರೆಗಿನ ಎಲ್ಲ ದಾಖಲೆಗಳನ್ನು ಪುಡಿಗಟ್ಟಿದೆ. ಇದೇ ಮೊದಲು ಬಾರಿಗೆ ಒಂದೇ ದಿನಕ್ಕೆ ಐವತ್ತು ಸಾವಿರ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಿನ್ನೆ 775 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 15,83,792ಕ್ಕೆ ಏರಿಕೆಯಾಗಿದ್ದು, ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 34,968ಕ್ಕೆ ಏರಿದೆ. ಸದ್ಯ 5,28,242 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ .ದಾಖಲೆಯ ಸೋಂಕಿತರ ಏರಿಕೆಯ ನಡುವೆ ಕೊರೊನಾದಿಂದ …
Read More »ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆ ಸಿಬ್ಬಂದಿಗಳು ಇಂದು ಬೆಳಗ್ಗೆ ಪಿಪಿಇ ಕಿಟ್ ಧರಿಸಿ ಸಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಪಿಂಚಣಿ ಯೋಜನೆ, ಜ್ಯೋತಿ ಸಂಜೀವಿನಿ ವಿಮೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದ್ದು, ಆಸ್ಪತ್ರೆ ಹೊರ ಆವರಣದಲ್ಲಿ ಪಿಪಿಇ ಕಿಟ್ ಧರಿಸಿ ಆಗಮಿಸಿದ್ದ ಖಾಯಂ ಶುಶ್ರೂಷಕರು ಪ್ರತಿಭಟನೆ ನಡೆಸಿದರು. ಕೈಯಲ್ಲಿ ತಮ್ಮ ಬೇಡಿಕೆ ಆಗ್ರಹಿಸಿ ಪ್ರದರ್ಶನ ಫಲಕಗಳನ್ನು ಹಿಡಿದು ಪ್ರತಿಭಟನೆ ಮಾಡಿದರು. ಸರ್ಕಾರ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಹಲವು ದಿನಗಳಿಂದ ಸಿಬ್ಬಂದಿ ಮನವಿ …
Read More »
Laxmi News 24×7