ಬೆಳಗಾವಿ: ಜಿಲ್ಲೆಯಲ್ಲಿ ಶನಿವಾರ ಹೊಸದಾಗಿ 312 ಜನರಿಗೆ ಕೋವಿಡ್-19 ದೃಢಪಟ್ಟಿದೆ. ಇದೇ ವೇಳೆ, 378 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಇದುವರೆಗೆ ಸೋಂಕು ತಗುಲಿದವರ ಸಂಖ್ಯೆ 5,174ಕ್ಕೆ ತಲುಪಿದೆ. ಇವರಲ್ಲಿ 3,431 ಸಕ್ರಿಯ ಪ್ರಕರಣಗಳಿವೆ. ಬೆಳಗಾವಿ, ಗೋಕಾಕ, ಖಾನಾಪುರ, ಸವದತ್ತಿ, ಚಿಕ್ಕೋಡಿ, ರಾಮದುರ್ಗ, ಹುಕ್ಕೇರಿ, ರಾಯಬಾಗ ಸೇರಿದಂತೆ ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಸೋಂಕು ಕಂಡುಬಂದಿದೆ. ಬೆಳಗಾವಿಯ 60 ವರ್ಷದ ವೃದ್ಧೆಯೊಬ್ಬರು …
Read More »ಆಸ್ತಿ ವಿವಾದಕ್ಕೆ ಬೆಳಗಾವಿ ಅಂಬೇವಾಡಿ ಗ್ರಾಮದಲ್ಲಿ ಫೈರಿಂಗ್
ಬೆಳಗಾವಿ:ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸೋದರ ಮಾವನೇ ತನ್ನ ಅಳಿಯನ ಮೇಲೆ ಫೈರಿಂಗ್ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ. ಅಮಿತ್ ಪಾವಲೆ (35) ಎಂಬಾತನ ಬಲಗೈ ಭುಜಕ್ಕೆ ಗುಂಡು ತಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಅಂಬೇವಾಡಿ ಗ್ರಾಮದಲ್ಲಿ ನೆಲೆಸಿರುವ ಕಾತ್ಸು ತರಳೆ (47) ಎಂಬಾತನಿಂದ ಕೃತ್ಯ ನಡೆದಿದೆ. ಗಾಯಗೊಂಡಿರುವ ಅಮಿತ್ ಎಂಬಾತ ಕಾತ್ಸು ಸಹೋದರಿ ಪುತ್ರನಾಗಿದ್ದಾನೆ. ಎರಡು ಕುಟುಂಬ ನಡುವಿನ ಜಮೀನು ವಿವಾದ ಕೋರ್ಟ್ ಅಲ್ಲಿಇತ್ತೀಚಿಗೆ ಇತ್ಯರ್ಥಗೊಂಡಿತ್ತು. …
Read More »ಗೋಕಾಕ್ ತಾಲೂಕಿನ ಯುವಕ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ
ಬೆಳಗಾವಿ- ನಿನ್ನೆ ಸಂಜೆ ಹೊತ್ತಿಗೆ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋದ ಪ್ರಕರಣಕ್ಕೆ ಸಮಂಧಿಸಿದಂತೆ ಬೆಳಗ್ಗೆ 8 ಗಂಟೆಯಿಂದ ಯುವಕನಿಗಾಗಿ ಶೋಧ ಕಾರ್ಯಚರಣೆ ಆರಂಭವಾಗಿದೆ. ಡುಮ್ಮಉರುಬಿನಟ್ಟಿ ಗ್ರಾಮದ ಬಳಿ ಬಳ್ಳಾರಿ ನಾಲಾದಲ್ಲಿ ಯುವಕ ಕೊಚ್ಚಿಕೊಂಡು ಹೋಗಿದ್ದಾನೆ ಎಂದು ಹೇಳಲಾಗುತ್ತಿದೆ. ಜಲಾವೃತವಾದ ಗದ್ದೆಯಲ್ಲಿ ಮುಳುಗಡೆಯಾದ ಪಂಪ್‌ಸೆಟ್ ನೋಡಲು ಹೋಗಿದ್ದ ಯುವಕ ಕಾಲು ಜಾರಿ ಬಳ್ಳಾರಿ ನಾಲೆಗೆ ಬಿದ್ದು ನೀರಿನ ಸೆಳುವಿಗೆ ಕೊಚ್ಚಿ ಹೋಗಿದ್ದಾನೆ. 18 ವರ್ಷದ ನಾಗರಾಜ್ ಹೆಬ್ಬಳ್ಳಿ ಬಳ್ಳಾರಿ …
Read More »ಹಳ್ಳಿಗಳಲ್ಲಿ M.S.I.L. ಮಳಿಗೆ ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ:ಗೋವಿಂದ ಕಾರಜೋಳ
ಬಾಗಲಕೋಟೆ: ಹಳ್ಳಿಗಳಲ್ಲಿ ಎಂಎಸ್‌ಐಎಲ್ ಮಳಿಗೆ ಆರಂಭಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ನಾವು ಮದ್ಯದ ಅಂಗಡಿ ತೆರೆಯುವವರಲ್ಲ. ಅವುಗಳನ್ನು ಮುಚ್ಚುವವರು ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ. ಮುಧೋಳದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಳ್ಳಿ ಹಳ್ಳಿಗಳಲ್ಲೂ ಸರ್ಕಾರಿ ಸ್ವಾಮ್ಯದ ಎಂಎಸ್‌ಐಎಲ್ ಮದ್ಯದ ಅಂಗಡಿ ಆರಂಭಿಸಲಾಗುತ್ತದೆ ಎನ್ನುವುದು ಸುಳ್ಳು. ಆ ರೀತಿ ನಾವು ಮಾಡುವುದಿಲ್ಲ. ನಾವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯುಳ್ಳವರು. ಮದ್ಯದ ಅಂಗಡಿ ಮುಚ್ಚುವುದು ಬಿಜೆಪಿಯ ನೀತಿಯಲ್ಲೊಂದು …
Read More »ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ- ಶೆಟ್ಟರ್ ಸೂಚನೆ
ನೆಲಮಂಗಲ: ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಿಳಿಸಿದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಶನಿವಾರ ಭೇಟಿ ನೀಡಿ ಸಚಿವರು ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದರು. ಡಾಬಸ್‍ಪೇಟೆ ಇಂಡಸ್ಟ್ರೀಸ್ ಅಸೋಸಿಯೇಷನ್ ಸದಸ್ಯರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ …
Read More »ಪ್ರಾಣದ ಹಂಗು ತೊರೆದು ಕೊಚ್ಚಿ ಹೋಗುತ್ತಿದ್ದ ಕಾಲು ಸೇತುವೆ ಕಟ್ಟಿ, ಗಟ್ಟಿಗೊಳಿಸಿದ ಗ್ರಾಮಸ್ಥ
ಮಂಗಳೂರು: ಪಶ್ಚಿಮ ಘಟ್ಟ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ನಿರಂತರ ಮಳೆಗೆ ಜಿಲ್ಲೆಯ ಎಲ್ಲ ಜೀವನದಿಗಳು ಉಕ್ಕಿ ಹರಿಯುತ್ತಿವೆ. ಮಳೆ, ಪ್ರವಾಹದಿಂದ ಜನ ತಮ್ಮ ಬದುಕು ಕಟ್ಟಿಕೊಳ್ಳಲು ಹರ ಸಾಹಸ ಪಡುತ್ತಿದ್ದಾರೆ. ಅದೇ ರೀತಿ ಕೊಚ್ಚಿ ಹೋಗುತ್ತಿದ್ದ ಸೇತುವೆಯನ್ನು ಪ್ರಾಣದ ಹಂಗು ತೊರೆದು ಗ್ರಾಮಸ್ಥರೊಬ್ಬರು ಕಟ್ಟಿ ನಿಲ್ಲಿಸಿದ್ದಾರೆದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯಲ್ಲಿ ಜನರೇ ನಿರ್ಮಿಸಿದ್ದ ಕಾಲು ಸೇತುವೆಯನ್ನು ಉಳಿಸಿಕೊಳ್ಳಲು ಗ್ರಾಮಸ್ಥರೊಬ್ಬರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟಿದ್ದಾರೆ. ರಭಸವಾಗಿ …
Read More »ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಗ್ರಾಮಕ್ಕೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ
ಧಾರವಾಡ: ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿಯ ಗ್ರಾಮಕ್ಕೆ ತೆರಳಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೆರಳಿ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವಾನ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್‍ರ ಸಚಿವರು, ಬಾಲಕಿಗೆ ನ್ಯಾಯ ಕೊಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಆರೋಪಿಯನ್ನು ಪೊಲೀಸ್ ಇಲಾಖೆ ಬಂಧಿಸಿದೆ. ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಸಂತ್ರತ್ತೆಯ ಕುಟುಂಬಕ್ಕೆ ಪರಿಹಾರ ಧನ ನೀಡಲು ನಿಯಮಾವಳಿಗಳನ್ನು ಪರಿಶೀಲಿಸಲಾಗುವುದು, …
Read More »ಮೈದುಂಬಿ ಹರಿಯುತ್ತಿವೆ..ಗೋಕಾಕ್..ಗೋಡಚಿನಮಲ್ಕಿ ಫಾಲ್ಸ..ಪ್ರವಾಸಿಗರ ಕೈ ಬೀಸಿ ಕರೆಯುತ್ತಿವೆ..!
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಗಡಿ ಜಿಲ್ಲೆ ಬೆಳಗಾವಿಯ ನದಿಗಳು ತುಂಬಿ ಹರಿಯುತ್ತಿದ್ದು. ಮತ್ತೆ ಪ್ರವಾಹಭೀತಿ ಎದುರಾಗಿದೆ. ಅಷ್ಟೇ ಅಲ್ಲದೇ ರಾಜ್ಯದ ಎರಡನೇ ಅತೀ ದೊಡ್ಡ ಜಲಪಾತ ಎಂದು ಕರೆಯುವ ಗೋಕಾಕ್ ಫಾಲ್ಸ್ ಮತ್ತು ಗೋಡಚಿನಮಲ್ಕಿ ಫಾಲ್ಸ ಕೂಡ ನಯನಮನೋಹರವಾಗಿ ಹರಿಯುತ್ತಿದೆ. ಮತ್ತು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಹೌದು 180ಅಡಿಯಷ್ಟು ಎತ್ತರದಿಂದ ನೀರು ಧುಮ್ಮುಕ್ಕಿ ಬೀಳುತ್ತಿರುವ ಗೋಕಾಕ ಜಲಪಾತ ಈಗ ನೋಡುವುದೇ ಕಣ್ಣಿಗೆ ಹಬ್ಬ. ಮಳೆಗಾಲದ …
Read More »ರಸ್ತೆಗೆ ನುಗ್ಗಿದ ಕಬಿನಿ ನೀರು; ಮೈಸೂರು ಊಟಿ ಹೆದ್ದಾರಿ ಬಂದ್
ಮೈಸೂರು: ಕಬಿನಿ ನೀರು ಹೆದ್ದಾರಿಗೆ ಮೈಸೂರು ಊಟಿ ಹೆದ್ದಾರಿ ನುಗ್ಗಿದ ಹಿನ್ನೆಲೆಯಲ್ಲಿ ಪೊಲೀಸರು ಈ ಹೆದ್ದಾರಿಯನ್ನು ಬಂದ್ ಮಾಡಿದ್ದಾರೆ. ಕಬಿನಿಜಲಾಶಯದಿಂದ ಹೆಚ್ಚಿನ ಪ್ರಮಾನದಲ್ಲಿ ನೀರನ್ನು ಬಿಡುಗಡೆ ಮಾಡಲಾಗಿದ್ದು, ಆ ನೀರು ಹೆದ್ದಾರಿಗೆ ನುಗ್ಗಿದೆ. ಇದರಿಂದಾಗಿ ನಂಜನಗೂಡಿನ ಮೂಲೆ ಮಠದ ಬಳಿ ಸಂಚಾರ ಅಸ್ತವ್ಯಸ್ತ ಗೊಂಡಿತ್ತು, ಊಟಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಕೆರೆಯಂತಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಂಜನಗೂಡು ಮೈಸೂರು ನಡುವೆ ಮಾರ್ಗ ಬದಲಾವಣೆ ಮಾಡಿ ಆ ಹೆದ್ದಾರಿ ಬಂದ್ …
Read More »ಪ್ರವಾಹ ನಿಯಂತ್ರಣಕ್ಕೆ 5 ಪರಿಹಾರ ಕೇಂದ್ರಗಳ ಪ್ರಾರಂಭ, 25 ಬೋಟ್ ವ್ಯವಸ್ಥೆ: ಬೆಳಗಾವಿ ಡಿ.ಸಿ
ಬೆಳಗಾವಿ: ಕಳೆದ ಬಾರಿ ಪ್ರವಾಹದ ಹಿನ್ನೆಲೆ ನಮಗೆ ಅನುಭವ ಇದೆ. ಹೀಗಾಗಿ ಈ ಬಾರಿ ಪ್ರವಾಹ ನಿಯಂತ್ರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ್ ತಿಳಿಸಿದ್ದಾರೆ. ಗ್ರಾಮ, ತಾಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಸದ್ಯ ಕೃಷ್ಣಾ ನದಿಯಲ್ಲಿ 1 ಲಕ್ಷ 55 ಸಾವಿರ ಕ್ಯೂಸೆಕ್ ಒಳಹರಿವು ಇದ್ದು, ಅದು 2.5ಲಕ್ಷ ಕ್ಯೂಸೆಕ್ಗೆ ಏರಿಕೆಯಾದ್ರೆ ಮಾತ್ರ ಜಮೀನು- ಮನೆಗೆ ನೀರು ನುಗ್ಗುವ ಆತಂಕ ಇದೆ. …
Read More »
Laxmi News 24×7