ಬಾಗಲಕೋಟೆ: ಕಾಂಗ್ರೆಸ್ ನಲ್ಲಿ ಅಭಿವೃದ್ಧಿ ಕ್ರಾಂತಿಯಿಲ್ಲ ಕೇವಲ ಭ್ರಷ್ಟಾಚಾರದ ಜಾತ್ರೆ, ಅಧಿಕಾರಕ್ಕಾಗಿ ಕಿತ್ತಾಟ, ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡದೆ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿದೆ ಎಂದು ಸರಕಾರದ ವಿರುದ್ಧ ಮಾಜಿ ಡಿಸಿಎಂ ಗೋವಿಂದ್ ಕಾರಜೋಳ ವಾಗ್ದಾಳಿ ನಡೆಸಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಜ್ಯಸರಕಾರದಲ್ಲಿ ಖುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ಅಭಿವೃದ್ಧಿಯ ಚಿಂತನೆ ಇಲ್ಲದೇ ದುರಾಡಳಿತ ಮಿತಿಮೀರಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಶೋಷಣೆ, ಅತ್ಯಾಚಾರ ಮಿತಿಮೀರಿದೆ. ಸರಕಾರಿ ಮಹಿಳಾ ಅಧಿಕಾರಿಗಳ ಮೇಲೆ ನಿಂದನೆ …
Read More »ಬೆಳಗಾವಿಯ ಪ್ರಮುಖ ಹದಿನೈದಕ್ಕೂ ಹೆಚ್ಚು ಯೋಜನೆಗಳಿಗೆ ಒಂದೇ ಬಾರಿ ಚಾಲನೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಜಿಲ್ಲಾ, ತಾಲೂಕು ಮಟ್ಟದಲ್ಲಿ ಹದಿನೈದಕ್ಕೂ ಹೆಚ್ಚು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಒಂದೇ ಬಾರಿಗೆ ಚಾಲನೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳು ಘೋಷಿಸಿ ಒಂದು ಕಳೆದರೂ ಚಾಲನೆ ದೊರೆಯುತ್ತಿಲ್ಲ ಎಂಬ …
Read More »ಜಿಬಿಎ ಚುನಾವಣೆಗೆ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ಏರಿಕೆ – 369 ವಾರ್ಡ್‌ಗೆ 1,800 ಆಕಾಂಕ್ಷಿಗಳಿಂದ ಅರ್ಜಿ ಸ್ವೀಕಾರ
ಬೆಂಗಳೂರು: ಜಿಬಿಎ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡುತ್ತಿದೆ. 369 ವಾರ್ಡ್‌ಗಳ 1,800 ಅರ್ಜಿ ಸೇಲ್ ಆಗಿದೆ. ಕಾಂಗ್ರೆಸ್‌ನಲ್ಲಿ ಜಿಬಿಎ ಚುನಾವಣೆಗೆ ಪೈಪೋಟಿ ಹೆಚ್ಚಾಗುತ್ತಿದೆ. ಜೂನ್ 30ರ ಒಳಗಡೆ ಜಿಬಿಎ ಚುನಾವಣೆ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಸಹಜವಾಗಿ ಈಗ ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ. ಈಗಾಗಲೇ ಎಲ್ಲಾ ಪಕ್ಷಗಳು ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್‌ನಲ್ಲಿ ಜಿಬಿಎ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದೆ. ಹೌದು, ಈಗಾಗಲೇ ಆಕಾಂಕ್ಷಿಗಳಿಗೆ …
Read More »ಅಪರಾದ ತಗ್ಗಿಸಲು ಶ್ವಾನಗಳಿಗೆ ಹೆಚ್ಚಿನ ತರಬೇತಿ ಅವಶ್ಯ: ಸಚಿವ ಸತೀಶ ಜಾರಕಿಹೊಳಿ
ಬೆಳಗಾವಿ: ನಿಷ್ಕಲ್ಮಶ, ಪ್ರೀತಿ, ನಿಷ್ಠೆಗೆ ಶ್ವಾನಗಳಿಗೆ ಶ್ವಾನಗಳೇ ಸರಿಸಾಟಿ, ಶ್ವಾನವನ್ನು ಪ್ರೀತಿಯಿಂದ ಬೆಳೆಸಿದಾಗ ಮಾತ್ರ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತವೆ. ಅವುಗಳನ್ನು ಸ್ನೇಹಮಯವಾಗಿ ಬೆಳೆಸಬೇಕು ಎಂದು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದರು. ನಗರದ ಸರ್ದಾರ್ ಮೈದಾನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಆಯೋಜಿಸಲಾದ ಬೆಳಗಾವಿ ಶ್ವಾನ ಮತ್ತು ಬೆಕ್ಕುಗಳ ಪ್ರದರ್ಶನಕ್ಕೆ ಚಾಲನೆ ನೀಡಿ, ಅವರು ಮಾತನಾಡಿದರು. ಪ್ರಾಣಿ ಹಿಂಸೆ ವಿರುದ್ಧ …
Read More »ದೇಶದ ಅಭಿವೃದ್ಧಿ ಪ್ರಧಾನ ಮಂತ್ರವಾಗಲಿ: ಎಸ್.ಆರ್ ಮೂಗನೂರಮಠ
ಬಾಗಲಕೋಟೆ: ರಾಷ್ಟ್ರೀಯ ಹಬ್ಬಗಳು ನಮ್ಮ ಹೆಮ್ಮೆಯ ಸಂಕೇತಗಳಾಗಿದ್ದು ಗಣರಾಜ್ಯೋತ್ಸವ ಕೇವಲ ಐತಿಹಾಸಿಕ ದಿನವಾಗಿರದೆ ಜಗತ್ತಿನಲ್ಲಿಯೇ ಪ್ರಜಾಪ್ರಭುತ್ವ ಕ್ರೂಡೀಕೃತ ಲಿಖಿತ ಸಂವಿಧಾನಕ್ಕೆ ನಮ್ಮನ್ನು ನಾವು ಸಮರ್ಪುಸಿಕೊಂಡಿರುವ ಪ್ರತೀಕವಾಗಿದೆ ಎಂದು ಪ್ರಾಚಾರ್ಯರಾದ ಎಸ್. ಆರ್ ಮೂಗನೂರಮಠ ಹೇಳಿದರು. ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ 77ನೇ ಗಣರಾಜ್ಯೊತ್ಸವದ ನಿಮಿತ್ಯ ಧ್ವಜಾರೋಹಣ ಮಾಡಿ ಮಾತನಾಡಿದ ಅವರು ಸರ್ವೋತ್ತಮ ಮೌಲ್ಯಗಳನ್ನು ಅಳವಡಿಸಿ ಸಂವಿಧಾನಕ್ಕೆ ಪ್ರಜ್ವಲ ಹೊಳಪು ನೀಡಿದ ದಿನವಾದ ಇಂದು ದೇಶದ ಐಕ್ಯತೆಗಾಗಿ ಬಲಿದಾನಗೈದ ಎಲ್ಲರನ್ನು …
Read More »77ನೇ ಗಣರಾಜ್ಯೋತ್ಸವ ಸಂಭ್ರಮ – ಬೆಂಗಳೂರಿನಲ್ಲಿ ರಾಜ್ಯಪಾಲ ಗ್ಲೆಹ್ಲೋಟ್‌ರಿಂದ ಧ್ವಜಾರೋಹಣ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಆಚರಣೆ ಸಂಭ್ರಮದಿಂದಲೇ ನೆರವೇರಿತು. ಸರಿಯಾಗಿ 9 ಗಂಟೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆಯೊಂದಿಗೆ ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು. ನಂತರ ಪೊಲೀಸರಿಂದ ವಂದನಾ ಗೌರವ ಸ್ವೀಕರಿಸಿ, ಪರೇಡ್ ವೀಕ್ಷಿಸಿದ ರಾಜ್ಯಪಾಲರು ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಗಣರಾಜ್ಯೋತ್ಸವ ಹಿನ್ನೆಲೆ ಮಾಣೆಕ್ ಷಾ …
Read More »ಪ್ರಯತ್ನ ಸಂಘಟನೆಯಿಂದ ನಿರ್ಗತಿಕರಿಗೆ ರಗ್ಗು – ಕಂಬಳಿ ವಿತರಣೆ
ಬೆಳಗಾವಿ : ಬೆಳಗಾವಿಯ ಪ್ರಯತ್ನ ಸಂಘಟನೆಯ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಲಗುವ ನಿರ್ಗತಿಕರಿಗೆ ರಗ್ಗು ಹಾಗೂ ಕಂಬಳಿಗಳನ್ನು ವಿತರಣೆ ಮಾಡಲಾಯಿತು. ರಾತ್ರಿ ವೇಳೆ ನಗರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳಲ್ಲಿ ಚಳಿಯಲ್ಲಿ ನಡುಗುತ್ತ ಮಲಗಿದ್ದ ಸುಮಾರು 20 ನಿರ್ಗತಿಕರಿಗೆ ಕಂಬಳಿಗಳನ್ನು ವಿತರಿಸಲಾಯಿತು. ವೃದ್ಧಾಶ್ರಮ, ಅನಾಥಾಶ್ರಮ, ಅಂಧ ಮಕ್ಕಳ ಶಾಲೆಗಳಿಗೆ ದೇಣಿಗೆ ಹಾಗೂ ಬಡ ಮಕ್ಕಳ ಶಾಲಾ ಶುಲ್ಕ ಭರಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತ ಬಂದಿರುವ ಪ್ರಯತ್ನ ಸಂಘಟನೆ ಈ …
Read More »ಸುಳೇಬಾವಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆರಂಭ
ಬೆಳಗಾವಿ : ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಸುಳೇಬಾವಿಯ ಮಹಾಲಕ್ಷ್ಮೀ ಮೈದಾನದಲ್ಲಿ ಭಾನುವಾರ ಆರಂಭವಾಗಿದ್ದು, 8 ತಂಡಗಳು ಭಾಗವಹಿಸಿವೆ. ಪ್ರಥಮ ಬಹುಮಾನ 50 ಸಾವಿರ ರೂ. ಇದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಾಯೋಜಕತ್ವವಹಿಸಿದ್ದಾರೆ. ದ್ವಿತೀಯ ಬಹುಮಾನ 30 ಸಾವಿರ ರೂ. ಗಳನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತೃತೀಯ ಬಹುಮಾನ 25 ಸಾವಿರ ರೂ.ಗಳನ್ನು ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಪ್ರಾಯೋಜಿಸಿದ್ದಾರೆ. ಪ್ರಥಮ ಹಾಗೂ ತೃತೀಯ ಟ್ರೋಫಿಯನ್ನು ಹನುಮಂತ …
Read More »ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ
ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣ ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ 3 ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ. ದರೋಡೆ ನಡೆದಿದ್ದು ಯಾವಾಗ? ಗೋವಾದಿಂದ (Goa) ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ …
Read More »ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ: ಗೋವಿಂದ ಕಾರಜೋಳ
ಚಿತ್ರದುರ್ಗ: ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಮಾತ್ರ ಅಲ್ಲ ರಾಜ್ಯದೆಲ್ಲೆಡೆ ದ್ವೇಷದ ರಾಜಕಾರಣ ನಡೆಯುತ್ತಿದೆ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚಳವಾಗಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲೆಂದು ಒತ್ತಾಯಿಸಿದರು. ಬಳ್ಳಾರಿ ಘಟನೆಯಲ್ಲಿ ಗುಂಡು ಹಾರಿಸಿದವರು ಗನ್‌ಮ್ಯಾನ್ ಅಲ್ಲ. ನನ್ನ ದೃಷ್ಟಿಯಲ್ಲಿ ಅವರು ಸುಪಾರಿ ಕಿಲ್ಲರ್ಸ್ …
Read More »
Laxmi News 24×7