Breaking News

ಜಿಲ್ಲೆ

ಕೊರೊನಾ ಕೂಡ. ಇದನ್ನು ನಾವು ಮನೆಯಲ್ಲಿ ಎದುರಿಸಬೇಕಾಗುತ್ತದೆ. ಇದರ ಬಗ್ಗೆ ತೆಲೆಕೆಡಿಸಿಕೊಂಡರೆ ಆರ್ಥಿಕತೆ ದಿವಾಳಿತನ ಆಗುತ್ತೆ

ಬೆಳಗಾವಿ: ಮಾಸ್ಕ್ ಹಾಕಿಕೊಂಡವರನ್ನು ನೋಡಿದರೆ ರಾಮಾಯಣ ನೆನಪಾಗುತ್ತದೆ ಎಂದು ಹೇಳುವ ಮೂಲಕ ಕೇಂದ್ರದ ಮಾಜಿ ಸಚಿವ ಮತ್ತು ಸಂಸದ ಅನಂತಕುಮಾರ್ ಹೆಗಡೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸಂಸದ ಅನಂತಕುಮಾರ್ ಹೆಗಡೆ ವಿವಾದಿತ ಹೇಳಿಕೆಯನ್ನು ನೀಡಿದ್ದಾರೆ. ಇದೀಗ ಕೊರೊನಾ ಕುರಿತು ಭಾಷಣ ಮಾಡುವಾಗ ಮಾತನಾಡಿದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಮಗೆ ಸುಮ್ಮನೆ ಹೆದರಿಸಿದ್ದಾರೆ. ಈ …

Read More »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು  ಘೋಷಣೆ ಕೂಗಿ ಆಕ್ರೋಶ

ಗೋಕಾಕ: ಬೆಳಗಾವಿಯ ಪೀರನವಾಡಿ ವೃತ್ತದಲ್ಲಿಯೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ಮಾಡುವಂತೆ ಒತ್ತಾಯಿಸಿ ಘಟಪ್ರಭಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಪದಾಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಇಲ್ಲಿನ ಮೃತ್ಯುಂಜಯ ವೃತ್ತದಲ್ಲಿ ಸೇರಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು  ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಪೀರಣವಾಡಿ ವೃತ್ತದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತವಾಗಿದ್ದು, ರಾಯಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. …

Read More »

ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಬಡಿಯುತ್ತಾ ಕೂತಿದೆ

ಬೆಂಗಳೂರು:  ಅತಿವೃಷ್ಟಿಯಿಂದಾಗಿ ಇಡೀ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಆದ್ರೆ ಸರ್ಕಾರ ಬೆಂಗಳೂರು ಗಲಭೆಯ ಬೆಂಕಿಯಲ್ಲಿ ರಾಜಕೀಯ ರೊಟ್ಟಿ ಬಡಿಯುತ್ತಾ ಕೂತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾದ ವಿರುದ್ಧ ಕಿಡಿಕಾರಿದ್ದಾರೆ. ಕಳೆದ ವರ್ಷ ಅತಿವೃಷ್ಟಿ ಪರಿಹಾರದಲ್ಲಿ ಆದ ವೈಫಲ್ಯದಿಂದ ಈ ಬಾರಿ ಜನರ ಕಷ್ಟ ಕಾರ್ಪಣ್ಯಗಳನ್ನು ದುಪ್ಪಟ್ಟುಗೊಳಿಸಿದೆ. ಅತಿವೃಷ್ಟಿಯಿಂದ ಕಂಗೆಟ್ಟ ಜನರಿಗೆ ಪರಿಹಾರ ಕೊಡುವ ಕೆಲಸ ಮಾಡುವ ಬದಲು ಕಂದಾಯ ಸಚಿವರು ಬೆಂಗಳೂರಿನಲ್ಲಿ ಕುಳಿತು ಕಾವಲಭೈರಸಂದ್ರ ಗಲಭೆ ಬಗ್ಗೆ …

Read More »

ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ: ಬಾಲಚಂದ್ರ ಜಾರಕಿಹೊಳಿ

ಗೋಕಾಕ : ಮಳೆಯಿಂದಾಗಿ ನೆರೆಯ ಭೀತಿ ಅನುಭವಿಸುತ್ತಿರುವ ಘಟಪ್ರಭಾ ನದಿ ತೀರದ ಗ್ರಾಮಗಳ ನಿರಾಶ್ರಿತ ಕುಟುಂಬಗಳಿಗೆ ಈಗಾಗಲೇ ಗಂಜಿ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ. ಮಂಗಳವಾರದಂದು ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿರಾಶ್ರಿತ ಕುಟುಂಬಗಳಿಗೆ ಗಂಜಿ ಕೇಂದ್ರಗಳಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿರುವುದಾಗಿ ಹೇಳಿದ್ದಾರೆ.   ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಬಳೋಬಾಳ, ಬೀರನಗಡ್ಡಿ, ಮಸಗುಪ್ಪಿ, ವಡೇರಹಟ್ಟಿ, ಹುಣಶ್ಯಾಳ ಪಿಜಿ, …

Read More »

ವಿಘ್ನಗಳ ಮೂರ್ತಿ ತಯಾರಿಕಾ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಬೆಳಗಾವಿ : ಗಣೇಶ ಹಬ್ಬಕ್ಕೆ ಕೊರೊನಾ ಕರಿನೆರಳು ಬಿದ್ದಿದ್ದು, ವಿಘ್ನಗಳ ಮೂರ್ತಿ ತಯಾರಿಕಾ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ವಿಘ್ನಗಳ ವಿನಾಶಕನೇ ಗಣೇಶ ಎಂಬ ಕಾರಣ ಪ್ರತಿಯೊಂದು ಸಮಾರಂಭದಲ್ಲಿ ಗಜಾನನ ಪೂಜೆ ನಡೆಸಲಾಗುತ್ತದೆ. ಆದ್ರೆ ಈ ಬಾರಿ ಗಣೇಶ ಹಬ್ಬಕ್ಕೆ ಮೂರ್ತಿ ತಯಾರಿಕ ಕುಟುಂಬಕ್ಕೆ ಈ ಮಾತು ಅಕ್ಷರಶಃ ಸುಳ್ಳಾಗಿದೆ. ಅಥಣಿ ಪಟ್ಟನದಲ್ಲಿವಂಶ ಪಾರಂಪರಿಕವಾಗಿ ಗಣೇಶ ಮೂರ್ತಿ ತಯಾರಿಕೆ ಕಾಯಕದಲ್ಲಿ ತೊಡಗಿಕೊಂಡಿರುವ  15ಕ್ಕೂ ಹೆಚ್ಚು ಕುಟುಂಬಗಳು ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿವೆ. …

Read More »

8 ತಿಂಗಳಿನಿಂದ ಬಾರದ ಸಂಬಳ : ರಾಜ್ಯ ಸರ್ಕಾರಕ್ಕೆ ರಾತ್ರಿ ಹೊತ್ತು ಕಾವಲುಗಾರನಾಗಿ ಕೆಲಸ ಮಾಡಲು ಪತ್ರ ಬರೆದ ‘ಸರ್ಕಾರಿ ನೌಕರ’

ಬೆಂಗಳೂರು : ಮನೆಯಲ್ಲಿ ಗರ್ಭಿಣಿ ಪತ್ನಿಯಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಪೋಷಕರು ಇದ್ದಾರೆ. ಅವರನ್ನು ಉಳಿಸಿಕೊಳ್ಳಲು ಕಚೇರಿ ಕರ್ತವ್ಯಕ್ಕೆ ಧಕ್ಕೆಯಾಗದಂತೆ ರಾತ್ರಿ ಪಾಳಿಯಲ್ಲಿ ಅಲ್ಪಾವಧಿ ಕೆಲಸ ಮಾಡಲು ಅನುಮತಿ ನೀಡುವಂತೆ ನೊಂದಣಿ ಮತ್ತು ಮುದ್ರಣಾಂಕ ಶಾಖೆಯ ಆಡಿಟ್ ಶಾಖೆಯಲ್ಲಿ ಕೆಲಸ ಮಾಡುತ್ತಿರುವ ಪ್ರಥಮ ದರ್ಜೆ ಸಹಾಯಕರೊಬ್ಬರು ರಾಜ್ಯ ಸರ್ಕಾರಕ್ಕೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಈ ಮೂಲಕ ಪತ್ರದಿಂದಾಗಿ ರಾಜ್ಯ ಸರ್ಕಾರಿ ನೌಕರರ ಪರಿಸ್ಥಿತಿ ಮನ ಮಿಡಿಯುವಂತಾಗಿದೆ. ರಾಜ್ಯ …

Read More »

ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ.

ಚಿಕ್ಕೋಡಿ: ಮನೆ ಗೋಡೆ ಕುಸಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ. ಕಲ್ಲಪ್ಪ ಪರಗೌಡರ (70 ) ಮೃತ ದುರ್ದೈವಿ. ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದ್ದು, ಮನೆ ಗೋಡೆಗಳು ಮಳೆ ನೀರಿನಿಂದ ಶಿಥೀಲಗೊಂಡಿದ್ದವು. ನಿನ್ನೆಯೂ ಭಾರೀ ಮಳೆಯಾದ ಹಿನ್ನೆಲೆ ಗೋಡೆ ಕುಸಿದು, ನಿದ್ದೆಯಲ್ಲಿದ್ದ ಕಲ್ಲಪ್ಪ ಪರಗೌಡರ ಅವರ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Read More »

ಘಟಪ್ರಭಾ ನದಿ ಗೋಕಾಕ್​​ನ ಬಡಾವಣೆಗಳು ಜಲಾವೃತ

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾದ ಹಿನ್ನೆಲೆ ನದಿಗಳು ಉಕ್ಕಿ ಹರಿಯುತ್ತಿವೆ. ಗೋಕಾಕ್ ತಾಲೂಕಿನಲ್ಲಿ ಘಟಪ್ರಭಾ ನದಿ ತುಂಬಿ ಹರಿಯುತ್ತಿದ್ದು, ನಗರದ ಹಲವು ಬಡಾವಣೆಗಳಿಗೆ ನೀರು‌‌ ನುಗ್ಗಿದೆ. ಹಳೆ ದನಗಳಪೇಟೆ, ಉಪ್ಪಾರ ಓಣಿಗೆ ನೀರು ನುಗ್ಗಿ ಹಾನಿಯಾಗಿದೆ. ಗೋಕಾಕ್ ಪ್ರವಾಹದ ದೃಶ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, 1.95 ಲಕ್ಷ ಕ್ಯೂಸೆಕ್‌ಗೂ ಅಧಿಕ ಒಳಹರಿವು ಇದೆ. ಇದರಿಂದ ಕೃಷ್ಙಾ ನದಿ ತೀರದ ಜನರಲ್ಲಿ ಪ್ರವಾಹದ …

Read More »

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗದಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ

ಬೆಳಗಾವಿ ಜಿಲ್ಲೆಯ ಪೀರನವಾಡಿಯಲ್ಲಿ ಇದೇ ಆಗಸ್ಟ್‌ನಲ್ಲಿ15 ಅಂದರೆ ಸ್ವಾತಂತ್ರ್ಯೋತ್ಸವ ಹಾಗೂ ರಾಯಣ್ಣೋತ್ಸವದಂದು ಪ್ರತಿಷ್ಠಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಹಾಗೂ ರಾಷ್ಟ್ರಧ್ವಜವನ್ನು ತೆರವುಗೊಳಿಸಿ ಅವಮಾನಿಸಿದ್ದನ್ನು ಖಂಡಿಸಿ ಹಾಗೂ ಮತ್ತೆ ಅದೇ ಜಾಗದಲ್ಲಿ ಗೌರವಯುತವಾಗಿ ಶೀಗ್ರದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿ ಪ್ರತಿಷ್ಠಾಪಿಸುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗದವರು ತಾಲೂಕಾ ದಂಡಾಧಿಕಾರಿಗಳಾದ ಪ್ರಶಾಂತ ಪಾಟೀಲ್ ಅವರ ಮೂಲಕ ಮಾನ್ಯ ಮುಖ್ಯ …

Read More »

ರಾಜ್ಯದಲ್ಲಿ ಒಂದೇದಿನ ಕೊರೋನಾಕ್ಕೆ 139 ಬಲಿ: 7665 ಕೇಸ್!

ಬೆಂಗಳೂರು: ರಾಜ್ಯದಲ್ಲಿ ಮಂಗಳವಾರ 7,665 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ದಾಖಲೆಯ 139 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 4,201ಕ್ಕೆ ಏರಿಕೆಯಾಗಿದೆ. ಮಂಗಳವಾರ ರಾಜ್ಯದಲ್ಲಿ ಒಂದು ದಿನದ ಗರಿಷ್ಠ ಸಾವು ವರದಿಯಾಗಿದ್ದು, ಕಳೆದ ಭಾನುವಾರ ಒಂದೇ ದಿನ 124 ಮಂದಿ ಸಾವನ್ನಪ್ಪಿದ್ದು ಈವರೆಗಿನ ದಾಖಲೆಯಾಗಿತ್ತು. ಮಂಗಳವಾರ 7,665 ಸೋಂಕು ದೃಢಪಡುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2.41 ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು ಮಂಗಳವಾರ …

Read More »