Breaking News

ಹಬ್ಬಳ್ಳಿ

ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್;ಮರಣೋತ್ತರ ಪರೀಕ್ಷಾ ವರದಿ ಬಹಿರಂಗ

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ, ವಾಸ್ತು ತಜ್ಞ ಡಾ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ವರದಿ ಬಹಿರಂಗವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಡಾ.ಸುನೀಲ್ ಬಿರಾದಾರ್ ನೇತೃತ್ವದಲ್ಲಿ ಚಂದ್ರಶೇಖರ್ ಗುರೂಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಗುರೂಜಿಯವರಿಗೆ ಬರೋಬ್ಬರಿ 42 ಬಾರಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಂದ್ರಶೇಖರ್ ಗುರೂಜಿ ಕುತ್ತಿಗೆಯ ಭಾಗದಲ್ಲಿ ಎರಡು ಕಡೆ ಇರಿದ ಗುರುತು ಪತ್ತೆಯಾಗಿದ್ದು, …

Read More »

ವಿದ್ಯಾರ್ಥಿಗಳಿಂದ ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ.

ಹುಬ್ಬಳ್ಳಿ: ‘ಬಡ, ನಿರ್ಗತಿಕ ಹಾಗೂ ದಾಸೋಹ ಕೈಂಕರ್ಯ ನಡೆಸುತ್ತಿರುವ ಮಠಗಳಿಗೆ ವಿತರಿಸುವುದಕ್ಕಾಗಿ, ನಗರದ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ(ಎನ್‌ಎಸ್‌ಎಸ್‌) ವಿದ್ಯಾರ್ಥಿಗಳು ‘ಒಂದು ಮುಷ್ಠಿ ಅಕ್ಕಿ’ ಅಭಿಯಾನ ಆರಂಭಿಸಿದ್ದಾರೆ’ ಎಂದು ಕಾಲೇಜಿನ ಪ್ರಾಚಾರ್ಯ ಡಾ.ಡಿ.ವಿ. ಹೊನಗಣ್ಣವರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸುಮಾರು 50 ವಿದ್ಯಾರ್ಥಿಗಳು ಜ. 1ರಿಂದ 20ರವರೆಗೆ ಹಮ್ಮಿಕೊಂಡಿರುವ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಇದುವರೆಗೆ 25 ಕೆ.ಜಿ.ಯ 200ಕ್ಕೂ ಹೆಚ್ಚು ಅಕ್ಕಿ ಚೀಲಗಳು ಸಂಗ್ರಹವಾಗಿವೆ. …

Read More »

ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ: ಶಾಸಕರ ಗಲಾಟೆ ಕುರಿತು ಶೆಟ್ಟರ್ ಪ್ರತಿಕ್ರಿಯೆ

ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಹಾಗೂ ಪಕ್ಷದ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ಚರ್ಚೆ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.   ಹುಬ್ಬಳ್ಳಿ ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ರಾಣೆಬೆನ್ನೂರ ಶಾಸಕ ಅರುಣಕುಮಾರ ಹಾಗೂ ಎಂಎಲ್ ಸಿ ಆರ್ ಶಂಕರ್ ಮಧ್ಯೆ ಮಾತಿನ ಚಕಮಕಿ‌ ನಡೆದಿದೆ. ಗಲಾಟೆ ಆಗಿಲ್ಲ. ಅವರಿಬ್ಬರು ಕ್ಷೇತ್ರದ ವಿಚಾರದಲ್ಲಿ ಚರ್ಚೆ …

Read More »

ಠಾಣೆಯಲ್ಲಿ ಸಿಬ್ಬಂದಿ ಎದುರು ಅಸಭ್ಯ ವರ್ತನೆ ಆರೋಪ: ಹುಬ್ಬಳ್ಳಿ ಪೊಲೀಸ್​ ಕಾನ್ಸ್​​ಟೇಬಲ್​ ಅಮಾನತು

ಹುಬ್ಬಳ್ಳಿ: ಠಾಣೆಯಲ್ಲಿ ಅಸಭ್ಯ ವರ್ತನೆ ತೋರಿದ ಆರೋಪದಡಿ ನಗರದ ಕಸಬಾಪೇಟ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಶ್ರೀಕಾಂತ ಗೋಣೆಪ್ಪನವರ ಅವರನ್ನು ಅಮಾನತು ಮಾಡಲಾಗಿದೆ. ಶಿಸ್ತಿನ ಇಲಾಖೆಯಲ್ಲಿ ಶ್ರೀಕಾಂತ ಅಶಿಸ್ತಿನಿಂದ ವರ್ತಿಸುತ್ತಿದ್ದರು. ಠಾಣೆಯಲ್ಲಿ ಅಧಿಕಾರಿ, ಸಿಬ್ಬಂದಿ ಎದುರು ಶರ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದರು. ಹೀಗೆ ಮಾಡದಂತೆ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ದುರ್ವರ್ತನೆ ಮುಂದುವರಿಸಿದ್ದರು ಎನ್ನಲಾಗ್ತಿದೆ.   ಈ ಕಾರಣಕ್ಕೆ ಡಿಸಿಪಿ ಕೆ. ರಾಮರಾಜನ್ ಅವರು ತಮ್ಮ ವರ್ಗಾವಣೆಗೂ ಮುನ್ನವೇ ಶ್ರೀಕಾಂತ ಅಮಾನತು …

Read More »

ಬಂದ್ ಮಧ್ಯೆ ಸಿಎಂ ಬೊಮ್ಮಾಯಿ ಯಾವ ಕಾರ್ಯಕ್ರಮದಲ್ಲಿದ್ದಾರೆ? ಭಾರತ್ ಬಂದ್ ಬಗ್ಗೆ ಏನು ಹೇಳಿದರು?

ಹುಬ್ಬಳ್ಳಿ: ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು (ಸೆ.27) ಭಾರತ್ ಬಂದ್ಗೆ (Bharat Bandh) ಕರೆಕೊಟ್ಟಿದ್ದಾರೆ. ಸದ್ಯ ರಾಜ್ಯದ ಹಲವು ಕಡೆ ಪ್ರತಿಭಟನೆ ನಡೆಯುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಬಂದ್ಗೆ ಬೆಂಬಲ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯಿ ನೀಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಕೊವಿಡ್ನಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಈಗಷ್ಟೇ ವ್ಯಾಪಾರ, ವ್ಯವಹಾರದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಹೀಗಾಗಿ ಜನರಿಗೆ ತೊಂದರೆ ಮಾಡಬಾರದು ಅಂತ ಹೇಳಿದ್ದಾರೆ. ಕಾಂಗ್ರೆಸ್ …

Read More »

ಕೈ ಸನ್ನೆ ಮಾಡಿ ಕರೆದೊಯ್ದೊಳು- ಹಲ್ಲೆ ಮಾಡಿ ಹಣ ದೋಚಿದ್ರು

ಹುಬ್ಬಳ್ಳಿ: ನಗರದ ಹಳೇ ಬಸ್ ನಿಲ್ದಾಣದಲ್ಲಿ ನಿಂತಿದ್ದ ಮಹಿಳೆಯೊಬ್ಬಳು ಕೈ ಸನ್ನೆ ಮಾಡಿ ಯುವಕನೊಬ್ಬನನ್ನು ಆಟೋದಲ್ಲಿ ಬಂಜಾರ ಕಾಲನಿ ಬಳಿ ಕರೆದುಕೊಂಡು ಹೋಗಿ ಸಹಚರರಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ನಗದು ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ.   ಹುಬ್ಬಳ್ಳಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ರಾಯಚೂರು ಮೂಲದ ಶಿರಡಿ ನಗರ ಹಾಸ್ಟೆಲ್‍ನಲ್ಲಿ ವಾಸವಿರುವ ಕುಮಾರ ಚವ್ಹಾಣ್ ಹಲ್ಲೆಗೀಡಾದ ಯುವಕ, ಬಟ್ಟೆ ಖರೀದಿಸಲು ಮಾರುಕಟ್ಟೆಗೆ ಬಂದಿದ್ದ ಕುಮಾರ ಚವ್ಹಾಣ್, ಬಟ್ಟೆ ಖರೀದಿಸಿ ಹಾಸ್ಟೆಲ್‍ಗೆ …

Read More »

ಪ್ರತಿ ತಿಂಗಳು 20 ಸಾವಿರ ಲೀಟರ್ ಪ್ರತಿ ಮನೆಗೆ ಕುಡಿಯವ ನೀರು ಸೇರಿದಂತೆ ಎಲ್ಲರಿಗೂ ಉಚಿತ ಚಿಕಿತ್ಸೆ ನೀಡುತ್ತೇವೆ ಎಂದು ಆಪ್ ಚುನಾವಣೆಯ ಪ್ರಣಾಳಿಕೆಯಾಗಿ ಘೋಷಣೆ ಮಾಡಿದೆ.

  ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡ ನಗರ ಪಾಲಿಕೆ ಚುನಾವಣೆಯು ಸಪ್ಟೆಂಬರ್ 3 ರಂದು ನಡೆಯಲಿದೆ.   ಈ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದಿಂದ (AAP) ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಉತ್ತಮ ದರ್ಜೆಯ ಶಾಲೆ, ಮಕ್ಕಳಿಗೆ ಉಚಿತ ಲ್ಯಾಪ್​ಟಾಪ್ , ಎಲ್ಲಾ ಮನೆಗಳಿಗೆ ಪ್ರತೀ ತಿಂಗಳು 20 ಸಾವಿರ ಲೀಟರ್ ನೀರು ನೀಡುವ ಭರವಸೆಯನ್ನು ಆಮ್ ಆದ್ಮಿ ಪಕ್ಷ ನೀಡಿದೆ. ಆಮ್ ಆದ್ಮಿ ಪಕ್ಷ ಆಶ್ವಾಸನೆ ನೀಡುತ್ತಿಲ್ಲ, ಖಾತ್ರಿ ಪಡಿಸಲಿದೆ …

Read More »

ಜಿಲ್ಲೆಯಲ್ಲಿ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 506 ಶಾಲೆಗಳ 1,373 ಕೊಠಡಿಗಳು ಹಾಳಾಗಿವೆ.

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಸುರಿದ ಮಳೆಯಿಂದಾಗಿ 506 ಶಾಲೆಗಳ 1,373 ಕೊಠಡಿಗಳು ಹಾಳಾಗಿವೆ. ನವಲಗುಂದ ತಾಲ್ಲೂಕಿನಲ್ಲಿ ಹಾನಿ ಪ್ರಮಾಣ ಹೆಚ್ಚಿದೆ. 2019ರಲ್ಲಿ ಜಿಲ್ಲೆಯಲ್ಲಿ ವಿಪರೀತ ಮಳೆಯಾಗಿತ್ತು. ಮನೆ ಹಾಗೂ ಕೆಲ ತಾಲ್ಲೂಕುಗಳಲ್ಲಿ ಶಾಲೆಗಳಿಗೆ ನೀರು ನುಗ್ಗಿತು. ಮೇಲಿಂದ ಮೇಲೆ ಸುರಿದ ಮಳೆಯಿಂದಾಗಿ ಹಳೇ ಶಾಲೆಗಳ ಕೊಠಡಿಗಳು ಬಿರುಕು ಬಿಟ್ಟು ಬಿದ್ದಿದ್ದವು. ಆ ವರ್ಷ 199 ಶಾಲೆಗಳ 444 ಕೊಠಡಿಗಳಿಗೆ ಹಾನಿಯಾಗಿತ್ತು. ದುರಸ್ತಿಗೆ ಕಾದಿದ್ದ ಎಲ್ಲ 444 …

Read More »

ಮಾಜಿ ಮುಖ್ಯ ಮಂತ್ರಿ ಅವರ ಮನೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ

ಹುಬ್ಬಳ್ಳಿ: ನಗರದ ಕೇಶ್ವಾಪುರದ ಬಾದಾಮಿ ನಗರದಲ್ಲಿ‌ನ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ನಿವಾಸಕ್ಕೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಶನಿವಾರ ಸಂಜೆ ಭೇಟಿ ನೀಡಿಗುಪ್ತ ಗುಪ್ತ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಸಂಪುಟದಿಂದ ದೂರ ಉಳಿಯುವ ಮೂಲಕ ಮಾಜಿ ಮುಖ್ಯಮಂತ್ರಿಗಳು ಶಾಸಕರಾದ ಜಗದೀಶ್ ಶೆಟ್ಟರ್ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದರು. ನಂತರದ ದಿನಗಳಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆ ನಡೆಯುತಿದ್ದು ಒಂದು …

Read More »

ಸಿಎಂ ಬೊಮ್ಮಾಯಿ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಕಾರು!

ಹುಬ್ಬಳ್ಳಿ: ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಅಪಘಾತಕ್ಕೀಡಾಗಿದೆ. ಹುಬ್ಬಳ್ಳಿಯ ವಿಮಾನ ನಿಲ್ದಾಣದ ಮುಂಭಾಗ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಸ್ವರೂಪದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಘಟನೆ ನಡೆಯುವಾಗ ಮುಖ್ಯಮಂತ್ರಿಯವರ ಕಾರಿನಲ್ಲಿದ್ದರು ಎಂದು ವರದಿಯಾಗಿದೆ. ಘಟನೆಯ ವಿವರ: ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಶಿವರಾಮ್ ಹೆಬ್ಬಾರ್ ಇದ್ದರು. ವಿಮಾನ ನಿಲ್ದಾಣದಿಂದ …

Read More »