Breaking News

ರಾಯಚೂರು

ಮಂತ್ರಾಲಯದಲ್ಲಿ ಇಂದು ತೆರೆಯದ ದ್ವಾರ ಬಾಗಿಲು- ನಿರಾಸೆಯಿಂದ ಮರಳಿದ ಭಕ್ತರು

ರಾಯಚೂರು: 75 ದಿನಗಳ ಬಳಿಕ ರಾಜ್ಯದಲ್ಲಿ ಧಾರ್ಮಿಕ ಸ್ಥಳಗಳ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿದೆ. ಆದರೆ ರಾಯಚೂರಿನಲ್ಲಿ ದೇವಾಲಯಗಳಲ್ಲಿ ಪ್ರವೇಶ ಮುಕ್ತವಾಗಿದ್ದರೂ ಭಕ್ತರ ಸಂಖ್ಯೆ ಅತ್ಯಂತ ವಿರಳವಾಗಿದೆ. ಇತ್ತ ಮಂತ್ರಾಲಯದಲ್ಲಿ ಅಗತ್ಯ ಸಿದ್ಧತೆಯ ಕೊರತೆ ಹಿನ್ನೆಲೆ ಮಠ ಮಹಾದ್ವಾರವನ್ನ ತೆರೆದಿಲ್ಲ. ಮಂತ್ರಾಲಯ ಮಠದ ಮಹಾದ್ವಾರವನ್ನು ತೆರೆಯದೆ ಇರುವುದರಿಂದ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಭಾಗ್ಯ ಇಂದು ಭಕ್ತರಿಗೆ ಸಿಕ್ಕಿಲ್ಲ. ಕೇಂದ್ರ ಹಾಗೂ ಆಂಧ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದಿನಿಂದ ದರ್ಶನಕ್ಕೆ …

Read More »

ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಆಗ್ರಹ- ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆಯರು

ರಾಯಚೂರು: ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದರಿಂದ ನಮ್ಮ ಕುಟುಂಬಗಳು ಹಾಳಾಗುತ್ತಿವೆ ಎಂದು ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಜಿಲ್ಲೆಯ ದೇವದುರ್ಗ ತಾಲೂಕಿನ ಬಾಗೂರು ಗ್ರಾಮದ ಮಹಿಳೆಯರು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ದೂರು ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಕ್ಕೆ ಮದ್ಯ ಮಾರಾಟ ನಿಂತಿತ್ತು. ಆದರೆ ಕಳೆದ ಆರು ತಿಂಗಳಿಂದ ಮತ್ತೆ ಅಕ್ರಮವಾಗಿ ಮದ್ಯ ಮಾರಾಟ ಶುರುವಾಗಿದೆ. ಇದರಿಂದ ನಮ್ಮ ಗಂಡಂದಿರು …

Read More »

ಮೊಳಕೆ ಒಡೆಯದ ಕಳಪೆ ಬೀಜ – ಉತ್ತಮ ಮಳೆಯಾದ್ರೂ ಮಂಕಾದ ರೈತರು…….

ರಾಯಚೂರು: ರೈತರು ದೇಶದ ಬೆನ್ನೆಲುಬು ಅನ್ನೋದು ಕೇವಲ ಮಾತಿಗೆ ಸೀಮಿತವಾಗಿದೆ. ರೈತರಿಗೆ ಮಾತ್ರ ಅನ್ಯಾಯವಾಗುತ್ತಲೇ ಇದೆ. ಸಾಲಸೂಲ ಮಾಡಿ ಜಮೀನಿನಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲಿನ ನಿರೀಕ್ಷೆಯಲ್ಲಿ ಅನ್ನದಾತರು ಇರುತ್ತಾರೆ. ಆದರೆ ರೈತರಿಗೆ ಮೋಸ ಮಾಡಲೆಂದೇ ಇರುವ ಕಳಪೆ ಬೀಜ ತಯಾರಿಕಾ ಕಂಪನಿಗಳು ಮಾತ್ರ ರೈತರ ಬದುಕನ್ನೇ ಮುಳುಗಿಸುತ್ತಿವೆ. ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಖುಷಿಯಾಗಿದ್ದ ರಾಯಚೂರಿನ ಸಿಂಧನೂರು, ಮಸ್ಕಿ ತಾಲೂಕಿನ ಈ ರೈತರು ಈಗ ಮೋಸಹೊಗಿದ್ದಾರೆ. ಸೂರ್ಯಕಾಂತಿ ಬೀಜ ಬಿತ್ತಿ …

Read More »

ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದ ,ಬೇಸತ್ತ ಪೊಲೀಸರ ಲಾಠಿ ಚಾರ್ಜ್

ರಾಯಚೂರು: ಭಾನುವಾರ ಲಾಕ್‍ಡೌನ್ ಜಾರಿಯಲ್ಲಿದ್ದರೂ ಜನ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದು, ಇದರಿಂದ ಬೇಸತ್ತ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ತಿಂಗಳ ಅಂತ್ಯದ ವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಜನ ಮಾತ್ರ ಇದನ್ನು ಪಾಲಿಸುತ್ತಿಲ್ಲ. ಹೀಗೆ ನಗರದಲ್ಲಿ ಅನಗತ್ಯವಾಗಿ ರಸ್ತೆಗಿಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ರಾಜ್ಯದ ಬಹುತೇಕ ಕಡೆ ಲಾಕ್‍ಡೌನ್ ಉಲ್ಲಂಘಿಸಲಾಗುತ್ತಿದ್ದು, ಜನ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ರಾಯಚೂರಿನಲ್ಲಿ ಸಹ ಇಂದು ಬೈಕ್ ಸಂಚಾರ ಹೆಚ್ಚಾಗಿತ್ತು. ಹೀಗಾಗಿ ಪೊಲೀಸರು …

Read More »

ರಾಯಚೂರಿನಲ್ಲಿ ಹೊಸ ಹತ್ತು ಪ್ರಕರಣ ಪತ್ತೆ- 26ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

ರಾಯಚೂರು: ಜಿಲ್ಲೆಯಲ್ಲಿ ಇಂದು ಹತ್ತು ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಮಹಾರಾಷ್ಟ್ರದ ನಂಟಿನಿಂದ ರಾಯಚೂರಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 26 ಕ್ಕೇರಿದೆ. ದೇವದುರ್ಗ ತಾಲೂಕಿನ ಮಸರಕಲ್ ಕ್ವಾರಂಟೈನ್ ಕೇಂದ್ರದಲ್ಲಿದ್ದವರಲ್ಲಿ ಸೋಂಕು ಪತ್ತೆಯಾಗಿದೆ. ಇದರಲ್ಲಿ 1 ವರ್ಷ ಹಾಗೂ 4 ವರ್ಷದ ಗಂಡು ಮಕ್ಕಳು, 13 ವರ್ಷ ಹಾಗೂ 17 ವರ್ಷದ ಹೆಣ್ಣು ಮಕ್ಕಳಿದ್ದಾರೆ. ರೋಗಿ-1713 ರಿಂದ ರೋಗಿ-1722 ವರೆಗೆ ಕ್ರಮವಾಗಿ ರಾಯಚೂರಿನವರಲ್ಲಿ ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. …

Read More »

ಶೇ.15 ರಷ್ಟು ದರ ಹೆಚ್ಚಿಸಿ ಖಾಸಗಿ ಬಸ್ ಓಡಿಸಲು ಅವಕಾಶ: ಲಕ್ಷ್ಮಣ ಸವದಿ

ರಾಯಚೂರು: ಇನ್ನೆರಡು ದಿನಗಳಲ್ಲಿ ಖಾಸಗಿ ವಾಹನಗಳ ಸಂಚಾರ ಆರಂಭವಾಗಲಿದೆ ಅಂತ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ರಾಯಚೂರಿನಲ್ಲಿ ಕೋವಿಡ್ 19 ಕುರಿತ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಅವರು ಖಾಸಗಿ ಬಸ್ ಓಡಾಟ ಕಡಿಮೆಯಿರುವುದರಿಂದ ರಸ್ತೆ ಸಾರಿಗೆ ಸಂಸ್ಥೆಗೂ ಹಾನಿಯಾಗುತ್ತಿದೆ. ಹಾನಿಯಾದರೂ ರಾಜ್ಯ ಸರ್ಕಾರ ಸೇವಾ ಭಾವನೆಯಿಂದ ಬಸ್ ಓಡಿಸುತ್ತಿದೆ ಎಂದರು. ಖಾಸಗಿಯವರು ಶೇ.15 ರಷ್ಟು ಹೆಚ್ಚು ಪ್ರಯಾಣ ದರ ಮಾಡಿ ಬಸ್ ಓಡಿಸಲು ಪರವಾನಿಗೆ ನೀಡಲಾಗಿದೆ. …

Read More »

ಇಳಿಕೆಯಾದ ವಿದ್ಯುತ್‌ ಬೇಡಿಕೆ, ರಾಯಚೂರಿನ ಉಷ್ಣ ವಿದ್ಯುತ್‌ ಸ್ಥಾವರ ಶಟ್‌ಡೌನ್; ಬೀದಿಗೆ ಬಿದ್ದ ಕಾರ್ಮಿಕರು

ರಾಯಚೂರು: ಅಂಫಾನಾ‌ ಚಂಡಮಾರುತದ ಹಿನ್ನೆಲೆ, ರಾಜ್ಯದಲ್ಲೂ ಅಲ್ಲಲ್ಲಿ ಮಳೆಯಾಗುತ್ತಿದೆ. ಪರಿಣಾಮ ಪ್ರಸ್ತುತ ವಿದ್ಯುತ್ ಬೇಡಿಕೆ ಇಳಿಕೆಯಾಗಿದೆ. ಇದರೊಂದಿಗೆ ಪವನ ಹಾಗು ಸೌರಶಕ್ತಿ ಉತ್ಪಾದನೆ ಅಧಿಕವಾಗಿದ್ದು, ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಗೆ ಬೇಸಿಗೆಯಲ್ಲಿಯೇ ರೆಸ್ಟ್ ನೀಡಲಾಗಿದೆ. ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ಅನ್ನು ರಾಯಚೂರು ಮೂಲದ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಿಂದ ನೀಡಲಾಗುತ್ತಿದೆ. 40 ವರ್ಷಗಳ ಇತಿಹಾಸದಲ್ಲಿ ಬೇಸಿಗೆಯ ಸಂದರ್ಭದಲ್ಲಿ ಬಹುತೇಕವಾಗಿ ಶಾಖೋತ್ಪನ್ನ ಸ್ಥಾವರಗಳೆ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದವು. ಆದರೆ, ಈ ಬಾರಿ ಬೇಸಿಗೆಯ …

Read More »

ಮಹಾರಾಷ್ಟ್ರದ ನಂಟು – ಒಂದೇ ಕುಟುಂಬದ ಐವರಿಗೆ ಕೊರೊನಾ………

ರಾಯಚೂರು: ಜಿಲ್ಲೆಗೆ ಮಹಾರಾಷ್ಟ್ರದ ನಂಟಿನ ಶಾಪ ಇನ್ನೂ ಮುಗಿದಿಲ್ಲ. ಇಂದು ಹೊಸ ಐದು ಕೊರೊನಾ ಪಾಸಿಟಿವ್ ಪ್ರಕರಣಗಳು ಬಂದಿವೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ. ಮೇ 16 ರಂದು ಮುಂಬೈನಿಂದ ಬಂದ ರಾಯಚೂರು ತಾಲೂಕಿನ ಕೊರ್ವಿಹಾಳದ ಒಂದೇ ಕುಟುಂಬದ ಐದು ಜನರಿಗೆ ಸೋಂಕು ತಗುಲಿರುವುದು ದೃಢವಾಗಿದೆ. ದೇವಸುಗೂರಿನ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದ ಐವರನ್ನ ರಾಯಚೂರಿನ ಓಪೆಕ್ ಆಸ್ಪತ್ರೆ ಐಸೋಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಐವರಲ್ಲಿ ಮೂವರು ಮಕ್ಕಳಿದ್ದಾರೆ. 12 …

Read More »

ರಾಯಚೂರು ಸಂಪೂರ್ಣ ಲಾಕ್‍ಡೌನ್ – ಊಟವಿಲ್ಲದೆ ಪರದಾಡುತ್ತಿರೋ ಭಿಕ್ಷುಕರು

ರಾಯಚೂರು: ಜಿಲ್ಲೆಯಲ್ಲಿ ಪತ್ತೆಯಾದ ಆರು ಜನ ಕೊರೊನಾ ಸೋಂಕಿತರ ಸಂಪರ್ಕದಲ್ಲಿರುವವರ ಪತ್ತೆಗಾಗಿ ಇಡೀ ನಗರವನ್ನ ಇಂದು ಬಂದ್ ಮಾಡಲಾಗಿದೆ. ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಹೋಟೆಲ್, ಬೇಕರಿ, ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿದ್ದು, ಜನರ ಓಡಾಟವೂ ವಿರಳವಾಗಿದೆ. ಇದರಿಂದ ರಸ್ತೆಯ ಬದಿಯ ಭಿಕ್ಷುಕರು ಊಟವಿಲ್ಲದೆ ಪರದಾಡುತ್ತಿದ್ದಾರೆ. ಮೂರನೇ ಹಂತದ ಲಾಕ್‍ಡೌನ್ ಆರಂಭವಾದ ನಂತರ ರಾಯಚೂರಿನಲ್ಲಿ ಲಾಕ್‍ಡೌನ್ ಸಡಲಿಕೆಯಾಗಿತ್ತು. ಭಿಕ್ಷೆ ಬೇಡಿ ಬದುಕುತ್ತಿದ್ದವರು ಕೂಡ ಈಗ ಊಟಕ್ಕಾಗಿ ಪರದಾಡುತ್ತಿದ್ದಾರೆ. ಸಂಪೂರ್ಣ ಲಾಕ್‍ಡೌನ್ …

Read More »

ಸೋಂಕಿತರ ಸಂಪರ್ಕದಲ್ಲಿದ್ದವರ ಪತ್ತೆಗಾಗಿ ರಾಯಚೂರು ಸಂಪೂರ್ಣ ಲಾಕ್‍ಡೌನ್……….

ರಾಯಚೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೊಸ ಲಾಕ್‍ಡೌನ್ ನಿಂದ ಸಂಪೂರ್ಣ ಸಡಿಲಿಕೆ ಸಿಕ್ಕಿದ್ರೆ ರಾಯಚೂರಿನಲ್ಲಿ ಇಂದು ಸಂಪೂರ್ಣ ಲಾಕ್ ಡೌನ್ ಇದೆ. ಗ್ರೀನ್ ಝೋನ್‍ನಲ್ಲಿದ್ದ ಜಿಲ್ಲೆಯಲ್ಲಿ ಆರು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರಿಂದ ಒಂದು ದಿನದ ಮಟ್ಟಿಗೆ ಇಡೀ ನಗರವನ್ನ ಬಂದ್ ಮಾಡಲಾಗುತ್ತಿದೆ. ಅಗತ್ಯ ಸೇವೆ ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಗಿದೆ. ಸರ್ಕಾರಿ ಕಚೇರಿ, ವೈದ್ಯಕೀಯ ಸೇವೆ, ಪೆಟ್ರೋಲ್, ಬ್ಯಾಂಕ್, ಔಷಧಿ ಮಳಿಗೆ ಹೊರತು ಪಡಿಸಿ ಎಲ್ಲವೂ ಒಂದು ದಿನದ ಮಟ್ಟಿಗೆ …

Read More »