ಬೆಳಗಾವಿ, ಆಗಸ್ಟ್ 09: ಕಾರ್ಖಾನೆಯಲ್ಲಿ ಅಗ್ನಿ ದುರಂತದಲ್ಲಿ (Fire Tragedy) ಮೃತಪಟ್ಟ ಕಾರ್ಮಿಕ ಯಲ್ಲಪ್ಪ ಕುಟುಂಬಕ್ಕೆ ಕಾರ್ಖಾನೆ ಆಡಳಿತ ಮಂಡಳಿಯಿಂದ ಒಟ್ಟು 18 ಲಕ್ಷ ರೂ. ಪರಿಹಾರ ನೀಡಲಾಗಿದೆ. ಆ.6ರಂದು ಜಿಲ್ಲೆಯ ನಾವಗೆ ಬಳಿಯ ಸ್ನೇಹಂ ಟೇಪಿಂಗ್ ಕಾರ್ಖಾನೆಯಲ್ಲಿ ನಡೆದಿದ್ದ ದುರ್ಘಟಯಲ್ಲಿ ಲಿಫ್ಟ್ನಲ್ಲಿ ಕಾರ್ಮಿಕ ಯಲ್ಲಪ್ಪ ಗುಂಡ್ಯಾಗೋಳ ಸಜೀವದಹನವಾಗಿದ್ದ. ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಮೊದಲು ಕಾರ್ಖಾನೆ ಆಡಳಿತ ಮಂಡಳಿ 18 ಲಕ್ಷ ರೂ. ಪರಿಹಾರ ನೀಡಿದೆ. ಮುಂಚೆ 10 ಲಕ್ಷ ರೂ. ಪರಿಹಾರ ಬೇಡ …
Read More »ಸ್ವಾತಂತ್ರ್ಯ ದಿನ: ಪ್ರಧಾನಿಯೊಂದಿಗೆ ಭಾಗವಹಿಸಲು ವಿದ್ಯಾರ್ಥಿ ಸಾಗರ ಆಯ್ಕೆ
ಚಿಕ್ಕೋಡಿ: ತಾಲ್ಲೂಕಿನ ಕೇರೂರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿ ಸಾಗರ ಮಲ್ಲಪ್ಪ ಬೆಕ್ಕೇರಿ 77ನೇ ಸ್ವಾತಂತ್ರ್ಯ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅತಿಥಿಯಾಗಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇಡೀ ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾದ 6 ಜನ ವಿದ್ಯಾರ್ಥಿಗಳ ಪೈಕಿ ಸಾಗರ ಬೆಕ್ಕೇರಿ ಅವರು ಒಬ್ಬರಾಗಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವ …
Read More »ಕಾಗವಾಡ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದಮಂಗನ ಕಾಟ
ಕಾಗವಾಡ: ಪಟ್ಟಣದಲ್ಲಿ ಕಳೆದೆರಡು ದಿನಗಳಿಂದ ಮಂಗವೊಂದು ಸಾರ್ವನಿಕರಿಗೆ ವಿಪರೀತ ಕಾಟ ನೀಡುತ್ತಿದ್ದು, ಅದರ ಕಡಿತದಿಂದ ಹಲವರು ಗಾಯಗೊಂಡಿದ್ದಾರೆ. ಮಂಗನ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹರಸಾಹಸಪಟ್ಟರೂ, ಫಲಕಾರಿಯಾಗಲಿಲ್ಲ. ಮಂಗನ ಕಾಟದಿಂದ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗುತ್ತಿದ್ದು, ಕೂಡಲೇ ಅದನ್ನು ಸೆರೆಹಿಡಿಯಬೇಕೆಂದು ಸ್ಥಳೀಯರ ಆಗ್ರಹಿಸಿದರು. ರಾಯಬಾಗದಿಂದ ಮಂಗನ ಸೆರೆ ಹಿಡಿಯುವವರನ್ನು ಕರೆಸಲಾಗಿದ್ದು, ಎಲ್ಲ ವ್ಯವಸ್ಥೆ ಮಾಡಲಾಗಿದೆ ಎಂದು ಅಥಣಿ ಆರ್ಎಫ್ಒ ರಾಕೇಶ ಅರ್ಜುನವಾಡ ಹೇಳಿದರು.
Read More »ಸೌಹಾರ್ದದಿಂದ ಗಣೇಶೋತ್ಸವ ಆಚರಣೆಗೆ ಸಹಕರಿಸಿ: ಜಿಲ್ಲಾಧಿಕಾರಿ
ಬೆಳಗಾವಿ: ‘ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಈ ಬಾರಿ ಶಾಂತಿ, ಸೌಹಾರ್ದದಿಂದ ಗಣೇಶೋತ್ಸವ ಆಚರಣೆಗೆ ಪ್ರತಿಯೊಬ್ಬರೂ ಸಹಕರಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೋರಿದರು. ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ನಡೆದ ಗಣೇಶೋತ್ಸವ ಆಚರಣೆ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಗಣೇಶೋತ್ಸವ ಆಚರಣೆ ನೆಪದಲ್ಲಿ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಗಣೇಶನ ಪ್ರತಿಷ್ಠಾಪನೆಗೆ ಅನುಮತಿ ಕೊಡಲು ನಗರದ ಎಂಟು ಠಾಣೆಗಳಲ್ಲಿ ಏಕಗವಾಕ್ಷಿ ಪದ್ಧತಿ …
Read More »ಚನ್ನಮ್ಮನ ಕಿತ್ತೂರು: ನಿಂಗಾಪುರಕ್ಕೆ ಬಂತು ದೋಣಿ…
ಚನ್ನಮ್ಮನ ಕಿತ್ತೂರು: ಹುಲಿಕೆರೆ ಹಿನ್ನೀರಿನಿಂದಾಗಿ ಟ್ಯೂಬ್ ತೆಪ್ಪದಲ್ಲಿ ಅಪಾಯಕಾರಿಯಾಗಿ ಸಂಚರಿಸುತ್ತಿದ್ದ ತಾಲ್ಲೂಕಿನ ಕುಲವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಿಂಗಾಪುರದ ಮಕ್ಕಳು ಮತ್ತು ನಾಗರಿಕರ ದಶಕಗಳ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿದೆ. ಈ ಗ್ರಾಮಸ್ಥರ ಸಮಸ್ಯೆ ಮೇಲೆ ಬೆಳಕು ಚೆಲ್ಲಲು ‘ಪ್ರಜಾವಾಣಿ’ ಆ.6ರ ಸಂಚಿಕೆಯಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಪಯಣ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಜಿಲ್ಲಾಡಳಿತ, ಆ ಊರಿಗೆ ಫೈಬರ್ ದೋಣಿಯ ವ್ಯವಸ್ಥೆ ಮಾಡಿತು. ಮಂಗಳವಾರ ಸಂಜೆ ತಾಲ್ಲೂಕು ಆಡಳಿತ ಸೌಧಕ್ಕೆ …
Read More »ನಿಂಗಾಪುರ ಗ್ರಾಮಸ್ಥರಲ್ಲಿ ಹರ್ಷ ವರದಿ ಬೆನ್ನಲ್ಲೆ ಗ್ರಾಮಕ್ಕೆ ಬಂತು ಹೊಸ ಬೋಟ್
ವರದಿ ಬೆನ್ನಲ್ಲೆ ಗ್ರಾಮಕ್ಕೆ ಬಂತು ಹೊಸ ಬೋಟ್ ನಿಂಗಾಪುರ ಗ್ರಾಮಸ್ಥರಲ್ಲಿ ಹರ್ಷ *ಬೆಳಗಾವಿ:* ನಿಂಗಾಪುರ ಗ್ರಾಮಸ್ಥರು ಹೊಸ ಬೋಟ್ ಸಿಗುತ್ತಿದ್ದಂತೆಯೇ ಹರ್ಷದಿಂದ ಕುಣಿದರು. ಬೋಟ್ ವ್ಯವಸ್ಥೆ ಇಲ್ಲದೆ, ಗಾಳಿ ತುಂಬಿದ ಟ್ಯೂಬ್ ಮೇಲೆ ಶಾಲಾ ಮಕ್ಕಳು ಹಿಂಜರಿಯುತ್ತಿದ್ದ ನಂತರ, ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಜಿಲ್ಲಾಡಳಿತವು ತಕ್ಷಣ ಪ್ರತಿಕ್ರಿಯಿಸಿತು. ನಿಂಗಾಪುರ ಗ್ರಾಮ, ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನಲ್ಲಿರುವ ಹಿಂದುಳಿದ ಪ್ರದೇಶವಾಗಿದೆ, ಇತ್ತೀಚಿನ ಭಾರಿ ಮಳೆಯಿಂದಾಗಿ ಗ್ರಾಮಸ್ಥರು ಹುಲಿಕೆರೆಯನ್ನು ದಾಟಲು …
Read More »ಸಿಡಿಲು ಬಡಿದು ಆರು ಜನರಿಗೆ ಗಾಯ
ರೋಣ (ಗದಗ ಜಿಲ್ಲೆ): ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ಆರು ಜನರು ಗಾಯಗೊಂಡ ಘಟನೆ ತಾಲ್ಲೂಕಿನ ಹೊನ್ನಿಗನೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಅಂದಾನಗೌಡ ಪವಾಡಿಗೌಡ್ರ, ಸುನಂದಾ ಪವಾಡಿಗೌಡ್ರ, ಕಸ್ತೂರೆವ್ವ ಪವಾಡಿಗೌಡ್ರ, ಶರಣವ್ವ ಮಾದರ, ರೂಪ ಪಾಟೀಲ, ಸುಜಾತಾ ಪಾಟೀಲ ಸಿಡಿಲು ಬಡಿದು ಗಾಯಗೊಂಡವರು. ಎಲ್ಲರನ್ನೂ ರೋಣ ಪಟ್ಟಣದ ಭೀಮಸೇನ ಜೋಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಿಗನೂರು ಗ್ರಾಮದಲ್ಲಿ ಸಿಡಿಲು ಬಡಿದು …
Read More »ಮಳೆಗಾಲದಲ್ಲಿ ‘ಟ್ಯೂಬ್ ತೆಪ್ಪ’ದಲ್ಲೇ ಶಾಲಾ ಮಕ್ಕಳ ಪಯಣ
ಕಿತ್ತೂರು: ಎರಡು ಲಾರಿ ಟ್ಯೂಬ್ ಗಳಿಗೆ ಗಾಳಿ ತುಂಬಿಸಿ ಅದರ ಮೇಲೆ ಕಟ್ಟಿಗೆಯಿಟ್ಟು, ಎರಡೂ ದಂಡೆಗೆ ನೆಡಲಾಗಿರುವ ಗೂಟಗಳಿಗೆ ಹಗ್ಗ ಕಟ್ಟಿ ಮಾಡಿರುವ ‘ಜಗ್ಗುವ ಟ್ಯೂಬ್ ತೆಪ್ಪ’ದಲ್ಲಿ ತಾಲ್ಲೂಕಿನ ಕುಲವಳ್ಳಿಯ ನಿಂಗಾಪುರ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರು, ರೈತರಿಗೆ ಇದೇ ಸಂಚಾರದ ಜಲಮಾರ್ಗವಾಗಿದೆ. ‘ಧಾರವಾಡ ತಾಲ್ಲೂಕಿನ ಅಳ್ನಾವರ ಬಳಿಯ ಹುಲಿಕೆರೆ ಭರ್ತಿಯಾದರೆ ಚನ್ನಮ್ಮನ ಕಿತ್ತೂರು ತಾಲ್ಲೂಕಿನ ನಿಂಗಾಪುರಕ್ಕೆ ಈ ಅಪಾಯಕಾರಿ ನೀರ ಮೇಲಿನ ಸಂಚಾರ ತಪ್ಪಿದ್ದಲ್ಲ’ ಎನ್ನುತ್ತಾರೆ ಗ್ರಾಮಸ್ಥರು. ‘ಅಲ್ಲದೇ, …
Read More »ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆಗಾಗಿ ಕೂಗು
ಮತ್ತೆ ಬೆಳಗಾವಿ ಜಿಲ್ಲೆ ವಿಭಜನೆಗಾಗಿ ಕೂಗು ಕರ್ನಾಟಕದ ಎರಡನೇ ದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಆಡಳಿತದ ಸುಧಾರಣೆಯ ದೃಷ್ಟಿಯಿಂದ ವಿಭಜನೆ ಮಾಡಬೇಕೆಂಬ ಬೇಡಿಕೆಗಳು ಮತ್ತೆ ಎದ್ದಿವೆ. 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಜಿಲ್ಲೆ, 18 ವಿಧಾನಸಭಾ ಮತ್ತು 2 ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಬೆಳಗಾವಿ ಜಿಲ್ಲೆಯನ್ನು ಚಿಕ್ಕೋಡಿ ಮತ್ತು ಗೋಕಾಕವೆಂಬ ಎರಡು ಜಿಲ್ಲಾ ಕೇಂದ್ರಗಳಾಗಿ ವಿಭಜಿಸುವ ಹೋರಾಟ ಕಳೆದ ಎರಡು ದಶಕಗಳಿಂದ ನಡೆಯುತ್ತಿದೆ. ಇತ್ತ ಅಥಣಿ ಮತ್ತು …
Read More »ಹಾನಿಗೊಳಗಾದ ಅರಭಾವಿ ಮತಕ್ಷೇತ್ರದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು.
ಗೋಕಾಕ: ಪ್ರವಾಹದಿಂದ ಹಾನಿಗೊಳಗಾದ ಅರಭಾವಿ ಮತಕ್ಷೇತ್ರದ ರೈತರಿಗೆ ಮತ್ತು ಸಾರ್ವಜನಿಕರಿಗೆ ಅಗತ್ಯವಿರುವ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಒತ್ತಾಯಿಸಿದರು. ಸೋಮವಾರದಂದು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಗೋಕಾಕ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಇತ್ತಿಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಕ್ಷೇತ್ರದ ಸುಮಾರು 30 ಗ್ರಾಮಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ …
Read More »