Breaking News

ಬೆಳಗಾವಿ

ಬೆಳಗಾವಿಯಲ್ಲಿ ಗಣೇಶೋತ್ಸವ ಮೆರವಣಿಗೆಗೆ ಜನಸಾಗರ

ಬೆಳಗಾವಿಯ ಶ್ಯಾಮಪ್ರಸಾದ್‌ ಮುಖರ್ಜಿ (ಎಸ್‌ಪಿಎಂ) ರಸ್ತೆಯಲ್ಲಿ ಬುಧವಾರ ಸಂಜೆಯೂ ಮುಂದುವರಿದ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಸೇರಿದರು. ನಿರಂತರ 30 ತಾಸು ಮೆರವಣಿಗೆ ನಡೆಯಿತು

Read More »

ಗಣೇಶ ವಿಸರ್ಜನೆಯ ಅದ್ದೂರಿ ಮೆರವಣಿಗೆ: ಈದ್‌ ರ‍್ಯಾಲಿ ಮುಂದಕ್ಕೆ

ಬೆಳಗಾವಿ: ಗಣೇಶ ಮೂರ್ತಿಗಳ ವಿಸರ್ಜನೆಯ ಅದ್ದೂರಿ ಮೆರವಣಿಗೆಗೆ ತೊಡಕಾಗದಿರಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯು ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದ ಸೋಮವಾರದ ಈದ್ ಮಿಲಾದ್ ಮೆರವಣಿಗೆಯನ್ನು ಮುಸ್ಲಿಮರು ಸೆಪ್ಟೆಂಬರ್ 22ಕ್ಕೆ ಮುಂದೂಡಿದರು. ಉಳಿದಂತೆ ಇತರ ಧಾರ್ಮಿಕ ಕಾರ್ಯಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ‘ಬೆಳಗಾವಿಯ ಗಣೇಶೋತ್ಸವ ದೇಶದಲ್ಲೇ ಪ್ರಸಿದ್ಧ. ಮೊದಲು ಅದು ಸಂಭ್ರಮದಿಂದ ನೆರವೇರಲಿ. ಸೆಪ್ಟೆಂಬರ್ 22ರಂದು ನಾವು ಈದ್‌-ಮಿಲಾದ್‌ ಮೆರವಣಿಗೆ ಮಾಡಲು ಇಸ್ಲಾಂ ಧರ್ಮಗುರುಗಳು ಮತ್ತು ಮುಸ್ಲಿಮರೆಲ್ಲ ಸೇರಿ ನಿರ್ಧರಿಸಿದೆವು. ಗಣೇಶ …

Read More »

ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತ್ಯೋತ್ಸವ ಆಚರಣೆ.

ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆಯಲ್ಲಿ ವಿಶ್ವಕರ್ಮ ಜಯಂತಿ ಆಚರಿಸಲಾಯಿತು. ದೇವಶಿಲ್ಪಿ ಭಗವಾನ್ ವಿಶ್ವಕರ್ಮ ಜಯಂತಿಯ ಅಂಗವಾಗಿ ಕಾರ್ಖಾನೆಯಲ್ಲಿ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ್ ಜಾರಕಿಹೊಳಿ ಅವರ ಮಾರ್ಗದರ್ಶನದಂತೆ ಆಚರಣೆ ಮಾಡಿದರು. ಸೃಷ್ಟಿಕರ್ತ ಬ್ರಹ್ಮನ ಅಂಶವಾಗಿರುವ ದೇವಶಿಲ್ಪಿ ವಿಶ್ವಕರ್ಮನು ಎಲ್ಲಾ ಕುಶಲಕರ್ಮಿಗಳಿಗೆ ಒಳಿತನ್ನು ತರಲಿ ಎಂದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಊರಿನ ಮುಖಂಡರು ಹಿರಿಯರು ಯುವಕರು ಕಾರ್ಖಾನೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Read More »

ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ ?: ಶಾಸಕ ರಮೇಶ ಜಾರಕಿಹೊಳಿ

ಅಥಣಿ: ‘ಮುನಿರತ್ನ ಪ್ರಕರಣದ ಹಿಂದೆ ಸಿ.ಡಿ ಶಿವು ಇದ್ದಾನೆ. ಅವನ ವಿರೋಧಿಗಳೆಲ್ಲ ಜೈಲಿನಲ್ಲಿದ್ದಾರೆ. ಈ ಕೆಲಸ ಬಿಟ್ಟರೆ, ಅವನಿಗೆ ಬೇರೇನೂ ಗೊತ್ತಿಲ್ಲ’ ಎಂದು ಶಾಸಕ ರಮೇಶ ಜಾರಕಿಹೊಳಿ ಅವರು ಪರೋಕ್ಷವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಡಿಕೆಶಿ ಕಂಪನಿಯವರು ಮೊದಲು ನನ್ನ ಬಲಿ ಪಡೆದರು. ನಂತರ ದೇವೇಗೌಡರ ಕುಟುಂಬದ ಬಲಿ ಪಡೆದರು. ಈಗ ಮುನಿರತ್ನ ಬಲಿ ಪಡೆದಿದ್ದಾರೆ’ ಎಂದರು. ‘ಸಿ.ಡಿ ಶಿವು …

Read More »

3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ‘ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯ ಒಳಗೊಂಡ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ರಾಮತೀರ್ಥ ನಗರದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ‘ಆವರಣ ಗೋಡೆ ನಿರ್ಮಾಣ, ನೆಲ ಸಮತಟ್ಟುಗೊಳಿಸುವುದು ಸೇರಿದಂತೆ ಮೊದಲ ಹಂತದ ಕಾಮಗಾರಿಗಳು ಒಂದು …

Read More »

ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನ ಎಂದೂ ಒಪ್ಪಲ್ಲ, ಬಿಜೆಪಿಗೆ ಭ್ರಷ್ಟ ಎಂಬ ಲೇಬಲ್‌ ಕೊಟ್ಟಿದ್ದೇ ಬಿವೈ ವಿಜಯೇಂದ್ರ:ರಮೇಶ್ ಜಾರಕಿಹೊಳಿ

ಚಿಕ್ಕೋಡಿ: ಬಿಜೆಪಿ ( BJP) ನಾಯಕರ ಜೊತೆ ಆರ್‌ಎಸ್‌ಎಸ್ (RSS) ನಡೆಸಿದ ಸಂಘಟನಾ ಸಭೆ ವಿಚಾರವಾಗಿ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಪ್ರತಿಕ್ರಿಯೆ ನೀಡಿದ್ದು, ಈ ಸಂದರ್ಭದಲ್ಲಿ ಸ್ವಪಕ್ಷೀಯ ನಾಯಕರ ವಿರುದ್ಧವೇ ಗುಡುಗಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ವಿರುದ್ದ ಮತ್ತೊಮ್ಮೆ ಗುಡುಗಿರುವ ರಮೇಶ್ ಜಾರಕಿಹೊಳಿ, ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ (BJP State President) ಎಂದು ಒಪ್ಪಿಲ್ಲ ಒಪ್ಪುವುದೂ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.   ವಿಜಯೇಂದ್ರವ ರಾಜ್ಯಾಧ್ಯಕ್ಷ ಸ್ಥಾನ …

Read More »

ಸರಣಿ ಅಪಘಾತ: ಇಬ್ಬರು ಸಾವು

ನಿಪ್ಪಾಣಿ: ನಗರದ ಹೊರವಲಯದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ತವನಿಧಿ ಘಟ್ಟದ ಕೆಳಗೆ ಭಾನುವಾರ ಸಂಜೆ ಸಂಭವಿಸಿದ ಸರಣಿ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಸ್ಥಳೀಯ ನಿವಾಸಿ ಜಬಿನ್ ಮಕಾನದಾರ(58), ಚಿಕ್ಕೋಡಿ ತಾಲ್ಲೂಕಿನ ಖಡಕಲಾಟದ ಗಣಪತಿ ಮಾನೆ(45), ರೇಖಾ ಗಾಡಿವಡ್ಡರ(35), ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಪಟ್ಟಣಕೋಡೊಲಿಯ ದಿಲದಾರ್ ಮುಲ್ಲಾ(61) ಮೃತರು. ಇದೇ ಘಟನೆಯಲ್ಲಿ ಗಾಯಗೊಂಡ 4 ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಬೆಳಗಾವಿಯಿಂದ ಕೊಲ್ಹಾಪುರಕ್ಕೆ ಹೋಗುತ್ತಿದ್ದ ಕಂಟೇನರ್ ಘಟ್ಟದಿಂದ ಇಳಿಯುತ್ತಿದ್ದಂತೆ ನಿಯಂತ್ರಣ ತಪ್ಪಿ, ರಸ್ತೆಯ …

Read More »

ವಾರದಲ್ಲಿ ಮೂರೇ ದಿನ ವಂದೇ ಭಾರತ ರೈಲು: ಪುಣೆ -ಹುಬ್ಬಳ್ಳಿ ನಡುವೆ ಸಂಚಾರ

ಬೆಳಗಾವಿ: ಪುಣೆ-ಹುಬ್ಬಳ್ಳಿ ಮಧ್ಯೆ ಸೆಪ್ಟೆಂಬರ್ 16ರಿಂದ ಸಂಚರಿಸಲಿರುವ ‘ವಂದೇ ಭಾರತ್’ ಎಕ್ಸ್‌ಪ್ರೆಸ್‌ ರೈಲು ಸೇವೆ ವಾರದಲ್ಲಿ ಮೂರು ದಿನಕ್ಕೆ ಸೀಮಿತವಾಗಿದೆ. ಹಿಂದಿನ ವೇಳಾಪಟ್ಟಿಯಂತೆ ವಾರದಲ್ಲಿ 6 ದಿನ ಪುಣೆ-ಹುಬ್ಬಳ್ಳಿ ಮಾರ್ಗದಲ್ಲಿ ವಂದೇ ಭಾರತ್‌ ರೈಲು ಸಂಚರಿಸಬೇಕಿತ್ತು. ಈ ಮಧ್ಯೆ, ಕೊಲ್ಹಾಪುರ ಮಾರ್ಗವಾಗಿಯೂ ಇದೇ ರೈಲು ಓಡಿಸಲು ರೈಲ್ವೆ ಇಲಾಖೆ ಮುಂದಾಗಿತ್ತು. ಇದಕ್ಕೆ ಮಹಾರಾಷ್ಟ್ರದ ಜನಪ್ರತಿನಿಧಿಗಳು ಅಲ್ಲದೇ ಬೆಳಗಾವಿ, ಧಾರವಾಡ ಜಿಲ್ಲೆ ಪ್ರಯಾಣಿಕರಿಂದ ಆಕ್ಷೇಪ ವ್ಯಕ್ತವಾಯಿತು. ‘ನೇರ ಕಾರ್ಯಾಚರಣೆ ಆರಂಭಗೊಂಡರೆ ಪುಣೆ-ಹುಬ್ಬಳ್ಳಿ …

Read More »

ಜೆಸಿಬಿಗೆ ಸಿಲುಕಿ ಮೂರು ವರ್ಷದ ಬಾಲಕಿ ದಾರುಣ ಮೃತ್ಯು

ಚಿಕ್ಕೋಡಿ: ತಾಲೂಕಿನ ಕಬ್ಬೂರ ಪಟ್ಟಣದ ಹನುಮಾನ ನಗರದ ತೋಟದ ಹತ್ತಿರ ಪೈಪಲೈನ್ ಹರಿ ತೆಗಿಯುವಾಗ ಜೆಸಿಬಿಗೆ ಸಿಲುಕಿ 3 ವರ್ಷದ ಬಾಲಕಿ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ. ಪಟ್ಟಣ ಪಂಚಾಯತಿ ವತಿಯಿಂದ ಜಲಕುಂಭ ಕಾಮಗಾರಿಯನ್ನು ರಮೇಶ ಕುಕನೂರ ಎಂಬುವರ ಮನೆ ಮುಂದುಗಡೆ ರಸ್ತೆಯ ಬದಿ ಪೈಪಲೈನ್ ಹರಿ ತೆಗೆಯುವಾಗ ಮನೆಯ ಹತ್ತಿರ ಆಟ ಆಡುತ್ತಿದ್ದ 3 ವರ್ಷದ ಬಾಲಕಿ ಭೂಮಿಕಾ ರಮೇಶ ಕುಕನೂರ ಜೆಸಿಬಿಗೆ ಸಿಲುಕಿ ಮೃತಪಟ್ಟಿದ್ದಾರೆ. ಈ ಘಟನೆಯಿಂದಾಗಿ ಮೃತ …

Read More »

ಪಿಜಿ-ನೀಟ್ ದೇಶಕ್ಕೆ 9ನೇ RANK ಗಳಿಸಿದDr.ಶರಣಪ್ಪ

ಪಿಜಿ-ನೀಟ್ ದೇಶಕ್ಕೆ 9ನೇ ರ‌್ಯಾಂಕ್ ಗಳಿಸಿದ ಡಾ.ಶರಣಪ್ಪ ಬಿಮ್ಸ್ ಮುಕುಟಕ್ಕೆ ಮತ್ತೊಂದು ಗರಿ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಯ ವೈದ್ಯಕೀಯ ವಿದ್ಯಾರ್ಥಿ ರಾಷ್ಟ್ತಮಟ್ಟದ ಪಿ.ಜಿ. ನೀಟ್ ಪರೀಕ್ಷೆಯಲ್ಲಿ ಒಂಬತ್ತನೇ  ಗಳಿಸುವ ಮೂಲಕ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಬಿಮ್ಸ್ ಸಾಧನೆ ಗುರುತಿಸುವಂತಾಗಿದೆ. ಬಿಮ್ಸ್ ನ ಎಂ.ಬಿ.ಬಿ.ಎಸ್ ವಿದ್ಯಾರ್ಥಿಯಾಗಿರುವ ಡಾ. ಶರಣಪ್ಪ ಶೀನಪ್ಪನವರ ಪಿ.ಜಿ. ನೀಟ್ ಪರೀಕ್ಷೆಯಲ್ಲಿ ಒಂಬತ್ತನೇ ರ‌್ಯಾಂಕ್ ಗಳಿಸುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸುವುದರ‌ ಜತೆಗೆ ಸಂಸ್ಥೆಗೆ ಕೀರ್ತಿಯನ್ನು …

Read More »