ಚಿಕ್ಕೋಡಿ (ಬೆಳಗಾವಿ): ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ ಧರಿಸುವಂತೆ ಹೇಳಿದ್ದಕ್ಕೆ ಕರ್ತವ್ಯ ನಿರತ ಪೊಲೀಸರು ಸಿ.ಆರ್.ಪಿ.ಎಫ್ ಯೋಧನ ಮೇಲೆ ಹಲ್ಲೆ ನಡೆಸಿ ಬೇಡಿ ತೋಡಿಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ. ಏಪ್ರಿಲ್ 23ರಂದು ಈ ಘಟನೆ ನಡೆದಿದ್ದು, ಯೋಧ ಸಚಿನ ಸಾವಂತ್ ಅವರನ್ನು ಪೊಲೀಸ್ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಸದಲಾಗ ಪೊಲೀಸ್ ಠಾಣೆಯಲ್ಲಿ ಸಿ.ಆರ್.ಪಿ.ಎಫ್ ಕೋಬ್ರಾ ಕಮಾಂಡೋ ಯೋಧನಿಗೆ ಬೇಡಿ ಹಾಕಿ ಕೂರಿಸಿದ್ದ …
Read More »ಲಾಕ್ ಡೌನ್: 794 ಅಬಕಾರಿ ದಾಳಿ- ಮದ್ಯ, ವಾಹನ ಸೇರಿದಂತೆ 1.10 ಕೋಟಿ ಮೌಲ್ಯದ ವಸ್ತು ಜಪ್ತಿ
ಬೆಳಗಾವಿ, ಏ.೨೭(ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ಮತ್ತು ಹರಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಿರುತ್ತದೆ. ದಿನಾಂಕ 24-03-2020 ರಿಂದ ಇಲ್ಲಿಯವರೆಗೆ ಅಕ್ರಮ ಕೇಂದ್ರಗಳಲ್ಲಿ ನಿರಂತರವಾಗಿ ಅಬಕಾರಿ ದಾಳಿ, ಹಗಲು- ರಾತ್ರಿ ಗಸ್ತು, ರಸ್ತೆಗಾವಲು ನಡೆಸಿ, ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿರುತ್ತದೆ. …
Read More »ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ ಸಲ್ಲದು: ಸತೀಶ ಜಾರಕಿಹೊಳಿ
ಚಿಕ್ಕೋಡಿ: ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ ಜಾರಕಿಹೊಳಿ ಅವರು ಕೊರೋನಾ ಸೋಂಕು ಕುರಿತು ಜಾಗೃತಿ ಬಗ್ಗೆ ಹಾಗೂ ಕಾರ್ಯಚಟುವಟಿಕೆಗಳ ಬಗ್ಗೆ ಯಾವ ರೀತಿ ನಾವು ಶ್ರಮಿಸಬೇಕು ಪಕ್ಷದ ಕಾರ್ಯಕರ್ತರು ಹೇಗೆಲ್ಲ ಸ್ಪಂದನೆ ನೀಡಬೇಕು ಎಂಬುದರ ಕುರಿತು ಇಲ್ಲಿನ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತಾರತಮ್ಯ ಸಲ್ಲದು ಎಂದು ಹರಿಹಾಯ್ದರು. ಕೇಂದ್ರ ಸರ್ಕಾರ ನೇರವಾಗಿ ವಿವಿಧ ಯೊಜನೆಗಳ ಫಲಾನುಭವಿಗಳಿಗೆ ಹಣ ನೀಡುವ …
Read More »ಕೊರೋನಾ ಪರಿಹಾರ ನಿಧಿಗೆ1.15 ಸಾವಿರ ರೂ. ಚೆಕ್ ಸತೀಶ ಜಾರಕಿಹೊಳಿ ಸ್ವೀಕರಿಸಿದರು.
ಚಿಕ್ಕೋಡಿ: ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ಇಂದು 1.15 ಸಾವಿರ ರೂ. ಚೆಕ್ ಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ವೀಕರಿಸಿದರು. ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಮಹೇಂದ್ರ ಕಲ್ಲಪ್ಪ ತಮ್ಮಣ್ಣವರ ಅವರು ವ್ಯಯಕ್ತಿಕವಾಗಿ 1 ಲಕ್ಷ ರೂ ಮತ್ತು ನದಲಾಪುರ ಗ್ರಮದ ನಂದೀಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಂಘ ವತಿಯಿಂದ 15 ಸಾವಿರ ರೂ. ಕೆಪಿಸಿಸಿ ಕೊರೋನಾ ಪರಿಹಾರ ನಿಧಿಗೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ, …
Read More »ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ
ಬೆಳಗಾವಿ- ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ ನೀಡಿದೆ. ಸಾರಿಗೆ ಸಂಸ್ಥೆಯ ಮೂರು ರಾಜಹಂಸ ಬಸ್ ಗಳಲ್ಲಿ ಸುಮಾರು 45 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಗುಜರಾತಿಗೆ ತೆರಳಿದ್ದಾರೆ. ನಿನ್ನೆ ಸಂಜೆ ಈ ಮೂರು ಬಸ್ಸು ಗಳು ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಡಿಸೈಲ್ ತುಂಬಿಸಿಕೊಂಡು ಮುಂದಕ್ಕೆ ಸಾಗಿವೆ …
Read More »ಕಾಂಗ್ರೆಸ್ ಮುಖಂಡರು ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯುತ್ತಿದ್ದಾರೆ: ಮಹೇಶ ಕುಮಟಳ್ಳಿ
ಅಥಣಿ: ಕಾಂಗ್ರೆಸ್ ಮುಖಂಡರು ಕೊರೊನಾ ಸಂದಿಗ್ಧ ಪರಿಸ್ಥಿತಿಯನ್ನು ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದು ಶಾಸಕ ಮಹೇಶ ಕುಮಟಳ್ಳಿ ಕಿಡಿಕಾರಿದ್ದಾರೆ. ಶಾಸಕ ಮಹೇಶ ಕುಮಟಳ್ಳಿ ಕಾಣೆಯಾಗಿದ್ದಾರೆ ಎಂಬ ಕಾಂಗ್ರೆಸ್ ಮುಖಂಡರ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮುಖಂಡರನಷ್ಟು ಕೀಳು ರಾಜಕೀಯಕ್ಕೆ ನಾನು ಇಳಿಯಲ್ಲ. ಅಧಿಕಾರಿಗಳು ಹಾಗೂ ಜನರ ಮಧ್ಯೆ ಇದ್ದು, ಕೊರೊನಾ ಸೋಂಕು ಹರಡದಂತೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತಿದ್ದೇನೆ ಎಂದರು. ಪ್ರತಿನಿತ್ಯ ಅವರ ಮನೆಗೆ ಹೋಗಿ ಭೇಟಿ …
Read More »ತರಾತುರಿಯಲ್ಲಿ ಮಾಡಿದ ಲಾಕಡೌನ್ ನಿಂದ ಸಮಸ್ಯೆಯಾಗಿದೆ: ಸತೀಶ ಜಾರಕಿಹೋಳಿ
ಕೊಣ್ಣೂರ :ಕೊರೋನಾ ತಡೆಗಟ್ಟಲು ಕಡಿಮೆ ವೇತನದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಅನೂಕೂಲವಾಗುಂತಹ ಕೆಲಸ ರಾಜ್ಯ ಸರ್ಕಾರ ಮಾಡಬೇಕಾಗಿದೆ ಎಂದು ಗೋಕಾಕ ತಾಲೂಕಿನ ಕೊಣ್ಣೂರಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೆಪಿಸಿಸಿಯ ಕಾರ್ಯಾದಕ್ಷರಾದ ಸತೀಶ ಜಾರಕಿಹೋಳಿಯವರು ಬೇಟಿ ನೀಡಿ ವೈದ್ಯರ ಜೊತೆ ಚರ್ಚಿಸಿ ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿ ಮಾಸ್ಕ ವಿತರಿಸಿದರು ಇದೆ ಸಂದರ್ಭದಲ್ಲಿ ಮಾದ್ಯಮದವರಿಗೆ ಉತ್ತರಿಸಿದ ಅವರು ನಮ್ಮ ಪಕ್ಷದ ವತಿಯಿಂದ ಒಂದು ಲಿಸ್ಟ್ ಮಾಡಿ ಬಡವರಿಗೆ ತಲುಪಿಸುವಂತೆ ಮುಖ್ಯಮಂತ್ರಿಗಳಿಗೆ …
Read More »ದಿನಗೂಲು ಕಾರ್ಮಿಕರಿಗೆ ಲಾಕ್‌ಡೌನ್ ನಿಂದ ತುಂಬ ಸಂಕಷ್ಟವಾಗುತ್ತಿದೆ ಹೀಗಾಗಿ ಅವರ ಕುರಿತು ನಿರ್ಧಾರ ತೆಗೆದುಕೊಳ್ಳಬೇಕು
ಗೋಕಾಕ: ಕೊರೋನಾ ಸೊಂಕೀತರ ಸಂಖ್ಯೆ ಹೆಚ್ಚಿಗೆ ಆದಲ್ಲಿ ಲಾಕಡೌನ್ ಮುಂದುವರೆಸಲಿ, ಆದರೆ ನಿರ್ಬಂಧ ಹೆರದೆ ದಿನಗೂಲಿ ಕಾರ್ಮಿಕರಿಗೆ, ಕೃಷಿಕರಿಗೆ ಮತ್ತು ಕೆಲವು ಕಾರ್ಖಾನೆಗಳನ್ನು ಬಿಟ್ಟು ಪಾಸ್ ವ್ಯವಸ್ಥೆ ಮಾಡಿ ಅನೂಕೂಲ ಮಾಡಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಸಮೀಪದ ಕೊಣ್ಣೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚಿಸಿ ಅಲ್ಲಿನ ಕುಂದುಕೊರತೆಗಳನ್ನು ವಿಚಾರಿಸಿ ಮಾಸ್ಕ ವಿತರಿಸಿದ ಬಳಿಕ ಮಾದ್ಯಮದವರಿಗೆ ಉತ್ತರಿಸಿದ ಅವರು ದಿನಗೂಲು …
Read More »ಅರಭಾಂವಿ ಕ್ಷೇತ್ರದಲ್ಲಿ ಎಲ್ಲ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ಟ್ ವಿತರಿಸಿದರು
ಮೂಡಲಗಿ: ಅರಭಾಂವಿ ಕ್ಷೇತ್ರದಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಗಳಿಗೆ ಆಹಾರ ಧಾನ್ಯಗಳನ್ನು ನೀಡುವ ಮೂಲಕ ಮಹಾನ್ ದಾನಿಯಾಗಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸತ್ಕಾರ್ಯ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಸಮಾಜ ಮುಖಿ ಕಾರ್ಯಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಬಾಲಚಂದ್ರ ಜಾರಕಿಹೊಳಿ ಅವರು ಕ್ಷೇತ್ರದ ಜನರ ಹೃದಯದಲ್ಲಿ ನೆಲೆಸಿರುವ ಹೃದಯವಂತ. ರವಿವಾರದಂದು ಗ್ರಾಮಗಳಲ್ಲಿ ಸರ್ವ ಕುಟುಂಬಗಳಿಗೆ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಆಹಾರ ಧಾನ್ಯಗಳ ಕಿಟ್ಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಅರಭಾಂವಿ ವಿಧಾನ ಸಭಾ …
Read More »ಕೋವಿಡ್-೧೯ ಸೋಂಕು ತಗುಲಿದ್ದ ಹಿರೇಬಾಗೇವಾಡಿಯ ದಂಪತಿ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ…….
ಬೆಳಗಾವಿ, ಏ.೨೬(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಹಿರೇಬಾಗೇವಾಡಿಯ ದಂಪತಿ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿಯ ೫೦ ವರ್ಷದ ವ್ಯಕ್ತಿ(ಪಿ-೧೮೨) ಹಾಗೂ ಅವರ ಪತ್ನಿಯಾಗಿರುವ ೪೦ ವರ್ಷದ (ಪಿ-೧೯೨) ಅವರನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಇವರು ಏ.೩ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು …
Read More »