ಚಿಕ್ಕೋಡಿ : ಹಾರೋಗೇರಿ ಪಿಕೆಪಿಎಸ್ ಬ್ಯಾಂಕ್ ನ ಸಿಬ್ಬಂದಿಗಳು ಬೆಳೆ ಸಾಲ ನೀಡುತ್ತಿಲ್ಲ. ಮುಚ್ಚಿಹೋಗಿರುವ ಬ್ಯಾಂಕ್ ನಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಡಿ ಅಂತ ಕಾಡುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆ ಹರಿಸುವಂತೆ ರಾಯಬಾಗ ತಹಶೀಲ್ದಾರ್ ಕಚೇರಿಯ ಮುಂದೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದ ರೈತ ಲಕ್ಷ್ಮಣ ತಿಪ್ಪಣ್ಣ ವಡಗೋಲೆ ವಿಷದ ಬಾಟಲಿ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದ ಷಡಕ್ಷರಿ ಬ್ಯಾಂಕ್ ನಲ್ಲಿ ಅಲಖನೂರ ಗ್ರಾಮದ ರೈತ ಲಕ್ಷ್ಮಣ …
Read More »ವಿವಿಧ ಬೇಡಿಕೆಗೆ ಆಗ್ರಹಿಸಿ ಬೀದಿಗಿಳಿದ ಆಶಾ ಕಾರ್ಯಕರ್ತೆಯರು
ಬೆಳಗಾವಿ: ಮಾಸಿಕ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಇಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬೃಹತ್ ಜಾಥಾ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು . ಮಾಸಿಕ 12 ಸಾವಿರ ವೇತನ ನೀಡಬೇಕು ಹಾಗೂ ಈ ಹಿಂದೆ ಬಾಕಿ ಉಳಿಸಿಕೊಂಡಿರುವ ವೇತನವನ್ನು ಬಿಡುಗಡೆಗೊಳಿಸಬೇಕು ಅಂತ ಒತ್ತಾಯಿಸಿದ್ರು. ಕೊರೊನಾ ವಾರಿಯರ್ಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ ಅಂತ ರಾಜ್ಯ ಸರ್ಕಾರದ …
Read More »ಬಾಯಿಲೇರ್ ಪ್ರದೀಪನ ಪೂಜಾ ಸಮಾರಂಭ
ಗೋಕಾಕ ತಾಲೂಕಿನ ಹಿರೇನಂದಿ ಗ್ರಾಮದಲ್ಲಿ ಇರುವ ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆಯ ಬಾಯಿಲೇರ್ ಪ್ರದೀಪನ ಪೂಜೆ ಮಾಡಲಾಯಿತು. ಈ ಸಮಾರಂಭದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅಧಿಕರಾವ ಪಾಟೀಲ ( GM) ದತ್ತಕುಮಾರ್ ರಕ್ತಾಲೇ ( CC) ಪ್ರಮೋದ್ ಸಾಬಳೆ ( Boiler Engineer) ಪ್ರಶಾಂತ್ ಪಾಟೀಲ (HR) ಎಲ್ಲಾ ಕಾರ್ಮಿಕರು ಮತ್ತು ರೈತ ಭಾಂದವರು ಉಪಸ್ಥಿತರಿದ್ದರು.
Read More »ಕೆಪಿಸಿಸಿ ವಕ್ತಾರರಾಗಿ ಲಕ್ಷ್ಮಿ ಹೆಬ್ಬಾಳಕರ ನೇಮಕ
ಬೆಳಗಾವಿ: ಇಲ್ಲಿನ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಕೆಪಿಸಿಸಿ ವಕ್ತಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಡಿ.ಕೆ. ಶಿವಕುಮಾರ ತಿಳಿಸಿದ್ದಾರೆ. ‘ಮಾಧ್ಯಮಗಳಲ್ಲಿ ನಮ್ಮ ವಿಚಾರ ಮತ್ತು ದೃಷ್ಟಿಕೋನ ಪರಿಣಾಮಕಾರಿಯಾಗಿ ಬಿಂಬಿತವಾಗಬೇಕಾಗಿರುವುದು ಅಗತ್ಯವಾಗಿದೆ. ಹೀಗಾಗಿ, ಅವರಿಗೆ ಇರುವ ಅನುಭವ ಮತ್ತು ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯ ಗಮನಿಸಿ ಈ ನೇಮಕ ಮಾಡಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ. ‘ನನ್ನ ಮೇಲೆ ಸಂಪೂರ್ಣ ವಿಶ್ವಾಸವನ್ನಿಟ್ಟು ವಕ್ತಾರರನ್ನಾಗಿ ನೇಮಿಸಿದ ಅಧ್ಯಕ್ಷರಿಗೆ ಹೃದಯಪೂರ್ವಕ ಧನ್ಯವಾದ …
Read More »ಆರ್‌ಸಿಯುಗೆ 126 ಎಕರೆ ಮಂಜೂರು.
ಬೆಳಗಾವಿ: ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ 126 ಎಕರೆ 27 ಗುಂಟೆ ಜಮೀನನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಸೋಮವಾರ ಅಧಿಕೃತ ಆದೇಶ ಹೊರಡಿಸಿದೆ. ಇದರೊಂದಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಹಾಗೂ ವಿಸ್ತರಣೆಗೆ ಉಂಟಾಗಿದ್ದ ಜಾಗದ ಕೊರತೆ ನಿವಾರಣೆಯಾದಂತಾಗಿದೆ. ‘ತಾಲ್ಲೂಕಿನ ಬಾಗೇವಾಡಿ (ಸಂಕನಾಯ್ಕನಕೊಪ್ಪ) ಗ್ರಾಮದ ರಿ.ಸ.ನಂ. 421/2, 423, 426, 427, 429 ಮತ್ತು 431ರಲ್ಲಿ 87 ಎಕರೆ 39 ಗುಂಟೆ ಹಾಗೂ ಹಾಲಗಿಮರ್ಡಿ ಗ್ರಾಮದ ರಿ.ಸ.ನಂ. 48, 48 ಹಾಗೂ 49ರ …
Read More »ಶಾಸಕ ಐಹೊಳೆಗೆ ಕೋವಿಡ್ ದೃಢ.
ಬೆಳಗಾವಿ: ರಾಯಬಾಗ ಬಿಜೆಪಿ ಶಾಸಕ ಡಿ.ಎಂ. ಐಹೊಳೆ ಅವರಿಗೆ ಸೋಮವಾರ ಕೋವಿಡ್-19 ದೃಢಪಟ್ಟಿದೆ. ಈ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪರೀಕ್ಷೆಗೆ ಒಳಪಟ್ಟಿದ್ದೆ. ನನಗೆ ಯಾವುದೇ ರೀತಿಯ ರೋಗದ ಲಕ್ಷಣಗಳಿಲ್ಲ. ಆರೋಗ್ಯವಾಗಿದ್ದು, ಬೆಂಗಳೂರಿನ ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ಇತ್ತೀಚೆಗೆ ನನ್ನ ನೇರ ಸಂಪರ್ಕಕ್ಕೆ ಬಂದವರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗದಂತೆ ಬೆಂಗಳೂರಿನಿಂದಲೇ ನಿಗಾ ವಹಿಸುತ್ತೇನೆ’ ಎಂದು ತಿಳಿಸಿದ್ದಾರೆ.
Read More »ಜೂಜಾಟ: 22 ಮಂದಿ ಬಂಧನ.
ಬೆಳಗಾವಿ: ಇಲ್ಲಿನ ರಾಜಹಂಸ ಗಲ್ಲಿಯ ಸದಾನಂದ ಮಠದ ಪಕ್ಕದ ಗಲ್ಲಿಯಲ್ಲಿ ಭಾನುವಾರ ಮಧ್ಯರಾತ್ರಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಆರೋಪದ ಮೇಲೆ 22 ಮಂದಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಜೂರ ಚೋಪಧಾರ, ಪ್ರದೀಪ ಲಾಟೂಕರ, ಮೋಯಿಜ ಗಚವಾಲೆ, ವಿಜಯ ಪಾಟೀಲ, ಪರಶುರಾಮ ಮೇತ್ರಿ, ಸುಶೀಲ ಮುದೋಳಕರ, ಬಾಬು ಯಾದವ, ಅನಿಲ ಯಳ್ಳೂರಕರ, ಕಿಸನ ಪಾಟೀಲ, ಜಹಾಂಗೀರಖಾನ ಪಠಾಣ, ವಿಜಯ ಶಿಂದೋಳಕರ, ದೀಪಕ ಹೊನ್ಯಾಳಕರ, ಆಕಾಶ ಜಕ್ಕಾನೆ, ವಿನಾಯಕ ಗಣಾಚಾರಿ, ಸಾಗರ ಮುತಗೇಕರ, …
Read More »ಸಿಎಂ ಬಿ ಎಸ್ ಯಡಿಯೂರಪ್ಪ ಓರ್ವ ಸರ್ವಾಧಿಕಾರಿ ; ವಾಟಾಳ್ ನಾಗರಾಜ್ ಗಂಭೀರ ಆರೋಪ
ಬೆಳಗಾವಿ : ರಾಜ್ಯದಲ್ಲಿ ಅನೇಕ ಮುಖ್ಯಮಂತ್ರಿಗಳನ್ನು ನಾನು ನೋಡಿದ್ದೇನೆ. ಆದರೆ, ಬಿ ಎಸ್ ಯಡಿಯೂರಪ್ಪ ಅವರು ಓರ್ವ ಸರ್ವಾಧಿಕಾರಿ ಮುಖ್ಯಮಂತ್ರಿ. ನನ್ನನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ಪ್ರವೇಶ ಆಗದಂತೆ ನೋಡಿಕೊಂಡಿದ್ದಾರೆ. ನನ್ನ ವಿರುದ್ಧ ಶ್ರೀಮಂತರನ್ನು ನಿಲ್ಲಿಸಿ ಸೋಲಿಸುತ್ತಾರೆ ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ. ಬೆಳಗಾವಿ ಸುವರ್ಣಸೌಧದಲ್ಲಿ ವಿಶೇಷ ಅಧಿವೇಶನ ನಡೆಸಬೇಕು. ಪ್ರವಾಹ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ, …
Read More »ಪೋಲೀಸರ ಕಣ್ತಪ್ಪಿಸಿ ಬಸ್ಸಿನಲ್ಲಿ ಬೆಳಗಾವಿಯ ಸುವರ್ಣಸೌಧಕ್ಕೆ ಬಂದ ವಾಟಾಳ್ ನಾಗರಾಜ್
ಬೆಳಗಾವಿ : ಬೆಳಗಾವಿಯ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಲು ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಪೋಲೀಸರ ಕಣ್ತಪ್ಪಿಸಿ ಬೆಳಗಾವಿ ಸುವರ್ಣ ಸೌಧಕ್ಕೆ ಕನ್ನಡದ ಪರ ಚಳುವಳಿಯ ಹೋರಾಟಗಾರ ವಾಟಾಳ್ ನಾಗರಾಜ್ ಬಂದಿದ್ದಾರೆ. ಈ ಕುರಿತಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನು ಸುದ್ದಿಗಾರರು ನಿಮ್ಮನ್ನ ಪೋಲೀಸರು ಬೆಳಗಾವಿಗೆ ಆಗಮಿಸಲು ಬಿಡುವುದಿಲ್ಲ ಹಿರೆ ಬಾಗೇವಾಡಿಯಲ್ಲೆ ಬಂಧಿಸುತ್ತಾರೆ. ಹೇಗೆ ಆಗಮಿಸುವಿರಿ ಎಂದಿದ್ದರು. ಈ ಸಾರಿ …
Read More »ಸೀರೆ ಉಟ್ಟಾಗ ಹಾವು ಹಿಡಿಯೋದು ಕಷ್ಟ -ಉರಗ ತಜ್ಞೆಯ ಸಾಹಸಕ್ಕೆ ಸ್ಥಳೀಯರು ಫುಲ್ ಫಿದಾ!
ಬೆಳಗಾವಿ: ಮದುವೆಗೆ ತೆರಳುವ ಬದಲು ಮನೆಯೊಂದರಲ್ಲಿ ಸಿಲುಕಿದ್ದ ನಾಗರಹಾವನ್ನು ಉರಗ ತಜ್ಞೆ ನಿರ್ಜರಾ ಚಿಟ್ಟಿ ಬರಿಗೈಯಲ್ಲೇ ರಕ್ಷಣೆ ಮಾಡಿರುವ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿರ್ಜರಾ ಹಾಗೂ ಆಕೆಯ ಪತಿ ಆನಂದ್ ಮೂಲತಃ ವನ್ಯಜೀವಿ ತಜ್ಞರು. ಬೆಳಗಾವಿ ನಿವಾಸಿಗಳಾದ ದಂಪತಿ ತಮ್ಮ ಸಂಬಂಧಿಕರ ಮದುವೆಗೆ ತೆರಳಲು ನಿನ್ನೆ ಸಜ್ಜಾಗುತ್ತಿದ್ದರಂತೆ. ಈ ನಡುವೆ ದಂಪತಿಗೆ ನಮ್ಮ ಮನೆಯಲ್ಲಿ ನಾಗರಹಾವು ಒಂದು ಸಿಲುಕಿಕೊಂಡಿದೆ. ದಯವಿಟ್ಟು ಬಂದು ಅದನ್ನು ಅಲ್ಲಿಂದ ಹೊರೆತೆಗೆಯಿರಿ ಅಂತಾ ನಗರದ …
Read More »
Laxmi News 24×7