ಗೋಕಾಕ : ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಗೆ ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ಪೂರೈಸುತ್ತಿರುವ ರೈತರಿಗೆ ಪ್ರತಿ ಟನ್ ಕಬ್ಬಿಗೆ 2400 ರೂ.ಗಳನ್ನು ಮುಂಗಡ ಹಣವನ್ನಾಗಿ ಪಾವತಿಸಲು ನಿರ್ಧರಿಸಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ, ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಶುಕ್ರವಾರದಂದು ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಪ್ರತಿ 15 ದಿನಗಳಿಗೊಮ್ಮೆ ನಿರಂತರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಪಾವತಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೇಂದ್ರ ಸರ್ಕಾರವು …
Read More »ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಧವನ್ ಆಯ್ಕೆ
ಬೆಳಗಾವಿ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನೇಕಾರ ಸಹಕಾರಿ ಸಂಘದ ಪ್ರತಿನಿಧಿಯಾಗಿ ಸತೀಶ್ ಜಾರಕಿಹೊಳಿ ಆಪ್ತ ಕೃಷ್ಣಾ ಅನಿಗೋಳ್ಕರ್ ಜಯಭೇರಿ ಬಾರಿಸಿದ್ದಾರೆ. ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಧವನ್ ಆಯ್ಕೆ ಯಾಗಿದ್ದಾರೆ. ಖಾನಾಪೂರ ಕ್ಷೇತ್ರದಲ್ಲಿ ರಮೇಶ್ ಸಾಹುಕಾರ್ ಕ್ಯಾಂಡಿಡೇಟ್ ಅರವಿಂದ್ ಪಾಟೀಲ ರೋಚಕ ಗೆಲವು ಸಾಧಿಸಿದ್ದಾರೆ
Read More »ಸಿಎಂ ಬದಲಾವಣೆ ಇಲ್ಲ – ರಮೇಶ್ ಜಾರಕಿಹೊಳಿ*
ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ.ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಇಲ್ಲ ಎಂದು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಾರಕಿಹೊಳಿ, ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಸಾಧ್ಯವಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯ ಭ್ರಮೆಯಲ್ಲಿದ್ದಾರೆ. ಇತ್ತೀಚೆಗೆ ಸಿಎಂ ಯಡಿಯೂರಪ್ಪನವರೇ ಸಿದ್ದರಾಮಯ್ಯನವರಿಗೆ ಉತ್ತರ ಕೊಟ್ಟಿದ್ದಾರೆ.ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಮಾಡುವುದಿಲ್ಲ ಎಂದು …
Read More »ಅರವಿಂದ್ ಪಾಟೀಲ ಬಿಜೆಪಿಗೆ,ಸಿಎಂ ಸಹಮತ- ಡಿಸಿಎಂ ಸವದಿ
ಬೆಳಗಾವಿ-ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ನಡೆಯುತ್ತಿದೆ. 16 ನಿರ್ದೇಶಕ ಸ್ಥಾನದ ಪೈಕಿ ಈಗಾಗಲೇ 13ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದಾರೆ. ಮೂರು ಕ್ಷೇತ್ರದಲ್ಲಿ ಮಾತ್ರ ಚುನಾವಣೆ ನಡೆಯುತ್ತಿದೆ. ಖಾನಾಪುರ ಕ್ಷೇತ್ರದಲ್ಲಿ ಎನೂ ಕುತೂಹಲ ಇಲ್ಲ ಮತದಾರರು ಜಾನರಿದ್ದಾರೆ. ಎಂದು ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಖಾನಾಪುರ ತಾಲೂಕಿನಲ್ಲಿ ಕಾಂಗ್ರೆಸ್ ಶಾಸಕರು ಸ್ಪರ್ಧೆ, ಮಾಜಿ ಶಾಸಕ ಅರವಿಂದ್ ಪಾಟೀಲ್ …
Read More »ನ್ಯಾಯ ಎಲ್ಲಿದೆ…? ಅಂತಾ ಇವರು ಕೇಳುತ್ತಿದ್ದಾರೆ….!
ಬೆಳಗಾವಿ- ಗಂಡ,ಹೆಂಡತಿ,ಇಬ್ಬರು ಹೆಣ್ಣು ಮಕ್ಕಳೊಂದಿದೆ ಬೆಳಗಾವಿಯ ಡಿಸಿ ಕಚೇರಿಯ ಎದುರು ಕುಳಿತುಕೊಂಡಿದ್ದಾರೆ.ನ್ಯಾಯ ಎಲ್ಲಿದೆ ಅಂತಾ ಕೇಳುತ್ತಿದ್ದಾರೆ. ನ್ಯಾಯ ಸಿಗೋವರೆಗೂ ಅಹೋರಾತ್ರಿ ಧರಣಿ ಮಾಡುತ್ತೇವೆ,ಅಲ್ಲಿಯವರೆಗೆ ಇಲ್ಲಿಯೇ ಕುಳಿತುಕಿಳ್ಳುತ್ತೇವೆ ಅಂತ,ಈ ಕುಟುಂಬ ಡಿಸಿ ಕಚೇರಿ ಎದುರು ಧರಣಿ ಆರಂಭಿಸಿದೆ. ರಾಯಬಾಗ ತಾಲ್ಲೂಕಿನ, ನರಸಲಾಪೂರ ಗ್ರಾಮದ ಸಂಗೀತಾ ಬಂಡು ಚಾವರೆ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ.ಈವರ ಪಾಲಿಗೆ ಬರುವ ಜಮೀನು ಮತ್ತು ಆಸ್ತಿಯನ್ನು,ಇವರ ಸಮಂಧಿಕರು ಮಾಡಿಕೊಡುತ್ತಿಲ್ಲ,ಇಬ್ಬರು ಹೆಣ್ಣು ಮಕ್ಕಳಿದ್ದಾರೆ ಎನ್ನುವ ಕಾರಣಕ್ಕಾಗಿ ನಮಗೆ …
Read More »ಬೆಳಗಾವಿಯ ನಿವಾಸಿ ಈಗ ಅಮೇರಿಕಾದ ಸಂಸದ
ಅಜ್ಜನ ಕಡೆ ಮಾಸ್ಕ್ ಯಾವ ತರಾ ಇದೆ ಈ ವಿಡಿಯೋ ಕೊನೇವರಿಗೆ ನೀವು ನೋಡ್ಲೆ ಬೇಕು……. ಬೆಳಗಾವಿ- ಬೆಳಗಾವಿಯ ನಿವಾಸಿಯೊಬ್ಬ ಅಮೇರಿಕಾದ ಸಂಸದನಾಗಿ ಆಯ್ಕೆಯಾಗಿದ್ದಾನೆ. ಬೆಳಗಾವಿ ಶಹಾಪೂರ ಪ್ರದೇಶದ ಮೀರಾಪೂರ ಗಲ್ಲಿಯ ನಿವಾಸಿ ಶ್ರೀನಿವಾಸ ಥಾಣೆದಾರ ಈಗ ಅಮೆರಿಕಾ ದೇಶದ ಸೆನೆಟ್ ಮೆಂಬರ್ ಆಗಿ ಆಯ್ಕೆಯಾಗಿದ್ದಾರೆ. ಚಿಂತಾಮಣರಾವ ಶಾಲೆಯಲ್ಲಿ ಹೈಸ್ಕೂಲ ಕಲೆತಿರುವ ಶ್ರೀನಿವಾಸ ಥಾಣೆದಾರ್ ಅಮೇರಿಕಾದಲ್ಲಿ ಕೆಮಿಕಲ್ ಉದ್ಯಮಿಯಾಗಿದ್ದಾರೆ.
Read More »ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ
ಬೆಳಗಾವಿ : ಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು , ಜಿಲ್ಲೆಯ ಬಿಜೆಪಿ, ಕಾಂಗ್ರೆಸ್ ನಾಯಕರು ನಡೆಸಿದ ತಂತ್ರಗಾರಿಕೆ ಫಲಿತಾಂಶ ತಿಳಿಯಲಿದೆ ನಗರದ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆ ಚುನಾವಣೆ ನಡೆಯಲಿದೆ. ಈಗಾಗಲೇ ಒಟ್ಟು 16 ಸ್ಥಾನಗಳ ಪೈಕಿ 13 ಸ್ಥಾನಗಳು ಅವಿರೋಧ ಆಯ್ಕೆಯಾಗಿದೆ. ಎಲ್ಲ ಸ್ಥಾನಗಳನ್ನು ಅವಿರೋಧ ಆಯ್ಕೆ ಗೊಳಿಸಬೇಕೆಂದು ಬಿಜೆಪಿ ನಾಯಕರು ಕಸರತ್ತು ನಡೆಸಿದರು, ಆದರೆ ಅದು ಸಾಧ್ಯವಾಗಲಿಲ್ಲ. …
Read More »ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ
ಬೆಂಗಳೂರು: ಸಹೋದರ ಚಿರಂಜೀವಿ ಸರ್ಜಾ ಅಗಲಿಕೆಯ ಬಳಿಕ ಇದೀಗ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೊಸ ಸಿನಿಮಾಗಳತ್ತ ಮುಖ ಮಾಡಿದ್ದಾರೆ. ಇಂದು ಹೊಸ ಸಿನಿಮಾವೊಂದಕ್ಕೆ ಮುಹೂರ್ತ ನೆರವೇರಿಸಿದ್ದಾರೆ. ಹೌದು. ಧ್ರುವ ನಟನೆಯ ಹೊಸ ಸಿನಿಮಾ ‘ದುಬಾರಿ’ಯ ಚಿತ್ರೀಕರಣ ಆರಂಭವಾಗಲಿದೆ. ಇಂದು ಬೆಳಗ್ಗೆ ಬೆಂಗಳೂರಿನ ನವರಂಗ್ ಬಳಿ ಇರುವ ವರಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮುಹೂರ್ತ ಪೂಜೆ ನೆರವೇರಿಸಿದ್ದಾರೆ. ಮುಹೂರ್ತ ಪೂಜೆಯಲ್ಲಿ ನಟ ಧ್ರುವ ಸರ್ಜಾ, ನಿರ್ದೇಶಕ ನಂದಕಿಶೋರ್, ನಟಿ ತಾರಾ, ದೊಡ್ಡಣ್ಣ ಹಾಗೂ …
Read More »ಹಿಂಡಲಗಾ ಜೈಲಿನಲ್ಲಿ ಸೊಳ್ಳೆ ಕಾಟ ತಾಳಲಾರದೆ ವಿನಯ್, ಸೊಳ್ಳೆ ಬತ್ತಿಯಾದ್ರೂ ಕೊಡಿ:ವಿನಯ್ ಕುಲಕರ್ಣಿ
ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಬೆಳಗಾವಿ ಹಿಂಡಲಗಾ ಜೈಲಲ್ಲಿ ರಾತ್ರಿ ಕಳೆದಿದ್ದಾರೆ. ಗುರುವಾರ ಬೆಳಗ್ಗೆ ವಿನಯ್ ಕುಲಕರ್ಣಿಯನ್ನು ಸಿಬಿಐ ವಶಕ್ಕೆ ಪಡೆದು ಬಂಧಿಸಿತ್ತು. 1 ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ಹಿಂಡಲಗಾ ಜೈಲಿನ ರೆಡ್ ಝೋನ್ ಸೆಲ್‍ನಲ್ಲಿ ಇರುವ ವಿನಯ್ ಕುಲಕರ್ಣಿ, ಕೋವಿಡ್ ಹಿನ್ನೆಲೆ ಜೈಲು …
Read More »ನವೆಂಬರ್ 14 ರಿಂದ ನವೆಂಬರ್ 16 ರ ವರೆಗೆ ಆಚರಿಸುವ ದೀಪಾವಳಿ ಹಬ್ಬವನ್ನು ರೋಗಾಣು ಹರಡದಂತೆ ಮುನ್ನೆಚ್ಚ್ಚರಿಕೆ ವಹಿಸಿ: ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ
ಬೆಳಗಾವಿ: ಕೋವಿಡ್-19 ಹಿನ್ನೆಲೆಯಲ್ಲಿ ನವೆಂಬರ್ 14 ರಿಂದ ನವೆಂಬರ್ 16 ರ ವರೆಗೆ ಆಚರಿಸುವ ದೀಪಾವಳಿ ಹಬ್ಬವನ್ನು ರೋಗಾಣು ಹರಡದಂತೆ ಮುನ್ನೆಚ್ಚ್ಚರಿಕೆ ವಹಿಸಿ ಸರರ್ಕಾರದ ಮಾರ್ಗಸೂಚಿ ಪ್ರಕಾರ ಆಚರಿಸಲು ಜಿಲ್ಲಾಧಿಕಾರಿ ಎಂ.ಜಿ.ಹೀರೆಮಠ ಅವರು ಆದೇಶಿಸಿದ್ದಾರೆ. ಮಾರ್ಗಸೂಚಿಗಳು: ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರಗಳಿಂದ ಅಧಿಕೃತ ಪರವನಾಗಿಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡತಕ್ಕದ್ದು, ಪಟಾಕಿ ಮಾರಾಟದ ಮಳಿಗೆಗಳನ್ನು ನವೆಂಬರ್ 1 ರಿಂದ ನವೆಂಬರ್ 12 ರ ವರೆಗೆ ಮಾತ್ರ ತೆರೆದಿರತಕ್ಕದು. ಪರವಾನಿಗೆದಾರರು ಸಂಬಂಧಪಟ್ಟ …
Read More »