ಚಿಕ್ಕೋಡಿ(ಬೆಳಗಾವಿ): ರಾಜ್ಯದಲ್ಲಿ ಬೇರೆ ಪಕ್ಷದ ಅಭ್ಯರ್ಥಿಗಳನ್ನ ಸೆಳೆದು ಆಪರೇಷನ್ ಕಮಲದ ಮೂಲಕ ಗುರುತಿಸಿಕೊಳ್ಳುವ ಬಿಜೆಪಿ ಪಕ್ಷ ಈಗ ಸ್ಥಳೀಯ ಸಂಸ್ಥೆಗಳಾದ ಹುಕ್ಕೇರಿ ಮತ್ತು ಸಂಕೇಶ್ವರ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲೂ ಆಪರೇಷನ್ ಕಮಲ ನಡೆಸಿ ಅಧಿಕಾರ ಪಡೆಯಲು ಶಾಸಕ ಉಮೇಶ್ ಕತ್ತಿ, ಸಹೋದರ ರಮೇಶ್ ಕತ್ತಿ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ ಬಿಜೆಪಿ ಪಕ್ಷ ಕೇವಲ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಆಪರೇಷನ್ …
Read More »ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಉಮೇಶ್ ಕತ್ತಿ ಟಾಂಗ್
ಚಿಕ್ಕೋಡಿ: ಬೆಳಗಾವಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಮುಖಂಡ ಪ್ರಕಾಶ್ ಹುಕ್ಕೇರಿ ಅವರಿಗೆ ಹುಕ್ಕೇರಿ ಮತಕ್ಷೇತ್ರದ ಬಿಜೆಪಿ ಶಾಸಕ ಉಮೇಶ್ ಕತ್ತಿ ಟಾಂ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಮಾತನಾಡಿದ ಶಾಸಕ ಕತ್ತಿ, ಪ್ರಕಾಶ್ ಹುಕ್ಕೇರಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುವ ಬದಲು ಬೆಳಗಾವಿ ಲೋಕಸಭೆಗೆ ದಿವಂಗತ ಸುರೇಶ ಅಂಗಡಿ ಅವರ ಪತ್ನಿಯ ಅವಿರೋಧ ಆಯ್ಕೆಗೆ ಶ್ರಮಿಸಬೇಕಿದೆ. ಕೂಡಲೇ ಕಾಂಗ್ರೆಸ್ ಹೈ ಕಮಾಂಡ್ ಜೊತೆಗೆ ಪ್ರಕಾಶ್ …
Read More »Big Breaking ಸತೀಶ್ ಜಾರಕಿಹೊಳಿ ಅವರು ಪ್ರಕಾಶ್ ಹುಕ್ಕೇರಿ ಬಗ್ಗೆ ಹೇಳಿದ್ದೇನು ಗೊತ್ತಾ exclusive Byte
ಮಾಜಿ ಸಚಿವರು ಆಗಿರುವ ಕಾಂಗ್ರೆಸ್ ನಾಯಕ ಪ್ರಕಾಶ ಹುಕ್ಕೇರಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದು, ಅವರಿಗೆ ಇದ್ದಕ್ಕಿದ್ದಂತೆ ಬಿಜೆಪಿ ಮೇಲೆ ಪ್ರೀತಿ ಬಂದಿದೆ, ಕಾಂಗ್ರೆಸ್ ನಿಂದ ಒಂದು ಹೆಜ್ಜೆ ಹೊರಗಿಟ್ಟು ಇಂಥ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಗಳ ಸುರಿಮಳೆಗೈಯ್ದಿದ್ದಾರೆ. ಪತ್ರಕರ್ತರೊಂದಿಗೆ ಮಾತನಾಡಿ, ಪ್ರಕಾಶ ಹುಕ್ಕೇರಿ ಈಗಾಗಲೇ ಬಿಜೆಪಿ ಪರ ವಾಲಿ ಮಾತನಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಸಂಸದರೂ ಆಗಿರುವ ಪ್ರಕಾಶ ಹುಕ್ಕೇರಿ ಗಂಭೀರ …
Read More »ಲಖನ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ಸ್ಪರ್ಧೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದ್ದೇನು ಗೊತ್ತಾ?
ಗೋಕಾಕ: ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಉದ್ಯಮಿ ಲಖನ್ ಜಾರಕಿಹೊಳಿ ಸ್ಪರ್ಧಿಸಲಿದ್ದಾರೆ ಎಂಬ ಉಹಾಪೋಹಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ. ಇಲ್ಲಿನ ತಮ್ಮ ನಿವಾಸದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಖನ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲ. ಸ್ಪರ್ಧೆ ಮಾಡುವುದಾಗಿಯೂ ಇಂಟ್ರೆಸ್ಟ್ ತೋರಿಲ್ಲ. ಅವರು ಸ್ಪರ್ಧೆ ಮಾಡಲ್ಲ ಅಂತಾ ಹೇಳಿದರು. ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ವಿಚಾರವಾಗಿ ಪ್ರತಿಕ್ರಿಯಿಸಿ, ಚುನಾವಣೆಯಲ್ಲಿ ಮೊದಲು ಕಾಂಗ್ರೆಸ್ ಪಕ್ಷದಿಂದ 113 …
Read More »ಸಾರಾಯಿ ಸೇವಿಸಬೇಡ ಎಂದು ಪತ್ನಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಪತಿ ಆತ್ಮಹತ್ಯೆ
ಬೆಳಗಾವಿ: ಸಾರಾಯಿ ಸೇವಿಸಬೇಡ ಎಂದು ಪತ್ನಿ ಬುದ್ದಿವಾದ ಹೇಳಿದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ಶಹಾಪೂರದಲ್ಲಿ ಇಂದು ನಡೆದಿದೆ. ರಾಹುಲ್ ಸಹದೇವ ಸೈನೊಚೆ(30) ಮೃತ ವ್ಯಕ್ತಿ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಮದ್ಯ ವ್ಯಸನಿಗೆ ಅಂಟುಕೊಂಡಿದ್ದ. ದಸರಾ ಹಬ್ಬ ಹಿನ್ನೆಲೆ ದಿನಸಿಗಾಗಿ ಪತ್ನಿ ಹಣ ಬೇಡಿದ್ದು, ಸಾರಾಯಿ ಸೇವಿಸದಂತೆ ಪತ್ನಿ ಮನವಿ ಮಾಡಿದ್ದಾಳೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆ ನಡೆದು ಆತ ಎರಡು ದಿನದಿಂದ ಮನೆ …
Read More »ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪ್ರತಿಮೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಉದ್ಘಾಟನೆ ಮಾಡಿದರು.
ಬೈಲಹೊಂಗಲ: ತಾಲೂಕಿನ ಹಹೊಳಿನಾಗಲಾಪುರ ಗ್ರಾಮದಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನೂತನ ಪ್ರತಿಮೆಯನ್ನು ಸೋಮವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಉದ್ಘಾಟನೆ ಮಾಡಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಶಾಸಕ ಸತೀಶ ಜಾರಕಿಹೊಳಿ ಗೌರವ ನಮನ ಸಲ್ಲಿಸಿದರು ಬಳಿಕ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಅಪ್ರತಿಮ ಹೋರಾಟಗಾರ. ಆತ ಒಂದು ಸಮುದಾಯಕ್ಕೆ ಸೀಮಿತವಲ್ಲ, ಇಡೀ ದೇಶದ ಆಸ್ತಿ. ರಾಯಣ್ಣ ಆದರ್ಶಗಳನ್ನು ಮೈಗೂಡಿಸಿಕೊಂಡು ನಾಡು, ನುಡಿಗಾಗಿ …
Read More »ಯಾವುದೇ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ಮಾನವೀಯತೆ ಪರವಾಗಿ ಕೆಲಸ ಮಾಡಬೇಕು: ಸತೀಶ ಜಾರಕಿಹೊಳಿ
ಬೈಲಹೊಂಗಲ: ಯಾವುದೇ ಸಂಘಟನೆ ಒಂದು ಜಾತಿಗೆ ಸೀಮಿತವಾಗದೇ ಮಾನವೀಯತೆ ಪರವಾಗಿ ಕೆಲಸ ಮಾಡಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಬೈಲಹೊಂಗಲ ತಾಲೂಕಿನ ಮುರ್ಕಿಭಾಂವಿ ಗ್ರಾಮದಲ್ಲಿ ಸೋಮವಾರ ದಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಸಂಘಟನೆಗೆ ಚಾಲನೆ ನೀಡಿ ಉದ್ಘಾಟಿಸಲಾಯಿತು. ನೀಡಿ ಬಳಿಕ ಮಾತನಾಡಿದ ಅವರು, ಸಂಘ ಕಟ್ಟುವುದು ಸುಲಭ, ಆದ್ರೆ ಅವುಗಳನ್ನು ಸರಿಯಾದ ದಾರಿಯಲ್ಲಿ ನಡೆಸುವುದು ಕಷ್ಟಕರವಾಗಿದೆ. ಇತ್ತೀಚಿಗೆ ಸಾಕಷ್ಟು ಸಂಘಟನೆಗಳು ಹುಟ್ಟಿಕೊಂಡಿವೆ. …
Read More »ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ.
ಗೋಕಾಕ : ತೀವ್ರ ವಿವಾದಕ್ಕೆ ಕಾರಣವಾಗಿದ್ದ ತಪಸಿಯ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನಿವೇಶನದ ಸಮಸ್ಯೆ ಕೊನೆಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯಗೊಂಡಿದೆ. ೧೯.೨೦ ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ತಲೆಯೆತ್ತಲಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ನೂತನ ಕಟ್ಟಡಕ್ಕೆ ತಪಸಿಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ ನಡೆದಿತ್ತು. ಗ್ರಾಮ ಪಂಚಾಯತ ತಪಸಿ ಅಧೀನದಲ್ಲಿ ಸರ್ವೇ ನಂ. ೧೯೩ ರಲ್ಲಿ ಈಗಾಗಲೇ ೩೯.೧೯ ಎಕರೆ ಸರ್ಕಾರಿ ಜಮೀನಿನಲ್ಲಿ …
Read More »ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು.: ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ – ಸಂಗೊಳ್ಳಿ ರಾಯಣ್ಣ ಹಾಗೂ ರಾಣಿ ಚನ್ನಮ್ಮ ಪುತ್ಥಳಿಗಳನ್ನು ಸುವರ್ಣ ಸೌಧ ಆವರಣದಲ್ಲಿ ಸ್ಥಾಪಿಸಬೇಕು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಕಿತ್ತೂರಲ್ಲಿ ಸ್ಥಾಪಿಸಬೇಕೆಂದು ಆಗ್ರಹಿಸಿ ಕೂಡಲಸಂಗಮ ಮಹಾಪೀಠ ಧರ್ಮಕ್ಷೇತ್ರದ ಅಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಇವರಿಂದ ಅಕ್ಟೋಬರ್ 28ರಂದು ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಅಖಿಲ ಭಾರತ ಅಂಗಾಯತ ಪಂಚಮಸಾಲಿ ಸಮಾಜದ ಸರ್ವ ಸಂಘಟನೆಗಳ ಸಹಯೋಗದೊಂದಿಗೆ …
Read More »ಬೆಳಗಾವಿ ಲೋಕಸಭೆ ಚುನಾವಣೆ ದಿ.ಸುರೇಶ ಅಂಗಡಿ ಕುಟುಂಬ ಹೊರತು ಪಡಿಸಿ ಟಿಕೆಟ್ ನೀಡಿದರೇ ಕಾಂಗ್ರೆಸ್ ಬಿಜೆಪಿ ಯಾರೇ ಟಿಕೆಟ್ ನೀಡಿದರೂ ಸ್ಪರ್ಧಿಸಲು ಸಿದ್ದ- ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ಕೇಂದ್ರ ಸಚಿವ ದಿ.ಸುರೇಶ ಅಂಗಡಿ ನಿಧನದಿಂದ ತೆರವಾದ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸುರೇಶ ಅಂಗಡಿ ಕುಟುಂಬ ಹೊರತು ಪಡಿಸಿ ಟಿಕೆಟ್ ನೀಡಿದರೇ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದಿಂದ ಸ್ಪರ್ಧಿಸಲು ನಾನು ಸಿದ್ಧ ಎಂದು ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೊಸ ಬಾಂಬ್ ಸಿಡಿಸಿದರು. ಚಿಕ್ಕೋಡಿ ತಾಲೂಕಿನ ಪ್ಯಾಕ್ಟರಿ ಕ್ರಾಸ್ ಬಳಿ ಪೆಟ್ರೋಲ್ ಬಂಕ್ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಸುರೇಶ ಅಂಗಡಿ ಬಿಜೆಪಿಯಲ್ಲಿ ಇದ್ದರೇ …
Read More »