ಮೂಡಲಗಿ : ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ಧೇಶದಿಂದ ಅಖಂಡ ಗೋಕಾಕ ತಾಲೂಕಿನಲ್ಲಿ ಇಲ್ಲಿಯವರೆಗೆ ೧೫ ವಸತಿ ಶಾಲೆಗಳನ್ನು ಪ್ರಾರಂಭಿಸಿದ್ದು, ಇದರ ಮೂಲಕ ಬಡ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಸಹಾಯವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ತಾಲೂಕಿನ ಅರಭಾವಿ ಪಟ್ಟಣದ ನಾಡಕಛೇರಿ ಬಳಿ ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅನುದಾನದಡಿ ಮಂಜೂರಾದ ೨೦.೫೦ ಕೋಟಿ …
Read More »ಮೂಢನಂಬಿಕೆ ವಿರುದ್ಧ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು: ಸತೀಶ್ ಜಾರಕಿಹೊಳಿ
ಗೋಕಾಕ : ‘ ಮೂಢನಂಬಿಕೆ ವಿರುದ್ಧ ಅಂಬೇಡ್ಕರ್, ಬಸವಣ್ಣನವರು ಸೇರಿ ಎಲ್ಲ ಮಹಾ ನಾಯಕರು ಹೋರಾಟ ಮಾಡಿದ್ದಾರೆ. ಆ ನಿಟ್ಟಿನಲ್ಲಿ ನೀವು, ನಾವೇಲ್ಲ ಮುನ್ನಡೆಯಬೇಕು ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಮಾದಿಗ ಸಮಾಜದ ಸೇವಾ ಸಮಿತಿ ಆಯೋಜಿಸಿದ್ದ ಗೋಕಾಕ್, ಮೂಡಲಗಿ ತಾಲ್ಲೂಕಿನ ಮಾದಿಗ ಸಮಾಜದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ ದಲಿತ ಸಮುದಾಯದ ಜನರು ಎಲ್ಲ ರಂಗದಿಂದ …
Read More »ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತಪಡಿಸಿದಕರವೇ ಕಾರ್ಯಕರ್ತರು
ಬೆಳಗಾವಿ- ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ,ಕನ್ನಡಪರ ಸಂಘಟನೆಗಳ ಕುರಿತು ರೋಲ್ ಕಾಲ್ ಸಂಘಟನೆಗಳೆಂದು ಹೇಳಿಕೆ ನೀಡಿ ಅವಮಾನಿಸಿರುವದನ್ನು ಖಂಡಿಸಿ,ಕರವೇ ಕಾರ್ಯಕರ್ತರು ಬೆಳಗಾವಿಯಲ್ಲಿ ಪ್ರತಿಭಟಿಸಿದರು. ಕನ್ನಡ ಪರ ಸಂಘಟನೆಗಳ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ನೀಡಿರುವದನ್ನು ವಿರೋಧಿಸಿ. ಬೆಳಗಾವಿ ಕರವೇ ನಾರಾಯಣಗೌಡ ಬಣದಿಂದ ಪ್ರತಿಭಟನೆ ಮಾಡಲಾಯಿತು. ಬೆಳಗಾವಿಯ ಅಶೋಕ ಸರ್ಕಲ್ ನಲ್ಲಿ ಬಸನಗೌಡ ಪಾಟೀಲ ಯತ್ನಾಳರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯೆಕ್ತಪಡಿಸಿದರು.
Read More »ಡಾ.ಕೆ.ಸುಧಾಕರ್ ಬೀಮ್ಸ್ ಬೆಳಗಾವಿ ವೈದ್ಯರಿಗೆ ತರಾಟೆತೆಗೆದುಕೊಂಡರು.
ಬೆಳಗಾವಿ : ಸರ್ಕಾರಿ ಆಸ್ಪತ್ರೆಗಳು ಶುಚಿತ್ವ ಇರುವುದಿಲ್ಲ ಎಂಬ ದೊಡ್ಡ ಆರೋಪ ಇದೆ. ವಿಷಯ ಪರಿಣಿತಿ ಜತೆಗೆ ಆಡಳಿತಾತ್ಮಕ ಕೌಶಲವನ್ನು ವೈದ್ಯರು ರೂಢಿಸಿಕೊಳ್ಳಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ವೈದ್ಯರಿಗೆ ತರಾಟೆ ತೆಗೆದುಕೊಂಡರು. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಆವರಣದಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಅವರು ಬೀಮ್ಸ್ ಆಸ್ಪತ್ರೆಗೆ ಭೇಟಿ ನೀಡಿದರು. ಈ ವೇಳೆ ರೋಗಿಗಳ ಸಂಬಂಧಿಕರು ಅಲ್ಲಿನ ಸಮಸ್ಯೆಗಳನ್ನು ಸಚಿವರ …
Read More »ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ: ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ : ಕಳೆದ ವರ್ಷ ಪ್ರವಾಹ ಹಾಗೂ ಮಳೆಯಿಂದ ಹಾನಿಗೀಡಾಗಿರುವ ಸಂತ್ರಸ್ತರ ಕುಟುಂಬಗಳಿಗೆ 15 ದಿನಗಳೊಳಗಾಗಿ ವಸತಿ ಸೌಕರ್ಯ ಕಲ್ಪಿಸಿಕೊಡುವಂತೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ನಗರದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ ಅವರು, ಗೋಕಾಕ ಮತ್ತು ಮೂಡಲಗಿ ತಾಲೂಕುಗಳ ನೆರೆ ಸಂತ್ರಸ್ತರ ಬೇಡಿಕೆಗಳಿಗೆ ಸ್ಪಂದಿಸಿ ತಕ್ಷಣ ಪರಿಹಾರ ಕಂಡುಕೊಳ್ಳಬೇಕೆಂದು ಅವರು ಹೇಳಿದರು. 2019 ರ ಅಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರವಾಹ …
Read More »ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರ: ಸತೀಶ್ ಜಾರಕಿ ಹೊಳಿ
ಗೋಕಾಕ: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯು ಚುನಾವಣೆಗೆ ಮಾಡಿರುವ ತಂತ್ರವಾಗಿದೆ. ನಿಗಮ, ಪ್ರಾಧಿಕಾರ ಸ್ಥಾಪನೆ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚು ಒತ್ತು ಕೊಡುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕು. ಜಾತಿಗೊಂದು ನಿಗಮ, ಪ್ರಾಧಿಕಾರ ಮಾಡುತ್ತಾ ಹೋದರೆ ಅದಕ್ಕೆ ಮಿತಿನೇ ಇರಲ್ಲ. ಭಾರತದಲ್ಲಿ 5 ರಿಂದ ಆರು ಸಾವಿರ ಜಾತಿಗಳಿವೆ ಎಲ್ಲಾ ಜಾತಿಗಳಿಗೆ ಬಿಜೆಪಿಯು ನಿಗಮ ಪ್ರಾಧಿಕಾರ ಮಾಡುವ ಮುಖಾಂತರ ಪ್ರಜಾಪ್ರಭುತ್ವ ವಿರೋಧಿ ಕೆಲಸವನ್ನು ಮಾಡಲು ಹೊರಟಿದೆ ಎಂದು ಶಾಸಕ, ಕೆಪಿಸಿಸಿ …
Read More »ರಸ್ತೆ ಮಧ್ಯೆ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಮಾನ್ವಿ ಠಾಣೆ ಪೊಲೀಸರು ಭೇದಿಸಿ ಆರೋಪಿಗಳನ್ನ ಬಂಧಿಸಿದ್ದಾರೆ.
ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿ ಓಮಿನಿ ವಾಹನವನ್ನ ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣವನ್ನ ಕೆಲವೇ ಗಂಟೆಗಳಲ್ಲಿ ಮಾನ್ವಿ ಠಾಣೆ ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ರಾಯಚೂರು ಮಾನ್ವಿ ಮಧ್ಯೆ ರಸ್ತೆಯಲ್ಲಿ ಓಮಿನಿ ವಾಹನ ಅಡ್ಡಗಟ್ಟಿ ದರೋಡೆ ಮಾಡಿದ್ದ ಶೇಕ್ ಅಬ್ದುಲ್, ಗುರುಕುಮಾರ್, ಸೈಯದ್ ಹಕೀಂ ,ಅಸ್ಲಾಂ ಷಾ ಹಾಗೂ ದರೋಡೆಗೆ ಸಾಥ್ ನೀಡಿದ್ದ ಓಮಿನಿ ಚಾಲಕ ಗುರುರಾಜನನ್ನ ಬಂಧಿಸಲಾಗಿದೆ ನಾಲ್ಕು ಜನರ ತಂಡ ವಾಹನವನ್ನ ಅಡ್ಡಗಟ್ಟಿ 5 ಲಕ್ಷ …
Read More »ರಾಹುಲ್, ಪ್ರಿಯಾಂಕಾರಿಂದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ 103ನೇ ಜಯಂತಿ ಆಚರಣೆ
ಗೋಕಾಕ್ : ಇಲ್ಲಿನ ಹಿಲ್ ಗಾರ್ಡ್ ನ ಗೃಹ ಕಚೇರಿಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 103ನೇ ಜಯಂತಿಯನ್ನು ಅದ್ದೂರಿಯಿಂದ ಗುರುವಾರ ಆಚರಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ರವರ ಪುತ್ರ ರಾಹುಲ್, ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದಿರಾ ಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಇದೇ ವೇಳೆ ಮಾಜಿ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ವಿವೇಕ ಜತ್ತಿ ಮಾತನಾಡಿ, ಉಕ್ಕಿನ ಮಹಿಳೆ ಎಂದು ಕರೆಯುವ …
Read More »‘ಮಹಾನಾಯಕ’ ಧಾರಾವಾಹಿಯಿಂದ ಮರೆತು ಹೋದ ಡಾ. ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವಾಗುತ್ತಿದೆ:ಸತೀಶ್ ಜಾರಕಿಹೊಳಿ
ಹುಕ್ಕೇರಿ : ‘ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಹಾನಾಯಕ’ ಧಾರಾವಾಹಿಯಿಂದ ಮರೆತು ಹೋದ ಡಾ. ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವಾಗುತ್ತಿದೆ ‘ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ತಾಲ್ಲೂಕಿನ ಯಮಕನಮರಡಿ ವಿಧಾನಸಭಾ ಕ್ಷೇತ್ರದ ಅರ್ಜುನ ವಾಡ್ ಗ್ರಾಮದಲ್ಲಿ ಗುರುವಾರ ಮಹಾನಾಯಕ ಬ್ಯಾನರ್ ಉದ್ಘಾಟನೆಗೊಳಿಸಿ ಮಾತನಾಡಿದರು. ‘ ಇಡೀ ಕರ್ನಾಟಕದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ಭಾವಚಿತ್ರವಿರುವ ಪೊಸ್ಟರ್ ಉದ್ಘಾಟನೆಗೊಳಿಸುವ ಪರಂಪರೆ ಮುಂದುವರೆದಿದೆ. ಇದಕ್ಕೆ ಝೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ …
Read More »ಜಿಲ್ಲೆ ಮಾಡುವುದಾದರೆ ಮೊದಲು ಚಿಕ್ಕೋಡಿ ಜಿಲ್ಲೆ ಮಾಡಿ ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ:ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ
ಚಿಕ್ಕೋಡಿ: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡಿ ನೂತನವಾಗಿ ವಿಜಯನಗರ ಜಿಲ್ಲೆ ರಚನೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸುತ್ತಿದ್ದಂತೆ. ವಿಜಯನಗರ ಜಿಲ್ಲೆಗೆ ಚಿಕ್ಕೋಡಿಯಲ್ಲಿ ವಿರೋಧ ವ್ಯಕ್ತವಾಗಿದೆ. ಜಿಲ್ಲೆ ಮಾಡುವುದಾದರೆ ಮೊದಲು ಚಿಕ್ಕೋಡಿ ಜಿಲ್ಲೆ ಮಾಡಿ ಇಲ್ಲವಾದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನೀಡಿದೆ. ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿ ರಾಜ್ಯದಲ್ಲಿ ಅತಿ ದೊಡ್ಡ ಜಿಲ್ಲೆ ಎನ್ನುವ ಹೆಗ್ಗಳಿಕೆ ಹೊಂದಿದಂತಹ ಜಿಲ್ಲೆ 18 ವಿಧಾನಸಭಾ, ಎರಡು …
Read More »