ಬೆಳಗಾವಿ: ಗೋಟೂರ ಗ್ರಾಮ ಪಂಚಾಯತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಶಕ್ಷರಾಗಿ ಅಶೋಕ ಗಂಗನ್ನವರ ಹಾಗೂ ಉಪಾಧ್ಶಕ್ಷರಾಗಿ ಲತಾ ನಿಂಗನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶಾಸಕ ಸತೀಶ ಜಾರಕಿಹೊಳಿ ಅವರ ಸೂಚನೆಯ ಮೇರೆಗೆ ಇವರನ್ನು ಆಯ್ಕೆ ಮಾಡಲಾಗಿದೆ. ಮುಖಂಡರಾದ ಬಸು ಜತ್ತಿ, ಪ್ರಕಾಶ ಬಸ್ಸಾಪುರಿ, ಪಪ್ಪುಗೌಡ ಪಾಟೀಲ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ನಿಂಗನಗೌಡ ಪಾಟೀಲ, ರವಿಂದ್ರ ಮಾಸೇವಾಡಿ, ಗುರುನಾಥ ಶಿಂದೆ, ಹನುಮಂತ ಶೇಖನವರ, ರಾಜು ನಾಯಿಕ, ಸುಭಾಸ ಘಸ್ತಿ, …
Read More »ಆರ್ಥಿಕತೆಗೆ ಚೈತನ್ಯ ತುಂಬುವ ಬಜೆಟ್ : ಬಾಲಚಂದ್ರ ಜಾರಕಿಹೊಳಿ
ಗೋಕಾಕ : ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಕೇಂದ್ರ ಬಜೆಟ್ ಬಗ್ಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದು, ಸಮಾಜದ ಪ್ರತಿಯೊಬ್ಬರಿಗೂ ಈ ಬಜೆಟ್ ಸಹಕಾರಿಯಾಗಿದೆ ಎಂದು ಶ್ಲಾಘಿಸಿದ್ದಾರೆ. ಕೃಷಿ ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಎಲ್ಲ ನಾಗರೀಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜನಪರ ಹಾಗೂ ರೈತಪರ ಬಜೆಟ್ ಇದಾಗಿದೆ ಎಂದು ಅವರು ಹೇಳಿದ್ದಾರೆ. ಆರ್ಥಿಕತೆಗೆ ಚೈತನ್ಯ ತುಂಬಲು ಇನ್ನೂ ಎರಡು ಆತ್ಮನಿರ್ಭರ ಪ್ಯಾಕೇಜ್ ಘೋಷಿಸಲಾಗಿದೆ. …
Read More »ಸುವರ್ಣ ಸೌಧವನ್ನು ಬೆಳಗಾವಿಯಲ್ಲಿ ಮಾಡಿದ್ದೇಕೆ ? ಡಿ.ಕೆ.ಶಿವಕುಮಾರ್
ಬೆಂಗಳೂರು: ಬೆಳಗಾವಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಸದೇ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡಲಾಗುತ್ತಿದೆ. ಬಜೆಟ್ ಅಧಿವೇಶವನ್ನು ಬೆಳಗಾವಿಯಲ್ಲಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ. ಸುವರ್ಣ ಸೌಧವನ್ನು ಬೆಳಗಾವಿಯಲ್ಲಿ ಯಾಕೆ ಮಾಡಿದ್ದೇವೆ ಎಂಬುದನ್ನೇ ಸರ್ಕಾರ ಮರೆತಿದೆ. ಹೀಗಾಗಿ ಅಲ್ಲಿಯೇ ಬಜೆಟ್ ಅಧಿವೇಶ ಮಾಡುವಂತೆ ಒತ್ತಾಯಿಸಿದ್ದೇವೆ. ಆದರೆ ಬಜೆಟ್ ಅಧಿವೇಶನ ಬಳಿಕ ಮುಂದಿನ ಅಧಿವೇಶನ ಬೆಳಗಾವಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ ಎಂದು ಹೇಳಿದರು. ಇನ್ನು ಕೇಂದ್ರ ಸರ್ಕಾರ ಮಂಡಿಸುತ್ತಿರುವ ಬಜೆಟ್ …
Read More »ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ 684 ಮದ್ಯದ ಬಾಟಲ ವಶಕ್ಕೆ
ಬೆಳಗಾವಿ: ಬಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 684 ಮದ್ಯದ ಬಾಟಲುಗಳನ್ನು ವಶಕ್ಕೆ ಪಡೆದಿರುವ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕಣಕುಂಟ ಬಳಿ ನಡೆದಿದೆ. ಬೆಳಗಾವಿ ಉಪ ವಿಭಾಗ ಹಾಗೂ ತನಿಖಾ ಠಾಣೆಯ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಿಳಿ ಬಣ್ಣದ ಅಶೋಕಾ ಲೈಲ್ಯಾಂಡ್ ಕಂಪನಿಯ ಎಸಿ ಬಸ್ ನಿಲ್ಲಿಸಿ ಪರಿಶೀಲಿಸಿದಾಗ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವುದು ಗೊತ್ತಾಗಿದೆ. ಪ್ರಕರಣ …
Read More »ಶಿವಾಜಿ ಮಹಾರಾಜರ ಮೂಲವೇ ಕನ್ನಡ: ಕಾರಜೋಳ
ಬೆಳಗಾವಿ-ಮುಂಬೈ ನಮ್ಮದು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆ ನೀಡಿದ ಬೆನ್ನಲ್ಲಿಯೇ ಡಿಸಿಎಂ ಗೋವೀಂದ್ ಕಾರಜೋಳ ಅವರು ಶಿವಾಜಿ ಮೂಲ ಕನ್ನಡ ಎಂದು ಹೇಳಿಕೆ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಬೆಳಗಾವಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಗೆ ಡಿಸಿಎಂ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದು ಛತ್ರಪತಿ ಶಿವಾಜಿ ಮಹಾರಾಜರ ಮೂಲವೇ ಕನ್ನಡ, ಮಹಾರಾಷ್ಟ್ರದ ಲ್ಲಿ ಉದ್ಧವ್ ಠಾಕ್ರೆ ನೇತೃತ್ವದ್ದು ಸಮ್ಮಿಶ್ರ ಸರ್ಕಾರ, ಕಾಂಗ್ರೆಸ್ ಪಕ್ಷದವರು …
Read More »ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶ್ರೀ ಸಂತೋಷ್ ಜಾರಕಿಹೊಳಿ…
ಗೋಕಾಕ: ಇಂದಿನ ಮಕ್ಕಳು ಮುಂದಿನ ಭವಿಷ್ಯ ಹಾಗೂ ಎಂದು ರಾಜ್ಯಾದ್ಯಂತ ಪಲ್ಸ ಪೋಲಿಯೋ ದಿನಾಚರಣೆ ಸದಾ ಸಾಮಾಜಿಕ ಕಳಕಳಿ ಹಾಗೂ ಕಾಳಜಿ ಯಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಯಾವತ್ತೂ ಪ್ರಚಾರ ಬೇಡ ಎಂದು ಹೇಳುತ್ತಾರೆ ಆದರೆ ಅವರ ಗೆಳೆಯರ ಬಳಗ ಸಾಹುಕಾರರು ಮಾಡುವ ಚಿಕ್ಕ ಚಿಕ್ಕ ಕೆಲಸ ಗಳು ಸಮಾಜಕ್ಕೆ ತಿಳಿಯಲಿ ಎಂದು ಅವರು ಮಾಡುವ ಎಲ್ಲ ಕೆಲಸ ಕಾರ್ಯ ಗಳನ್ನ ಸೇರಿ ಹಿಡಿದು ವಾಹಿನಿಗೆ ಸಂದೇಶ ರವಾನೆ …
Read More »ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ
ಗೋಕಾಕ: ಕಿಚ್ಚಾ ಸುದೀಪ ಅಭಿನಯದ ಕನ್ನಡ ಚಲನಚಿತ್ರ “ವಿಕ್ರಾಂತ ರೋಣಾ” ದ ಶಿರ್ಷೀಕೆ ಹಾಗೂ ಲಾಂಛನವನ್ನು ಜನೆವರಿ 31ರಂದು ದುಬೈನ ಬುರ್ಜ ಖಲಿಫಾದ ಮೇಲೆ ಬಿಡುಗಡೆ ಮಾಡುವ ಮೂಲಕ ವಿಶ್ವದಾಖಲೆ ಮಾಡಲಿದೆ. ಎರಡು ಸಾವಿರ ಅಡಿ ಎತ್ತರದ ನಟ ಕಿಚ್ಚಾ ಸುದೀಪ ಅವರ ಕಟೌಟನ್ನು ಈ ಕಟ್ಟಡದಲ್ಲಿ ಹಾಕುವ ಮೂಲಕ ಚಲನಚಿತ್ರ ರಂಗದಲ್ಲಿಯೇ ಅತೀ ಎತ್ತರದ ಕಟೌಟನಲ್ಲಿ ರಾರಾಜಿಸುವ ಕೀರ್ತಿಗೆ ಸುದೀಪ ಪಾತ್ರರಾಗುತ್ತಿದ್ದಾರೆ. ಈ ದೃಶ್ಯವನ್ನು ಭಾರತದಲ್ಲಿ ಜನೇವರಿ 31ರ …
Read More »ಗೋಕಾಕ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಗೋಕಾಕ ಆಯ್ಕೆ
ಗೋಕಾಕ: ಇಲ್ಲಿನ ನಗರಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕುತ್ಬುದ್ಧೀನ್ ಗೋಕಾಕ ಶನಿವಾರ ಆಯ್ಕೆಯಾಗಿದ್ದಾರೆ. ಕುತ್ಬುದ್ಧೀನ್ ಅವರು ಮೂರು ಬಾರಿ ನಗರಸಭೆಗೆ ಆಯ್ಕೆಯಾಗಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮುಖಂಡರಾದ ಲಖನ್ ಜಾರಕಿಹೊಳಿ ಹಾಗೂ ಅಂಬಿರಾವ್ ಪಾಟೀಲ ಅವರ ಸೂಚನೆಯ ಮೇರೆಗೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಂಚ್ಯಾಳ, ನಗರ ಸೇವಕರಾದ ಅಬ್ಬಾಸ ದೇಸಾಯಿ, ಸಂತೋಷ …
Read More »ಗೋಕಾಕದಲ್ಲಿ ಸರಕಾರಿ ವೈದ್ಯರಿಂದ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ
ಗೋಕಾಕದಲ್ಲಿ ಗೋಕಾಕ ತಾಲೂಕಾ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯರು ಮತ್ತು ಆಶಾ ಕಾರ್ಯಕರ್ತೆಯರ ನೇತೃತ್ವದಲ್ಲಿ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಗೋಕಾಕ ನಗರಸಭೆಯ ಆಯುಕ್ತರಾದ ಶಿವಾನಂದ ಹೀರೆಮಠ ಇವರು ರಿಬ್ಬನ್ ಕಟ್ ಮಾಡಿ ನಗರಸಭೆಯ ಉಪಾದಕ್ಷ ಬಸವರಾಜ ಆರೆನ್ನವರ ಇವರು ಬ್ಯಾಂಡ ಬಾರಿಸುವ ಮೂಲಕ ಪಲ್ಸ್ ಪೋಲಿಯೋ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ನಾಳೆ ದಿನ ಜನೆವರಿ 31 ರವಿವಾರದಂದು ಸ್ಥಳಿಯ ಪ್ರಾಥಮಿಕ …
Read More »ಬಸವರಾಜ ಬೊಮ್ಮಾಯಿ ಗಡಿ ಉಸ್ತುವಾರಿ ಸಚಿವರಾಗಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಪತ್ರೆ
ಬೆಳಗಾವಿ – ಗಡಿ ಉಸ್ತುವಾರಿ ಸಚಿವರನ್ನಾಗಿ ಬಸವರಾಜ ಬೊಮ್ಮಾಯಿ ಅವರನ್ನು ನೇಮಕ ಮಾಡಬೇಕು ಎಂದು ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ. ಜೊತೆಗೆ, ಮಹಾರಾಷ್ಟ್ರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದೆ. ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಪತ್ರ ಬರೆದಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಗಡಿ ವಿವಾದ ಪ್ರಕರಣವನ್ನು ಮಹಾರಾಷ್ಟ್ರ ಸರಕಾರ ಪದೇ ಪದೇ ಕೆಣಕುತ್ತಿದೆ. ಅಲ್ಲಿಯ ಮುಖ್ಯಮಂತ್ರಿಗಳು ಸಾಧ್ಯವಿರುವ ಎಲ್ಲ …
Read More »