Breaking News

ಬೆಳಗಾವಿ

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ.

ಬೆಳಗಾವಿ: ಲೋಕಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ದಿನ ಡ್ಯೂಟಿ ಮಾಡಿದ್ದ ಉಪ ತಹಶೀಲ್ದಾರ್ ಕೊರೊನಾಗೆ ಬಲಿಯಾಗಿದ್ದಾರೆ. 52 ವರ್ಷದ ವಿಜಯಶ್ರೀ ನಾಗನೂರೆ ಸೋಂಕಿಗೆ ಬಲಿಯಾದ ಅಧಿಕಾರಿ. ಇವರು ಬೆಳಗಾವಿ ನಗರದ ಯಮನಾಪುರ ನಿವಾಸಿ. ವಿಜಯಶ್ರೀ ನಾಗನೂರೆಗೆ ಮೇ 3 ರಂದು ಕೊರೊನಾ ಸೋಂಕು ದೃಢವಾಗಿತ್ತು. ಕಳೆದ ಹನ್ನೆರಡು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು (ಮೇ 15) ಬೆಳಗಿನ ಜಾವ ಸಾವನ್ನಪ್ಪಿದ್ದಾರೆ. ವಿಜಯಶ್ರೀ ಸದ್ಯ …

Read More »

ಬೆಳಗಾವಿ ಉಪ ತಹಶೀಲ್ದಾರ್ ವಿಜಯಶ್ರೀ ನಾಗನೂರೆ ಕೊರೊನಾ ಸೋಂಕಿಗೆ ಬಲಿ

ಬೆಳಗಾವಿ: ಬೆಳಗಾವಿ ಉಪ ತಹಶೀಲ್ದಾರ್ ವಿಜಯಶ್ರೀ ನಾಗನೂರೆ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಲೋಕಸಭಾ ಉಪಚುನಾವಣಾ ಫಲಿತಾಂಶದ ದಿನ ಎಲೆಕ್ಷನ್ ಕರ್ತವ್ಯ ನಿರ್ವಹಿಸಿದ್ದರು. ಬೆಳಗಾವಿಯ ಯಮುನಾಪುರದ ನಿವಾಸಿಯಾಗಿದ್ದ ವಿಜಯಶ್ರೀ (53) ಅವರಿಗೆ ಮೇ 3ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. 12 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಿಜಯಶ್ರೀ ನಗನೂರೆ ಅವರ ಕುಟುಂಬದ 10 ಸದಸ್ಯರಿಗೆ ಕೊರೊನಾ ಸೋಂಕು ತಗುಲಿದ್ದು ಎಲ್ಲರೂ …

Read More »

ಬೆಳಗಾವಿ ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಧ್ಯ ಲಭ್ಯವಿರುವ ಬೆಡ್ ಮಾಹಿತಿ

ಬೆಳಗಾವಿ – ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬೆಡ್ ಗಾಗಿ ಆಸ್ಪತ್ರೆಗಳಿಗೆ ತಡಕಾಟ ಹೆಚ್ಚುತ್ತಿದೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡುತ್ತಿದ್ದರೆ ಸೋಂಕಿತರ ಸ್ಥಿತಿ ಗಂಭೀರವಾಗಲಿದೆ. ಹಾಗಾಗಿ ಯಾವ ಆಸ್ಪತ್ರೆಗೆ ಹೋದರೆ ಬೆಡ್ ಲಭ್ಯವಿದೆ ಎನ್ನುವ ಮಾಹಿತಿ ಪಡೆದು ಹೋಗುವುದು ಉತ್ತಮ. ಸಧ್ಯ ಬೆಳಗಾವಿ ಜಿಲ್ಲೆಯ ಯಾವ ಆಸ್ಪತ್ರೆಯಲ್ಲಿ ಯಾವ ಬೆಡ್ ಲಭ್ಯವಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ನೀಡಿರುವ ಮಾಹಿತಿಯಂತೆ ಯಾವುದೇ ಆಸ್ಪತ್ರೆಯಲ್ಲಿ ಬೆಡ್ ಸಿಗದಿದ್ದಲ್ಲಿ ಜಿಲ್ಲಾಡಳಿತ ಇಲ್ಲವೆ …

Read More »

ಕಿತ್ತೂರು, ಬೈಲಹೊಂಗಲ ತಾಲ್ಲೂಕಿನ ‌ಕೋವಿಡ್ ಪರಿಸ್ಥಿತಿ ಪರಿಶೀಲಿಸಿದ ಉಸ್ತುವಾರಿ ಸಚಿವ ಕಾರಜೋಳ

ಬೆಳಗಾವಿ: ಜಿಲ್ಲೆಗೆ ಅಗತ್ಯವಿರುವ ಕೋವಿಡ್ ಲಸಿಕೆ ಪೂರೈಕೆಯಾದ ತಕ್ಷಣವೇ ಈಗಾಗಲೇ ಮೊದಲ ಡೋಸ್ ಪಡೆದುಕೊಂಡವರಿಗೆ ಆದ್ಯತೆ ಮೇರೆಗೆ ಎರಡನೇ ಡೋಸ್ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಬುಧವಾರ(ಮೇ 12) ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊದಲ ಡೋಸ್ ಲಸಿಕೆ ಪಡೆದುಕೊಂಡಿರುವವರು …

Read More »

ಬೆಳಗಾವಿಯಲ್ಲಿ  ಶಿವಸೇನೆ – ಎಂಇಎಸ್ ಇದೀಗ ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಪೂರೈಕೆ ಆರಂಭ

ಬೆಳಗಾವಿ – ಬೆಳಗಾವಿಯಲ್ಲಿ  ಶಿವಸೇನೆ – ಎಂಇಎಸ್ ಇದೀಗ ಮರಾಠಾ ಭಾಷಿಕ ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಪೂರೈಕೆ ಆರಂಭಿಸಿದೆ. ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಏಕನಾಥ ಶಿಂಧೆ ಬೆಳಗಾವಿ ಮರಾಠಿಗರಿಗಾಗಿ 2 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಸಿದ್ದು, ಇನ್ನೂ 8 ಪೂರೈಸುವುದಾಗಿ ತಿಳಿಸಿದ್ದಾರೆ ಎಂದು ಎಂಇಎಸ್ ಮುಖಂಡ ಶುಭಂ ಶೇಳಕೆ ತಿಳಿಸಿದ್ದಾರೆ. ಬೆಳಗಾವಿ ಜಿಲ್ಲಾಡಳಿತ ಇಲ್ಲಿಯ ಎನ್ ಜಿ ಓ ಗಳಿಗೆ  ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆಯಾಗಿದೆ. ಹಾಗಾಗಿ ಮಹಾರಾಷ್ಟ್ರದ …

Read More »

ರೋಡಿಗೆ ಇಳಿದಿರುವ ಬೈಕ್ ಸವಾರರ ಮೇಲೆ ಲಾಠಿ ಚಾರ್ಜ್ ಪೊಲೀಸರ ವರ್ತನೆಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ

ಗೋಕಾಕ:ರಸ್ತೆಗಿಳಿದವರ ಮೇಲೆ ಲಾಠಿ ಏಟು, ಪೊಲೀಸರ ವರ್ತನೆಗೆ ಸಾರ್ವಜನಿಕರ ವ್ಯಾಪಕ ಆಕ್ರೋಶ ಲಾಕ್‌ಡೌನ್ ಸಂದರ್ಭದಲ್ಲಿ ರಸ್ತೆಗಿಳಿದವರ ಮೇಲೆ ಪೊಲೀಸರು ಲಾಠಿಯಲ್ಲಿ ಹಿಗ್ಗಾಮುಗ್ಗ ಥಳಿಸುತ್ತಿರುವುದರ ವಿರುದ್ಧ ವ್ಯಾಪಕ ಆಕ್ರೋಶಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ. ಸಾಮಾಜಿಕ ಹೋರಾಟಗಾರರು, ಬರಹಗಾರರು ಮಾತ್ರವಲ್ಲದೆ ಸಾರ್ವಜನಿಕರು ಪೊಲೀಸರ ನಡೆಯನ್ನು ಖಂಡಿಸುತ್ತಿದ್ದಾರೆ.     ಕೋವಿಡ್ ಕಠಿಣ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನಸಾಮಾನ್ಯರನ್ನು ಅಪರಾಧಿಗಳಂತೆ ನಡೆಸಿಕೊಂಡು ಶಿಕ್ಷೆ ಕೊಡಲು ಪೊಲೀಸರಿಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸುತ್ತಿದ್ದಾರೆ. ‘ಪೊಲೀಸರಿಗೆ ಶಿಕ್ಷಿಸುವ …

Read More »

ಬೆಳಗಾವಿ: ಅಗತ್ಯ ವಸ್ತುಗಳಿಗೆ ಪರದಾಟ

ಬೆಳಗಾವಿ: ‘ಕೋವಿಡ್ ಪ್ರಕರಣಗಳನ್ನು ತಗ್ಗಿಸಲು ಜಾರಿಗೊಳಿಸಿರುವ ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ 10ರವರೆಗೆ ಅವಕಾಶವಿದೆ. ಆದರೆ, ವಾಹನಗಳಲ್ಲಿ ಬರುವಂತಿಲ್ಲ; ನಡೆದುಕೊಂಡೇ ತೆರಳಬೇಕು’ ಎಂಬ ಸರ್ಕಾರದ ಆದೇಶವು ಗ್ರಾಮೀಣ ಜನರಿಗೆ ತೊಡಕಾಗಿ ಪರಿಣಮಿಸಿದೆ. ಬಹುತೇಕ ಹಳ್ಳಿಗಳಲ್ಲಿ ದಿನಸಿ, ತರಕಾರಿ ಮೊದಲಾದವುಗಳು ಸಿಗುವ ಅಂಗಡಿಗಳಿರುವುದಿಲ್ಲ. ಪಕ್ಕದಲ್ಲಿರುವ ದೊಡ್ಡ ದೊಡ್ಡ ಗ್ರಾಮಗಳು, ಪಟ್ಟಣ, ಹೋಬಳಿ, ತಾಲ್ಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿನ ಅಂಗಡಿಗಳನ್ನು ಅಥವಾ ಮಾರುಕಟ್ಟೆಯನ್ನು ಅವಲಂಬಿಸಿರುತ್ತಾರೆ. ಹೀಗೆ ಹೋಗಿ ಬರುವುದಕ್ಕೆ …

Read More »

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 12 ಜನ ಕೊರೊನಾ ಸೋಂಕಿಗೆ ಬಲಿ; ಜನರಲ್ಲಿ ಹೆಚ್ಚಾದ ಆತಂಕ

ಚಾಮರಾಜನಗರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ಜಿಲ್ಲಾಸ್ಪತ್ರೆಯಲ್ಲಿ ಮತ್ತೆ 12 ಜನರನ್ನು ಕೊರೊನಾ ಸೋಂಕು ಬಲಿ ತೆಗೆದುಕೊಂಡಿದೆ. ಕಳೆದ 12 ಗಂಟೆಯಲ್ಲಿ 12 ಜನ ಮೃತಪಟ್ಟಿದ್ದಾರೆ. ಇದರಲ್ಲಿ ಒಬ್ಬರು ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಕೂಡಾ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ …

Read More »

ಕೇಂದ್ರದಿಂದ ಹೆಚ್ಚುವರಿ ಆಕ್ಸಿಜನ್; ಶೀಘ್ರ ಸಮಸ್ಯೆಗೆ ಪರಿಹಾರ: ಸಚಿವ ಜಗದೀಶ್ ಶೆಟ್ಟರ್

  ಬೆಳಗಾವಿ;-ರಾಜ್ಯಕ್ಕೆ ಅಗತ್ಯವಿರುವ ಆಕ್ಸಿಜನ್ ಪ್ರಮಾಣವನ್ನು ಆಧರಿಸಿ ಹೆಚ್ಚುವರಿ ಆಕ್ಸಿಜನ್ ಹಂಚಿಕೆಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಪರಿಹಾರವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ರಾಜ್ಯದ ಆಕ್ಸಿಜನ್ ಪೂರೈಕೆ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿಮಂದಿರದಲ್ಲಿ ಭಾನುವಾರ (ಮೇ 9) ನಡೆದ ಅಧಿಕಾರಿಗಳ …

Read More »

ಬೆಳಗಾವಿ: ಜನರಿಗೆ ಸ್ಪಂದಿಸಲು ಸಂಸದೆ ಮಂಗಲಾ ಅಂಗಡಿ ತಾಕೀತು

ಬೆಳಗಾವಿ: ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ‘ಜಿಲ್ಲಾ ಕೋವಿಡ್ 19 ವಾರ್ ರೂಂ’ಗೆ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಿದರು. ‘ಇಲ್ಲಿ ನೀಡಲಾಗಿರುವ ಹಲವು ಸಹಾಯವಾಣಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಜಿಲ್ಲೆಯ ಜನರು ಮಾಹಿತಿ ಹಾಗೂ ಸಹಾಯಕ್ಕಾಗಿ ಪರದಾಡುವಂತಾಗಿದೆ. ಇದು ಸರಿಯಲ್ಲ. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸೂಚಿಸಿದರು. ‘ಕೋವಿಡ್ ಸಹಾಯವಾಣಿ ಸಂಖ್ಯೆಗಳು ಸರಿಯಾಗಿ ಕಾರ್ಯನಿರ್ವಹಿಸಬೇಕು. ಅಧಿಕಾರಿಗಳು ತಕ್ಷಣ ಹಾಗೂ …

Read More »