Breaking News

ಬೆಳಗಾವಿ

ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು

ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಿ ಸಾರ್ವಜನಿಕ ಆಸ್ಪತ್ರೆ ಎದುರು ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆ ಮುಂದೆ ಬಾಲಕನ ಮೃತದೇಹ ಇಟ್ಟು ಪಾಲಕರ ಪ್ರತಿಭಟನೆ ಮಹೇಶ್​​-ನೇತ್ರಾವತಿ ದಂಪತಿ ಪುತ್ರ ಮಗ ಭರತ್ (13) ಮೃತ ಬಾಲಕ. ಅನಾರೋಗ್ಯದಿಂದ ಬಳಲುತ್ತಿದ್ದ ಭರತ್​​ನನ್ನು ಪಾಲಕರು ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದರು. ಕರ್ತವ್ಯದಲ್ಲಿದ್ದ ವೈದ್ಯರು ಸಕಾಲಕ್ಕೆ ಬಾಲಕನಿಗೆ ಚಿಕಿತ್ಸೆ ನೀಡದ …

Read More »

ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 89 ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್​ ತಗುಲಿದೆ.

ಬೆಳಗಾವಿ: ರಾಜ್ಯದಲ್ಲಿ ಕೋವಿಡ್​ ಅಬ್ಬರ ಮುಂದುವರೆದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 89 ಪೊಲೀಸ್ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಬೆಳಗಾವಿ ಕಮಿಷನರೇಟ್ ವ್ಯಾಪ್ತಿಯಲ್ಲೇ 39 ಮಂದಿಗೆ ಸೋಂಕು ತಗುಲಿದೆ. ಬೆಳಗಾವಿ ಎಪಿಎಂಸಿ ಠಾಣೆಯ 11 ಸಿಬ್ಬಂದಿ, ಶಹಾಪುರ ಠಾಣೆಯ ಮೂವರು ಸಿಬ್ಬಂದಿ, ಟಿಳಕವಾಡಿ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಕೊರೊನಾ ವಕ್ಕರಿಸಿದೆ. ಓರ್ವ ಇನ್ಸ್‌ಪೆಕ್ಟರ್, ಇಬ್ಬರು ಪಿಎಸ್‌ಐ ಸೇರಿ ಕಮಿಷನರೇಟ್ ವ್ಯಾಪ್ತಿಯಲ್ಲಿ 39 ಪೊಲೀಸ್ ಸಿಬ್ಬಂದಿಗೆ ಪಾಸಿಟಿವ್​ ಕಂಡುಬಂದಿದೆ. ಉಳಿದಂತೆ ಡಿಎಆರ್, ಸಿಎಆರ್, …

Read More »

ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆ

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ವೈಷಮ್ಯಕ್ಕೆ ಯುವಕನ ಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿ ತಾಲೂಕಿನ ಮುತ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ.   ಜಮೀನಿಗೆ ಆಕಳು ಮೇಯಿಸಲು ಬಿಟ್ಟಿದ್ದಿಯಾ ಎಂದು ಜಗಳ ತೆಗೆದು ಶ್ರೀಕಾಂತ ಕಟಾಬಳಿ ಎನ್ನುವ ಯುವಕನ ಮೇಲೆ ಲಕ್ಷ್ಮಣ್ ದಡ್ಡಿ, ಲಕ್ಷ್ಮಣ್ ಪುತ್ರ ಸಚಿನ್ ಹಾಗೂ ರಂಜಿತ್‌ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ಘಟನೆಯಲ್ಲಿ ಶ್ರೀಕಾಂತ ಕಟಾಬಳಿ ತಲೆಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.   ದಡ್ಡಿ …

Read More »

ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳ ದರ್ಬಾರೇ

ಬೆಳಗಾವಿ: ಇಲ್ಲಿನ ಮಹಾನಗರಪಾಲಿಕೆಗೆ ಚುನಾವಣೆ ಮುಗಿದು, ನೂತನ ಸದಸ್ಯರು ಚುನಾಯಿತರಾಗಿ ಬರೋಬ್ಬರಿ ಐದು ತಿಂಗಳುಗಳೇ ಕಳದಿದ್ದರೂ ಅವರಿಗೆ ಅಧಿಕಾರದ ಭಾಗ್ಯ ಸಿಕ್ಕಿಲ್ಲ. ಜನಪ್ರತಿನಿಧಿಗಳಿದ್ದರೂ ಅಧಿಕಾರಿಗಳ ದರ್ಬಾರೇ ಮುಂದುವರಿದಿದೆ.   ಮಹಾನಗರಪಾಲಿಕೆ ಚುನಾವಣೆ ಮತದಾನ ಸೆ.3ರಂದು ನಡೆದಿತ್ತು. .6ರಂದು ಫಲಿತಾಂಶ ಪ್ರಕಟವಾಗಿತ್ತು. ಆಗಿನಿಂದಲೂ ಸದಸ್ಯರು ಪ್ರಮಾಣವಚನ ಸ್ವೀಕರಿಸುವ ಪ್ರಕ್ರಿಯೆಯೇ ನಡೆಯದಿರುವುದು ಅವರು ಅಧಿಕೃತವಾಗಿ ಅಧಿಕಾರ ಚಲಾಯಿಸುವುದಕ್ಕೆ ಅಡ್ಡಿಯಾಗಿ ಪರಿಣಮಿಸಿದೆ. ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಚುರುಕುಗೊಳಿಸುವುದಕ್ಕೆ ಅವರಿಂದ ಸಾಧ್ಯವಾಗಿಲ್ಲ. ಈಚೆಗೆ ವಾಲ್ವ್‌ಮನ್‌ಗಳ ಮುಷ್ಕರದಿಂದ …

Read More »

ಬೆಳಗಾವಿಯಲ್ಲಿ ಚುಚ್ಚುಮದ್ದು ಪಡೆದ ಮೂರು ಮಕ್ಕಳು ನಿಗೂಢವಾಗಿ ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ.

ಬೆಳಗಾವಿ: ಚುಚ್ಚುಮದ್ದು ಪಡೆದು ಜಿಲ್ಲೆಯ ರಾಮದುರ್ಗ ತಾಲೂಕಿನ ಮೂವರು ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖಾ ವರದಿಯನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾಹಿತಿ ನೀಡಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಾಥಮಿಕ ತನಿಖಾ ವರದಿಯನ್ನು ಸಿಎಂಗೆ ಕಳುಹಿಸಿ ಕೊಟ್ಟಿದ್ದೇವೆ. ಜಿಲ್ಲಾ ಲಸಿಕಾಕರಣ ಅನುಷ್ಠಾನ ಅಧಿಕಾರಿ ಡಾ.ಈಶ್ವರ್ ಗಡಾದ್ ಪರಿಶೀಲನೆ ನಡೆಸಿ, ವರದಿ ಕೊಟ್ಟಿದ್ದಾರೆ. ಟೆಕ್ನಿಕಲ್ ವರದಿ ಇರುವ ಕಾರಣ ಅದರಲ್ಲಿರುವ …

Read More »

ಆಸ್ತಿಗೆ ಸಂಬಂಧಿಸಿದ ಕೆಲಸಕ್ಕೆ ₹ 10ಸಾವಿರದಿಂದ ₹ 15ಸಾವಿರ ಲಂಚ ಕೇಳುತ್ತಾರೆ

ತೆಲಸಂಗ: ಅರಟಾಳ ಗ್ರಾಮ ಪಂಚಾಯ್ತಿಯಿಂದ ಮಂಗಳವಾರ ನಡೆದ ಗ್ರಾಮಸಭೆಯಲ್ಲಿ ಜನರು ಗ್ರಾಮ ಲೆಕ್ಕಾಧಿಕಾರಿ ವಿರುದ್ದ ಆರೋಪಗಳ ಸುರಿಮಳೆಗೈದರು.   ಶಿವಾನಂದ ಭಂಡಾರಿ, ಅಶೋಕ ಆನಗೊಂಡಿ, ಭೀಮಪ್ಪ ಭಂಡಾರಿ ಮಾತನಾಡಿ, ‘ಗ್ರಾಮ ಲೆಕ್ಕಾಧಿಕಾರಿ ಇರ್ಫಾನ್‌ ಆಲಗೂರ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ. ಆಸ್ತಿಗೆ ಸಂಬಂಧಿಸಿದ ಕೆಲಸಕ್ಕೆ ₹ 10ಸಾವಿರದಿಂದ ₹ 15ಸಾವಿರ ಲಂಚ ಕೇಳುತ್ತಾರೆ. ಅವರನ್ನು ವರ್ಗಾಯಿಸಿ ದಕ್ಷ ಅಧಿಕಾರಿ ಹಾಕಬೇಕು’ ಎಂದು ಒತ್ತಾಯಿಸಿದರು.   ‘ಗ್ರಾಮ ಲೆಕ್ಕಾಧಿಕಾರಿಯಿಂದ ಯಾವುದೇ ದಾಖಲಾತಿ ಪಡೆಯಲು …

Read More »

ಬೆಳಗಾವಿ ಜಿಲ್ಲೆಯ 57 ಪೊಲೀಸ್ ಪೇದೆಗಳಿಗೆ ಪಾಸಿಟಿವ್

ಬೆಳಗಾವಿ: ದಿನದಿಂದ ದಿನಕ್ಕೆ ಬೆಳಗಾವಿಯಲ್ಲಿ ಕೋವಿಡ್ ಸೋಂಕು ಹೆಚ್ಚಳವಾಗುತ್ತಿದ್ದು, ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಇನ್ಸಪೆಕ್ಟರ್ ಸೇರಿ 35, ಜಿಲ್ಲೆಯ 8 ಹಾಗೂ ಕೆಎಸ್‌ಆರ್‌ಪಿ ತುಕಡಿಯ 14 ಪೊಲೀಸ್ ಪೇದೆಗಳು ಸೇರಿ ಒಟ್ಟು 57 ಮಂದಿಗೆ ಕೋವಿಡ್ ಸೋಂಕು ವಕ್ಕರಿಸಿದೆ. ಈ ಪೈಕಿ ಇಬ್ಬರು ಗುಣಮುಖರಾಗಿದ್ದಾರೆ.ಬೆಂಗಳೂರಿನಲ್ಲಿ ಅತಿ ಹೆಚ್ಚು ಪೊಲೀಸರಿಗೆ ಸೋಂಕು ತಗುಲಿದ್ದರಿಂದ ಬೆಳಗಾವಿಯಲ್ಲಿಯೂ ಮುಂಜಾಗ್ರತ ಕ್ರಮವಾಗಿ ಕೋವಿಡ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ನಗರದ ಎಪಿಎಂಸಿ ಇನ್ಸಪೆಕ್ಟರ್, ಇಬ್ಬರು …

Read More »

ಬೆಳಗಾವಿ ಇಂದಿನ ಕೊರೋನಾ

ಬೆಳಗಾವಿ- ಇಂದು ಜಿಲ್ಲೆಯಲ್ಲಿ 418 ಪ್ರಕರಣಗಳು ಕಂಡು ಬಂದಿವೆ. ಅಥಣಿ 33, ಚಿಕ್ಕೋಡಿ 29, ಸವದತ್ತಿ 33 ಪ್ರಕರಣಗಳು ಕಂಡು ಬಂದಿವೆ.

Read More »

ಮಹದಾಯಿ ಹೋರಾಟ ಪಕ್ಷದ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ

ಪಾಲಿಕೆಯಲ್ಲಿ ಅಭಯ ಪಾಟೀಲ ಮೇಯರ್, ಅನೀಲ ಬೆನಕೆ ಡೆಪ್ಯುಟಿ ಮೇಯರ್ ಸತೀಶ್ ಜಾರಕಿಹೊಳಿ ಲೇವಡಿ….   ಬೆಳಗಾವಿ: ಕೋವಿಡ್‌ ಕಡಿಮೆಯಾದ ಮೇಲೆ ಮುಂದಿನ ದಿನಗಳಲ್ಲಿ ಮೇಕೆದಾಟು ಹೋರಾಟದ ಮಾದರಿಯಲ್ಲಿಯೇ ಮಹದಾಯಿ ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್‌ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹದಾಯಿ ಹೋರಾಟ ಎಲ್ಲಿಂದ ಆರಂಭ ಮಾಡಬೇಕೆಂಬುವುದನ್ನು ನಮ್ಮ ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪರೇಷೆ ತಯಾರಿಸಿ ನಂತರ ನಿರ್ಧಾರ …

Read More »

ಅರಣ್ಯ ಇಲಾಖೆಯ ಸಿಬ್ಬಂದಿಗಳ ವಸತಿ ಗೃಹಗಳ ಶಂಕುಸ್ಥಾಪನೆ ನೆರೆವೇರಿ‌ಸಿದ ಸಚಿವ ಉಮೇಶ್ ಕತ್ತಿ

ಘಟಪ್ರಭಾ ಅರಣ್ಯ ವಿಭಾಗದ ಸಿಬ್ಬಂದಿ ವಸತಿ ಗೃಹಗಳ ಶಂಕುಸ್ಥಾಪನೆಯನ್ನು ಅರಣ್ಯ ಹಾಗೂ ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿಯವರು ಸೋಮವಾರದಂದು ನಗರದಲ್ಲಿ ನೆರೆವೇರಿ‌ಸಿದರು .   ಈ ಸಂದರ್ಭದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ ಸಾಲಿಮಠ ,ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್.ಮರಿಯಪ್ಪ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ವರಿ ಈರನಟ್ಟಿ, ವಲಯ ಅರಣ್ಯ ಅಧಿಕಾರಿ ಕೆ.ಎನ್.ವಣ್ಣೂರ ಹಾಗೂ ಸಿಬ್ಬಂದಿ ಇದ್ದರು.

Read More »