ಪ್ರಸ್ತುತ ಸಾಮಾಜಿಕ ಪರಿಸ್ಥಿತಿಯಲ್ಲಿರುವ ಮಠಗಳ ಪೀಠಾಧಿಪತಿಗಳು ಐತಿಹಾಸಿಕ ಶ್ರೇಷ್ಠ ಗುರುವರ್ಯ ಬ್ರಹ್ಮಶ್ರೀ ನಾರಾಯಣ ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಗಜಾನನ ನಾಯ್ಕ ಅಭಿಪ್ರಾಯಪಟ್ಟರು. ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಂದು ಶನಿವಾರ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತ್ಯೋತ್ಸವ-2022 …
Read More »ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ!
ಬೆಳಗಾವಿ :ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದು ಚಪ್ಪಲಿ ಸವೆಸುವ ಜಂಜಾಟ ಇನ್ನು ತಪ್ಪಲಿದೆ! ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಿಂದ ಸಾರ್ವಜನಿಕರಿಗೆ ವಿಳಂಬವಿಲ್ಲದೆ ಸೇವೆ ಕಲ್ಪಿಸುವುದಕ್ಕೆ ‘ಸ್ವಾವಲಂಬಿ’ ವೆಬ್ಸೈಟ್ ವರದಾನವಾಗಿದೆ. ಈ ವೆಬ್ಸೈಟ್ ಮೂಲಕವೇ ಭೂಮಿಯ ಮಾಲೀಕರು ಜಮೀನಿನ 11ಇ (ಹಿಸ್ಸಾ ನಕಾಶೆ), ತತ್ಕಾಲ್ ಪೋಡಿ, ಭೂ ಪರಿವರ್ತನಾ ನಕ್ಷೆ ಇತ್ಯಾದಿ ಪಡೆಯಲು ಅರ್ಜಿ ಸಲ್ಲಿಸಬಹುದು. …
Read More »ಹಾನಿ ಪರಿಶೀಲನೆ: ಕೇಂದ್ರ ತಂಡಕ್ಕೆ ಹಾನಿ ಮನವರಿಕೆ: ಡಿಸಿ ನಿತೇಶ್ ಪಾಟೀಲ್
ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚೆಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯನ್ನು ಕೇಂದ್ರ ನೆರೆ ಅಧ್ಯಯನ ತಂಡವು ಶನಿವಾರ(ಸೆ.10) ಪರಿಶೀಲನೆ ನಡೆಸಿತು. ಕೇಂದ್ರ ಜಲ ಆಯೋಗದ ಜಲಶಕ್ತಿ ಸಚಿವಾಲಯದ ನಿರ್ದೇಶಕರಾದ ಅಶೋಕ ಕುಮಾರ್ ವಿ. ಅವರ ನೇತೃತ್ವದ ಕೇಂದ್ರ ಅಧ್ಯಯನ ತಂಡದಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ಧಾರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ವಿ.ವಿ.ಶಾಸ್ತ್ರಿ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರರಾದ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ಅವರು ಜತೆಗಿದ್ದರು. ಬೆಳಗಾವಿಯಿಂದ ಪ್ರವಾಸ …
Read More »ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವಕ್ಕೆ ತೆರೆ,
ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವಕ್ಕೆ ತೆರೆ ಬಿದ್ದಿದ್ದು. ನಿರಂತರವಾಗಿ 25 ಗಂಟೆಗೂ ಹೆಚ್ಚು ಕಾಲ ಭವ್ಯ ಮೆರವಣಿಗೆ ಮೂಲಕ ಸಾರ್ವಜನಿಕ ಗಣೇಶ ಮಂಡಳಿಗಳ ಗಣೇಶ ಮೂರ್ತಿಗಳ ವಿಸರ್ಜನೆಯನ್ನು ನೆರವೇರಿಸಲಾಯಿತು. ಈ ವೇಳೆ ಲಕ್ಷಾಂತರ ಜನರು ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾದರು. ಹೌದು ಬೆಳಗಾವಿಯ ಗಣೇಶೋತ್ಸವಕ್ಕೆ ತನ್ನದೇಯಾದ ಐತಿಹಾಸಿಕ ಹಿನ್ನೆಲೆಯಿದೆ. ಪ್ರತಿ ವರ್ಷವೂ ಅತ್ಯಂತ ವಿಜೃಂಭಣೆಯಿಂದ ಇಲ್ಲಿ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಕೊರೊನಾ ಎರಡು ವರ್ಷದ ಬಳಿಕ ಈ ವರ್ಷ ಹೆಚ್ಚಿನ …
Read More »ಅಪಘಾತವಾಗಿ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ತೋರಿದ ವಿಜಯ್ ಮೋರೆ
ಬೆಳಗಾವಿಯ ಮಚ್ಛೆಯ ಕೆಎಸ್‍ಆರ್‍ಪಿ ಗ್ರೌಂಡ್ ಬಳಿ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರರಾದ ವಿಜಯ್ ಮೋರೆ ಹಾಗೂ ಮಾರಿಯಾ ಮೋರೆ ಮಾನವೀಯತೆ ಮೆರೆದಿದ್ದಾರೆ. ಹೌದು ಇಂದು ಬೆಳಗಿನ ಜಾವ ಬೆಳಗಾವಿಯ ಮಚ್ಛೆಯ ಕೆಎಸ್‍ಆರ್‍ಪಿ ಗ್ರೌಂಡ್ ಬಳಿ ಯುವಕನೋರ್ವ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ. ಈ ವೇಳೆ ಆತನ ಪರೀಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಯಾರೂ ಆತನ ಸಹಾಯಕ್ಕಾಗಿ ಬರಲಿಲ್ಲ. ಈ ವೇಳೆ ಮಾಜಿ ಮಹಾಪೌರ ಹಾಗೂ …
Read More »ಕತ್ತಿ ಕುಟುಂಬದಕ್ಕೆ ಸಾಂತ್ವನ ಹೇಳಲು ತೆರಳುತಿದ್ದವರ ಕಾರು ಅಪಫಾತ.
ಕತ್ತಿ ಕುಟುಂಬದಕ್ಕೆ ಸಾಂತ್ವನ ಹೇಳಲು ತೆರಳುತಿದ್ದವರ ಕಾರು ಅಪಫಾತ. ಇತ್ತಿಚಿಗೆ ಮೃತರಾದ ಸಚಿವ ಉಮೇಶ ಕತ್ತಿ ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಲು ಹೊರಟಿದ್ದ ಉಪ್ಪಾರ ಸಮಾಜದ ಪ್ರಭಾವಿ ಹಿರಿಯ ಮುಖಂಡ, ಜಿಲ್ಲಾ ಪರಿಷತ್ ಮಾಜಿ ಸದಸ್ಯ, ಕತ್ತಿ ಕುಟುಂಬದ ಆಪ್ತರಾಗಿದ್ದ ದಿವಂಗತ ದುಂಡಪ್ಪ ಚೌಕಶಿ ಅವರ ಸಹೋದರ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯೆ ಪತಿ ಕಲ್ಲಪ್ಪ ಚೌಕಶಿ, ಗೋಕಾಕ ತಾಲೂಕು ಪಂಚಾಯತಿ ಮಾಜಿ ಸದಸ್ಯರಿಬ್ಬರಾದ ನಿಂಗಪ್ಪ …
Read More »ಉಮೇಶ್ ಕತ್ತಿ ಸಮಾಧಿಗೆ ಪೂಜೆ- ಗುಟ್ಕಾ ಪ್ಯಾಕೆಟ್ ಇಟ್ಟು ನಮನ
ಚಿಕ್ಕೋಡಿ: ಹೃದಯಾಘಾತದಿಂದ ಸಾವನ್ನಪ್ಪಿದ ಉಮೇಶ್ ಕತ್ತಿ(Umesh Katti) ಸಮಾಧಿಗೆ ಕುಟುಂಬಸ್ಥರು ಪೂಜೆ ನೆರವೇರಿಸಿ ಅಂತಿಮ ವಿಧಿ ವಿಧಾನವನ್ನು ಇಂದು ಪೂರೈಸಿದರು. ನಿನ್ನೆ ಬೆಳಗಾವಿ(Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ಗದ್ದೆಯಲ್ಲಿ ತಂದೆ ತಾಯಿ ಸಮಾಧಿ ಪಕ್ಕವೇ ಅವರ ಅಂತ್ಯಕ್ರಿಯೆ ನಡೆದಿತ್ತು. ಸಮಾಧಿಗೆ ತೆರಳಿ ಪುತ್ರ ನಿಖಿಲ್ ಕತ್ತಿ, ಅಳಿಯ ನಿತಿನ್ ಪ್ರಭುದೇವ ಅವರು ಪುರೋಹಿತರ ಮಾರ್ಗದರ್ಶನದಂತೆ ಪೂಜೆ ಸಲ್ಲಿಸಿದರು. ಸಮಾಧಿಗೆ ಪೂಜೆ ಮಾಡಿ ಸಮಾಧಿಯ ಮೇಲೆ ಅವರಿಷ್ಟದ ತಿಂಡಿ, …
Read More »ಉಮೇಶ್ ಕತ್ತಿ ಜೀವನದ ಕುರಿತು ಪುಸ್ತಕ ಹೊರತರಬೇಕು: ಅರುಣ್ ಸಿಂಗ್
ಬೆಳಗಾವಿ: ಅರಣ್ಯ ಸಚಿವರಾಗಿದ್ದ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಸಚಿವರಾದ ಡಾ. ಕೆ. ಸುಧಾಕರ್, ಮುನಿರತ್ನ ಭೈರತಿ ಬಸವರಾಜ ಸೇರಿದಂತೆ ಹಲವು ಗಣ್ಯರು ಬೆಲ್ಲದ ಬಾಗೇವಾಡಿಯ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿರುವ ನಿವಾಸದಲ್ಲಿ ಉಮೇಶ್ ಕತ್ತಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಗಣ್ಯರು, ಉಮೇಶ್ ಕತ್ತಿ ಅವರ ಪತ್ನಿ …
Read More »ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಗೆ ಆಗ್ರಹ
ಬೆಳಗಾವಿ: ರಾಜ್ಯದ ದೈಹಿಕ ಶಿಕ್ಷಣ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ಆದೇಶವನ್ನು ಬೇಗನೇ ನೀಡಬೇಕು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಘಟಕದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ …
Read More »‘ಸೈನಿಕರ ಸಾಹಸ ಯುವಕರಿಗೆ ಪ್ರೇರಣೆ’
ಸವದತ್ತಿ: 1965ರ ಸೆಪ್ಟೆಂಬರ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಆಧೀನಕ್ಕೊಳಪಟ್ಟ ಮಹಾರಾಜ ಕೆ ಗ್ರಾಮವನ್ನು ಯುದ್ಧದಿಂದ ಮರಳಿ ಪಡೆಯುವ ಸಂದರ್ಭದಲ್ಲಿ ಕರ್ನಲ್ ಹನಬರಲಾಲ್ ಮೆಹ್ತಾ, ಸುಬೇದಾರ ನಂಬಿಯಾರ್, ಸಿಪಾಯಿ ಕನ್ನನ್, ಸಿ.ಬಿ. ಪಾಟೀಲ ಸೇರಿ ಹುತಾತ್ಮರಾದ ಯೋಧರಿಗೆ ಗುರುವಾರ ನವಿಲುತೀರ್ಥದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ನಾಲ್ಕನೇ ಮದ್ರಾಸ್ ಬಟಾಲಿಯನ್‍ದಲ್ಲಿ ಸೇವೆ ಸಲ್ಲಿಸಿದ 55 ಮಾಜಿ ಸೈನಿಕರು ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ರೇಣುಕಾದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಕಾರ್ಗಿಲ್, ಪಂಜಾಬ ಸುವರ್ಣ ಸೌಧದಲ್ಲಿ …
Read More »