Breaking News

ಬೆಳಗಾವಿ

ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಕೊಳೆತ ಸ್ಥಿತಿಯಲ್ಲಿ ಯುವಕನೋರ್ವ ಶವ ಪತ್ತೆ

ಕೊಳೆತ ಸ್ಥಿತಿಯಲ್ಲಿ ಯುವಕನೋರ್ವ ಶವ ಪತ್ತೆಯಾಗಿರುವ ಘಟನೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಸುನೀಲ ಸಾಳುಂಕೆ ಎಂಬ ಯುವಕನ ಶವ ಪತ್ತೆಯಾಗಿದೆ.ಕಳೆದ ರವಿವಾರ ಮುಂಜಾನೆ ರವಿವಾರದಂದು ಮುಂಜಾನೆ ಕೆಲಸಕ್ಕೆ ಹೋಗುತ್ತೇನೆ ಎಂದು ತಾಯಿಗೆ ಹೇಳಿ ಹೊಗಿದ್ದ ಸುನೀಲ ಇಂದು ಕರೋಶಿ ಗ್ರಾಮದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.   ಸ್ಥಳಕ್ಕೆ ಚಿಕ್ಕೋಡಿ ಪೊಲೀಸ್’ರು ಭೇಟಿಯನ್ನು ನೀಡಿ ಪ್ರಕರಣದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದಾನೆ‌.ಚಿಕ್ಕೋಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್: ಆರು ಜನ ವಶಕ್ಕೆ

ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು‌ ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ ಬೋರಲಿಂಗಯ್ಯ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ 6 ರಿಂದ 7 ಜನರ ತಂಡದಿಂದ ಇಬ್ಬರ ಹತ್ಯೆ ಮಾಡಲಾಗಿತ್ತು. ನಾನು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಮಾರಿಹಾಳ ಸಿಪಿಐ ನೇತೃತ್ವದಲ್ಲಿ …

Read More »

ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವೂ ಲಾಗ ಹೊಡಿಯುತ್ತೀರಿ: ಯತ್ನಾಳ್​

ಬೆಳಗಾವಿ: ಬೊಮ್ಮಾಯಿಯವರೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ. ಇಲ್ಲವಾದ್ರೆ ನೀವು ಪರ್ಮನೆಂಟ್ ಆಗಿ ಮಾಜಿ ಮುಖ್ಯಮಂತ್ರಿ ಆಗ್ತೀರಿ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿದರು. ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಪಂಚಮಸಾಲಿ ಲಿಂಗಾಯತ ‌ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದರು. ಬೊಮ್ಮಾಯಿಯವರೇ ಬಿಎಸ್‌ವೈ ಜೊತೆ ತಿರುಗಾಡಿದ್ರೆ ನೀವು ಲಾಗ ಹೊಡೆಯುತ್ತೀರಿ. …

Read More »

ನಿತ್ಯ ಒಂದೂವರೆ ತಾಸು ಮೊಬೈಲ್‌, ಟಿ.ವಿ ಬಂದ್‌- ಡಿಜಿಟಲ್ ಲಾಕ್‌ಡೌನ್ ಏನಕ್ಕೆ?

ಬೆಳಗಾವಿ: ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಹೊರತಂದು, ಕಲಿಕೆ ಯತ್ತ ಆಕರ್ಷಿಸಲು ಇಲ್ಲೊಂದು ಗ್ರಾಮದಲ್ಲಿ ‘ಡಿಜಿಟಲ್‌ ಲಾಕ್‌ಡೌನ್‌’ ಘೋಷಿಸಲಾಗಿದೆ. ನಿತ್ಯ ಸಂಜೆ 7ರಿಂದ 8.30ರವರೆಗೆ ಮೊಬೈಲ್‌, ಟಿ.ವಿ ಬಳಕೆ ನಿಷೇಧಿಸಲಾಗಿದೆ.   ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಡೇಗಾಂವ್‌ ತಾಲ್ಲೂಕಿನ ಮೋಹಿತೆ ವಡಗಾಂವ ಗ್ರಾಮಸ್ಥರು ಇಂತಹ ನಿರ್ಣಯ ಕೈಗೊಂಡಿದ್ದಾರೆ. ಆ.14ರಿಂದ ಹೊಸ ಪದ್ಧತಿ ಜಾರಿಯಾಗಿದ್ದು, ಸಂಜೆ ಹೊತ್ತಿನಲ್ಲಿ ಮಕ್ಕಳು ಮೊಬೈಲ್‌ ಬದಿಗಿರಿಸಿ ಅಭ್ಯಸಿಸುತ್ತಿದ್ದಾರೆ. ಗ್ರಾಮದ ಜನಸಂಖ್ಯೆ ಸುಮಾರು 3 ಸಾವಿರ. 450 ಮಕ್ಕಳು …

Read More »

ವಿದ್ಯುತ್‌ ತಂತಿ ತುಳಿದು ಸುಟ್ಟು ಕರಕಲಾದ ವ್ಯಕ್ತಿ

ಖಾನಾಪುರ: ಕಳೆದ 26 ದಿನಗಳ ಹಿಂದೆ ಮೇವು ತರಲು ಹೊಲಕ್ಕೆ ತೆರಳಿದ್ದ ತಾಲ್ಲೂಕಿನ ಲಕ್ಕೇಬೈಲ ಗ್ರಾಮದ ರಾಮಚಂದ್ರ ಅಂಧಾರೆ (36) ಅವರ ಅಸ್ತಿಪಂಜರ ಗುರುವಾರ ಪತ್ತೆಯಾಗಿದೆ. ಪೊಲೀಸರು ‘ಹೆಸ್ಕಾಂ’ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.   ಹೊಲದಲ್ಲಿ ಹರಿದುಬಿದ್ದ ವಿದ್ಯುತ್‌ ತಂತಿ ಸ್ಪರ್ಶದಿಂದಾಗಿ ಈ ವ್ಯಕ್ತಿ ಮೃತಪಟ್ಟಿದ್ದಾರೆ. ವಿದ್ಯುತ್‌ ಪ್ರವಹಿಸಿದ ಕಾರಣ ಇಡೀ ದೇಹ ಸುಟ್ಟು ಕರಕಲಾಗಿದೆ. ದೇಹದ ಮೂಳೆಗಳು ಹಾಗೂ ತಲೆಬುರುಡೆ ಪ್ರತ್ಯೇಕವಾಗಿ ಸಿಕ್ಕಿವೆ. ಗ್ರಾಮದಿಂದ ದೂರದಲ್ಲಿ ಕಬ್ಬಿನ …

Read More »

8ರಂದು ಅಣ್ಣಾಸಾಹೇಬ ಜೊಲ್ಲೆ ಜನ್ಮದಿನ: 2,000 ಅಂಗವಿಕಲರಿಗೆ ಸಲಕರಣೆ ವಿತರಣೆ

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ‘ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಜನ್ಮದಿನದ ಅಂಗವಾಗಿ ಅ. 8ರಂದು 2,000 ಅಂಗವಿಕಲರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಗುವುದು’ ಎಂದು ಯಕ್ಸಂಬಾದ ಬಸವಜ್ಯೋತಿ ಯುವ ಫೌಂಡೇಷನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.   ಪಟ್ಟಣದಲ್ಲಿ ಗುರುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ‘ಜೊಲ್ಲೆ ಪರಿವಾರದಲ್ಲಿ ಸಮಾಜ ಸೇವೆಯ ಮೂಲಕವೇ ಜನ್ಮ ದಿನ ಆಚರಿಸಿಕೊಳ್ಳುವ ರೂಢಿ ಇದೆ. ಈ ಬಾರಿ ₹ 75 ಲಕ್ಷ ಮೌಲ್ಯದ ಸಲಕರಣೆಗಳ ವಿತರಣೆ, …

Read More »

ಬೆಳಗಾವಿಯ ಓಲ್ಡ್ ಪಿಬಿ ರಸ್ತೆಯಲ್ಲಿ ಯಮರೂಪಿ ತಗ್ಗು-ಗುಂಡಿಗಳು

ಬೆಳಗಾವಿಯ ಓಲ್ಡ್ ಪಿಬಿ ರಸ್ತೆಯ ಶಿವಾಜಿ ಮಹಾರಾಜ ಓವರ್ ಬ್ರಿಡ್ಜ್ ಮೇಲಿನ ರಸ್ತೆಯ ಮೇಲೆ ಸಾಕಷ್ಟು ತಗ್ಗು ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಸಾಕಷ್ಟು ತೊಂದರೆ ಅನಿಭವಿಸುತ್ತಿದ್ದಾರೆ. ಇದನ್ನು ಲಕ್ಷಿಸದ ಅಧಿಕಾರಿಗಳ ವಿರುದ್ಧ ಸ್ಥಳೀಯರು ರಸ್ತೆಯ ಗುಂಡಿಗಳಲ್ಲಿ ತೆಂಗಿನ ಸಸಿಯನ್ನು ನೆಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಯೋಜನೆಯಡಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ ಎಂದು ರಾಜ್ಯ ಸರಕಾರ ಹೇಳುತ್ತಲೇ ಬಂದಿದೆ. ಆದರೆ ಬೆಳಗಾವಿ ನಗರದ …

Read More »

ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಗೆ ಬರದಿದ್ದರೆ ಅವರ ಕಾರ್ಖಾನೆಗೇ ಹೋಗಿ ಸಭೆ ಮಾಡುತ್ತೇವೆ: ನಿತೇಶ್ ಪಾಟೀಲ

ಬೆಳಗಾವಿ ಜಿಲ್ಲೆಯಲ್ಲಿ ೨೯ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಆಡಳಿತ ಮಂಡಳಿಯವರನ್ನು ಸಭೆಗೆ ಕರೆದಿದ್ದೇವೆ ಆದರೆ ಈ ಕುರಿತಂತೆ ಆದೇಶ ಮಾಡಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಾರಣಾಂತರದಿAದ ಸಭೆಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ ಹೇಳಿದರು. ನಗರದಲ್ಲಿ ಇಂದು ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ರೈತರ ಸಮಸ್ಯೆಗಳ ಕುರಿತು ವಿವಿಧ ರೈತ ಸಂಘನೆಯ ಮುಖಂಡರ ಜತೆಗೆ ಕರೆಯಲಾದ ಸಭೆಯನ್ನು ಉದ್ದೇಶಿಸಿ ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ …

Read More »

ಸಾವಿನಲ್ಲೂ ಸಾರ್ಥಕತೆ: ಇಬ್ಬರು ಅಂಧರ ಬಾಳಿಗೆ ಬೆಳಕಾದ ರುದ್ರಮ್ಮ ಹೊಂಗಲ್

ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಹಿರಿಯ ಜೀವಿ ರುದ್ರಮ್ಮ ಬಸವಣೆಪ್ಪ ಹೊಂಗಲ(ಕುದರಿ) ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಒಕ್ಕುಂದ ಗ್ರಾಮದ 93 ವರ್ಷದ ರುದ್ರಮ್ಮ ಹೊಂಗಲ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಅವರ ಕುಟುಂಬಸ್ಥರ ನಿರ್ಧಾರದಂತೆ‌ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೇತ್ರಗಳನ್ನು ದಾನ …

Read More »

ಟನ್‌ ಕಬ್ಬಿಗೆ 2800 ರೂ. ದರ

ಕಾಗವಾಡ: ಪ್ರಸಕ್ತ ಕಬ್ಬು ನುರಿಸುವ ಹಂಗಾಮಿನಲ್ಲಿ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ಪ್ರತಿ ಟನ್‌ ಕಬ್ಬಿಗೆ 2800 ರೂ. ನೀಡುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೆಂಪವಾಡದ ಅಥಣಿ ಶುಗರ್ಸ್‌ ಲಿ., ಸಕ್ಕರೆ ಕಾರ್ಖಾನೆ ಅಧ್ಯಕ್ಷರು ಹಾಗೂ ಶಾಸಕ ಶ್ರೀಮಂತ ಪಾಟೀಲ ಘೋಷಣೆ ಮಾಡಿದರು.   ಬುಧವಾರ ಅಥಣಿ ಶುಗರ್ಸ್‌ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಅವರು ಮಾತನಾಡಿದರು. 2022-23ನೇ ಸಾಲಿನ ಹಂಗಾಮಿನಲ್ಲಿ ನಮ್ಮ ಕಾರ್ಖಾನೆ 20 ಲಕ್ಷ ಟನ್‌ ಕಬ್ಬು …

Read More »