Breaking News

ಬೆಳಗಾವಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯಿಂದ ಶನಿವಾರ ಬಸವ ಜಯಂತಿ ಪೂರ್ವಭಾವಿ ಸಭೆ

ಬೆಳಗಾವಿ: ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕವು ಬಸವ ಜಯಂತಿಯ ಅಂಗವಾಗಿ  ಫೆ.28ರಂದು ಸಂಜೆ 4 ಗಂಟೆಗೆ ಪೂರ್ವಭಾವಿ ಸಭೆ ಹಮ್ಮಿಕೊಂಡಿದೆ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ  ಜಯಂತಿಯನ್ನು ವೈಭವದಿಂದ ಆಚರಿಸುವ ಉದ್ದೇಶದಿಂದ ರೂಪರೇಷೆಗಳು, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ, ಸಮಾಜಮುಖಿ ಚಟುವಟಿಕೆ ಹಾಗೂ ವಿವಿಧ ಸಮಿತಿ ರಚನೆ ಕುರಿತು ಚರ್ಚಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ …

Read More »

ಅನುದಾನ ದುಂದುವೆಚ್ಚ ಕಾನೂನು ಕ್ರಮಕ್ಕೆ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹ

ಬೆಳಗಾವಿ: ನಗರದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಪ್ರವಾಸೋದ್ಯಮ ಇಲಾಖೆ ಬಿಡುಗಡೆ ಮಾಡಿರುವ 50ಲಕ್ಷ ರೂ. ಅನುದಾನ ದುಂದುವೆಚ್ಚವಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಕಾನೂನು ಕ್ರಮವಹಿಸಬೇಕು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಗ್ರಹಿಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ವಿವಿಧ ಕನ್ನಡಪರ ಸಂಘಟನೆ ಪದಾಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ ಪ್ರವಾಸೋದ್ಯಮ ಇಲಾಖೆ …

Read More »

ಜಿಲ್ಲಾ ದಿನಪತ್ರಿಕಾ ವಿತರಕರ ಸಂಘದಿಂದ ಪತ್ರಿಕಾ ವಿತರಕರ ಆರನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ

ಬೆಳಗಾವಿ: ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ, ಜಿಲ್ಲಾ ದಿನಪತ್ರಿಕಾ ವಿತರಕರ ಸಂಘದಿಂದ ಪತ್ರಿಕಾ  ವಿತರಕರ ಆರನೇ ರಾಜ್ಯ ಸಮ್ಮೇಳನದ ಪೂರ್ವಭಾವಿ ಸಭೆ ಬುಧವಾರ ಜರುಗಿತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ವಿತರಕರ ಸ್ವಾಗತಕ್ಕೆ ಮಾಡಿಕೊಂಡಿರುವ ಸಿದ್ಧತೆ, ಮಾಡಿಕೊಂಡಿರುವ ಸೌಕರ್ಯಗಳು, ಸಿಗಲಿರುವ ಸೌಲಭ್ಯಗಳು ಹಾಗೂ ಸಮ್ಮೇಳನದ ಯಶಸ್ವಿಗೆ ಸ್ಥಳೀಯ ಪತ್ರಿಕಾ ವಿತರಕರು ವಹಿಸಲಿರುವ ಜವಾಬ್ದಾರಿಗಳ ಕುರಿತು ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಶಂಭುಲಿಂಗ ಚಿತ್ರದುರ್ಗ, ಮೊಳಕಾಲ್ಮೂರು …

Read More »

ಗೃಹರಕ್ಷಕ ದಳ ಸಿಬ್ಬಂದಿ ಹೊಳೆಪ್ಪ ನೇಸರಗಿಗೆ ಮುಖ್ಯ ಮಂತ್ರಿಗಳ ಪದಕ ಪ್ರದಾನ

ಬೆಳಗಾವಿ: ಜಿಲ್ಲೆಯ ಗೃಹರಕ್ಷಕ ದಳ ಸಿಬ್ಬಂದಿ ಹೊಳೆಪ್ಪ ನೇಸರಗಿಗೆ ಅತ್ಯುತ್ತಮ ಸಾರ್ವಜನಿಕ ಸೇವೆ ವರ್ಗದಲ್ಲಿ ಬುಧವಾರ ಬೆಂಗಳೂರಿನ ಬನ್ನೇರುಘಟ್ಟದ ಆರ್.ಎ.ಮುಂಡ್ಕೂರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತರಬೇತಿ ಅಕಾಡೆಮಿಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಖ್ಯ ಮಂತ್ರಿಗಳ ಪದಕ ಪ್ರದಾನ ಮಾಡಲಾಯಿತು. ಕರ್ನಾಟಕ ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಸಿಬ್ಬಂದಿಗಳಿಗೆ ಗೃಹ ಸಚಿವ ಜಿ. ಪರಮೇಶ್ವರ್, ಪದಕ ಪ್ರಧಾನ ಮಾಡಿದರು. ಅದರಲ್ಲಿ ಹೊಳೆಪ್ಪ …

Read More »

ಕಿತ್ತೂರು ಅಭಿವೃದ್ಧಿಗೆ ಶಾಸಕ ಬಾಬಾಸಾಹೇಬ್ ಪಾಟೀಲ್ ಹೊಸ ಭಾಷ್ಯ: 36.75 ಕೋಟಿ ರೂ. ವೆಚ್ಚದ ಶ್ರಮಿಕ ವಸತಿ ಶಾಲೆಗೆ ಚಾಲನೆ

ಕಿತ್ತೂರು ಕ್ಷೇತ್ರದ ಕಾರ್ಮಿಕರ ಮಕ್ಕಳ ಪಾಲಿಗೆ ಹೊಸ ಆಶಾಕಿರಣ ಮೂಡಿದೆ. ಶಾಸಕ ಬಾಬಾಸಾಹೇಬ್ ಪಾಟೀಲ್ ಅವರ ಸತತ ಪ್ರಯತ್ನದ ಫಲವಾಗಿ, 36.75 ಕೋಟಿ ರೂಪಾಯಿ ವೆಚ್ಚದ ಹೈಟೆಕ್ ‘ಶ್ರಮಿಕ ವಸತಿ ಶಾಲೆ’ ನಿರ್ಮಾಣಕ್ಕೆ ಅದ್ಧೂರಿ ಭೂಮಿ ಪೂಜೆ ನೆರವೇರಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಕೈಗಾರಿಕಾ ಪ್ರದೇಶದ ಸಮೀಪ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನಿರ್ಮಾಣವಾಗಲಿರುವ ಶ್ರಮಿಕ ವಸತಿ ಶಾಲೆಯ ಭೂಮಿ ಪೂಜಾ ಸಮಾರಂಭ …

Read More »

ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ಶಾಲೆಗಳಿಗೆ ‘ಶಾಲಾ ಎಕ್ಸಲೆನ್ಸ್ ಪ್ರಶಸ್ತಿ’ ಗೌರವ: ಶಾಂತಿ ವೃದ್ಧಾಶ್ರಮದಲ್ಲಿ ಅದ್ಧೂರಿ ಸಮಾರಂಭ

ಬೆಳಗಾವಿಯ ಪ್ರತಿಷ್ಠಿತ ಶಾಂತಿ ವೃದ್ಧಾಶ್ರಮದ ವತಿಯಿಂದ ನೀಡಲಾಗುವ 2025-26ನೇ ಸಾಲಿನ ‘ಸ್ಕೂಲ್ ಎಕ್ಸಲೆನ್ಸ್ ಅವಾರ್ಡ್’ ಅನ್ನು ಕ್ಯಾಂಟೋನ್ಮೆಂಟ್ ಬೋರ್ಡ್ ಆಡಳಿತದ ಶಾಲೆಗಳಿಗೆ ಪ್ರದಾನ ಮಾಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ನೂರಾರು ವರ್ಷಗಳಿಂದ ಅಪಾರ ಸೇವೆ ಸಲ್ಲಿಸುತ್ತಿರುವ ಈ ಸಂಸ್ಥೆಗಳ ಶ್ರೇಷ್ಠತೆಯನ್ನು ಗುರುತಿಸಿ ಇಂದು ಈ ವಿಶೇಷ ಗೌರವ ಸಮರ್ಪಿಸಲಾಯಿತು.” ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಬೆಳಗಾವಿ ಕ್ಯಾಂಟೋನ್ಮೆಂಟ್ ಬೋರ್ಡ್ ನಡೆಸುತ್ತಿರುವ ವಿವಿಧ ಶಾಲೆಗಳಿಗೆ ಅವುಗಳ ಗಣನೀಯ ಶೈಕ್ಷಣಿಕ ಸಾಧನೆಗಾಗಿ ‘ಶಾಲಾ …

Read More »

ಆರ್.ಎಸ್.ಎಸ್. ಮುಖಂಡನ ಮೇಲೆ ಹಲ್ಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ ಕೋಮು ವಿವಾದವಲ್ಲ, ಇದು ಅಧಿಕಾರಕ್ಕಾಗಿ ನಡೆದ ಅಂತರ್ಯುದ್ಧ!

ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ನಡೆದ ಆರ್‌ಎಸ್‌ಎಸ್ ತಾಲೂಕಾಧ್ಯಕ್ಷ ದತ್ತಾ ಥೋರಾವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಈಗ ಸಂಚಲನ ಮೂಡಿಸಿದೆ. ಆರಂಭದಲ್ಲಿ ಈ ಘಟನೆ ಕೋಮು ಸಂಘರ್ಷದ ಬಣ್ಣ ಪಡೆದಿತ್ತಾದರೂ, ಈಗ ಪೊಲೀಸರು ಹೊರಹಾಕಿರುವ ಸತ್ಯಾಂಶಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಕೇವಲ ವರ್ಚಸ್ಸು ಮತ್ತು ಅಧಿಕಾರದಾಸೆಗಾಗಿ ಸ್ವಪಕ್ಷೀಯರೇ ಸುಪಾರಿ ನೀಡಿ ಕೊಲೆಗೆ ಸಂಚು ರೂಪಿಸಿದ್ದು ಬಯಲಾಗಿದೆ. ಹುಕ್ಕೇರಿ ತಾಲೂಕಿನ ಆರ್‌ಎಸ್‌ಎಸ್ ಮುಖಂಡರಾದ ದತ್ತಾ ಥೋರಾವತ್ ಹಾಗೂ ಸಮೀರ್ ಪಾಟೀಲ್ ನಡುವೆ ಮೊದಲಿನಿಂದಲೂ …

Read More »

ಪಕ್ಷದ ವಿಚಾರ ಬಂದಾಗ ಮಾಜಿ ಸಚಿವ ಎ.ಬಿ. ಪಾಟೀಲ ಹಾಗೂ ನಾನು ಒಂದೇ: ಸಚಿವ ಸತೀಶ್‌ ಜಾರಕಿಹೊಳಿ

ಬೆಳಗಾವಿ: ಸಂಘ- ಸಂಸ್ಥೆ ವಿಚಾರ ಬಂದಾಗ ಎ. ಬಿ. ಪಾಟೀಲ ಹಾಗೂ ನಾವು ಬೇರೆ ಬೇರೆ, ಆದರೆ ಪಕ್ಷದ ವಿಚಾರ ಬಂದಾಗ ನಾವು ಅವರು ಒಂದೇ ಎಂದು ಲೋಕೋಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯವಾಗಿ ಸಂಘ-ಸಂಸ್ಥೆಗಳ ಚುನಾವಾಣೆ ಬಂದಾಗ ಮಾಜಿ ಸಚಿವ ಎ.ಬಿ.ಪಾಟೀಲ ಅವರು ಬೇರೆ ಬೇರೆಯಾಗಿದ್ದೇವೆ ಹೊರತು ಪಕ್ಷದ ವಿಚಾರ ಬಂದಾಗ ನಾವು ಅವರು ಕೂಡಿ ಪ್ರಚಾರ ಮಾಡುತ್ತೇವೆ. ಈ ಕುರಿತು …

Read More »

ಧನಲಕ್ಷ್ಮೀ ಕಾರ್ಖಾನೆಯ ಕಬ್ಬು ನುರಿಸುವ ಹಂಗಾಮು ಗುರುವಾರ ಮುಕ್ತಾಯ

ಧನಲಕ್ಷ್ಮೀ ಕಾರ್ಖಾನೆಯ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲ ಕಬ್ಬು ನೊಂದಾಯಿಸಿದ ರೈತ ಬಾಂಧವರು ಹಾಗೂ ಶೇರು ಸದಸ್ಯರು ಗುರುವಾರ ದಿನಾಂಕ : 26-02-2026 ರಂದು ರಾತ್ರಿ 8:00 ಗಂಟೆಗೆ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ಮುಕ್ತಾಯಗೊಳಿಸಲು ತೀರ್ಮಾನಿಸಲಾಗಿದೆ. ಕಾರಣ ರೈತರು ಕಬ್ಬನ್ನು ಕಟಾವು ಮಾಡಿ ನಿಗದಿಪಡಿಸಿದ ದಿನಾಂಕದೊಳಗಾಗಿ ಕಾರ್ಖಾನೆಗೆ ಸರಬರಾಜು ಮಾಡಬೇಕೆಂದು ತಿಳಿಯಪಡಿಸಲಾಗಿದೆ. ಸದರಿ ಅವಧಿಯ ಒಳಗಾಗಿ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡದೇ ಇರುವ ಕಬ್ಬಿಗೆ ಕಾರ್ಖಾನೆಯವರು …

Read More »

ಘಟಪ್ರಭಾ ಕೆನಾಲ್‌ಗೆ ಸೇತುವೆ ನೆಲಸಮ ಸತೀಶ ಜಾತಕಿಹೋಳಿ ಪರಿಶೀಲನೆ

  ಸಂಕೇಶ್ವರ–ಯರಗಟ್ಟಿ ರಾಜ್ಯ ಹೆದ್ದಾರಿಯ ಘಟಪ್ರಭಾ ಪಟ್ಟಣದ ಸಮೀಪ, ಘಟಪ್ರಭಾ ಕೆನಾಲ್‌ಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಸೇತುವೆ ಗಂಭೀರ ಬಿರುಕು ಬಿಟ್ಟು ಸಂಚಾರಕ್ಕೆ ಯೋಗ್ಯವಲ್ಲದ ಸ್ಥಿತಿಗೆ ತಲುಪಿರುವುದರಿಂದ ಅದನ್ನು ನೆಲಸಮ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಸಚಿವ ಸತೀಶ ಜಾರಕಿಹೋಳಿ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಪರಿಶೀಲಿಸಿದರು. ಸಾರ್ವಜನಿಕರ ಸುರಕ್ಷತೆಯನ್ನು ಪ್ರಥಮ ಆದ್ಯತೆಯಾಗಿ ಪರಿಗಣಿಸಿ, ಅಂದಾಜು ರೂ. 5.00 ಕೋಟಿ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾರ್ಯವನ್ನು 45 ದಿನಗಳೊಳಗೆ …

Read More »