ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿ ಜಯೇಶ್ ಪೂಜಾರಿ ಕೈಗೆ ಮೊಬೈಲ್ ಫೋನ್ ಕೊಟ್ಟಿದ್ದು ಯಾರು? ಜೈಲಿನೊಳಗೆ ಮೊಬೈಲ್ ಫೋನ್ ಹೋಗಿದ್ದು ಹೇಗೆ? ಎಂಬ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ. ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ಶನಿವಾರ ಕರೆ ಮಾಡಿದ್ದ ಕೈದಿ, ತಾನು ಭೂಗತಪಾತಕಿ ದಾವೂದ್ ಇಬ್ರಾಹಿಂ ತಂಡದ ಸದಸ್ಯ, ₹100 ಕೋಟಿ ನೀಡುವಂತೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ …
Read More »ಆಕಸ್ಮಿಕ ಬೆಂಕಿ: ಉರಿದ ಲಾರಿ
ಚನ್ನಮ್ಮನ ಕಿತ್ತೂರು: ಸಮೀಪದ ಶಿವ ಪೆಟ್ರೋಲ್ ಪಂಪ್ ಬಳಿ ತಮಿಳನಾಡಿಗೆ ಸೇರಿದ ಲಾರಿಯೊಂದಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಿದೆ. ಪೊಟ್ರೋಲ್ ಪಂಪ್ ಸಮೀಪದಲ್ಲೇ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಭಯದ ವಾತಾವರಣ ಮನೆ ಮಾಡಿತು. ಮುಂಬೈಗೆ ಹೊರಟಿದ್ದ ಲಾರಿ ಚಾಲಕರು ಪಂಪ್ ಬಳಿ ವಿಶ್ರಾಂತಿಗಾಗಿ ತಂಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಾರಿಯಲ್ಲಿದ್ದ ಎಳನೀರು ಕಾಯಿಗಳೂ ಸುಟ್ಟಿವೆ. ಅಗ್ನಿಶಾಮಕ ದಳದವರು ಮತ್ತು ಪೊಲೀಸರು …
Read More »ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ತೆಲಸಂಗ: ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ 1979ನೇ ಬ್ಯಾಚಿನ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಶನಿವಾರ ನಡೆಯಿತು. ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುಭಾಸ ಸಜ್ಜನ, ‘ನಮ್ಮ ಶಿಕ್ಷಕರು ಕೇವಲ ಪಠ್ಯ ಬೋಧಿಸಲಿಲ್ಲ. ಜೀವನದಲ್ಲಿ ಎದುರಾಗಬಹುದಾದ ಕಷ್ಟ ಹೇಗೆ ಎದುರಿಸಬೇಕೆಂದು ಕಲಿಸಿದರು. ಮಾದರಿಯಾಗಿ ನಮ್ಮ ಬದುಕು ರೂಪಿಸಿದರು’ ಎಂದು ಸ್ಮರಿಸಿದರು. ಓಗೆಪ್ಪ ಅರಟಾಳ, ಸಾವಿತ್ರಿ ಹಿರೇಮಠ, ಉಮಾ ಪೋತದಾರ, ಶಾಲೆಯಲ್ಲಿ ತಾವು ಕಳೆದ ಬಾಲ್ಯದ ದಿನಗಳನ್ನು ಮೆಲಕು ಹಾಕಿದರು. …
Read More »ರಾಮದುರ್ಗ ಸರ್ಕಾರಿ ಶಾಲೆ ‘ಸ್ಮಾರ್ಟ್’
ರಾಮದುರ್ಗ: ಶಿಕ್ಷಕರು ಮನಸ್ಸು ಮಾಡಿದರೆ ಸಮುದಾಯದ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಯನ್ನೂ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು. ಇದಕ್ಕೆ ಉತ್ತಮ ಉದಾಹರಣೆ, ತಾಲ್ಲೂಕಿನ ಕುನ್ನಾಳ ಪ್ರಾಥಮಿಕ ಶಾಲೆ. 1926ರಲ್ಲಿ ಈ ಶಾಲೆ ಸ್ಥಾಪನೆಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ, ಶಾಲೆಗೆ ಹೈಟೆಕ್ ಸ್ಪರ್ಶ ಕೊಟ್ಟಿದ್ದಾರೆ. 1ರಿಂದ 8ನೇ ತರಗತಿಯಲ್ಲಿ 253 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಂಪ್ಯೂಟರ್ ಲ್ಯಾಬ್: ಈ ಶಾಲೆಯಲ್ಲಿ ಕಂಪ್ಯೂಟರ್ ಲ್ಯಾಬ್ …
Read More »ಮಿ ವಿವೇಕಾನಂದರು ಕೇವಲ ವ್ಯಕ್ತಿ ಅಲ್ಲ, ಅದೊಂದು ದಿವ್ಯ ಶಕ್ತಿ.:ವೈದ್ಯಾಧಿಕಾರಿ ಡಾ| ಭುವಿ
ಚಿಕ್ಕೋಡಿ: ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿ ಅಲ್ಲ, ಅದೊಂದು ದಿವ್ಯ ಶಕ್ತಿ. ಅವರು ಚಿಕ್ಯಾಗೊ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಕಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಭುವಿ ನುಡಿದರು. ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ಬೆಳಗಾವಿ, ಯುವ ಸಂಘಗಳ ಒಕ್ಕೂಟದ ತಾಲೂಕಾ ಘಟಕ, ಡಾ.ಅಂಬೇಡ್ಕರ ಕಲಾ ಮತ್ತು …
Read More »ಸಂತೋಷ್ ಖಂಡ್ರಿ ಗೋಕಾಕ ನಗರದ ಯುವಕರ ಕಣ್ಮಣಿ ನಿಧನ: ಸಂತಾಪ ಸೂಚಿಸಿದ ಜಾರಕಿಹೊಳಿ ಕುಟುಂಬ
ಗೋಕಾಕ: ಸಂತೋಷ್ ಖಂಡ್ರಿ ಗೋಕಾಕ ನಗರದ ಯುವಕರ ಕಣ್ಮಣಿ ಅನ್ಯಾಯದ ವಿರುದ್ಧ ಸಮರಕ್ಕೆ ಸಿದ್ದವಾಗುವ ಯುವಕ, ಇವರು ಹಾಗೂ ಸಂಗಡಿಗರೊಂದಿಗೆ ಶಬರಿ ಮಲೆ ಯಾತ್ರೆಗೆ ಗೋಕಾಕ ನಿಂದ ತೆರಳಿದ್ದರು, ಕೇರಳದ ಕಣ್ಣೂರು ರೈಲ್ವೇ ನಿಲ್ದಾಣದ ಬಳಿ ರೈಲ್ವೇ ಅಪಘಾತದಲ್ಲಿ ಇವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ, ಗೋಕಾಕ ನಗರದ ಬಿಜೆಪಿ ಕಾರ್ಯಕರ್ತರು, ಹಾಗೂ ಕರವೇ ಸ್ವಾಭಿಮಾನಿ ಬಣದ ಗೋಕಾಕ ತಾಲೂಕಾಧ್ಯಕ್ಷರಾಗಿ ಕೂಡ ಗುರುತಿಸಿ ಕೊಂಡಿದ್ದಾರೆ, ಸಾಹುಕಾರ ಮನೆತನದ ಚಿಕ್ಕವರು ಹಾಗೂ ದೊಡ್ಡವರ …
Read More »ಕೆಪಿಟಿಸಿಎಲ್ ಅಕ್ರಮ ಪರೀಕ್ಷೆ: ಬಂಧಿತರ ಸಂಖ್ಯೆ ಅರ್ಧ ಶತಕ
ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಲಿಖಿತ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದ ಮತ್ತೊಬ್ಬ ಅಭ್ಯರ್ಥಿಯನ್ನು ಗುರುವಾರ ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ಅರ್ಧ ಶತಕವಾಗಿದೆ. ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದರ್ಗಾಶಿರೂರ ಗ್ರಾಮದ ಶಿವರಾಜ್ ಲಕ್ಷ್ಮೀಪುತ್ರ ಪೊಲೀಸ್ ಪಾಟೀಲ್ (28) ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈವರೆಗೆ ಒಟ್ಟು 50 ಜನರನ್ನು ಬಂಧಿಸಿದಂತಾಗಿದೆ. 7 ಆಗಸ್ಟ್ 2022ರಂದು ನಡೆದಿದ್ದ ಪರೀಕ್ಷೆ ಬರೆದಿದ್ದರು. ಪರೀಕ್ಷೆ ವೇಳೆ …
Read More »ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದ ಪಂಚಮಸಾಲಿ ಸಮಾಜ
ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆ ನಾಳೆ(ಜ.13) ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಪಂಚಮಸಾಲಿ ಸಮಾಜ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಶಿಗ್ಗಾಂವಿಯ ರಾಣಿ ಚೆನ್ನಮ್ಮ ಸರ್ಕಲ್ನಿಂದ ಬೆಳಗ್ಗೆ 10 ಗಂಟೆಗೆ ಸಿಎಂ ನಿವಾಸದವರೆಗೂ ಬೃಹತ್ ಪಾದಯಾತ್ರೆ ನಡೆಯಲಿದೆ. ಪಂಚಮಸಾಲಿ ಸಮಾಜದ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ, ಅರವಿಂದ ಬೆಲ್ಲದ, ಶಾಸಕಿ ಲಕ್ಷ್ಮಿ …
Read More »ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿಯೂ ಧರ್ಮ ದಂಗಲ್ ಶುರು
ಬೆಳಗಾವಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿಯೂ ಧರ್ಮ ದಂಗಲ್ ಶುರುವಾಗಿದ್ದು, ಇಲ್ಲಿಯ ಸಾರಥಿ ನಗರದಲ್ಲಿ ವಸತಿ ನಿವೇಶನಕ್ಕೆ ಅನುಮತಿ ಪಡೆದು ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಅನ ಧಿಕೃತ ಮಸೀದಿ ತೆರವಿಗೆ ಪಟ್ಟು ಹಿಡಿದಿವೆ. ಬೆಳಗಾವಿ ಗ್ರಾಮಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಾರಥಿ ನಗರದಲ್ಲಿ ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಖಾಸಗಿ ಲೇಔಟ್ ನಿರ್ಮಿಸಲಾಗಿದೆ. ನಿವೇಶನ ಸಂಖ್ಯೆ …
Read More »ಬಿಜೆಪಿ ಪಾಪದ ಕೊಳೆ’ ತೊಳೆದ ಸಿದ್ದರಾಮಯ್ಯ, ಡಿಕೆಶಿ
ಬೆಳಗಾವಿ: ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿರುವ ವೀರಸೌಧದ ಆವರಣದಲ್ಲಿ ಬುಧವಾರ, ಕಾಂಗ್ರೆಸ್ ‘ಪ್ರಜಾಧ್ವನಿ’ ಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಾಲನೆ ನೀಡಿದರು. ‘ಬಿಜೆಪಿ ಪಾಪದ ಕೊಳೆ’ ತೊಳೆಯುವ ಸಂಕೇತವಾಗಿ ಎಲ್ಲ ನಾಯಕರೂ ಪೊರಕೆ ಹಿಡಿದು, ನೀರು ಹಾಕಿ ರಸ್ತೆಯಲ್ಲಿ ಗುಡಿಸಿದರು. 1924ರಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನದ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಏಕಮಾತ್ರ ಅಧಿವೇಶನವದು. ಅದರ ನೆನಪಿಗಾಗಿ ವೀರಸೌಧ ನಿರ್ಮಿಸಲಾಗಿದೆ. ಐತಹಾಸಿಕ …
Read More »
Laxmi News 24×7