Breaking News

ರಾಮದುರ್ಗ

ರಾಮದುರ್ಗ ಸರ್ಕಾರಿ ಶಾಲೆ ‘ಸ್ಮಾರ್ಟ್‌’

ರಾಮದುರ್ಗ: ಶಿಕ್ಷಕರು ಮನಸ್ಸು ಮಾಡಿದರೆ ಸಮುದಾಯದ ಸಹಭಾಗಿತ್ವದೊಂದಿಗೆ ಸರ್ಕಾರಿ ಶಾಲೆಯನ್ನೂ ಮಾದರಿಯಾಗಿ ಅಭಿವೃದ್ಧಿಪಡಿಸಬಹುದು. ಇದಕ್ಕೆ ಉತ್ತಮ ಉದಾಹರಣೆ, ತಾಲ್ಲೂಕಿನ ಕುನ್ನಾಳ ಪ್ರಾಥಮಿಕ ಶಾಲೆ. 1926ರಲ್ಲಿ ಈ ಶಾಲೆ ಸ್ಥಾಪನೆಯಾಗಿದೆ. ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಳೆಯ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು ಹಾಗೂ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ, ಶಾಲೆಗೆ ಹೈಟೆಕ್‌ ಸ್ಪರ್ಶ ಕೊಟ್ಟಿದ್ದಾರೆ. 1ರಿಂದ 8ನೇ ತರಗತಿಯಲ್ಲಿ 253 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಂಪ್ಯೂಟರ್‌ ಲ್ಯಾಬ್‌: ಈ ಶಾಲೆಯಲ್ಲಿ ಕಂಪ್ಯೂಟರ್‌ ಲ್ಯಾಬ್‌ …

Read More »

ಜಾತ್ರೆ: ವಸ್ತುಪ್ರದರ್ಶನಕ್ಕೆ ಚಾಲನೆ

ರಾಮದುರ್ಗ: ‘ಜಾತ್ರೆಗಳಲ್ಲಿ ಆಯೋಜಿಸುವ ವಸ್ತುಪ್ರದರ್ಶನ ರೈತರಿಗೆ ಮತ್ತು ಯಾತ್ರಿಕರಿಗೆ ಉಪಯುಕ್ತವಾಗುವಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು. ಕಾಟಾಚಾರದ ವಸ್ತುಪ್ರದರ್ಶನ ಮಾಡಬಾರದು’ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.   ತಾಲ್ಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಗುರುವಾರ ಗ್ರಾಮ ಪಂಚಾಯ್ತಿ ಏರ್ಪಡಿಸಿದ್ದ ವಸ್ತುಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ಕೃಷಿಗೆ ಉತ್ತೇಜನ ನೀಡುವಂಥ ಮಳಿಗೆಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕೃಷಿ , ತೋಟಗಾರಿಕೆ, ಅರಣ್ಯ ಇಲಾಖೆಗಳು ರೈತರಿಗೆ ನೂತನ ತಾಂತ್ರಿಕತೆಯ ಪರಿಚಯ ಮಾಡಿಕೊಡಬೇಕು’ ಎಂದರು. ತಹಶೀಲ್ದಾರ್‌ …

Read More »

ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ರಾಮ ದುರ್ಗ ತಾಲೂಕಿನ ಉದಪುಡಿ ಗ್ರಾಮದಲ್ಲಿ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ  ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಉದಪುಡಿ ಗ್ರಾಮದಲ್ಲಿ ಶ್ರೀ ಪಾಂಡುರಂಗ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ …

Read More »

ಶ್ರೀ ಸಂತೋಷ್ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ರಮದುರ್ಗದಲ್ಲಿ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದಲ್ಲಿ ಹುನುಮಂತ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …

Read More »

ಜೀವಗಳು ಹೋಗುತ್ತಿದ್ದರು ಸ್ಥಳಕ್ಕೆ ಬಾರದ ಗೋವಿಂದ ಕಾರಜೋಳ ವರ್ತನೆಗೆ ನೆಟ್ಟಿಗರ ಆಕ್ರೋಶ

ರಾಮದುರ್ಗ (ಬೆಳಗಾವಿ ಜಿಲ್ಲೆ: ‘ಮುದೇನೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ವಾಂತಿ ಭೇದಿ ಸಮಸ್ಯೆ ತಲೆದೋರಿದೆ. ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ದಿನದಿನಕ್ಕೆ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಷ್ಟಾದರೂ ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿ ಆಗಲಿ ಸ್ಥಳಕ್ಕೆ ಬಂದಿಲ್ಲ. ನಮ್ಮ ಕಷ್ಟ ನೋಡಿಲ್ಲ’ ಎಂದು ಹಲವರು ಆಕ್ರೋಶ ಹೊರಹಾಕಿದರು. ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿದಾಗ ಮಹಿಳೆಯರು ಸಂಕಷ್ಟ ತೋಡಿಕೊಂಡರು. ‘ಸಚಿವ ಗೋವಿಂದ ಕಾರಜೋಳ ಅವರು ಬಾಗಲಕೋಟೆಯಲ್ಲೇ ಇದ್ದಾರೆ. ಮುದೇನೀರಿಗೆ …

Read More »

ರಾಮದುರ್ಗ ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟಿದ್ದಾರೆ.

ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಮುದೇನೂರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಇಬ್ಬರು ಮೃತಪಟ್ಟಿದ್ದಾರೆ. 12 ಬಾಲಕರು, 8 ಬಾಲಕಿಯರು ಸೇರಿ 186 ಮಂದಿ ಅಸ್ವಸ್ಥ ರಾಗಿದ್ದಾರೆ. ಇವರಲ್ಲಿ ಆರೋಗ್ಯ ಸ್ಥಿತಿ ಗಂಭೀರ ವಾಗಿರುವ 94 ಮಂದಿಯನ್ನು ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಇದೇ ಊರಿನ ಸರಸ್ವತಿ ನಿಂಗಪ್ಪ ಹಾವಳ್ಳಿ (70) ಅವರು ಅ.23ರಂದು, ಶಿವಪ್ಪ ಯಂಡಿಗೇರಿ (70) ಬುಧವಾರ ಮೃತಪಟ್ಟರು. ಅಸ್ಪತ್ರೆಗೆ ದಾಖಲಾಗಿರುವ ಹಲವರಿಗೆ …

Read More »

ಮನೆಗೆ ನುಗ್ಗಿ ₹ 23.60 ಲಕ್ಷ ದರೋಡೆ

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬನ್ನೂರು ತಾಂಡಾದಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗೆ ನುಗ್ಗಿದ ಎಂಟು ಮಂದಿಯ ಗುಂಪು, ಕುಟುಂಬದ ಮೇಲೆ ಹಲ್ಲೆ ಮಾಡಿ, ನಗ- ನಾಣ್ಯ ದರೋಡೆ ಮಾಡಿದೆ. ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಶಂಕರ ರಜಪೂತ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ. ಟ್ರಜರಿಯಲ್ಲಿದ್ದ ಚಿನ್ನಾಭರಣ, ಹಣ ಸೇರಿ ₹ 23.60 ಲಕ್ಷದ ವಸ್ತುಗಳನ್ನು ಕದ್ದಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ. ಗ್ರಾಮದ ಹೊರವಲಯದ …

Read More »

ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ರಾಮದುರ್ಗ: ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಪಿಯು ಕಾಲೇಜುಗಳ ಕ್ರೀಡಾಕೂಟದಲ್ಲಿ ಇಲ್ಲಿನ ಸುಶೀಲಾತಾಯಿ ಕುಲಗೋಡ ಪಿಯು ಕಾಲೇಜಿನ ವಿದ್ಯಾರ್ಥಿಗಳು ನೆಟ್ ಬಾಲ್ ಪಂದ್ಯದಲ್ಲಿ ಪ್ರಥಮ ಸ್ಥಾನ ಗಳಿಸಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಸನಗೌಡಾ ದ್ಯಾಮನಗೌಡ್ರ-ಕಬಡ್ಡಿ, ವಿಜಯ ಕಳಸಗೌಡರ-5 ಕಿ.ಮೀ ನಡಿಗೆ ಮತ್ತು ಸಾನೀಯಾ ನಾಸಿಪೂರ ಜಾವಲಿನ್‌ ಎಸೆತದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಎಸ್.ಎ. ಶೆಟ್ಟಿಸದಾವರ್ತಿ, ಉಪಾಧ್ಯಕ್ಷ ಕೆ.ಮೋಹನ, ಗೌರವ ಕಾರ್ಯದರ್ಶಿ ಎಸ್.ಎಸ್. ಸುಲ್ತಾನಪೂರ, ಪ್ರಾಚಾರ್ಯ ಪ್ರೊ.ಎಂ.ಬಿ. …

Read More »

ರಾಮದುರ್ಗ: ಅನೈತಿಕ ಸಂಬಂಧ, ಪ್ರಿಯಕರನ ಜೊತೆ ಸೇರಿ ಪತಿ ಕೊಂದ ಪತ್ನಿ

ರಾಮದುರ್ಗ (ಬೆಳಗಾವಿ): ತಾಲ್ಲೂಕಿನ ಹೊಸೂರ ಗ್ರಾಮದ ಬಳಿ ಸೋಮವಾರ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ, ಕೊಲೆಯಾದವರ ಪತ್ನಿ ಹಾಗೂ ಆಕೆಯ ಪ್ರಿಯಕರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹೊಸೂರ ನಿವಾಸಿ ಪಾಂಡಪ್ಪ ದುಂಡಪ್ಪ ಜಟಕನ್ನವರ (35) ಕೊಲೆಯಾದವರು. ಇವರ ಪತ್ನಿ ಲಕ್ಷ್ಮಿ ಜಟಕನ್ನವವರ (30) ಹಾಗೂ ಪ್ರಿಯಕರ ಎನ್ನಲಾದ ರಮೇಶ ಬಡಿಗೇರ (36) ಬಂಧಿತರು. ಅನೈತಿಕ ಸಂಬಂಧ ಕಾರಣ: ‘ಪಾಂಡಪ್ಪ ಹಾಗೂ ಲಕ್ಷ್ಮಿ ಕೆಲ ವರ್ಷಗಳಿಂದ ಹೊಸೂರ ಹೊರವಲಯದ ತಮ್ಮ ಜಮೀನಿನಲ್ಲಿ …

Read More »

ಕಲ್ಲೂರ-ಮಾರಡಗಿ ಮಧ್ಯೆ ಸೇತುವೆ ನಿರ್ಮಾಣ

ರಾಮದುರ್ಗ: ಮಳೆಗಾಲದ ಸಂದರ್ಭದಲ್ಲಿ ಗ್ರಾಮದ ಜನರು ಅನುಭವಿಸುತ್ತಿದ್ದ ಸಮಸ್ಯೆ ಯನ್ನು ನಿವಾರಿಸುವ ನಿಟ್ಟಿನಲ್ಲಿ ಸೇತುವೆ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. ತಾಲೂಕಿನ ಕಲ್ಲೂರ ಗ್ರಾಮದಲ್ಲಿ ಹುಬ್ಬಳ್ಳಿ ಕೆ.ಆರ್‌.ಡಿ.ಸಿ.ಎಲ್‌ ನ 80 ಲಕ್ಷ ಅನುದಾನದಲ್ಲಿ ಕಲ್ಲೂರ-ಮಾರಡಗಿ ರಸ್ತೆಯ ಮಧ್ಯೆ ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.   ಗ್ರಾಮದ ಹಾಗೂ ಮುಳ್ಳೂರ ಸುತ್ತಲಿನ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿರುವ ಸೇತುವೆ ಕಾರ್ಯವನ್ನು ಕೈಗೊಂಡು ಅನುಕೂಲ ಕಲ್ಪಿಸಲಾಗುತ್ತಿದೆ. ಮಳೆ ಬಂದಾಗ …

Read More »