ಬೈಲಹೊಂಗಲ: ಮಲಪ್ರಭಾ ಏತ ನೀರಾವರಿಗಾಗಿ ಭೂ ಸ್ವಾಧೀನಗೊಂಡ ಪ್ರದೇಶವನ್ನು 50 ವರ್ಷಗಳ ನಂತರ 2022 ರಲ್ಲಿ ದಾಖಲಿಸಿರುವ ತಹಶೀಲ್ದಾರ್ ಕ್ರಮವನ್ನು ರದ್ದುಪಡಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಹೊಸೂರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ, ವೇದಮೂರ್ತಿ ಮಾಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು, ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಚನ್ನಮ್ಮ ವೃತ್ತದಿಂದ ಇಂಚಲ …
Read More »ಇಂಚಿಂಚಿಗೂ ಸಮಸ್ಯೆ ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ ಇಂಚಲ ಗ್ರಾಮ
ಬೈಲಹೊಂಗಲ: ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೆಯಾದ ಕೊಡುಗೆ ನೀಡುವಲ್ಲಿ ಜಿಲ್ಲೆಯಲ್ಲಿ ಹೆಸರು ಮಾಡಿದ ಊರು ಇಂಚಲ. ಆದರೆ, ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ. ಈ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದೆ. 300ಕ್ಕೂ ಅಧಿಕ ಶಿಕ್ಷಕರು ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸೇವೆಯಲ್ಲಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ಗ್ರಾಮ ಎಂಬ ಖ್ಯಾತಿ ದಶಕಗಳಿಂದಲೂ ಈ ಊರಿಗೆ ಇದೆ. ಶಿಕ್ಷಣ ಮಾತ್ರವಲ್ಲದೇ ಸರ್ಕಾರದ ಎಲ್ಲ …
Read More »ಮಠದ ಆವರಣದಲ್ಲೇ ನೇಣಿಗೆ ಶರಣಾದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಮಹಾಸ್ವಾಮೀಜಿ
ಬೈಲಹೊಂಗಲ : ತಾಲೂಕಿನ ನೇಗಿನಹಾಳ ಗ್ರಾಮದ ಗುರು ಮಡಿವಾಳೇಶ್ವರಮಠದ ಪೀಠಾಧಿಪತಿ ಬಸವಸಿದ್ದಲಿಂಗ ಮಹಾಸ್ವಾಮೀಜಿ ಮಠದ ಆವರಣದಲ್ಲೇ ಸ್ವಾಮೀಜಿಗಳು ನೇಣಿಗೆ ಶರಣಾಗಿದ್ದಾರೆ. ಮುರಘಾಮಠದ ಶರಣರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಆಡಿಯೋದಲ್ಲಿ ಈ ಸ್ವಾಮೀಜಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನ್ನು ಕೇಳಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಬೈಲಹೊಂಗಲ ಡಿಎಸ್ ಪಿ ಶಿವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ ಭೇಟಿ ನೀಡಿ ಪರಿಶಿಲಿಸುತ್ತಿದ್ದಾರೆ.
Read More »ಬೈಲಹೊಂಗಲ: ದರ್ಗಾದಲ್ಲಿಯೇ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಪ್ರತಿಬಾರಿಯಂತೆ ಈ ವರ್ಷವೂ ಪಟ್ಟಣದ ದರ್ಗಾದಲ್ಲಿ ಹಿಂದೂ ಮುಸ್ಲಿಮರು ಸೇರಿಕೊಂಡು ವಿಘ್ನನಿವಾರಕನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಆಲಕಟ್ಟಿ ಫಕ್ಕೀರಸ್ವಾಮಿ ದರ್ಗಾ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಗಿ ನಿಂತಿದೆ. ಸಂಪ್ರದಾಯದಂತೆ ಬುಧವಾರ ಗಣಪನ ಮೂರ್ತಿಯನ್ನು ಹಿಂದೂ ಮುಸ್ಲಿಮ್ ಯುವಕರು ಮೆರವಣಿಗೆ ಮೂಲಕ ತಂದು ದರ್ಗಾದಲ್ಲಿ ಪ್ರತಿಸ್ಥಾಪನೆ ಮಾಡಿದರು. ಮುಸ್ಲಿಮರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿದರು, ಹಿಂದೂಗಳು ಆರತಿ ಮಾಡಿ, ನೈವೇದ್ಯ …
Read More »ಪಲ್ಚಿಯಾದ ಕಾರು: ಪ್ರಯಾಣಿಕರು ಪಾರು
ಬೈಲಹೊಂಗಲ : ಸಮೀಪದ ಚಚಡಿ ಗ್ರಾಮದ ಹೊರವಲಯದಲ್ಲಿ ಬುಧವಾರ ನಸುಕಿನಲ್ಲಿ ಕಾರ್ ಪಲ್ಟಿಯಾಗಿ, ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಚಡಿ ಗ್ರಾಮದಿಂದ ನಯಾನಗರ ಗ್ರಾಮದ ಮಲಪ್ರಭಾ ನದಿ ಸೇತುವೆ ಮಾರ್ಗವಾಗಿ ಚಲಿಸುತ್ತಿದ್ದ ಕಾರ್ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಯಿತು. ಅಷ್ಟರಲ್ಲಿ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅದರಲ್ಲಿದ್ದವರಿಗೆ ಹೆಚ್ಚಿನ ಗಾಯಗಳಾಗಿಲ್ಲ. ಕಾರ್ ತಲೆ ಕೆಳಗಾಗಿ ಬಿದ್ದರೂ ಪ್ರಯಾಣಿಕರು ಪ್ರಾಣಾಪಾಯದಿಂದ ಬಚಾವಾಗಿದ್ದಾರೆ. ಸಿಪಿಐ ಯು.ಎಚ್.ಸಾತೇನಹಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ …
Read More »ಇಸ್ಟೀಟ್ ಅಡ್ಡೆ ಮೇಲೆ ಬೈಲಹೊಂಗಲ ಪೊಲೀಸ್ ಭರ್ಜರಿ ದಾಳಿ
ಬೈಲಹೊಂಗಲ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಗ್ಯಾಂಬ್ಲಿಂಗ್ ಅಡ್ಡೆಯನ್ನು ಭೇದಿಸಿದ್ದಾರೆ. ಹೌದು ನಿನ್ನೆ ತಡರಾತ್ರಿ ಬೈಲಹೊಂಗಲ ಪಟ್ಟಣದಲ್ಲಿ ಖಚಿತ ಮಾಹಿತಿ ಮೇರೆಗೆ ಇಸ್ಪೀಟ್ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು ಇಸ್ಪೀಟ್ ಆಡುತ್ತಿದ್ದ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 1,10,320 ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ
Read More »ಜನನ, ಮರಣ ನೋಂದಣಿ ಕಾಯ್ದೆತಿದ್ದುಪಡಿ ರದ್ದುಗೊಳಿಸಲು ಆಗ್ರಹ
ಬೈಲಹೊಂಗಲ: ಜನನ ಮತ್ತು ಮರಣ ನೋಂದಣಿ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ನ್ಯಾಯಾಂಗದ ವ್ಯಾಪ್ತಿಯನ್ನು ಬದಲಾವಣೆ ಮಾಡಿರುವುದನ್ನು ರದ್ದುಗೊಳಿಸಿ ಮೊದಲಿನಂತೆ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿ ತಾಲ್ಲೂಕು ವಕೀಲರ ಸಂಘದಿಂದ ಪ್ರತಿಭಟನೆ ನಡೆಯಿತು. ತಹಶೀಲ್ದಾರ್ ಬಸವರಾಜ ನಾಗರಾಳ ಅವರಿಗೆ ವಕೀಲರು ಸೋಮವಾರ ಮನವಿ ಸಲ್ಲಿಸಿದರು. ವಕೀಲರ ಸಂಘದ ಉಪಾಧ್ಯಕ್ಷ ಎಂ.ಆರ್. ಸೋಮಣ್ಣವರ, ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಭಾವಿ ಮಾತನಾಡಿ, ‘ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ಸಂಬಂಧಿಸಿದ ವಿಷಯಗಳು …
Read More »ನೇಸರಗಿ: ಅಕ್ರಮ ಸಾಗಾಟವಾಗುತ್ತಿದ್ದ ಪಡಿತರ ಅಕ್ಕಿ ವಶ
ಬೈಲಹೊಂಗಲ: ನೇಸರಗಿಯಲ್ಲಿ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ. ಅಂದಾಜು 76076 ರೂ. ಮೌಲ್ಯದ ಪಡಿತರ ಅಕ್ಕಿಯ 71 ಬ್ಯಾಗ್ ಗಳನ್ನು ಬೊಲೆರೊ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಬೊಲೆರೊ ಪಿಕ್ ಅಪ್ ವಾಹನವನ್ನು ಜಪ್ತಿ ಮಾಡಿ ಕಾನೂನು ಕ್ರಮ ಮುಂದುವರಿಸಲಾಗಿದೆ
Read More »ವಿವಿಧ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳ ದಾಳಿ: ೧೫೦ ಕೆಜಿ ಪ್ಲಾಸ್ಟಿಕ್ ಚೀಲ ವಶ೨೩ ಸಾವಿರ ದಂಡ
ಬೈಲಹೊಂಗಲ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಸೋಮವಾರ ಪುರಸಭೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೧೫೦ ಕೆ.ಜಿ ಪ್ಲಾಸ್ಟಿಕ್ ವಶಪಡಿಸಿಕೊಂಡು ರೂ. ೨೩ ಸಾವಿರ ದಂಡ ವಿದಿಸಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡದಿರುವ ಬಗ್ಗೆ ಎಚ್ಚರಿಕೆ ನೀಡಿದರು. ಪುರಸಭೆ ಮುಖ್ಯಾಧಿಕಾರಿ ಕವಿರಾಜ ನಾಗನೂರ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ಜುಲೈ ೧ ರಿಂದ ಸುಪ್ರೀಂ ಕೋರ್ಟ ಆದೇಶದ ಮೇರೆಗೆ ಕೇಂದ್ರ ಸರ್ಕಾರ …
Read More »ಜೆಲ್ಲೆಯ ಸವದತ್ತಿ, ಬೈಲಹೊಂಗಲ, ಯರಗಟ್ಟಿ ತಾಲ್ಲೂಕಿನ ಬಹುಪಾಲು ಹಳ್ಳಿಗಳಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ
ಬೆಳಗಾವಿ: ಜೆಲ್ಲೆಯ ಸವದತ್ತಿ, ಬೈಲಹೊಂಗಲ, ಯರಗಟ್ಟಿ ತಾಲ್ಲೂಕಿನ ಬಹುಪಾಲು ಹಳ್ಳಿಗಳಲ್ಲಿ ಭಾನುವಾರ ಮಧ್ಯಾಹ್ನ ಧಾರಾಕಾರ ಮಳೆ ಸುರಿಯಿತು. ಮಧ್ಯಾಹ್ನ 3.30ರ ಸುಮಾರಿಗೆ ಆರಂಭವಾದ ಮಳೆ, ಒಂದು ತಾಸಿಗೂ ಹೆಚ್ಚು ಸಮಯ ನಿರಂತರವಾಗಿ ಸುರಿಯಿತು. ಯರಗಟ್ಟಿಯಿಂದ ಬೈಲಹೊಂಗಲ ತಾಲ್ಲೂಕಿನ ನೇಸರಗಿವರೆಗೆ ಬಿರುಗಾಳಿ, ಗುಡುಗಿನ ಸದ್ದು ಜೋರಾಗಿತ್ತು. ಮಳೆಯ ಆರ್ಭಟದಿಂದಾಗಿ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿಯ ಮೇಲೆ ವಾಹನ ಸವಾರರು ವಾಹನಗಳ ಹೆಡ್‌ಲೈಟ್ ಆನ್ ಮಾಡಿ ಸಂಚರಿಸಿದರು.
Read More »
Laxmi News 24×7