ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತ ಜೈನ ಆಶ್ರಮದ ಜೈನ ಮುನಿ ಕಾಮ ಕುಮಾರ ನಂದಿ ಮಹಾರಾಜರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ಎಸ್ಪಿ ಡಾ ಸಂಜೀವ ಪಾಟೀಲ್ ಹೇಳಿದರು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟಕಬಾವಿ ಗ್ರಾಮದಲ್ಲಿ ಮಾಧ್ಯಮಮಗಳ ಜೊತೆ ಮಾತನಾಡಿದ ಅವರು, ರಾಯಭಾಗ ತಾಲೂಕು ಕಟಕಬಾವಿ ಗ್ರಾಮದ ನಿವಾಸಿ ನಾರಾಯಣ ಮಾಳಿ ಹಾಗೂ ಚಿಕ್ಕೋಡಿ ಪಟ್ಟಣದ ನಿವಾಸಿ …
Read More »ನಾಪತ್ತೆಯಾಗಿದ್ದ ಚಿಕ್ಕೋಡಿಯ ಜೈನಮುನಿ ಹತ್ಯೆ.. ವೈಯಕ್ತಿಕ ಕಾರಣಕ್ಕೆ ಕೊಲೆ : S.P.
ಚಿಕ್ಕೋಡಿ (ಬೆಳಗಾವಿ): ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಹಿರೇಕೋಡಿ ಆಶ್ರಮದ ಜೈನ ಮುನಿ ಕೊಲೆಗೀಡಾಗಿದ್ದಾರೆ. ಕಳೆದ ಬುಧವಾರ ಹಿರೇಕೋಡಿ ಆಶ್ರಮದ ಆಚಾರ್ಯ ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾಗಿದ್ದರು. ರಾಯಬಾಗ ತಾಲೂಕಿನ ಕಟಕಬಾವಿ ಗ್ರಾಮದಲ್ಲಿ ಮಹಾರಾಜರು ಹತ್ಯೆಗೀಡಾಗಿರುವುದು ಪೊಲೀಸರಿಗೆ ತಿಳಿದಿದೆ. ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್ಪಿ ಸಂಜೀವ್ ಪಾಟೀಲ್, ಬುಧವಾರ ರಾತ್ರಿಯಿಂದ ಸ್ವಾಮೀಜಿ ಕಾಣೆಯಾಗಿರುವ ಬಗ್ಗೆ ಶುಕ್ರವಾರ ಭಕ್ತರು …
Read More »ಅಕ್ರಮವಾಗಿ ರಾತ್ರೋರಾತ್ರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರ ದಾಳಿ
ಚಿಕ್ಕೋಡಿ (ಬೆಳಗಾವಿ): ಕೃಷ್ಣಾ ನದಿಯಲ್ಲಿ ಅಕ್ರಮವಾಗಿ ರಾತ್ರೋರಾತ್ರಿ ಮರಳು ಗಣಿಗಾರಿಕೆ ನಡೆಸುತ್ತಿರುವ ಅಡ್ಡೆಗಳ ಮೇಲೆ ಅಥಣಿ ಪೊಲೀಸರು ದಾಳಿ ನಡೆಸಿ 30ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಮಳೆಯಿಲ್ಲದೇ ಬತ್ತಿ ಹೋಗಿರುವ ನದಿಯೊಡಲಿನ ಅಲ್ಲಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಸರ್ಕಾರ ಇದಕ್ಕಾಗಿ ನಿಯಮಗಳನ್ನು ಮಾಡಿದ್ದರೂ ಗುತ್ತಿಗೆ ಪಡೆಯದೇ ಅಧಿಕಾರಿಗಳಿಗೆ ತಿಳಿಯದಂತೆ ದಂದೆ ನಡೆಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಥಣಿ ತಾಲೂಕಿನ ಮಹಿಷವಾಡಗಿ ಗ್ರಾಮದ ಸಮೀಪದಲ್ಲಿ ಹರಿಯುವ ಕೃಷ್ಣಾ ನದಿಯಲ್ಲಿ ರಾತ್ರಿ ಅಕ್ರಮವಾಗಿ ಮರಳು …
Read More »12 ವರ್ಷಗಳ ನಂತರ ಗೋಚರಿಸಿದ ಪುರಾತನ ದೇವಾಲಯ
ಚಿಕ್ಕೋಡಿ (ಬೆಳಗಾವಿ): ಜೂನ್ ತಿಂಗಳು ಮುಗಿದರೂ ಮಳೆ ಮಾತ್ರ ಆಗುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ ಬರದ ಛಾಯೆ ಆವರಿಸಿ ಹಲವು ಜಿಲ್ಲೆಯಲ್ಲಿ ಬಹುತೇಕ ನದಿಗಳು ಬತ್ತಿ ಹೋಗಿವೆ. ಮಳೆಯಾಗದೇ ಇರುವುದರಿಂದ ಉತ್ತರ ಕರ್ನಾಟಕದ ಬಹುತೇಕ ಡ್ಯಾಂಗಳು ಖಾಲಿಖಾಲಿಯಾಗಿ ಗೋಚರಿಸುತ್ತಿವೆ. ಹಾಗೇ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ನೀರು ಖಾಲಿಯಾಗಿದ್ದು, ಬರೋಬ್ಬರಿ 12 ವರ್ಷಗಳ ನಂತರ ಪುರಾತನ ದೇವಸ್ಥಾನವೊಂದು ದರ್ಶನಕ್ಕೆ ಮುಕ್ತವಾಗಿದೆ. ವಿಠ್ಠಲ ದೇವಾಲಯ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ …
Read More »ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಅಥಣಿಯ 2 ವರ್ಷದ ಪುಟಾಣಿಯ ವಿಶೇಷ ಜ್ಞಾಪಕಶಕ್ತಿ!
ಚಿಕ್ಕೋಡಿ : ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿದೆ. ಅದರಂತೆ ಇಲ್ಲೊಬ್ಬ ಬಾಲಕನ ಜ್ಞಾಪಕಶಕ್ತಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನಿಂದ ಪ್ರಶಸ್ತಿ ದೊರೆತಿದೆ. ಅಂದಹಾಗೆ ಇದು ಅಥಣಿಯ ಪುಟಾಣಿಯ ಸಾಧನೆ. 2 ವರ್ಷ 9 ತಿಂಗಳಿನ ಸ್ಕಂದ ಗುರುರಾಜ ಮಳಸಿದ್ದನವರ ಎಂಬ ಬಾಲಕ ವಾಹನ, ಬಣ್ಣ, ಸಂಕೇತಗಳನ್ನು ಗುರುತಿಸುವುದು, ರೈಮ್ಸ್, ಶ್ಲೋಕ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆ ಮಾಡಿ ಚಿಕ್ಕ ವಯಸ್ಸಿನಲ್ಲೇ ಪ್ರತಿಷ್ಟಿತ ಪ್ರಶಸ್ತಿ …
Read More »ಕಾಗವಾಡದಲ್ಲಿ ಭೀಕರ ರಸ್ತೆ ಅಪಘಾತ ಓರ್ವ ಸಾವು, 11 ಜನರಿಗೆ ಗಾಯ
ಚಿಕ್ಕೋಡಿ : ಆಟೋ ರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಇನ್ನುಳಿದ 11 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಸಮೀಪದಲ್ಲಿ ಅಪಘಾತ ಸಂಭವಿಸಿದೆ. ಆಟೋ ಪ್ರಯಾಣಿಕ ವಿನೋದ ಕಾಂಬಳೆ (20) ಮೃತರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ: ಉಗಾರ ಗ್ರಾಮದಿಂದ ಐನಾಪುರ ಗ್ರಾಮಕ್ಕೆ ತೆರಳುತಿದ್ದ ಪ್ಯಾಸೆಂಜರ್ ಆಟೋದಲ್ಲಿ ಒಟ್ಟು 12 ಜನ …
Read More »ಕಾಂಗ್ರೆಸ್ನವರು ಹತ್ತಲ್ಲ 15 ಕೆ.ಜಿ ಅಕ್ಕಿ ಕೊಡಬೇಕು: ಶಶಿಕಲಾ ಜೊಲ್ಲೆ
ಚಿಕ್ಕೋಡಿ (ಬೆಳಗಾವಿ): ಕಾಂಗ್ರೆಸ್ ನಾಯಕರು ಚುನಾವಣೆಯ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ದಾರರ ಪ್ರತಿಯೊಬ್ಬರಿಗೆ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಲಾಗುವುದೆಂದು ಗ್ಯಾರಂಟಿ ಕಾರ್ಡ್ಗಳನ್ನು ನೀಡಿದ್ದಾರೆ. ಆದರೆ ಆ ಭರವಸೆಗಳನ್ನು ಅವರಿಗೆ ಈಡೇರಿಸಲು ಆಗುತ್ತಿಲ್ಲ. ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರದ ಮೇಲೆ ಆರೋಪ ಹಾಕಿ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಈ ಪ್ರತಿಭಟನೆ ಖಂಡಿಸುತ್ತೇವೆ ಎಂದು ಮಾಜಿ ಸಚಿವೆ ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ಬೆಳಗಾವಿ ಜಿಲ್ಲೆಯ …
Read More »ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ ಮೂವರ ಸಾವು
ಚಿಕ್ಕೋಡಿ: ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಯುವಕರು ಮೃತಪಟ್ಟಿರುವ ಘಟನೆ ಸಂಭವಿಸಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಸವನಾಳಗಡ್ಡೆ ಬಳಿ ಮಂಗಳವಾರ ರಾತ್ರಿ ಈ ಅಪಘಾತ ಸಂಭವಿಸಿದ್ದು, ಇದಲ್ಲಿ ಕೇರೂರು ಗ್ರಾಮದ ಪ್ರಶಾಂತ ಬೈರು ಖೋತ(22), ಸತೀಶ ಕಲ್ಲಪ್ಪ ಹಿರೇಕೊಡಿ(23), ಯಲಗೌಡ ಚಂದ್ರಕಾಂತ ಪಾಟೀಲ (22) ಮೃತ ದುರ್ದೈವಿಗಳು. ಯುವಕರು ಬೈಕ್ ಮೇಲೆ ಚಿಕ್ಕೋಡಿ ಕಡೆಯಿಂದ ಕೇರೂರು ಗ್ರಾಮಕ್ಕೆ ತೆರಳುವ ಸಮಯದಲ್ಲಿ ಚಿಕ್ಕೋಡಿ ಅಂಕಲಿ …
Read More »ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲ
ಚಿಕ್ಕೋಡಿ: ಮಳೆಗಾಲ ಆರಂಭವಾದರೂ ಉತ್ತರ ಕರ್ನಾಟದಲ್ಲಿ ಮಾತ್ರ ಬರಗಾಲದ ಛಾಯೆ ಕಾಣ್ತಿದೆ. ಜೀವಜಲಕ್ಕಾಗಿ ಜನರು ಸೇರಿದಂತೆ ಜಾನವಾರುಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಂತೂ ಸಂಪೂರ್ಣವಾಗಿ ಒಣಗಿ ಹೋಗಿ ಮಳೆರಾಯನ ಆಗಮನಕ್ಕಾಗಿ ರೈತಾಪಿ ವರ್ಗ ಎದುರು ನೋಡುತ್ತಿದೆ. ಚಿಕ್ಕೋಡಿ ಉಪವಿಭಾಗದ ಬಹುತೇಕ ಹಳ್ಳಿಗಳಿಗೆ ಬರದ ಛಾಯೆ ಎದ್ದು ಕಾಣ್ತಿದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಬೆಳೆಗಳು ನಾಶವಾದರೂ ಪರವಾಗಿಲ್ಲ ಆದರೆ, ಊರ ಜನ ಜಾನುವಾರುಗಳಿಗೆ ಯಾವುದೇ ಅನಾನುಕೂಲವಾಗದು ಎಂದು ತಮ್ಮ ಬಾವಿಯ ನೀರನ್ನು …
Read More »ಲೋಕಸಭೆ ಚುನಾವಣೆಯವರೆಗೆ ಮಾತ್ರ ಕಾಂಗ್ರೆಸ್ ಗ್ಯಾರಂಟಿ, ಆಮೇಲೆ ಕೈ ಕೊಡ್ತಾರೆ : ರಮೇಶ್ ಜಾರಕಿಹೊಳಿ
ಚಿಕ್ಕೋಡಿ (ಬೆಳಗಾವಿ): ಅಥಣಿ ಶಾಸಕ ಲಕ್ಷ್ಮಣ್ ಸವದಿ ಅಭಿವೃದ್ಧಿಗೋಸ್ಕರ ಕಾಂಗ್ರೆಸ್ ಪಕ್ಷ ಸೇರಿದ್ದು, ಕ್ಷೇತ್ರದ ಅಭಿವೃದ್ಧಿ ಮಾಡಲಿ. ನಾವು ಅವರಿಗೆ ಸಹಕಾರ ಕೊಡುತ್ತೇವೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು. ಅಥಣಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಹೇಶ ಕುಮಠಳ್ಳಿ ಸೋಲಿನ ಬಗ್ಗೆ ಕಾರ್ಯಕರ್ತರೊಂದಿಗೆ ಪರಾಮರ್ಶೆಯ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಅಥಣಿ ಕಾಗವಾಡ ವಿಧಾನಸಭೆ ಸೋಲು ಜನರ ಕೊಟ್ಟ ತೀರ್ಪನ್ನು ನಾವು ಸ್ವಾಗತ ಮಾಡುತ್ತೇವೆ. ಬರುವ …
Read More »