Breaking News

ಬೆಂಗಳೂರು

ನಿಗಮ ಮಂಡಳಿ ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ವಾಪಸ್ ಪಡೆಯಬೇಕು – ಆರ್.ಅಶೋಕ್ ಆಗ್ರಹ

ಬೆಂಗಳೂರು: ನಿಗಮ ಮಂಡಳಿ  ಅಧ್ಯಕ್ಷರಿಗೆ ಸಚಿವ ಸಂಪುಟ ದರ್ಜೆ ಸ್ಥಾನ ನೀಡಿರೋ ಸರ್ಕಾರದ ಕ್ರಮವನ್ನ ವಿಪಕ್ಷ ನಾಯಕ ಆರ್‌. ಅಶೋಕ್  ಖಂಡಿಸಿದ್ದಾರೆ. ಕೂಡಲೇ ಸರ್ಕಾರ ಆದೇಶ ವಾಪಸ್ ಪಡೆಯಬೇಕು ಅಂತ ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಈ ಸರ್ಕಾರ ಜನರ ತೆರಿಗೆ ಹಣವನ್ನ ಕಾಂಗ್ರೆಸ್  ಮೋಜು ಮಸ್ತಿಗೆ ಖರ್ಚು ‌ಮಾಡ್ತಾ ಇದ್ದಾರೆ. ನನಗೆ ಇರೋ ಮಾಹಿತಿ ಇದನ್ನ ರಾಜ್ಯಪಾಲರು ಪ್ರಶ್ನೆ ಮಾಡಿದ್ದಾರೆ. ಯಾವ ಆಧಾರದಲ್ಲಿ ಸಂಪುಟ ದರ್ಜೆ ಕೊಟ್ಟಿದ್ದೀರಾ …

Read More »

ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ತಡೆಹಿಡಿದ ನಿರ್ಧಾರ ರಾಜ್ಯ ಸರ್ಕಾರದ್ದು: ಡಿ.ಕೆ. ಶಿವಕುಮಾರ್‌

ಬೆಂಗಳೂರು: ಕರ್ನಾಟಕ ರಾಜ್ಯ ಕಾಂಗ್ರೆಸ್  ಸರ್ಕಾರ ಮೆಟ್ರೋ  ಪ್ರಯಾಣ ದರ ಏರಿಕೆ ತಡೆಹಿಡಿಯುವ ನಿರ್ಧಾರವನ್ನು ತೆಗೆದುಕೊಂಡಿದೆ. ಕೇಂದ್ರ ಸರ್ಕಾರ ಕಳುಹಿಸಿರುವ ಪತ್ರಕ್ಕೆ ಯಾವುದೇ ಕಿಮ್ಮತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ) ಹೇಳಿದರು. ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು. ಈ ವೇಳೆ, ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರವಾಗಿ ಉಂಟಾಗಿರುವ ವಿವಾದದ ಬಗ್ಗೆ ಡಿಸಿಎಂ ಸ್ಪಷ್ಟನೆ ನೀಡಿದರು. “ಇಲ್ಲಿ ಯಾವುದೇ ರಾಜಕೀಯವಿಲ್ಲ. ನಮಗೆ ಯಾವುದೇ ರೀತಿಯ ನಿರ್ದೇಶನ ನೀಡುವ ಹಾಗೂ …

Read More »

ಸಿಲಿಂಡರ್ ಬ್ಲಾಸ್ಟ್ – ಧಗಧಗಿಸಿದ ಕಟ್ಟಡ, ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಕೆ.ಆರ್.ಪುರಂನ  ಮಂಜುನಾಥ್ ಲೇಔಟ್‍ನಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಕಟ್ಟಡಕ್ಕೆ ಬೆಂಕಿ ಆವರಿಸಿದೆ. ಈ ಅವಘಡದಲ್ಲಿ  ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಪೂರ್ಣಿಮ (46), ವೆಂಕಟೇಶ್ (40) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೂರ್ಣಿಮಾ ಅವರ ಸ್ಥಿತಿ ಗಂಭೀರವಾಗಿದೆ. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Read More »

ಮೆಟ್ರೋ ಜಟಾಪಟಿ| ʻಕಾಂಗ್ರೆಸ್‌ ಸರ್ಕಾರ ಖಾಲಿ ಟ್ರಂಕ್‌ ಸರ್ಕಾರʼ ಟ್ರಂಕ್‌ ಹಿಡ್ಕೊಂಡು ಬಂದ ತೇಜಸ್ವಿ ಸೂರ್ಯ ವಶಕ್ಕೆ

ಬೆಂಗಳೂರು: ಮೆಟ್ರೋ ದರ  ಏರಿಸಿದ್ದನ್ನು ಖಂಡಿಸಿ ಆರ್‌ವಿ ಮೆಟ್ರೋ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದ ಬೆಂಗಳೂರು ದಕ್ಷಿಣ ಕ್ಷೇತ್ರ ಬಿಜೆಪಿ ಸಂಸದ ತೇಜಸ್ವಿ ಸೂರ್ಯ  ಮತ್ತು ಜಯನಗರದ ಶಾಸಕ ರಾಮಮೂರ್ತಿ  ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸರು ನೋಟಿಸ್‌ ನೀಡಿದ್ದರೂ ಇಂದು ಬಿಜೆಪಿ (BJP) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಖಾಲಿ ಟ್ರಂಕ್‌ ಹಿಡಿದುಕೊಂಡು ಬಂದ ತೇಜಸ್ವಿ ಸೂರ್ಯ ಟ್ರಂಕ್‌ ತೆರೆದು ರಾಜ್ಯ ಸರ್ಕಾರ ಖಾಲಿಯಾಗಿದೆ ಎಂದು ಹೇಳಿದರು. ನಾನು …

Read More »

ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಗ್ ರಿಲೀಫ್ – ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ

ಬೆಂಗಳೂರು: ‘ನಮ್ಮ ಮೆಟ್ರೋ’  ಪ್ರಯಾಣಿಕರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆಬಿದ್ದಿದೆ. ನಾಳೆಯಿಂದ ಮೆಟ್ರೋ ಹೊಸ ದರ ಜಾರಿಗೆ ಬರಲ್ಲ. ದರ ಏರಿಕೆ ಇಲ್ಲ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರ ಬೋರ್ಡ್ನಿಂದ ಬಿಎಂಆರ್‌ಸಿಎಲ್‌ಗೆ ಇ-ಮೇಲ್ ಸಂದೇಶ ಬಂದಿದೆ. ಮೆಟ್ರೋ ದರ ಏರಿಕೆಗೆ ತಾತ್ಕಾಲಿಕ ತಡೆ ಹೇರಲು ಇ-ಮೇಲ್ ಸಂದೇಶದ ಮೂಲಕ ತಿಳಿಸಲಾಗಿದೆ. ಬೋರ್ಡ್ ಮೀಟಿಂಗ್‌ನಲ್ಲಿ ನಿರ್ಧಾರ ಮಾಡಲು ಸೂಚನೆ ನೀಡಲಾಗಿದೆ. ಹೀಗಾಗಿ, ತಾತ್ಕಾಲಿಕವಾಗಿ ದರ …

Read More »

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಕೋಟಿ ಕೋಟಿ ಮೌಲ್ಯದ ಗಾಂಜಾ ವಶ

ಚಿಕ್ಕಬಳ್ಳಾಪುರ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕೋಟಿ ಕೋಟಿ ಮೌಲ್ಯದ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. ಮಲೇಶಿಯಾದಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನೊರ್ವನ ಬಳಿ ಒಂದು ಕೋಟಿ 91 ಲಕ್ಷ ರೂ. ಮೌಲ್ಯದ 5.48 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇನ್ನೂ ಮತ್ತೊಂದು ಪ್ರಕರಣದಲ್ಲಿ ಪುಕೇಟ್ನಿಂದ ಬಂದ ಇಬ್ಬರು ಪ್ರಯಾಣಿಕರನ್ನು ಪರಿಶೀಲನೆಗೆ ಒಳಪಡಿಸಿದಾಗ ಒಂದು ಕೋಟಿ ಆರು ಲಕ್ಷ ರೂ. ಮೌಲ್ಯದ 3.03 ಕೆಜಿ ಹೈಡ್ರೋಫೋನಿಕ್ ಗಾಂಜಾ ಪತ್ತೆಯಾಗಿದೆ. …

Read More »

ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್ – ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್ ನಿಲ್ದಾಣ ಓಪನ್

ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಮೆಟ್ರೋ ನಿಲ್ದಾಣಗಳ ಹತ್ತಿರದಲ್ಲೇ ಬಸ್‌ ನಿಲ್ದಾಣಗಳನ್ನು ಒದಗಿಸಲಾಗಿದೆ. ಸಂಚಾರ ಪೊಲೀಸ್ ಇಲಾಖೆ ಸಹಯೋಗದಿಂದ ಬಿಎಂಆರ್​ಸಿಎಲ್ ನಿಲ್ದಾಣಗಳ ಓಪನ್‌ಗೆ ಸ್ಥಳ ಪರಿಶೀಲನೆ ನಡೆಸಿದೆ. ನೇರಳೆ ಮಾರ್ಗದಲ್ಲಿ 2, ಹಸಿರು ಮಾರ್ಗದಲ್ಲಿ 8 ಮೆಟ್ರೋ ನಿಲ್ದಾಣಗಳ ಬಳಿ ಓಪನ್ ಆಗಲಿವೆ. ಈ ಬಗ್ಗೆ ಬಿಎಂಆರ್‌ಸಿಎಲ್‌ನಿಂದ ಮಾಧ್ಯಮ ಪ್ರಕಟಣೆ ಜಾರಿ ಮಾಡಿದೆ. ಹೊಸದಾಗಿ ಒದಗಿಸಲಾದ ಬಸ್ ನಿಲ್ದಾಣ ಯಾವ್ಯಾವು? ನೇರಳೆ ಮಾರ್ಗ * ಟ್ರಿನಿಟಿ: ಎಂ.ಜಿ.ರಸ್ತೆಯಿಂದ ಹಲಸೂರು …

Read More »

ಜಿಬಿಎ ಚುನಾವಣೆ 5 ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಲಿದೆ: ವಿಜಯೇಂದ್ರ

ಬೆಂಗಳೂರು: ಜಿಬಿಎ ಚುನಾವಣೆ  ಯಾವಾಗಲೇ ನಡೆದರೂ 5 ಪಾಲಿಕೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ  ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ  ಕಚೇರಿಯಲ್ಲಿ ಜಿಬಿಎ ಚುನಾವಣೆ ವಿಚಾರವಾಗಿ ಚುನಾವಣೆ ಉಸ್ತುವಾರಿ ರಾಮ್ ಮಾಧವ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಸಭೆ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ವಿಜಯೇಂದ್ರ, ಜಿಬಿಎ ಚುನಾವಣೆ ಯಾವತ್ತೇ ನಡೆದರೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಚರ್ಚೆ ಮಾಡಿದ್ದೇವೆ. 5 ಮಹಾನಗರ ಪಾಲಿಕೆಗಳಲ್ಲಿ ಗೆಲ್ಲುವ ಅವಕಾಶ ಇದೆ. …

Read More »

ಫ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ಬಾಲಕನ ಹತ್ಯೆ – ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಬೆಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ  ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಡೆದಿದೆ. ಬಿಹಾರಕ್ಕೆ ಪ್ರವಾಸ  ತೆರಳಿದ್ದ ವೇಳೆ ಆತ್ಮಹತ್ಯೆಗೆ ಕುಟುಂಬಸ್ಥರು ಶರಣಾಗಿದ್ದಾರೆ. 14 ವರ್ಷದ ಅಮೋಘ ಕೀರ್ತಿ ಕೊಲೆಯಾದ ಬಾಲಕ, ನಾಗಪ್ರಸಾದ್ (50) ಕೊಲೆ ಮಾಡಿದ ವ್ಯಕ್ತಿ. ಕೆಲ ತಿಂಗಳ ಹಿಂದೆ ಫ್ರೀ ಫೈರ್ ಗೇಮ್‌ಗೆ ಅಡಿಕ್ಟ್ ಆಗಿದ್ದ ತನ್ನ ಅಕ್ಕನ ಮಗ ಅಮೋಘ ಕೀರ್ತಿಯನ್ನ (14) ಕೊಲೆ ಮಾಡಿದ್ದ ಮಾವ …

Read More »

ಯಾವುದೇ ದರ ಏರಿಕೆ ಮಾಡಿದ್ರೂ ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ಸಿಎಂ ಭ್ರಮೆ: ಹೆಚ್‌ಡಿಕೆ ಕಿಡಿ

ಬೆಂಗಳೂರು: ಯಾವುದೇ ದರ ನಿಗದಿ ಮಾಡಿದ್ರು ಜನ ಸಂತೋಷವಾಗಿ ಕೊಡ್ತಾರೆ ಅನ್ನೋದು ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಭ್ರಮೆ. ಈ ಬಗ್ಗೆ ಎಚ್ಚೆತ್ತುಕೊಂಡು ಜನರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ  ಅಸಮಾಧಾನ ಹೊರಹಾಕಿದ್ದಾರೆ. ಬೆಂಗಳೂರಿನಲ್ಲಿ  ನಮ್ಮ ಮೆಟ್ರೋ ದರಶೇ.5 ರಷ್ಟು ಏರಿಕೆ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರ ನಾವ್ ಸತ್ಯ ಹೇಳ್ತಿವಿ ಅಂತ ಹೇಳ್ತಾ …

Read More »