Breaking News

ಬೆಂಗಳೂರು ಗ್ರಾಮಾಂತರ

ಸೋಮವಾರ ಭಾರತ್ ಬಂದ್: ಬೆಂಗಳೂರಲ್ಲಿ ರೈತರ ಪ್ರತಿಭಟನೆ ಹೇಗಿರುತ್ತೆ..?

ಬೆಂಗಳೂರು: ಸೆಪ್ಟೆಂಬರ್​ 27ರ ಭಾರತ್ ಬಂದ್ ಅನ್ನು ಯಶಸ್ವಿಗೊಳಿಸುವ ಸಲುವಾಗಿ ಬಹುತೇಕ ಎಲ್ಲ ಸಂಘಟನೆಗಳು ಬೆಂಬಲ ನೀಡಿವೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿ ಭಾರತ ಬಂದ್​​ಗೆ ಬಹುತೇಕ ಸಂಘಟನೆಗಳ ಜೊತೆ ರೈತ ಸಂಘಟನೆಗಳ ಸಾಥ್ ಸಿಕ್ಕಿದೆ. ರೈತರೇ ಹೋರಾಟದ ಮುಂಚೂಣಿ ವಹಿಸಲಿದ್ದಾರೆ. ಕಾರ್ಮಿಕ ಸಂಘಟನೆಯೂ ಸಾಥ್ ನೀಡ್ತಿದೆ. ದಲಿತ ಸಮುದಾಯವೂ ಅಪಸ್ವರ ಎತ್ತಿಲ್ಲ ಬೇರೆ ಕಸುಬುಗಳ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದಿದ್ದಾರೆ. …

Read More »

ಲೋಕಸಭಾಧ್ಯಕ್ಷರಿಗೆ ಅಗೌರವ ಸಲ್ಲದು: ಎಚ್‌.ಡಿ. ಕುಮಾರಸ್ವಾಮಿ

ಬೆಂಗಳೂರು: ‘ಲೋಕಸಭಾಧ್ಯಕ್ಷರು ಮತ್ತು ಅವರು ಅಲಂಕರಿಸಿರುವ ಪೀಠಕ್ಕೆ ಅಗೌರವ ತೋರಬಾರದು ಎನ್ನುವ ಕಾರಣಕ್ಕೆ ಓಂ ಬಿರ್ಲಾ ಅವರ ಭಾಷಣದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಜ್ಯದ ಸಂಸದೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿಧಾನಸಭಾಧ್ಯಕ್ಷರು ಲೋಕಸಭೆಯ ಸಭಾಧ್ಯಕ್ಷರನ್ನು ಕರೆಸಿದ್ದಾರೆ. ಇಂತಹ ಅಪರೂಪದ ಸಂದರ್ಭದಲ್ಲಿ ಗೈರಾಗುವುದು ಲೋಕಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದಂತೆ. ಆ ರೀತಿ ಆಗುವುದು …

Read More »

ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡುವ ಕಾರ್ಯ ತೀವ್ರಗೊಳಿಸಿದ್ದೇವೆ:ಆಯುಕ್ತ ರಂದೀಪ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೂ ಲಸಿಕೆ ಪಡೆಯದವರನ್ನು ಗುರುತಿಸಿ ಪಾಲಿಕೆ ಸಂಚಾರಿ ಲಸಿಕಾ ತಂಡವು ಮನೆ-ಮನೆಗೆ ತೆರಳಿ ಲಸಿಕೆ ನೀಡುತ್ತಿದೆ. ವಿಶೇಷವಾಗಿ ಮನೆಯಿಂದ ಹೊರಗೆ ಬಾರದಂತಹ ಹಿರಿಯರು, ವಿಕಲಚೇತನರು ಹಾಗೂ ವೃದ್ಧಾಶ್ರಮಗಳಿಗೆ ಸಂಚಾರಿ ಮೊಬೈಲ್ ತಂಡ ಭೇಟಿ ನೀಡಿ ಲಸಿಕೆ ನೀಡಲಾಗುತ್ತಿದೆ. ಜೊತೆಗೆ ಕೊಳಗೇರಿ ಪ್ರದೇಶದ ಮನೆ-ಮನೆಗೆ ಭೇಟಿ ನೀಡಿ ಲಿಸಕೆ ಪಡೆಯದವರಿಗೆ ಜಾಗೃತಿ ಮೂಡಿಸಿ ಲಸಿಕೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತ …

Read More »

ಬಸ್ ಸಂಚಾರ ಪುನರಾರಂಭ

ಬೆಂಗಳೂರು : ಕೋವಿಡ್‌ ನಿಂದಾಗಿ ಕೆಲವೆಡೆ ಬಸ್‌ಗಳ ಸಂಚಾರ ನಿಲ್ಲಿಸಿತ್ತು. ಆದರೆ ದ್ದು, ಮಕ್ಕಳು ಶಾಲಾ-ಕಾಲೇಜಿಗೆ ತೆರಳಲು ಮೊದಲ ಆದ್ಯತೆ ನೀಡಲಾಗಿ ದ್ದು , ಈ ನಿಟ್ಟಿನಲ್ಲಿ ಬಸ್ ಸಂಚಾರ ಮತ್ತೆ ಆರಂಭಿಸಲು ನಿರ್ಧಾರಿಸಲಾಗಿದೆ ಎಂದು ಸಾರಿಗೆ ಸಚಿವ ಶ್ರೀ ರಾಮುಲು ಭರವಸೆ ನೀಡಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಬುಧವಾರ ಕಾಂಗ್ರೆಸ್ ಸದಸ್ಯ ಬಸವನಗೌಡ ದದ್ದಲ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯದಲ್ಲಿ ಶಾಲೆ- ಕಾಲೇಜು ಪ್ರಾರಂಭವಾಗಿದೆ. ಮಕ್ಕಳ ಅನುಕೂಲಕ್ಕಾಗಿ ಕೋವಿಡ್ ವೇಳೆ …

Read More »

ಬಿಜೆಪಿಯಲ್ಲಿ ಬೊಮ್ಮಾಯಿ ನಾಯಕತ್ವದ ಕುರಿತು ಯಾವುದೇ ಸಮಸ್ಯೆಯಿಲ್ಲ : ಆರ್ ಅಶೋಕ್

ಬೆಂಗಳೂರು: ರಾಜ್ಯ ಭಾರತಿಯ ಜನತಾ ಪಾರ್ಟಿಯಲ್ಲಿ ಬಸವರಾಜ ಬೊಮ್ಮಾಯಿ ನಾಯಕತ್ವದ ಕುರಿತು ಯಾವುದೇ ಸಮಸ್ಯೆಯಿಲ್ಲ, ಗೊಂದಲಗಳಿಲ್ಲ. ಪಕ್ಷ, ಬರುವ ವಿಧಾನಸಭಾ ಚುನಾವಣೆಯನ್ನು ಅವರ ನೇತೃತ್ವದಲ್ಲಿಯೇ ಎದುರಿಸಲಿದೆ. ಮತ್ತೆ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಗುರುವಾರ ಪ್ರತಿಪಾದಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅಶೋಕ್, ಸಿಎಂ ಅವರು ವಿರೊಧಪಕ್ಷದವರನ್ನೇ ಓಲೈಸುತ್ತಿದ್ದಾರೆ ಎಂಬ ಅಸಮಾಧಾನ ಸ್ವಪಕ್ಷದ ಶಾಸಕರಲ್ಲಿದೆಯೇ ಎಂಬ ಪ್ರಶ್ನೆಗೆ, ಕಾಂಗ್ರೆಸಿನವರಿಗೆ ಜಾತಿ, ಧರ್ಮ‌ ಒಡೆಯುವುದೇ ಕೆಲಸವಾಗಿದೆ. …

Read More »

ಅತ್ಯಾಚಾರ ಪ್ರಕರಣ: ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಮಾತಿನ ಸಮರ

ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ವಿಧಾನಸಭೆ ಕಲಾಪ ಚರ್ಚೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಡುವೆ ಮಾತಿನ ಸಮರ ನಡೆಯಿತು. ಸ್ಪೀಕರ್ ಕಾಗೇರಿ, ನೀವು ಪ್ರತಿಯೊಂದಕ್ಕೂ ಹೀಗೆ ಗದ್ದಲ ಮಾಡಿಕೊಂಡು ಇರಿ. ನಾನು ನಿಮ್ಮ ಗದ್ದಲ ಕೇಳಿಕೊಂಡು ಇರ್ತೀನಿ. ಉಳಿದ ಸದಸ್ಯರು ಮಾಡುವಂತಿಲ್ಲ. ಬಿಲ್ ಬರುವಂಗಿಲ್ಲ. ಬರಿ ನಿಮ್ಮ ಮಾತು ಕೇಳಿಕೊಂಡು ಇರ್ಬೇಕಾ ಅಂತ ಸದಸ್ಯರು ಬಂದು ನನಗೆ ಕೇಳುತ್ತಿದ್ದಾರೆ. ನೀವು ಈ ರೀತಿ …

Read More »

ಚಾಣಕ್ಯ ವಿವಿಗೆ ಜಮೀನು: ದೊಡ್ಡ ಹಗರಣ

ಬೆಂಗಳೂರು: ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪನೆಗೆ ಸರ್ಕಾರದ ವತಿಯಿಂದ ಅರ್ಹತೆ ಹಾಗೂ ಆನುಭವ ಇಲ್ಲದ ಸೆಸ್‌ ಎಂಬ ಸಂಸ್ಥೆಗೆ ಕಡಿಮೆ ದರದಲ್ಲಿ 116.16 ಎಕರೆ ಜಮೀನು ನೀಡಿದ್ದು ಸರ್ಕಾರ ಆ ತೀರ್ಮಾನ ಕೈ ಬಿಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾರ್‌ ಒತ್ತಾ ಯಿಸಿದ್ದಾರೆ. ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ಏರೋಸ್ಪೇಸ್‌ ಹಾಗೂ ಡಿಫೆನ್ಸ್‌ ಪಾರ್ಕ್‌ಗಾಗಿ ರೈತರಿಂದ ಸ್ವಾಧೀನಪಡಿಸಿಕೊಂಡಿರುವ ಜಮೀನು ಆರ್‌ …

Read More »

ದೇಶದಲ್ಲೇ ಮೂರು ಕೈಗಾರಿಕಾ ಕಾರಿಡಾರ್ ಗಳನ್ನು ಹೊಂದಿದ ಏಕೈಕ ರಾಜ್ಯ ಕರ್ನಾಟಕ: ಸಚಿವ ನಿರಾಣಿ

ಬೆಂಗಳೂರು: ಕರ್ನಾಟಕವು ಜಾಗತಿಕ ಹೂಡಿಕೆದಾರರಿಗೆ ಅತ್ಯುತ್ತಮ ತಾಣವಾಗಿದ್ದು, ದೇಶದಲ್ಲೇ ಮೂರು ಕೈಗಾರಿಕಾ ‌ಕಾರಿಡಾರ್ ಗಳನ್ನು ‌ಹೊಂದಿದ ಏಕೈಕ ರಾಜ್ಯವಾಗಿದೆ ಎಂದು ‌ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು. ಗುರುವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಕೆಐಎಡಿಬಿ ಆಯೋಜಿಸಿದ್ದ ಭಾರತದ 75 ನೇ ಸ್ವಾತಂತ್ರ್ಯವದ ಸವಿನೆನಪಿಗಾಗಿ ಸಪ್ತಾಹದ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಹೂಡಿಕೆ ಮಾಡುವ ಜಾಗತಿಕ ಉದ್ಯಮಿಗಳಿಗೆ ಕರ್ನಾಟಕ ಯಾವಾಗಲೂ ಅತ್ಯುತ್ತಮ …

Read More »

ಬೆಂಕಿ ಅವಘಡ: ಪ್ರಾಣ ಉಳಿಸುವಂತೆ ಅಳಿಯನ ಬಳಿ ಅಂಗಲಾಚಿದ್ದ ಮೃತ ಮಹಿಳೆ

ಬೆಂಗಳೂರು: ‘ಕೊಠಡಿಯಲ್ಲಿ ಬೆಂಕಿ ಬಿದ್ದಿದೆ. ಬೇಗ ಬಂದು ಕಾಪಾಡಪ್ಪ. ಬೇಗ ಬಾ…’ ದೇವರಚಿಕ್ಕನಹಳ್ಳಿಯ ವಸತಿ ಸಮುಚ್ಚಯದಲ್ಲಿ ಮಂಗಳವಾರ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಸಜೀವ ದಹನವಾದ ಭಾಗ್ಯರೇಖಾ ಅವರು ತಮ್ಮ ಅಳಿಯ ಸಂದೀಪ್‌ ಬಳಿ ರಕ್ಷಣೆಗಾಗಿ ಅಂಗಲಾಚಿದ್ದ ಪರಿ ಇದು. ಸಂದೀಪ್‌-ಪ್ರೀತಿ ದಂಪತಿ ಪ್ರೀತಿಯ ಅವರ ತಾಯಿ ಭಾಗ್ಯರೇಖಾ ವಾಸವಿದ್ದ ಫ್ಲ್ಯಾಟ್‌ನ ಪಕ್ಕದಲ್ಲೇ (ಫ್ಲ್ಯಾಟ್‌ ನಂಬರ್‌ 211) ನೆಲೆಸಿದ್ದರು. ಅತ್ತೆ ಕರೆ ಮಾಡಿ ಹೇಳಿದ ಬಳಿಕವಷ್ಟೇ ಸಂದೀಪ್‌ಗೆ ಅಗ್ನಿ ಅವಘಡದ ವಿಷಯ …

Read More »

ಭವಾನಿಪುರ ಉಪ ಚುನಾವಣೆ : ದೀದಿ ಗೆಲ್ಲೋದು ಖಚಿತ ಎಂದ ಕುಮಾರಸ್ವಾಮಿ

ಬೆಂಗಳೂರು : ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಮೀಪಿಸಿದ್ದು, ಇದೇ ಸೆಪ್ಟಂಬರ್ 30ರಂದು ಚುನುವಾಣೆ ನಿಗದಿಯಾಗಿದೆ. ಮತದಾನ ಅಕ್ಟೋಬರ್ 3ರರವರೆಗೆ ನಡೆಯಲಿದೆ. ಮಮತಾ ಬ್ಯಾನರ್ಜಿ ಸ್ಪರ್ಧೆ ನಡೆಸಿದ್ದು, ತಾವು ಮುಖ್ಯಮಂತ್ರಿಯಾಗಿ ಉಳಿಯಲು ಈ ಚುನಾವಣೆಯನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕರ್ನಾಟಕ ಮಾಜಿ ಸಿಎಂ ಕುಮಾರಸ್ವಾಮಿ, ಇಡೀ ಭಾರತದ ಗಮನ ಸೆಳೆದಿರುವ ಪಶ್ಚಿಮ ಬಂಗಾಳದ ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪ …

Read More »