Breaking News

ಬಳ್ಳಾರಿ

ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಆಫ್‍ಲೈನ್ ಟಿಕೆಟ್‍ನ್ನು ಭಾರತೀಯ ಪುರಾತತ್ವ ಇಲಾಖೆ ಪುನರಾರಂಭಿಸಿದೆ.

ಬಳ್ಳಾರಿ: ಕೊರೊನಾ ಹಿನ್ನೆಲೆ ಬಂದ್ ಮಾಡಲಾಗಿದ್ದ ಆಫ್‍ಲೈನ್ ಟಿಕೆಟ್‍ನ್ನು ಭಾರತೀಯ ಪುರಾತತ್ವ ಇಲಾಖೆ ಪುನರಾರಂಭಿಸಿದೆ. ಈ ಮೂಲಕ ಪ್ರವಾಸಿಗರು ಆಫ್‍ಲೈನ್ ಹಾಗೂ ಆನ್‍ಲೈನ್ ಎರಡೂ ವಿಧಾನಗಳಿಂದ ಟಿಕೆಟ್ ಪಡೆಯಬಹುದಾಗಿದೆ. ಕರೊನಾ ಹಿನ್ನಲೆ ತನ್ನ ವ್ಯಾಪ್ತಿಯ ಸ್ಮಾರಕಗಳ ವೀಕ್ಷಣೆಗೆ ಆಫ್‍ಲೈನ್ ಟಿಕೆಟ್ ಬಂದ್ ಮಾಡಿ, ಆನ್‍ಲೈನ್ ನಲ್ಲಿ ಮಾತ್ರ ಟಿಕೆಟ್ ಪಡೆಯಲು ಭಾರತೀಯ ಪುರಾತತ್ವ ಇಲಾಖೆ ಅವಕಾಶ ಕಲ್ಪಿಸಿತ್ತು. ಆದರೆ ಡಿ.19 ರಿಂದ ಆಫ್‍ಲೈನ್‍ನಲ್ಲೂ ಟಿಕೆಟ್ ಖರೀದಿಸಲು ಅವಕಾಶ ಕಲ್ಪಿಸಿದೆ. ಇದರಿಂದ …

Read More »

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮಿಳು ನಾಡು ಮೂಲದ ಲಾರಿಯು ಬೆಂಕಿಗಾಹುತಿಯಾಗಿದೆ.

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುಲಿಕೇರಿ ಗ್ರಾಮದ ಬಳಿ ಇಂದು ಸಂಜೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ತಮಿಳು ನಾಡು ಮೂಲದ ಲಾರಿಯು ಬೆಂಕಿಗಾಹುತಿಯಾಗಿದೆ. ಲಾರಿ ಚಿತ್ರದುರ್ಗದಿಂದ ಕೂಡ್ಲಿಗಿ ಕಡೆಗೆ ತೆರಳುತ್ತಿತ್ತು. ಕಬ್ಬಿಣ ತುಂಬಿದ ಲಾರಿಯ ಇಂಜೀನ್‍ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ, ಲಾರಿಯು ಧಗ ಧಗನೆ ಹುರಿದು ಭಾರೀ ಜ್ವಾಲೆ ಹಬ್ಬಿದೆ. ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗೆ ಧುಮುಕಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯ ತಿಳಿದು …

Read More »

ಬೆಳಗಾವಿ ವಿಭಜನೆಗೆ ತಾಂತ್ರಿಕ ತೊಂದರೆ : ಡಿಸಿಎಂ ಲಕ್ಷ್ಮಣ ಸವದಿ

ಬಳ್ಳಾರಿ : ಕಾಂಗ್ರೆಸ್, ಜೆಡಿಎಸ್ ಪಕ್ಷದ 17 ಜನರು ಬಿಜೆಪಿ ಪಕ್ಷಕ್ಕೆ ಬಂದ ಕಾರಣದಿಂದ ರಾಜ್ಯದಲ್ಲಿ ನಮ್ಮ ಸರ್ಕಾರ ಬಂದಿದೆ. ಅವರ ಬಗ್ಗೆ ಗೌರವವಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಲು 17 ಜನರು ಕಾರಣ. ಕೆಲವೇ ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುವುದು ಪಕ್ಷ ತೀರ್ಮಾನ ಮಾಡುತ್ತದೆ. ಸಿಎಂ ಬಿ.ಎಸ್.ಯಡಿಯೂರಪ್ಪ ಫೈನಲ್ …

Read More »

ಹಿರಿಯ ಅಧಿಕಾರಿಯ ಆಕ್ರೋಶಕ್ಕೆ ಬೇಸತ್ತು ಪೊಲೀಸ್​ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.

ಬಳ್ಳಾರಿ: ಹಿರಿಯ ಅಧಿಕಾರಿಯ ಆಕ್ರೋಶಕ್ಕೆ ಬೇಸತ್ತು ಪೊಲೀಸ್​ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ. ಹಂಪಿ Dy. SP ಎಸ್.ಎಸ್. ಕಾಶಿಗೌಡ ಅಧಿಕಾರಿಗಳ ಆಕ್ರೋಶಕ್ಕೆ ಬೇಸತ್ತು ರಾಜೀನಾಮೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿದೆ.  DG&IGPಗೆ ರಾಜೀನಾಮೆ ಸಲ್ಲಿಸಿದ Dy. SP ಕಾಶಿಗೌಡ IGP ನಂಜುಂಡಸ್ವಾಮಿ ರಾಜೀನಾಮೆ ನೀಡುವಂತೆ ಹೇಳಿದ ಹಿನ್ನೆಲೆ ರಾಜೀನಾಮೆ ನೀಡಿದ್ದೇನೆ ಎಂದು ಈ ಬಗ್ಗೆ ಪೊಲೀಸ್ WhatsApp ಗ್ರೂಪ್​ನಲ್ಲಿ ಬರೆದುಕೊಂಡಿದ್ದಾರೆ. ಏನಿದು ರಾಜೀನಾಮೆ ಪ್ರಕರಣ? ಹಂಪಿ ಸುತ್ತಮುತ್ತ …

Read More »

ದಲಿತ ಸಂಘಟನೆಗಳಿಂದ ಮಹಾನಾಯಕ ರಿಗೆ ಅಭಿನಂದನೆ

ಕೂಡ್ಲಿಗಿ:ದಲಿತ ಸಂಘಟನೆಗಳಿಂದ ಮಹಾನಾಯಕ ರಿಗೆ ಅಭಿನಂದನೆಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಅಕ್ಟೋಬರ್ 17ರಂದು, ಅಂಬೇಡ್ಕರ್ ನಗರದ ಯುವಕರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ. ಅಂಬೇಡ್ಕರ್ ರವರ ಜೀವನ ಚರಿತ್ರೆ ಆಧಾರಿತವಾದ ಬಹು ಯಶಸ್ಸಿನಲ್ಲಿ ಮೂಡಿಬರುತ್ತಿರುವ, “ಮಹಾನಾಯಕ ” ಧಾರಾವಾಹಿಯ ಬ್ಯಾನರ್ ಗೆ ಮಾಲಾಪ೯ಣೆ ಮಾಡೋ ಮೂಲಕ ಅಭಿನಂದಿಸಿದರು.ಪಟ್ಟಣ ಪಂಚಾಯಿತಿ ಸದಸ್ಯ ಹಾಗೂ ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಎಸ್.ದುರುಗೇಶ್,ರೈತ ಸಂಘದ ಜಿಲ್ಲಾ ಅಧ್ಯಕ್ಷ ಹಾಗೂ ವಾಲ್ಮೀಕಿ ಮುಖಂಡ ಕೆ.ಕೆ.ಹಟ್ಟಿ ದೇವರ …

Read More »

ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕತ೯ವ್ಯವಾಗಿದೆ-: ನ್ಯಾಯಾಧೀಶ ಕೆ.ಎ.ನಾಗೇಶ

ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕತ೯ವ್ಯವಾಗಿದೆ-ನ್ಯಾಯಾಧೀಶ ಕೆ.ಎ.ನಾಗೇಶಬಳ್ಳಾರಿ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ಕೊರೋನಾ ಸೋಂಕು ಹರಡದಂತೆ ಜಾಗ್ರತೆ ವಹಿಸುವುದು ಪ್ರತಿಯೊಬ್ಬರ ಆಧ್ಯ ಕಥ೯ವ್ಯವಾಗಿದೆ ಎಂದು, ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ತಾ.ಕಾ.ಸೇ.ಸಮಿತಿ ಅಧ್ಯಕ್ಷರಾದ ಕೆ.ಎ.ನಾಗೇಶ ರವರು ನುಡಿದರು.ಅವರು ಅ17ರಂದು ಕೂಡ್ಲಿಗಿ ಪಟ್ಟಣದಲ್ಲಿ ಕ.ರಾ.ಕಾ.ಸೇ.ಪ್ರಾಧಿಕಾರ ನಿಧೇ೯ಶನದಂತೆ,ತಾಲೂಕು ವಕೀಲರ ಸಂಘ, ತಾ.ಕಾ.ಸೇ.ಸಮಿತಿ,ತಾಲೂಕು ಆಡಳಿತ ಹಾಗೂ ತಾಪಂ ಮತ್ತು ಪಪಂ,ಆರೋಗ್ಯ ಇಲಾಖೆ,ನ್ಯಾಯಾಂಗ ಇಲಾಖೆ, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ.ಏಪ೯ಡಿಸಲಾಗಿದ್ದ ಕೋವಿಡ್19 ಸಾವ೯ಜನಿಕ ಜಾಗ್ರತಿ …

Read More »

ಹನಸಿ ಪ್ರಾಕೃಪಸ ಸಂಘ:ಅಧ್ಯಕ್ಷ-ಎಮ್.ನಿಂಗಪ್ಪ,ಉಪಾಧ್ಯಕ್ಷ-ಎನ್.ನಾಗರಾಜ ಅವಿರೋಧ ಆಯ್ಕೆ

ಹನಸಿ ಪ್ರಾಕೃಪಸ ಸಂಘ:ಅಧ್ಯಕ್ಷ-ಎಮ್.ನಿಂಗಪ್ಪ,ಉಪಾಧ್ಯಕ್ಷ-ಎನ್.ನಾಗರಾಜ ಅವಿರೋಧ ಆಯ್ಕೆಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಹನಸಿ ಗ್ರಾಮದಲ್ಲಿ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ(ನಿ) ಅಕ್ಟೋಬರ್ 16ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಜರುಗಿತು. ಅಧ್ಯಕ್ಷರಾಗಿ ಎಮ್.ನಿಂಗಪ್ಪ, ಉಪಾಧ್ಯಕ್ಷರಾಗಿ ಎನ್.ನಾಗರಾಜ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರಿಟೈನಿಂಗ್ ಅಧಿಕಾರಿಗಳ ಸಮಕ್ಷಮದಲ್ಲಿ ಚುನಾವಣೆ ಜರುಗಿದೆ. ಚುನಾವಣೆ ಸಂದಭ೯ದಲ್ಲಿ ಸಂಘದ ನಿಧೇ೯ಶಕರಾದ ಮಂಜುನಾಥಗೌಡ,ಜಿ.ನಾ‍ಗರಾಜ,ಹೊನ್ನೂರ್ ಬೀ,ಬಿ.ವೀರೇಶ್,ಹೆಚ್.ಮೂಗಪ್ಪ,ಎಸ್.ಮೆಹಬೂಬ್ ಸಾಬ,ಬಿ.ಖಾಸೀಂ ಪೀರ್,ಕೆ.ಬಸವನಗೌಡ,ವೈ.ಪ್ರಸನ್ನಕುಮಾರ್,ಶ್ರೀಮತಿ ಎನ್.ನಿಮ೯ಲಮ್ಮ ಹಾಜರಿದ್ದರೆಂದು ಕಾಯ೯ದಶಿ೯ಗಳಾದ‍ ಬಸಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಈ ಸಂದಭ೯ದಲ್ಲಿ ಪೊಲೀಸ್ ಪೇದೆ ಲೋಕೇಶ್ ಹಾಜರಿದ್ದರು.

Read More »

ಬಿಸಿಲು ನಾಡಿನ ಮಿಂಚೇರಿ ನೀಡ್ತಿದೆ ಮಲೆನಾಡಿನ ಅನುಭವ, ಪ್ರಕೃತಿ ಸೌಂದರ್ಯಕ್ಕೆ ಪ್ರವಾಸಿಗರು ಮಂತ್ರಮುಗ್ಧ

ಬಳ್ಳಾರಿ: ಗಣಿನಾಡು ಬಳ್ಳಾರಿ ಅಂದ್ರೆ ಥಟ್ ಅಂತ ನೆನಪಾಗೋದು ಗಣಿ ಧೂಳು. ಅಲ್ಲಿನ ಗುಡ್ಡಗಾಡು ಪ್ರದೇಶದಲ್ಲಿ ಜೆಸಿಬಿ, ಲಾರಿಗಳು ಸದ್ದು ಮಾಡೋದನ್ನ ನೀವು ನೋಡಿದ್ದೀರಾ. ಆದ್ರೆ ಈಗ ಅಲ್ಲಿನ ಆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ. ಮಲೆನಾಡಿನಂತೆ ಗಣಿನಾಡಾಗಿದೆ. ಗಣಿನಾಡು ಬಳ್ಳಾರಿಯಲ್ಲಿ ಮಲೆನಾಡಿನ ಸೌಂದರ್ಯ ಮನೆ ಮಾಡಿದೆ. ಬಳ್ಳಾರಿ ತಾಲೂಕಿನಿಂದ 18 ಕಿಮೀ ದೂರದಲ್ಲಿರುವ ಮಿಂಚೇರಿ ಅರಣ್ಯ ಪ್ರದೇಶ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಈ ವರ್ಷ ಹೆಚ್ಚು ಮಳೆಯಾಗಿದ್ದರಿಂದ …

Read More »

ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,‌ ಲಂಚ ಪಡೆಯುತ್ತಿದ್ದ ಇಬ್ಬರನ್ನು‌ ವಶ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಶುಕ್ರವಾರ ಎಸಿಬಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ,‌ ಲಂಚ ಪಡೆಯುತ್ತಿದ್ದ ಇಬ್ಬರನ್ನು‌ ವಶಕ್ಕೆ ಪಡೆದಿದ್ದಾರೆ ಪಾಲಿಕೆ ಆಯುಕ್ತೆ ಸಹಾಯಕ ಮಲ್ಲಿಕಾರ್ಜುನ ಮತ್ತು ಡಿ.ದರ್ಜೆ ನೌಕರ ಭಾಷ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಫಾರಂ 2. ನೀಡಲು ಐವತ್ತು ಸಾವಿರ ರುಪಾಯಿ ಬೇಡಿಕೆ ಇಟ್ಟಿದ್ದ ಆರೋಪದ ಮೇರೆಗೆ ಕಾರ್ಯಾಚರಣೆ ನಡೆದಿದೆ. ಲಂಚದ ಹಣದೊಂದಿಗೆ ಸಿಕ್ಕಿಬಿದ್ದವರ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.

Read More »

ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಅಚ್ಚರಿ

ಬಳ್ಳಾರಿ: ಈ ಸರ್ಕಾರಗಳು ಯಾವಾಗ ಇರುತ್ತೋ, ಯಾವಾಗ ಹೋಗುತ್ತೋ ಗೊತ್ತಿಲ್ಲ ಎಂದು ಆರಣ್ಯ ಸಚಿವ ಆನಂದ್ ಸಿಂಗ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ. ಬಳ್ಳಾರಿಯ ಹೊಸಪೇಟೆ ತಾಲೂಕಿನ ಕಮಾಲಾಪುರದ ಅಟಲ್ ಬಿಹಾರಿ ವಾಜಪೇಯಿ ಝೂನಲ್ಲಿ 66ನೇ ವನ್ಯ ಜೀವಿ ಸಂರಕ್ಷಣಾ ಸಪ್ತಾಹದ ಅಂಗವಾಗಿ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಪ್ತಾಹದಲ್ಲಿ ಪಾಲ್ಗೊಂಡಿರುವ ಎಲ್ಲಾ ಅಧಿಕಾರಿಗಳಿಗೆ ಹಾಗೇ ಅರಣ್ಯ ರಕ್ಷಣೆ ಮಾಡುವಂತಹ ಎಲ್ಲಾ ಯುವಕರಾಗಿರಲಿ, ನಾವೆಲ್ಲರೂ ಇವತ್ತಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೀವಿ. ಇವತ್ತು …

Read More »