ಧಾರವಾಡ/ರಾಯಚೂರು: ಇಂದು ಎಣ್ಣೆ ಅಂಗಡಿ ಮುಂದೆ ಎಲ್ಲಿ ನೋಡಿದರೂ ಉದ್ದದ್ದೂ ಕ್ಯೂ ಕಂಡುಬರುತ್ತಿದೆ. ಆದ್ರೆ ಧಾರವಾಡದಲ್ಲಿ ಒಂದೆಡೆ ಮದ್ಯದಂಗಡಿ ಇನ್ನೊಂದೆಡೆ ರೇಷನ್ ಅಂಗಡಿಗೆ ಕ್ಯೂ ಹಚ್ಚಿದ ಅಪರೂಪದ ದೃಶ್ಯಗಳು ಕಂಡುಬಂದಿವೆ. ಧಾರವಾಡದ ತೇಜಸ್ವಿ ನಗರದಲ್ಲಿರುವ ಖಾಸಗಿ ವೈನ್ ಶಾಪ್ ಪಕ್ಕವೇ ರೇಷನ್ ಅಂಗಡಿ ಸಹ ಇರುವುದರಿಂದ ಎಣ್ಣೆ ಅಂಗಡಿ ಮುಂದೆ ಪುರುಷರು ಕ್ಯೂ ನಿಂತಿದ್ದರೆ, ರೇಷನ್ ಅಂಗಡಿ ಮುಂದೆ ಮಹಿಳೆಯರು ಕ್ಯೂ ಹಚ್ಚಿದ್ದಾರೆ. ಎರಡು ಅಂಗಡಿಗಳು ಅಕ್ಕಪಕ್ಕದಲ್ಲಿರುವುದರಿಂದ ಈ ಅಪರೂಪ …
Read More »ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ ಪೊಲೀಸರು ಮಾಡುವ ಕೆಲಸವನ್ನು ತಾನು ಮಾಡಿದ್ದಾನೆ.
ಧಾರವಾಡ: ರಾಜ್ಯದಲ್ಲಿ ಇಂದಿನಿಂದ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದ್ದು, ಮದ್ಯದಂಗಡಿಗಳನ್ನು ಓಪನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಫುಲ್ ಖುಷಿಯಲ್ಲಿರುವ ಎಣ್ಣೆಪ್ರಿಯರು ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕಲು ಆರಂಭಿಸಿದ್ದಾರೆ. ಹೌದು. ಮದ್ಯದ ಅಂಗಡಿಗಳನ್ನು ಬಂದ್ ಮಾಡಿದರೆ ಅನೇಕ ಪ್ರತಿಭೆಗಳು ಮಾಯವಾಗುತ್ತವೆ ಎಂದು ಕುಡುಕರ ಬಗೆಗಿನ ಕಾಮಿಡಿ ದೃಶ್ಯಗಳನ್ನು ನಾವು ಈಗಾಗಲೇ ಟಿಕ್ ಟಾಕ್ ನಲ್ಲಿ ನೋಡಿದ್ದೇವೆ. ಅಂತೆಯೇ ಧಾರವಾಡದಲ್ಲೊಬ್ಬ ವ್ಯಕ್ತಿಯೊಬ್ಬನ ಹೊಟ್ಟೆಗೆ ಎಣ್ಣೆ ಬೀಳುತ್ತಿದ್ದಂತೆಯೇ ತನ್ನ ಮೈಮೇಲಿನ ಬಟ್ಟೆಯ ಅರಿವೂ ಇಲ್ಲದಂತೆ ಟ್ರಾಫಿಕ್ …
Read More »ಊರಿಗೆ ತಲುಪಿದ ಕಾರ್ಮಿಕರು; ಪ್ರಯಾಣಿಸುವವರಿಗೆ ಸೂಚನೆಗಳು….
ಧಾರವಾಡ, ಮೇ 04: ಬೆಂಗಳೂರಿನಿಂದ ಹೊರಟಿದ್ದ ವಿಶೇಷ ಬಸ್‌ಗಳ ಮೂಲಕ ಕಾರ್ಮಿಕರು ಧಾರವಾಡಕ್ಕೆ ಆಗಮಿಸಿದರು. ಬೆಂಗಳೂರಿನಿಂದ ಆಗಮಿಸಿದ ಪ್ರತಿ ಪ್ರಯಾಣಿಕರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಭಾನುವಾರ ಬೆಳಗ್ಗೆ ಬೆಂಗಳೂರಿನಿಂದ ಹೊರಟಿದ್ದ ಬಸ್‌ಗಳು ರಾತ್ರಿ ಧಾರವಾಡಕ್ಕೆ ತಲುಪಿದವು. ಧಾರವಾಡ ಜಿಲ್ಲಾಡಳಿತದ ವತಿಯಿಂದ ಪ್ರಯಾಣಿಕರಿಗೆ ಶುದ್ಧ ಕುಡಿಯವ ನೀರು, ಆಹಾರ, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಶಾಸಕರಾದ ಅರವಿಂದ ಬೆಲ್ಲದ್ ಹುಬ್ಬಳ್ಳಿ ಬಸ್ ನಿಲ್ದಾಣಣಕ್ಕೆ ಆಗಮಿಸಿ …
Read More »ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಪಾದ ಪೂಜೆ ಮಾಡಿದ ಕೆಎಂಎಫ್ ಅಧಿಕಾರಿ
ಧಾರವಾಡ: ನಗರದ ಕೆಎಂಎಫ್ ಅಧಿಕಾರಿಯೊಬ್ಬರು ಕೊರೊನಾ ಸಂಕಷ್ಟದಲ್ಲೂ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರ ಕೆಲಸವನ್ನು ಮೆಚ್ಚಿ, ಅವರ ಪಾದ ಪೂಜೆಯನ್ನ ಮಾಡಿ ಗೌರವ ಸಲ್ಲಿಸಿದ್ದಾರೆ. ಧಾರವಾಡ ನಗರದ ಟೋಲ್‍ನಾಕಾದಲ್ಲಿ ಪ್ರತಿ ದಿನ 30ಕ್ಕೂ ಹೆಚ್ಚು ಪೌರಕಾರ್ಮಿಕರು ಈ ಕೊರೊನಾ ಸಮಯದಲ್ಲಿ ಕೂಡಾ ಬೆಳಗಿನ ಜಾವವೇ ಬಂದು ಕಸ ತೆಗೆದುಕೊಂಡು ಹೋಗುವುದು, ರಸ್ತೆ ಸ್ವಚ್ಛ ಮಾಡುವ ಕೆಲಸದಲ್ಲಿ ತೊಡಗಿರುತ್ತಾರೆ. ಇದನ್ನ ಧಾರವಾಡ ಕೆಎಂಎಫ್‍ನ ಟೆಕ್ನಿಕಲ್ ಆಫಿಸರ್ ನಾಗಪ್ಪ ಅರಳೋದ ಅವರು ಕಳೆದ …
Read More »Corona ಕ್ಷಯರೋಗಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಧಾರವಾಡ ಯುವಕರು
ಧಾರವಾಡ: ಕ್ಷಯರೋಗದಿಂದ ಬಳಲುತ್ತಿದ್ದ ಆಂಧ್ರ ಪ್ರದೇಶ ಮೂಲದ ವ್ಯಕ್ತಿಯನ್ನು ಯುವಕರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಧಾರವಾಡದಲ್ಲಿ ಘಟನೆ ನಡೆದಿದ್ದು, ನಗರ ಸಾರಿಗೆ ಬಸ್ ನಿಲ್ದಾಣ(ಸಿಬಿಟಿ)ದ ಬಳಿ ನರಳುತ್ತ ಬಿದ್ದಿದ್ದ ವ್ಯಕ್ತಿಯನ್ನು ಯುವಕರಾದ ದೇವರಾಜ್, ವಿನಾಯಕ ಗೊಂಧಳಿ ಮತ್ತು ಮಂಜುನಾಥ ನೀರಲಕಟ್ಟಿಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ರಸ್ತೆ ಬದಿ ಈತನ್ನು ಕಂಡ ಧಾರವಾಡ ಯುವಕರು, ಸಹಾಯ ಮಾಡಿ, ಉಪಚರಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ರಸ್ತೆ ಪಕ್ಕ ರಾತ್ರಿಯಿಡಿ ನರಳುತ್ತ ಮಲಗಿದ್ದ …
Read More »ಮದ್ಯ ಸಿಗದೇ ಕಂಗಾಲಾಗಿ ಸ್ಯಾನಿಟೈಸರ್ ಕುಡಿದ ಮದ್ಯವ್ಯಸನಿ……….
ಧಾರವಾಡ: ಲಾಕ್‍ಡೌನ್ ಹಿನ್ನೆಲೆ ಮದ್ಯ ಸಿಗದಕ್ಕೆ ಕಂಗಾಲಾದ ಮದ್ಯವ್ಯಸನಿಯೊಬ್ಬ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಗಾಂಧಿಚೌಕ್ ಬಾಲಾಜಿ ಓಣಿ ನಿವಾಸಿ ದೀಪಕ್ ಶಿಂಧೆ ಸ್ಯಾನಿಟೈಜರ್ ಕುಡಿದು ಆಸ್ಪತ್ರೆ ಸೇರಿದ್ದಾನೆ. ಈತ ಮದ್ಯ ವ್ಯಸನಿಯಾಗಿದ್ದು, ಕುಡಿಯಲು ಮದ್ಯ ಸಿಗದಕ್ಕೆ ತನ್ನ ಕೈಗೆ ಸಿಕ್ಕ ಸ್ಯಾನಿಟೈಜರ್ ಗಳನ್ನೇ ಕುಡಿದು ಬಿಟ್ಟಿದ್ದಾನೆ. ಸ್ಯಾನಿಟೈಜರ್ ಕುಡಿದ ತಕ್ಷಣವೇ ಈತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಶಹರ ಠಾಣೆ …
Read More »ಧಾರವಾಡ: ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿ ಡಿಸ್ಚಾರ್ಜ್……
ಧಾರವಾಡ: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯ ಇಬ್ಬರು ಕೊರೊನಾದಿಂದ ಗುಣಮುಖರಾದಂತಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಗುಣಮುಖನಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದಾರೆ. ದೆಹಲಿ ಪ್ರವಾಸದಿಂದ ಮರಳಿ ಬಂದಿದ್ದ ಹುಬ್ಬಳ್ಳಿ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿಗೆ (ರೋಗಿ ನಂ.194) ಕೊರೊನಾ ಸೋಂಕು ತಗುಲಿರುವುದು ಏಪ್ರಿಲ್ 9 ರಂದು …
Read More »ರಾಮನಗರ ಬಿಟ್ಟು ಬೇರೆ ಕಡೆ ಶಿಫ್ಟ್ ಮಾಡಿದ್ರೆ ತೊಂದರೆ ಆಗಲ್ವಾ:ಸಿಎಂ ಕುಮಾರಸ್ವಾಮಿಗೆ ತಿರುಗೇಟು ಜಗದೀಶ್ ಶೆಟ್ಟರ್
ಧಾರವಾಡ: ಬೆಂಗಳೂರಿನ ಪಾದರಾಯನಪುರದಲ್ಲಿ ಗಲಾಟೆ ಮಾಡಿದವರಿಗೆ ಎಲ್ಲಾದ್ರು ಒಂದು ಕಡೆ ಇಡಲೇಬೇಕಲ್ಲಾ. ಇಡೀ ರಾಜ್ಯದಲ್ಲಿ ರಾಮನಗರ ಒಂದೇ ಇದೆ ಎಂದು ಸೀಮಿತವಾಗಬೇಡಿ ಎಂದು ಸಚಿವ ಜಗದೀಶ್ ಶೆಟ್ಟರ್ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಬಳಿ ಕೋವಿಡ್-19 ಪರೀಕ್ಷೆಯ ಗಂಟಲು ದ್ರವ ಮಾದರಿ ಸಂಚಾರ ವಾಹನ ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಮನಗರ ಜೈಲು ಬಿಟ್ಟು ಬೇರೆ ಕಡೆ ಪಾದರಾಯನಪುರ ಆರೋಪಿಗಳನ್ನು ಇಟ್ಟರೆ, ಅಲ್ಲಿ ಕೂಡಾ …
Read More »ಪಿಎಸ್‍ಐ ಮಹೇಂದ್ರ ನಾಯಕ್ 2.50 ಲಕ್ಷ ಮೌಲ್ಯದ ದಿನಸಿಯನ್ನು ತಮ್ಮ ಸ್ವಂತ ಹಣದಲ್ಲಿ ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚಿದ್ದಾರೆ.
ಧಾರವಾಡ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಜೊತೆಗೆ ಪೊಲೀಸ್ ಇಲಾಖೆಯ ಸಿಬ್ಬಂದಿ ಕರ್ತವ್ಯದೊಂದಿಗೆ ಮಾನವೀಯತೆ ಮೆರೆದಿದ್ದಾರೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‍ಐ ಮಹೇಂದ್ರ ನಾಯಕ್ 2.50 ಲಕ್ಷ ಮೌಲ್ಯದ ದಿನಸಿಯನ್ನು ತಮ್ಮ ಸ್ವಂತ ಹಣದಲ್ಲಿ ಠಾಣಾ ವ್ಯಾಪ್ತಿಯ ಅಸಹಾಯಕರಿಗೆ ಹಂಚಿದ್ದಾರೆ. ಮೂಲತಃ ವಿಜಯಪುರ ತಾಲೂಕಿನ ಐನಾಪುರ ತಾಂಡಾದ ನಿವಾಸಿಯಾದ ಪಿಎಸ್‍ಐ, ಬಡತನದ ಹಿನ್ನೆಲೆಯಿಂದ ಬಂದಿದ್ದರು. ಹೀಗಾಗಿ ಲಾಕ್‍ಡೌನ್ ಸಮಯದಲ್ಲಿ ಹಸಿದವರಿಗೆ, ಅಸಹಾಯಕರಿಗೆ ನಿತ್ಯ ನೆರವಾಗುತ್ತಿದ್ದಾರೆ. ತಮ್ಮ …
Read More »ಕೋವಿಡ್-19 ಪರಿಹಾರ ನಿಧಿಗೆ ಧಾರವಾಡ ಜಿಲ್ಲೆಯ ಕಂಡಕ್ಟರ್ ಒಬ್ಬರು ತಮ್ಮ ಒಂದು ತಿಂಗಳ ವೇತನ ನೀಡಿ ಮಾನವೀಯತೆ ಮೆರೆದಿದ್ದಾರೆ.
ಧಾರವಾಡ: ಕೋವಿಡ್-19 ಪರಿಹಾರ ನಿಧಿಗೆ ಜಿಲ್ಲೆಯ ಕಂಡಕ್ಟರ್ ಒಬ್ಬರು ತಮ್ಮ ಒಂದು ತಿಂಗಳ ವೇತನ ನೀಡಿ ಮಾನವೀಯತೆ ಮೆರೆದಿದ್ದಾರೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸವರಾಜ ನೀಲಪ್ಪ ಗಾಣಿಗೇರ ಅವರು ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ 25 ಸಾವಿರ ರೂ.ಗಳನ್ನು ಮುಖ್ಯಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ನೀಡಿದ್ದಾರೆ. ಬಸವರಾಜ ಅವರು ನವಲಗುಂದ ತಾಲೂಕಿನ ಶಿರಕೋಳ ಗ್ರಾಮದ ನಿವಾಸಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಒಂದನೇ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚೆಕ್ ಸ್ವೀಕರಿಸಿದ …
Read More »