Breaking News

ಧಾರವಾಡ

ಯೋಗೇಶ್‌ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ವಶಕ್ಕೆ ಪಡೆದಿದ್ದಾರೆ.

ಧಾರವಾಡ: ಜಿ.ಪಂ. ಸದಸ್ಯ ಯೋಗೇಶ್‌ಗೌಡ ಕೊಲೆ ಪ್ರಕರಣ ಸಂಬಂಧ ಸಿಬಿಐ ಮಾಜಿ ಸಚಿವ ವಿನಯ್ ಕುಲಕರ್ಣಿ ವಶಕ್ಕೆ ಪಡೆದಿದ್ದಾರೆ. ಇಂದು ಬೆಳಗ್ಗೆ ವಿನಯ್ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರನ್ನು ವಶಕ್ಕೆ ಪಡೆದು ಧಾರವಾಡ ಉಪನಗರ ಠಾಣೆಗೆ ಕರೆದೊಯ್ದಿದ್ದಾರೆ.     2016ರಲ್ಲಿ ಧಾರವಾಡದ ಸಪ್ತಾಪುರದಲ್ಲಿ ಯೋಗೇಶ್​ ಗೌಡ ಮಾಲೀಕತ್ವದ ಜಿಮ್​ ಬಳಿ ಯೋಗೇಶ್ ಗೌಡ ಹತ್ಯೆ ನಡೆದಿತ್ತು. ಸೆಪ್ಟೆಂಬರ್ 2019ರಲ್ಲಿ ಸಿಬಿಐ ಹತ್ಯೆ …

Read More »

ಧಾರವಾಡದ ಲಕ್ಷ್ಮಿ ನಾರಾಯಣ ದೇವಸ್ಥಾನದ ಜಾತ್ರೆಗೆ ಈ ವರ್ಷ ನಿರ್ಬಂಧ ಹೇರಲಾಗಿದೆ.

ಧಾರವಾಡ: ಕೊರೊನಾ ಹಿನ್ನೆಲೆ ನಗರದ ಲಕ್ಷ್ಮಿ ನಾರಾಯಣ ದೇವಸ್ಥಾನದ ಜಾತ್ರೆಗೆ ಈ ವರ್ಷ ನಿರ್ಬಂಧ ಹೇರಲಾಗಿದೆ. ಈ ಮೂಲಕ 117 ವರ್ಷಗಳ ಜಾತ್ರೆಗೆ ಈ ವರ್ಷ ಬ್ರೇಕ್ ಬಿದ್ದಂತಾಗಿದೆ. ಕಳೆದ 117 ವರ್ಷಗಳಿಂದ ಧಾರವಾಡ ನಗರದ ರವಿವಾರ ಪೇಟೆಯಲ್ಲಿರುವ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಪಾರಂಪರಿಕವಾಗಿ ಜಾತ್ರೆಯನ್ನು ಆಚರಿಸುತ್ತ ಬಂದಿದ್ದರು. ಅತ್ಯಂತ ವಿಜ್ರಂಭಣೆಯಿಂದ ಮಾಡಲಾಗುವ ದಸರಾ ಹಬ್ಬದ ವೇಳೆಯೇ ಲಕ್ಷ್ಮಿ ನಾರಾಯಣ ಜಾತ್ರೆಯನ್ನು ಮಾಡುವ ಈ ಸಂಪ್ರದಾಯಕ್ಕೆ ಕೊರೊನಾದಿಂದಾ ತಡೆಯಾಗಿದೆ. ಪ್ರತಿ …

Read More »

ದುಷ್ಕರ್ಮಿಗಳಿಂದ ದನದ ಕೊಟ್ಟಿಗೆಗೆ ಬೆಂಕಿ: 3 ಹಸುಗಳು ಸಜೀವ ದಹನ

ಧಾರವಾಡ: ದನದ ಕೊಟ್ಟಿಗೆಗೆ ಬೆಂಕಿ ತಾಗಿ 3 ಹಸುಗಳ ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಗುಡ್ಡದ ಹುಲಿಕಟ್ಟಿ ಗ್ರಾಮದಲ್ಲಿ ನಡೆದಿದೆ. ಅವಘಡದಲ್ಲಿ ಗ್ರಾಮದ ನೀಲಕಂಠಗೌಡ ಪಾಟೀಲ್‌ ಎಂಬುವವರಿಗೆ ಸೇರಿದ್ದ ದನದ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿದೆ. ಗ್ರಾಮದ ಹೊರವಲಯದಲ್ಲಿರುವ ಕೊಟ್ಟಿಗೆಗೆ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಕೊಟ್ಟಿಗೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ. ರಾಸುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಹ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದುಬಂದಿದೆ. …

Read More »

ಚಾಲಕ ಉದ್ಧಟತನ ಪ್ರದರ್ಶಿಸಿರುವ ಘಟನೆ

ಧಾರವಾಡ: ತುಂಬಿ ಹರಿಯುತ್ತಿರುವ ಸೇತುವೆ ಮೇಲೆಯೇ ಬಸ್​ ಚಲಾಯಿಸಿ ಚಾಲಕ ಉದ್ಧಟತನ ಪ್ರದರ್ಶಿಸಿರುವ ಘಟನೆ ಇನಾಮಹೊಂಗಲ ಮತ್ತು ಹಾರೊಬೆಳವಡಿ ಗ್ರಾಮದ ಮಧ್ಯ ಇರುವ ತಾತ್ಕಾಲಿಕ ಸೇತುವೆ ಬಳಿ ನಡೆದಿದೆ. ನಿನ್ನೆ ರಾತ್ರಿ ಜಿಲ್ಲೆಯ ಅನೇಕ ಭಾಗಗಳಲ್ಲಿ ಮಳೆಯಾದ ಹಿನ್ನೆಲೆ ನದಿ- ಹಳ್ಳಕೊಳ್ಳಗಳು ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇಂದು ಬೆಳಗ್ಗೆ ಸವದತ್ತಿಯಿಂದ ಧಾರವಾಡಕ್ಕೆ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಚಾಲಕ ನೀರು ಹರಿಯುತ್ತಿರುವ ಸೇತುವೆ ಮೇಲೆಯೇ ಬಸ್​ ಚಲಾಯಿಸಿದ್ದಾನೆ. ಸೇತುವೆಯ …

Read More »

ಧಾರವಾಡದ ಹೆಸರು-ಉದ್ದು ಖರೀದಿಗೆ ಕೇಂದ್ರ ಗ್ರೀನ್ ಸಿಗ್ನಲ್

ನವದೆಹಲಿ,  – ಧಾರವಾಡ ಜಿಲ್ಲಾಯ ರೈತರ ಬೇಡಿಕೆಗೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಧಾರವಾಡ ಜಿಲ್ಲಾಯಲ್ಲಿ ಖರೀದಿ ಕೇಂದ್ರಗಳ ಮೂಲಕ ಹೆಸರುಕಾಳು ಹಾಗೂ ಉದ್ದು ಖರೀದಿಯನ್ನು ಕೂಡಲೇ ಆರಂಭಿಸಲು ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಕೇಂದ್ರ ಕೃಷಿ ಸಚಿವರಾದ ನರೇಂದ್ರ ಸಿಂಗ್ ತೋಮರ್ ಈ ಬಗ್ಗೆ ಆದೇಶ ಪ್ರತಿ ಹೊರಡಿಸಿದ್ದು , ರೈತರಿಗೆ ಸಂತಸ ತಂದಿದೆ. ಈ ವಿಷಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದು ಜಿಲ್ಲಾಯ ರೈತರು …

Read More »

ಬಿಜೆಪಿ ಮುಖಂಡನ ಕೊಲೆ ಪ್ರಕರಣ: ಪತ್ನಿ ಸೇರಿ ಹಲವರ ವಿಚಾರಣೆ

ಧಾರವಾಡ : ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿರುವ ಸಿಬಿಐ ಅಧಿಕಾರಿಗಳ ತಂಡವು ಎರಡು ದಿನಗಳಿಂದ ಧಾರವಾಡದಲ್ಲಿಯೇ ಠಿಕಾಣಿ ಹೂಡಿದ್ದು ಗುರುವಾರರಂದು ಯೋಗೀಶ್‌ ಗೌಡರ ಪತ್ನಿ ಮಲ್ಲಮ್ಮ ಸೇರಿ ಹಲವು ಕಾಂಗ್ರೆಸ್‌ ಮುಖಂಡರ ವಿಚಾರಣೆ ನಡೆಸಿತು. ಕೊಲೆಯಾದ ಯೋಗೀಶಗೌಡ ಅವರ ಪತ್ನಿ ಮಲ್ಲಮ್ಮ ಹಾಗೂ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ ಮಾಡಲು ಪ್ರಮುಖ ಪಾತ್ರ ವಹಿಸಿದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಿವಾನಂದ ಕರಿಗಾರ, …

Read More »

ಜಮೀರ್ ಪರ ಮಾತಾಡಿ ಸಿದ್ದರಾಮಯ್ಯನವರು ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ : ಸಚಿವ ಜಗದೀಶ್ ಶೆಟ್ಟರ್​

ಧಾರವಾಡ : ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್​ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು ಕ್ಯಾಸಿನೋಗೂ ಹೋಗ ಬಾರದು, ಜೂಜು ಆಡಬಾರದು ಎಂದು ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ, ಜಮೀರ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಅಂತಾ ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಶನಿವಾರ ಭೇಟಿ ಮಾಡಿ ಪ್ರತಿಭಟನೆಗೆ ಬೆಂಬಲ

ಧಾರವಾಡ:  ಲ್ಯಾಪ್ ಟಾಪ್  ವಿತರಿಸುವಂತೆ ವಿವಿಧ ಸೌಲಭ್ಯ ಒದಗಿಸುವಂತೆ  ಆಗ್ರಹಿಸಿ ಕಳೆದ ಮೂರು  ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ  ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಶನಿವಾರ ಭೇಟಿ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.  ಕೊರೊನಾ ಸಂಕಷ್ಟದಿಂದಾಗಿ  ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ  ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ವಿಳಂಬವಾಗಿದೆ. ಈ  ಮೊದಲು  ಲ್ಯಾಪ್ ಟ್ಯಾಪ್ ವಿತರಿಸುವುದಾಗಿ  ಹೇಳಿದ ವಿವಿ, ಇದೀಗ  …

Read More »

ಹೋರಿ ಎಲ್ಲಿ ಎಷ್ಟು ಮೇಯ್ದರೇನು, ನಮ್ಮ ಮನೆಗೆ ಬರಬೇಕು:ಕಿಡಿಕಾರಿದ ಹೊರಟ್ಟಿ

ಧಾರವಾಡ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರನ್ನು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೋರಿಗೆ ಹೋಲಿಸಿ ಮಾತನಾಡಿದ್ದಾರೆ. ಧಾರವಾಡದಲ್ಲಿ ರಾಜ್ಯ ಸರ್ಕಾರದ ಭೂಸುಧಾರಣೆ ಕಾಯ್ದೆ ಹಾಗೂ ಹಲವು ವಿಷಯಗಳ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ತಾಳ ಇಲ್ಲ, ತಂತಿಯೂ ಇಲ್ಲ. ವಲಸಿಗರು ಮತ್ತು ಮೂಲರ ಮಧ್ಯೆ ಇದ್ದಾರೆ ಎಂದು ಹೇಳಿದರು. ಈ ಹಿಂದೆ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಇತ್ತು. ಬಿಜೆಪಿ-ಜೆಡಿಎಸ್ ಸರ್ಕಾರವೂ ರಚನೆ ಆಗಿತ್ತು. ಆದರೆ ಈಗ …

Read More »

ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ.

ಧಾರವಾಡ: ಬ್ಯಾಂಕ್ ಲಾಕರಿನಲ್ಲಿ ಸಹಜವಾಗಿ ಚಿನ್ನದ ಒಡವೆ, ಹಣ ಅಥವಾ ಆಸ್ತಿ ದಾಖಲೆಗಳನ್ನು ಇಟ್ಟಿರುವುದನ್ನ ನೋಡಿದ್ದೆವೆ. ಆದರೆ ಧಾರವಾಡ ನಗರದ ಗಾಂಧಿನಗರ ನಿವಾಸಿಯೊರ್ವರು ರಾಷ್ಟ್ರಧ್ವಜವನ್ನು ತಮ್ಮ ಬ್ಯಾಂಕ್ ಲಾಕರಿನಲ್ಲಿ ಇಟ್ಟಿರುತ್ತಾರೆ. ಗಂಗಾಧರ ಕುಲಕರ್ಣಿ(86) ಅವರು ತಮ್ಮ ಸಿಂಡಿಕೇಟ್ ಬ್ಯಾಂಕ್ ಲಾಕರಿನಲ್ಲಿ ಈ ರಾಷ್ಟ್ರಧ್ವಜವನ್ನು ಇಡುತ್ತಾರೆ. ಇದನ್ನು ಆಗಸ್ಟ್ 15 ಬಂದಾಗ ಮಾತ್ರ ಅಲ್ಲಿಂದ ತಂದು ಧ್ವಜಾರೋಹಣ ಮಾಡುತ್ತಾರೆ. ಕಳೆದ 7 ವರ್ಷಗಳಿಂದ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಒಟ್ಟು 73 ವರ್ಷಗಳ …

Read More »