Breaking News

ಅಂತರಾಷ್ಟ್ರೀಯ

ಅಖಿಲ ಭಾರತ ಮಹಿಳಾ ಕಬಡ್ಡಿ ಟೂರ್ನಿ: ಲಕ್ಷ-ಲಕ್ಷ ಬಹುಮಾನ ಗೆದ್ದ ಮಹಿಳಾ ತಂಡಗಳು..

ಬಾಗಲಕೋಟೆ: ಇತ್ತೀಚಿನ ದಿನಗಳಲ್ಲಿ ಕ್ರೀಡೆಗಳು ನಶಿಸಿ ಹೋಗುತ್ತಿದ್ದು, ಇವುಗಳ ಮಧ್ಯೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೋನಾ ಹಾವಳಿಯಿಂದ ರಾಷ್ಟ್ರ ಮಟ್ಟದ ಪಂದ್ಯಾವಳಿಗಳೇ ವಿರಳವಾಗಿದ್ದವು, ಆದರೆ ಇದೀಗ ಮಹಿಳಾ ಕಬಡ್ಡಿಗೂ ಉತ್ತೇಜನ ನೀಡಬೇಕೆಂಬ ಉದ್ದೇಶದಿಂದಲೇ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದಲ್ಲಿ ಅಖಿಲ ಭಾರತ ಮಹಿಳಾ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ಒಂದೆಡೆ ಗಂಡು ಮಕ್ಕಳಿಗೆ ತಾವೇನು ಕಮ್ಮಿ ಇಲ್ಲವೆಂಬಂತೆ ಭರ್ಜರಿ ಕಬಡ್ಡಿ ಆಡಿದ ಯುವತಿಯರು, ಮತ್ತೊಂದೆಡೆ ಯುವತಿಯರ ಕಬಡ್ಡಿ ಆಟ ಕಂಡು ಚಪ್ಪಾಳೆ ತಟ್ಟಿ …

Read More »

ಸಿದ್ದರಾಮಯ್ಯ ತವರಲ್ಲಿ ಕೇಸರಿ ರಣಕಹಳೆ: ದಲಿತ ಮತಗಳನ್ನು ಸೆಳೆಯಲು ಬಿಜೆಪಿ ಪ್ಲಾನ್

ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಿಜೆಪಿ ನಾಯಕರು ಹೆಚ್ಚು ಒತ್ತು ನೀಡುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಹೋದ ಮೇಲೆ ಬಿಜೆಪಿ ನಾಯಕರು ಫುಲ್ ಆಕ್ಟೀವ್ ಆಗಿದ್ದಾರೆ. ಹಳೇ ಮೈಸೂರಿನ ದಲಿತ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದ್ದು, ಮೀಸಲು ಕ್ಷೇತ್ರಗಳ ಜತೆ ಇತರೆ ಕ್ಷೇತ್ರಗಳ ಮೇಲೆ ಕೂಡ ಬಿಜೆಪಿ ಕಣ್ಣಿಟ್ಟಿದೆ. ಈ …

Read More »

ಕೆ.ಆರ್‌.ಪೇಟೆಯಲ್ಲಿ ಬಸ್‌ ಉರುಳಿ 32 ಮಂದಿಗೆ ಗಾಯ, ಹುಕ್ಕೇರಿ ಸಮೀಪ ಹೊತ್ತಿ ಉರಿದ ಬಸ್

ಮಂಡ್ಯ/ಚಿಕ್ಕೋಡಿ: ಚಾಲಕನ ನಿಯಂತ್ರಣ ತಪ್ಪಿ ಕೆಎಸ್​ಆರ್​ಟಿಸಿ ಬಸ್ ಉರುಳಿ ಬಿದ್ದು 32 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮುರುಕನಹಳ್ಳಿ ಬಳಿಯ ಚನ್ನರಾಯಪಟ್ಟಣ- ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಗದಗದಿಂದ ಮೈಸೂರಿಗೆ ಹೋಗುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಬಸ್ ವೇಗದಲ್ಲಿದ್ದರಿಂದ ತಡೆಗೋಡೆ ಮುರಿದಿದೆ. ಬಸ್ ಪಲ್ಟಿಯಾಗಿ ರಸ್ತೆ ಬದಿಯ ಜಮೀನಿಗೆ ಉರುಳಿ ಬಿದ್ದಿದೆ. ಗಾಯಾಳುಗಳನ್ನು ಕೆ ಆರ್ …

Read More »

ಬಾಗಲಕೋಟೆಯಲ್ಲಿ ಓವರ್‌ ಟೇಕ್‌ ಮಾಡಲು ಹೋಗಿ ಎರಡು ಟ್ರ್ಯಾಕ್ಟರ್‌ ಪಲ್ಟಿ; ಸ್ಥಳದಲ್ಲೇ ಮೂವರ ದುರ್ಮರಣ

ಬಾಗಲಕೋಟೆ ಜಿಲ್ಲೆಯ ಮೂದೋಳ ತಾಲೂಕಿನ ಕುಳಲಿ ಗ್ರಾಮದ ನಿರಾಣಿ ಸಕ್ಕರೆ ಕಾರ್ಖಾನೆ ಬಳಿ ಘಟನೆ ನಡೆದಿದೆ.,.20 ವರ್ಷದ ಗೋವಿಂದ್‌ ಪಾಟೀಲ್‌, 20 ವರ್ಷದ ಹನಮಂತ್‌ ಬೊಮ್ಮಕ್ಕನವರ್‌, 18 ವರ್ಷದ ಸದಾಶಿವ ಬೆಳಗಲಿ ಬಾಗಲಕೋಟೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಎರಡೂ ಟ್ರ್ಯಾಕ್ಟರ್‌ ಓವರ್‌ ಟೇಕ್‌ ಮಾಡಲು ಹೋದಾಗ ದುರ್ಘಟನೆ ಸಂಭವಿಸಿದೆ. ಮುಂದೆ ವೇಗವಾಗಿ ಹೋಗುತ್ತಿದ್ದ ಟ್ರ್ಯಾಕ್ಟರ್‌ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಟ್ರ್ಯಾಕ್ಟರ್‌ ಗುದ್ದಿದ್ದರಿಂದ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಈ ವೇಳೆ ಟ್ರ್ಯಾಕ್ಟರ್‌ ನಲ್ಲಿದ್ದ ಇಬ್ಬರು …

Read More »

ಅಂತ್ಯಕ್ರಿಯೆಗೆ ಸಾಗುವಾಗಲೇ ಕಣ್ತೆರೆದ ವೃದ್ಧೆ; ಬದುಕಿ ಮತ್ತೆ ಪ್ರಾಣ ಬಿಟ್ಟು ಅಚ್ಚರಿ!

ಇನ್ನೇನು ಅಂತ್ಯಕ್ರಿಯೆ ಮಾಡಬೇಕೆನ್ನುವಷ್ಟರಲ್ಲಿ ಮೃತಳಾಗಿದ್ದಾಳೆ ಎಂದುಕೊಂಡ ವೃದ್ಧೆ ಕಣ್ತೆರೆದು ನೋಡಿ, ಚಹಾ ಕುಡಿದ ವಿಲಕ್ಷಣ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್​ನಲ್ಲಿ ನಡೆಯಿತು. ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್‌ನಲ್ಲಿ ಇತ್ತೀಚೆಗೆ ವಿಲಕ್ಷಣ ಘಟನೆಯೊಂದು ನಡೆದಿದೆ. ಮೃತಪಟ್ಟಿದ್ದಾಳೆ ಎಂದು ವೈದ್ಯರಿಂದ ಘೋಷಿಸಲ್ಪಟ್ಟ ನಂತರ, ಅಂತ್ಯಕ್ರಿಯೆಗೆ ಕರೆದೊಯ್ಯುವಾಗ ವೃದ್ಧೆಯೊಬ್ಬರು ಕಣ್ಣು ತೆರೆದಿದ್ದು ಅಚ್ಚರಿ ಮೂಡಿಸಿದೆ. ಜಿಲ್ಲೆಯ ಬಿಲಾಸ್‌ಪುರ ಗ್ರಾಮದ ನಿವಾಸಿ ಹರಿಭೇಜಿ (81) ಎಂದು ಗುರುತಿಸಲಾದ ಮಹಿಳೆಯನ್ನು ಡಿಸೆಂಬರ್ 23 ರಂದು ಮೆದುಳಿನ ರಕ್ತಸ್ರಾವದ …

Read More »

ಶಿವಮೊಗ್ಗ: ಆಂಬ್ಯುಲೆನ್ಸ್ ಆಗಮನ ವಿಳಂಬ, ಲೈನ್ ಮ್ಯಾನ್ ಸಾವು

ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಹೆದ್ದೂರಿನಲ್ಲಿ ವಿದ್ಯುತ್ ಕಂಬದ ಮೇಲೆ ಕೆಲಸ ಮಾಡುತ್ತಿದ್ದ ಲೈನ್ ಮ್ಯಾನ್ ಒಬ್ಬರು ಕಂಬದಿಂದ ಬಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಮೃತರನ್ನು ರವಿ ನಾಯಕ (37) ಎಂದು ಗುರುತಿಸಲಾಗಿದೆ. ಅವರು ಹೆದ್ದೂರು ಬಳಿ ಕೆಲಸ ಮಾಡುತ್ತಿದ್ದಾಗ ಕಂಬದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಕಟ್ಟಕಲ್ಲು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ನಂತರ ಆಂಬ್ಯುಲೆನ್ಸ್ ಆಗಮನ ವಿಳಂಬವಾದಾಗ ತೀರ್ಥಹಳ್ಳಿ ಆಸ್ಪತ್ರೆಗೆ ಸ್ಥಳಾಂತರಿಸಲು ಕೇಳಲಾಯಿತು ಮತ್ತು ಸ್ಥಳೀಯರು …

Read More »

ಈ ಅಧಿಕಾರಿಯ ಮಾನವೀಯ ಕಾರ್ಯವನ್ನು ಮೆಚ್ಚಲೇ ಬೇಕು…!

ಬೆಳಗಾವಿ :ಯಕ್ಸಂಬಾ-ರಾಯಬಾಗ ರಸ್ತೆ ಮಧ್ಯೆ ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಯೊಬ್ಬರನ್ನು ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ಸೇರಿಸಿ ಸಮಯಪ್ರಜ್ಞೆಯನ್ನು ಮೆರೆದಿದ್ದಾರೆ. ಕಬ್ಬು ಕಟಾವು ಕಾರ್ಮಿಕರಾಗಿದ್ದ ಮಹಾರಾಷ್ಟ್ರ ರಾಜ್ಯದ ಉಸ್ಮಾನಾಬಾದ್ ಮೂಲದ ದತ್ತಾ ಎಂಬುವರು ಬೈಕ್ ನಲ್ಲಿ ತೆರಳುವಾಗ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ತೀವ್ರ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರೂ ಯಾರೂ ಅವರ ರಕ್ಷಣೆಗೆ ಮುಂದಾಗಿರಲಿಲ್ಲ. …

Read More »

ಇಡಿ ಅಧಿಕಾರಿಗಳು ಫಿಲ್ಡ್​​ಗೆ ಇಳಿದು ಹುಡುಕಿದ್ರು ಸಿಗದ ಬಿಬಿಎಂಪಿ ಕೊರೆದ 9,588 ಕೊಳವೆ ಬಾವಿಗಳು

ಬೆಂಗಳೂರು: ನಗರದಲ್ಲಿ ಕೊಳವೆ ಬಾವಿ (Borewells) ಹಾಗೂ ಶುದ್ಧಕುಡಿಯುವ ನೀರಿನ ಘಟಕ (Drinking water plants) ಸ್ಥಾಪನೆ ವಿಚಾರದಲ್ಲಿ ನಡೆದ ಮಹಾ ಭ್ರಷ್ಟಾಚಾರದ (Corruption) ಬೆನ್ನು ಬಿದ್ದ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವಂತಾಗಿದೆ. ಬಿಬಿಎಂಪಿ (BBMP) ವತಿಯಿಂದ ಕೊರೆಯಲಾದ ಸಾವಿರಾರು ಕೊಳವೆ ಬಾವಿಗಳೇ ಅಧಿಕಾರಿಗಳ ಕಣ್ಣಿಗೆ ಕಾಣಿಸುತ್ತಿಲ್ಲ. ಸ್ಥಳ ಪರಿಶೀಲನೆ ವೇಳೆಯೂ 9,588 ಕೊಳವೆ ಬಾವಿಗಳ ಪೈಕಿ 5 ಸಾವಿರ ಕೊಳವೆ ಬಾವಿಗಳ ಲೆಕ್ಕ ಸಿಗುತ್ತಿಲ್ಲ. ನೂರಾರು ಕೋಟಿ ಖರ್ಚು ಮಾಡಿ ಕೊರೆಸಿದ ಕೊಳವೆ ಬಾವಿಗಳೇ ನಾಪತ್ತೆಯಾಗಿದೆ. ಹಾಗಿದ್ದರೆ ಬಿಬಿಎಂಪಿಯಿಂದ …

Read More »

ಗವಿಮಠದ ಜಾತ್ರೆ ಎಂದರೆ ಕೇವಲ ಜನಜಂಗುಳಿ ಅಲ್ಲ, ಸಾಮಾಜಿಕ ಕಾರ್ಯಗಳಿಗೂ ಸೈ

ಕೊಪ್ಪಳ ಗವಿ ಮಠದಲ್ಲಿ ವಾರ್ಷಿಕ ಜಾತ್ರೆ ನಡೆಯುತ್ತಿದೆ. ಜಾತ್ರೆಯಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆ ಸೇರಿದಂತೆ ಇಡೀ ಮಠದಿಂದ ತ್ರಿವಿಧ ದಾಸೋಹಗಳು ನಡೆಯುತ್ತಿವೆ. ಇದು ಒಂದು ಕಡೆಯಾದರೆ ಇನ್ನೊಂದು ಕಡೆ, ಜಾತ್ರೆಯ ಸಂದರ್ಭದಲ್ಲಿ ಇಡೀ ವರ್ಷ ಸಮಾಜಿಕ ಸಂದೇಶ ನೀಡುವಂಥ ಸಂಕಲ್ಪ ಮಾಡಲಾಗುತ್ತಿದೆ. gavi mutt ಹೈಲೈಟ್ಸ್‌: ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಕೊಪ್ಪಳ ಗವಿಮಠದಲ್ಲಿ ಜಾತ್ರೆಯ ಸಂದರ್ಭದಲ್ಲಿ ಇಡೀ ವರ್ಷ ಸಮಾಜಿಕ ಸಂದೇಶ ನೀಡುವಂಥ ಸಂಕಲ್ಪ ಮಾಡಲಾಗುತ್ತಿದೆ. …

Read More »

ವಿಧಾನಸೌಧದ ಬಳಿ ಹಣ ಪತ್ತೆ: ಪೊಲೀಸರ ವಿರುದ್ಧ ಆರೋಪಿ ಜಗದೀಶ್‌ ಪರ ವಕೀಲ ಗರಂ

ಬೆಂಗಳೂರು: ವಿಧಾನಸೌಧ ಬಳಿ ಪಿಡಬ್ಲ್ಯೂಡಿ ಎಂಜಿನಿಯರ್‌ ಜಗದೀಶ್‌ ಎಂಬವರಿಂದ 10 ಲಕ್ಷ ರೂಪಾಯಿ ಹಣ ಸಿಕ್ಕಿರುವ ಪ್ರಕರಣ ನಿನ್ನೆ ನಡೆದಿತ್ತು. ಈ ಕುರಿತು ಟ್ವೀಟ್ ಮಾಡಿರುವ ಬಂಧಿತ ಎಂಜಿನಿಯರ್‌ ಜಗದೀಶ್ ಪರ ವಕೀಲ ರಾಜು ಗಡೇಕರ್, ‘ಡಿಸಿಪಿ ಆಣತಿಯಂತೆ ವಕೀಲರೊಂದಿಗೆ ಠಾಣೆಗೆ ಹಾಜರಾದ ವ್ಯಕ್ತಿಯನ್ನು ಅಕ್ರಮವಾಗಿ ಕೂಡಿ ಹಾಕಿದ್ದು, ನಂತರ ಭೇಟಿ ಮಾಡಲು ಅವಕಾಶ ಕಲ್ಪಿಸಿಲ್ಲ’ ಎಂದು ಆರೋಪಿಸಿದ್ದಾರೆ. ಎಂಜಿನಿಯರ್ ಜಗದೀಶ್‌ ಬ್ಯಾಗ್​ನಲ್ಲಿ ಹಣ ಪತ್ತೆ: ಮಂಡ್ಯದ ಸಹಾಯಕ ಕಾರ್ಯ …

Read More »