ನವದೆಹಲಿ: ಕೊರೋನಾ ಸೋಂಕು ದೃಢಪಟ್ಟ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಂದ ಹಿಡಿದು ಕೆಲ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಬದಲು ಖಾಸಗಿ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ಸಹ ವ್ಯಕ್ತವಾಗುತ್ತಿದೆ. ಸೋಂಕು ದೃಢಪಟ್ಟ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುಗ್ರಾಮದಲ್ಲಿರುವ ಮೇದಾಂತ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ …
Read More »ಮತ್ತೆ 4ಸಾವಿರ ಕಿಟ್‌ಗಳ ಪೂರೈಕೆ
ಬೆಳಗಾವಿ: ‘ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಕೋವಿಡ್-19 ಹೊರತುಪಡಿಸಿ ಇತರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುರ್ತು ಚಿಕಿತ್ಸೆ ನೀಡಲು ನಿರಾಕರಿಸಿದರೆ ಅಂತಹ ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಎಚ್ಚರಿಕೆ ನೀಡಿದರು. ಇಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ‘ತುರ್ತು ಚಿಕಿತ್ಸೆಗೆ ಅಗತ್ಯ ಇರುವವರಿಗೆ ತಪಾಸಣೆ ನಡೆಸಿ ಪ್ರಮಾಣಪತ್ರವನ್ನು ನೀಡಲು ಜಿಲ್ಲೆಗೆ ಮತ್ತೆ 4ಸಾವಿರ ರ‍್ಯಾಪಿಡ್ ಆಂಟಿಜೆನ್ ಕಿಟ್‌ಗಳು ಬಂದಿವೆ. ಪ್ರಮಾಣಪತ್ರ ಪಡೆದ ಬಳಿಕವೂ …
Read More »ಮಕ್ಕಳ ಪರೇಡ್, ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲ
ಬೆಳಗಾವಿ: ‘ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು. ಇಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಆ.15ರ ಬೆಳಿಗ್ಗೆ 9ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಮತ್ತು ಅಂತರ ಕಾಯ್ದುಕೊಂಡು ಭಾಗವಹಿಸಬೇಕು. ಪ್ರತಿ ವರ್ಷದಂತೆ …
Read More »ಬಿಎಸ್‍ವೈ ಪುತ್ರಿ, ಕಾವೇರಿ ನಿವಾಸದ ಸಿಬ್ಬಂದಿಗೂ ಕೊರೊನಾ ಶಾಕ್.!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಯಾರ್ಯಾರಿಗೆ ಕೊರೊನಾ ಸೋಂಕು ಇದೆ ಎಂಬುದರ ಪತ್ತೆ ನಡೆಸಿದಾಗ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಯಡಿಯೂರಪ್ಪ ಪುತ್ರಿ ಪದ್ಮಾವತಿ ಹಾಗೂ ಕಾವೇರಿ ನಿವಾಸದ ಮನೆಗೆಲಸದವರು, ಅಡುಗೆಯವರು ಹಾಗೂ ವಿಶೇಷ ಕರ್ತವ್ಯಾಧಿಕಾರಿ ಕಾರು ಚಾಲಕ ಸೇರಿದಂತೆ 6 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಯಡಿಯೂರಪ್ಪ ಅವರು ಅಡ್ಮಿಟ್ ಆಗಿರುವ ವಾರ್ಡ್‍ನಲ್ಲೇ ಪುತ್ರಿ ಪದ್ಮಾವತಿ ಅವರೂ ಕೂಡ ದಾಖಲಾಗಿದ್ದಾರೆ.
Read More »ಸಿಎಂ ನಿವಾಸ ಕಾವೇರಿಯ 9 ಮಂದಿಗೆ ಕೊರೊನಾ: ಕುಟುಂಬಸ್ಥರಿಗೆ ಪರೀಕ್ಷೆ
ಸಿಎಂ ನಿವಾಸ ಕಾವೇರಿಯಲ್ಲಿ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಸಿಎಂ ಯಡಿಯೂರಪ್ಪ ಸೇರಿದಂತೆ 8 ಮಂದಿಗೆ ಕೊರೊನಾದ ರೋಗ ಲಕ್ಷಣ ಕಂಡು ಬಂದಿಲ್ಲ. ಆದ್ರೆ ಕೊರೊನಾ ಇರುವುದು ದೃಢಪಟ್ಟಿದ್ದು,ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಸಿಎಂ ಸಂಪರ್ಕಕ್ಕೆ ಬಂದಿದ್ದ ಜನರಿಗೆ ಸೆಲ್ಫ್ ಕ್ವಾರಂಟೈನ್ ಆಗುವಂತೆ ಹೇಳಲಾಗಿದೆ.ಸಿಎಂ ಕುಟುಂಬದ ಎಲ್ಲ ಸದಸ್ಯರಿಗೂ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಕುಟುಂಬ ಸದಸ್ಯರಿಗೆ ಬಿಬಿಎಂಪಿ ಆಂಟಿಜೆನ್ ಟೆಸ್ಟ್ ಮಾಡ್ತಿದೆ. ಸಿಎಂ ನಿವಾಸದ …
Read More »ಸಿಎಂ ತವರು ಶಿವಮೊಗ್ಗದಲ್ಲಿ ಮತ್ತೊಬ್ಬ ಶಾಸಕರಿಗೆ ಕೋವಿಡ್-19 ಪಾಸಿಟಿವ್
ಶಿವಮೊಗ್ಗ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಮತ್ತೋರ್ವ ಶಾಸಕರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್ ಅವರಿಗೆ ಕೋವಿಡ್-19 ಪಾಸಿಟಿವ್ ಪತ್ತೆಯಾಗಿದೆ. ರ್ಯಾಪಿಡ್ ಆಯಂಟಿಜೆನ್ ಟೆಸ್ಟ್ ನಲ್ಲಿ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ. ಇಂದು ಆರ್.ಪ್ರಸನ್ನ ಕುಮಾರ್ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡರು. ಈ ವೇಳೆ ಸೋಂಕು ಪತ್ತೆಯಾಗಿದೆ. ಆದರೆ ರೋಗ …
Read More »ಸೋಂಕಿನಿಂದ ಗುಣಮುಖ: ಬೆಳಗಾವಿಯಲ್ಲಿ ಯುವಕನಿಗೆ ಮಾಲೆ ಹಾಕಿ ಪಟಾಕಿ ಸಿಡಿಸಿ ಸ್ವಾಗತ
ಬೆಳಗಾವಿ: ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾದ ಯುವಕನಿಗೆ ಮಾಲೆ ಹಾಕಿ, ಪಟಾಕಿ ಸಿಡಿಸಿ ಇಲ್ಲಿಯ ಖಡಕ್ ಗಲ್ಲಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು. ಆಸ್ಪತ್ರೆಯಿಂದ ಬಿಡುಗಡೆ ಆಗಿ ಬರುತ್ತಿದ್ದಂತೆ ಖಡಕ್ ಗಲ್ಲಿಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿ ಬರುತ್ತಿದ್ದಂತೆ ಪಟಾಕಿ ಸಿಡಿಸಿದ ಸ್ಥಳೀಯ ಯುವಕರು ಸಂಭ್ರಮಿಸಿದರು. ಹತ್ತು ದಿನಗಳ ಹಿಂದೆ ಖಡಕ್ ಗಲ್ಲಿಯ 35 ವರ್ಷ ವಯಸ್ಸಿನ ಈ ವ್ಯಕ್ತಿಗೆ ಕೋವಿಡ್-19 ಸೋಂಕು ವಕ್ಕರಿಸಿತ್ತು. ಇಲ್ಲಿನ ಕೋವಿಡ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ …
Read More »ಜಿಲ್ಲಾಡಳಿತ ಮತ್ತು ಬಿಮ್ಸ್ ಎಡವಟ್ಟು: ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ?
ಬೆಳಗಾವಿ: ಜಿಲ್ಲಾಡಳಿತ ಮತ್ತು ಬಿಮ್ಸ್ ಆಸ್ಪತ್ರೆ ಎಡವಟ್ಟಿನಿಂದ ಕೊವಿಡ್ ವಿಚಾರದಲ್ಲಿ ಎರಡನೇ ಬೆಂಗಳೂರು ಆಗ್ತಿದೆಯಾ ಕುಂದಾನಗರಿ ಎಂಬ ಆತಂಕ ಉಂಟಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ನಿತ್ಯವೂ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಇನ್ನೂರು, ಮುನ್ನೂರರ ಗಡಿ ದಾಟುತ್ತಿದೆ. ಜಿಲ್ಲಾಡಳಿತ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾದ್ರೂ ಮುಚ್ಚಿಡುವ ಪ್ರಯತ್ನ? ಮಾಡುತ್ತಿದೆ. ಮೃತದೇಹ ಸಾಗಿಸುವ ವಾಹನದ ಡ್ರೈವರ್ ಹೇಳುವಂತೆ ನಿತ್ಯವೂ ಹದಿನೈದರಿಂದ ಹದಿನೆಂಟು ಸೋಂಕಿತರು ಮೃತಪಡುತ್ತಿದ್ದಾರಂತೆ. ವಯಸ್ಸಾದವರು ಆಸ್ಪತ್ರೆಗೆ ದಾಖಲಾದ್ರೂ ಚಿಕಿತ್ಸೆ …
Read More »ಗುಡ್ ನ್ಯೂಸ್ : ಆ.10ರೊಳಗೆ ಸಾರ್ವಜನಿಕರಿಗೆ ಸಿಗಲಿದೆ ರಷ್ಯಾದ ಕೊರೋನಾ ಲಸಿಕೆ..!
ಮಾಸ್ಕೋ, – ಕೋವಿಡ್ ಲಸಿಕೆಯನ್ನು ಆಗಸ್ಟ್ 10ರೊಳಗೆ ಸಾರ್ವಜನಿಕವಾಗಿ ಬಿಡುಗಡೆ ಮಾಡಲು ರಷ್ಯಾ ಮುಂದಾಗಿದೆ.ವಿಶ್ವಾದ್ಯಂತ ಕಾಡುತ್ತಿರುವ ಕೋವಿಡ್‍ಅನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಈಗಾಗಲೇ ಸಾಕಷ್ಟು ಪರಿಶ್ರಮ ಪಟ್ಟು ಲಸಿಕೆ ಕಂಡುಹಿಡಿಯುವ ನಿಟ್ಟಿನಲ್ಲಿ ರಷ್ಯಾ ವಿಜ್ಞಾನಿಗಳು ಸಾಕಷ್ಟು ಯಶಸ್ಸು ಸಾಧಿಸಿದ್ದಾರೆ. ಈಗಾಗಲೇ ಸೇನಾ ಯೋಧರು ಹಾಗೂ ಸಾರ್ವಜನಿಕರ ಮೇಲೆ ಈ ಲಸಿಕೆ ಪ್ರಯೋಗ ನಡೆಸಿ ಅದು ಫಲ ನೀಡಿರುವ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳೊಳಗೆ ಲಸಿಕೆಯನ್ನು ಬಿಡುಗಡೆ ಮಾಡಲು ರಷ್ಯಾ ಅಧ್ಯಕ್ಷ ಬ್ಲಾಡಿಮಿರ್ …
Read More »ಗಡಿ ಕಾಯೋ ಯೋಧರಿಗಾಗಿ ಕುಂದಾನಗರಿಯಲ್ಲಿ ಸಜ್ಜಾಯ್ತು Eco-friendly ರಾಖಿ!
ಬೆಳಗಾವಿ: ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ನಮ್ಮ ವೀರ ಯೋಧರಿಗೆ ಸೋದರತ್ವ ಸಾರುವ ರಕ್ಷಾಬಂಧನದ ಪ್ರಯುಕ್ತವಾಗಿ ಜಿಲ್ಲೆಯ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ರಾಖಿ ರವಾನಿಸಿದ್ದಾರೆ. ಅದೂ ಕೂಡ ಪರಿಸರ ಸ್ನೇಹಿ ರಾಖಿ. ಹೌದು, ಆಗಸ್ಟ್ 3 ರಂದು ರಕ್ಷಾಬಂಧನ ಹಬ್ಬವಿದ್ದು, ಇದೀಗ ದೇಶದ ಗಡಿಗೆ ಸ್ಪೀಡ್ ಫೋಸ್ಟ್ ಮೂಲಕ ರಾಖಿ ಹಾಗೂ ಗ್ರೀಟಿಂಗ್ ರವಾನಿಸಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಲೀಡರ್ಸ್ ಸೆಲ್ನಲ್ಲಿರುವ ನಗರದ ಹಲವು ಕಾಲೇಜು ವಿದ್ಯಾರ್ಥಿನಿಯರು ರಾಖಿ ಹಬ್ಬ …
Read More »
Laxmi News 24×7