ಬೆಂಗಳೂರು: ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಮಳೆ ಅಬ್ಬರ ಮುಂದುವರೆದಿದ್ದು ಸೆಪ್ಟೆಂಬರ್ 3 ರಿಂದ 5 ರವರೆಗೆ ಒಳನಾಡಿನ ಜಿಲ್ಲೆಗಳು ಮತ್ತು ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಂದಿನ ಎರಡು ದಿನಗಳ ಕಾಲ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಚಿತ್ರದುರ್ಗ, ಕೋಲಾರ, ಮಂಡ್ಯ, …
Read More »ಸಾಲದ ಸುಳಿಯಲ್ಲಿ ಕರ್ನಾಟಕ
ಬೆಂಗಳೂರು: ಆರ್ಥಿಕ ಸಂಕಷ್ಟಕ್ಕೆ ‘ದೇವರ ಆಟ’ದ ಕಾರಣ ಮುಂದು ಮಾಡಿ ಕೊಡಲೇಬೇಕಾಗಿದ್ದ ಜಿಎಸ್‌ಟಿ ಪರಿಹಾರ ಮೊತ್ತವನ್ನು ಕೇಂದ್ರ ಸರ್ಕಾರ ಕೊಡದೇ ಕೈ ಎತ್ತಿದ್ದರಿಂದ ಕರ್ನಾಟಕದ ಒಟ್ಟಾರೆ ಸಾಲ ₹4 ಲಕ್ಷ ಕೋಟಿ ದಾಟುವ ಸಾಧ್ಯತೆ ಇದೆ. ಈ ಹಿಂದಿನ ನಾಲ್ಕು ತಿಂಗಳ ಲೆಕ್ಕದಲ್ಲಿ ಕರ್ನಾಟಕಕ್ಕೆ ₹13,764 ಕೋಟಿ ನಷ್ಟ ಪರಿಹಾರ ಹಾಗೂ ಸೆಸ್ ರೂಪದಲ್ಲಿ ಸುಮಾರು ₹6,965 ಕೋಟಿ ಬರಬೇಕಿದೆ. ಜಿಎಸ್‌ಟಿ ಕಾಯ್ದೆ ಅನುಸಾರ ಈ ಪರಿಹಾರವನ್ನು ಕೊಡುವುದು ಕೇಂದ್ರದ ಸಂವಿಧಾನಾತ್ಮಕ …
Read More »ಪ್ರಧಾನಿ ನರೇಂದ್ರ ಮೋದಿ ಟ್ವಿಟರ್, ವೆಬ್ಸೈಟ್ ಹ್ಯಾಕ್….!
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವೈಯಯಕ್ತಿಕ ವೆಬ್ ಸೈಟ್ ಹಾಗೂ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. 2.5 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಇಂದು ಮುಂಜಾನೆ 3.15 ರ ಸುಮಾರಿಗೆ ಹ್ಯಾಕ್ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಟ್ವೀಟರ್, ಗುರುವಾರ ಪ್ರಧಾನಿ ನರೇಂದ್ರ ಮೋದಿಯವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ತಿಳಿಸಿದೆ. *ಹೆಚ್ಚಿನ ಸುದ್ದಿಗಾಗಿ …
Read More »ರಸ್ತೆ ಬದಿ ನಿಂತ ಲಾರಿಗಳು, NH 4 ಸರ್ವಿಸ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್
ನೆಲಮಂಗಲ: ವಾರಾಂತ್ಯದಲ್ಲಿ ನಗರದಿಂದ ತಮ್ಮ ಊರುಗಳತ್ತ ತೆರಳುವವರ ಸಂಖ್ಯೆ ಹೆಚ್ಚಾಗಿದ್ದರಿಂದ ಟ್ರಾಫಿಕ್ ಸಮಸ್ಯೆ ಎದುರಿಸುವ ಪ್ರಯಾಣಿಕರು, ಈಗ ಮತ್ತೊಂದು ಕಾರಣಕ್ಕೆ ಟ್ರಾಫಿಕ್ನಲ್ಲಿ ಗಂಟೆಗಳ ಕಾಲ ನಿಲ್ಲುವ ಪರಿಸ್ಥಿತಿ ಇಂದು ಎದುರಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 4ರ ಸರ್ವಿಸ್ ರಸ್ತೆಯ ಬದಿಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿದ್ದಾರೆ. ಈ ಹಿನ್ನೆಲೆಯಿಂದಾಗಿ ಮೊದಲೆ ಚಿಕ್ಕದಾಗಿರುವ ರಸ್ತೆಯಲ್ಲಿ ಲಾರಿಗಳನ್ನು ಸಾಲಾಗಿ ನಿಲ್ಲಿಸಿರುವುದರಿಂದ ವಾಹನ ಚಲಿಸಲಾಗದೆ ಒಂದು ಕಿಲೋಮೀಟರ್ ವರೆಗೆ ಟ್ರಾಫಿಕ್ ಜಾಮ್ …
Read More »ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ
ಬೆಂಗಳೂರು: ಕರೊನಾ ಸಾಂಕ್ರಾಮಿಕ ರೋಗದ ಕಾರಣ ಮುಂದಿಟ್ಟು ನಾಡಹಬ್ಬ ಮೈಸೂರು ದಸರಾ ಆಚರಣೆ ಕೈಬಿಡಬಾರದು ಎಂಬ ಒತ್ತಡ ಹೆಚ್ಚುತ್ತಿದೆ. ಮೈಸೂರು ದಸರಾ ನಡೆಯುವುದೇ ಇಲ್ಲವೇ ಎಂಬ ಸಂದೇಹ ಹೆಚ್ಚಾದ ಕಾರಣ ಈ ಒತ್ತಡ ಹೆಚ್ಚಾಗಿದೆ. ಈ ನಡುವೆ, ಕಳೆದ ತಿಂಗಳು ಕಾವೇರಿ ನದಿಗೆ ಬಾಗಿನ ಸಮರ್ಪಿಸಲು ತೆರಳುವ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಸರಾ ಆಚರಣೆ ಬಗ್ಗೆ ತೀರ್ಮಾನಿಸಲು ಚಿಂತನೆ ನಡೆದಿದೆ. ಶೀಘ್ರವೇ ಸಭೆ ನಡೆಸುವುದಾಗಿ ತಿಳಿಸಿದ್ದರು. ಈ …
Read More »ಸರ್ಕಾರಿ ಗ್ಯಾರಂಟಿ ಇರುವ ಈ ಖಾತೆ ಯಲ್ಲಿ ಕೇವಲ ರೂ.500 ಉಳಿತಾಯ ಮಾಡಿ ಲಕ್ಷಾಂತರ ಗಳಿಕೆ ಮಾಡಿ
ನವದೆಹಲಿ: ನೀವು ಹಣ ಹೂಡಿಕೆಗಾಗಿ ಯಾವುದಾದರೊಂದು ಯೋಜನೆಯ ಹುಡುಕಾಟದಲ್ಲಿದ್ದಾರೆ ಸಾರ್ವಜನಿಕ ಭವಿಷ್ಯ ನಿಧಿ (PPF) ಒಂದು ಉತ್ತಮ ಆಯ್ಕೆಯಾಗಿದೆ. ಪಿಪಿಎಫ್ ಖಾತೆಯನ್ನು ಕೇವಲ 500 ರೂಪಾಯಿಗಳೊಂದಿಗೆ ತೆರೆಯಬಹುದು. ಆರ್ಥಿಕ ವರ್ಷವೊಂದರಲ್ಲಿ ಈ ಖಾತೆಯಲ್ಲಿ ಕನಿಷ್ಠ 500 ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಒಂದು ವರ್ಷದಲ್ಲಿ ಗರಿಷ್ಠ 1.5 ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು. ಪ್ರಸ್ತುತ, ಇದು ಶೇಕಡಾ 7.1 ರಷ್ಟು ಬಡ್ಡಿಯನ್ನು ನೀಡುತ್ತಿದ್ದು, ಇದು ಬ್ಯಾಂಕ್ ಸ್ಥಿರ ಠೇವಣಿಗಿಂತ ಹೆಚ್ಚಾಗಿದೆ. ಪೋಸ್ಟ್ ಆಫೀಸ್ …
Read More »ಕೊರೋನಾತಂಕ ನಡುವೆ ಆನ್‌ಲೈನ್‌ಮೂಲಕ ಮನೆ ಬಾಗಿಲಿಗೆ ಮದ್ಯ!
ಬೆಂಗಳೂರು : ರಾಜ್ಯ ಸರ್ಕಾರ ಆನ್‌ಲೈನ್ ಮೂಲಕ ಮನೆ ಬಾಗಿಲಿಗೆ ಮದ್ಯ ತಲುಪಿಸುವ ಬಗ್ಗೆ ಮತ್ತೆ ಗಂಭೀರ ಚಿಂತನೆ ನಡೆಸಿದ್ದು, ಈ ಕುರಿತು ಅಧ್ಯಯನ ನಡೆಸಲು ಹಿರಿಯ ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಖುದ್ದು ಅಬಕಾರಿ ಸಚಿವ ಎಚ್.ನಾಗೇಶ್ ಅವರೇ ಈ ವಿಷಯ ತಿಳಿಸಿದ್ದಾರೆ. ಕಳೆದ ವರ್ಷ ನಾಗೇಶ್ ಅವರು ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹೊಸ್ತಿಲಲ್ಲೇ ಈ ಬಗ್ಗೆ ಹೇಳಿಕೆ ನೀಡಿದ್ದರು. ಅದರ ಬಗ್ಗೆ ಸಾಕಷ್ಟುಟೀಕೆ ಟಿಪ್ಪಣಿ ಕೇಳಿಬಂದಿದ್ದರಿಂದ …
Read More »ಭಯ ಬೇಡ, ಮುನ್ನೆಚ್ಚರಿಕೆ ವಹಿಸಿ
ಬೆಳಗಾವಿ: ಕೊರೊನಾ ಬಗ್ಗೆ ಭಯ ಬೇಡ. ಆದರೆ, ಮುಂಜಾಗ್ರತೆ ವಹಿಸಬೇಕು. ಸೋಂಕು ಬಂತೆಂದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. – ಕೋವಿಡ್‌ನಿಂದ ಗುಣಮುಖರಾದ ರಾಮದುರ್ಗ ತಾಲ್ಲೂಕು ಕಟಕೋಳದ ಯುವಕ ಆನಂದ ಸಿದ್ನಾಳ ಅವರ ಸಲಹೆ ಇದು. ಕೋವಿಡ್ ಗೆದ್ದ ಕಥೆಯನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು. ‘ನಾನು ಚಾಲಕ. ಟ್ರಕ್ ಇದೆ. ಲಾಕ್‌ಡೌನ್ ಆದ ಸಮಯದಲ್ಲಿ ಕೆಲಸ ಇಲ್ಲದೆ ಜೀವನ ನಡೆಸುವುದು ಕಷ್ಟವಾಗಿತ್ತು. ಲಾಕ್‌ಡೌನ್ ತೆರವಾದ ನಂತರ ಕೆಲವು ದಿನ ಊರು ಸುತ್ತಿದೆ. ಹೋದ ಕಡೆಯಲ್ಲಿ …
Read More »ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ
ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ. ಇದು …
Read More »ಯುವಕರಿಗೆ ಪುಸ್ತಕ ಕೊಡಿಸಿದ ಪಿಎಸ್‌ಐ
ಕೌಜಲಗಿ: ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಎಸ್‌ಐ ಎಚ್.ಕೆ. ನೇರಳೆ ಅವರು ಗ್ರಾಮದ ಯುವಕರಿಗೆ ವೈಯಕ್ತಿಕವಾಗಿ ₹ 10ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡಿಸಿ ನೆರವಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಅವರು ನೀಡಿ ಗಮನಸೆಳೆದಿದ್ದಾರೆ. ಗ್ರಾಮದಲ್ಲಿ ಎಸ್‌ಡಿಎ, ಎಫ್‌ಡಿಎ, ಪಿಎಸ್‌ಐ, ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗಿದ್ದಾರೆ. ಈ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಯುವಕರು ತಿಳಿಸಿದರು.
Read More »
Laxmi News 24×7