ಬೆಂಗಳೂರು, ಸೆಪ್ಟಂಬರ್ 12: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಬುಧವಾರ ತಡರಾತ್ರಿ ಗಣೇಶ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಗಲಭೆ ನಡೆದಿದೆ. ಇದೆಲ್ಲ ನೋಡಿದರೆ ಕರ್ನಾಟಕದ ಪರಿಸ್ಥಿತಿ ಎಲ್ಲಿಗೆ ಬಂದು ನಿಂತಿದೆ. ಹಿಂದೂಗಳ ಹಬ್ಬದಂದು ನಡೆದ ಈ ದುಷ್ಕೃತ್ಯ ಅತ್ಯಂತ ಖಂಡನೀಯ ಎಂದು ರಾಜ್ಯ ಸರ್ಕಾರದ ಆಡಳಿತ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಂಡ್ಯ ಗಲಭೆ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಸಚಿವ …
Read More »ನಾಗಮಂಗಲ ಗಲಭೆ ಪ್ರಕರಣದ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ‘CM ಸಿದ್ದರಾಮಯ್ಯ’ ಎಚ್ಚರಿಕೆ
ಬೆಂಗಳೂರು : ನಾಗಮಂಗಲ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕಳೆದ …
Read More »ರಾಜ್ಯ ಸರ್ಕಾರ ಗಲಾಟೆ ಮಾಡುವವರಿಗೆ ಶಕ್ತಿ, ಕುಮ್ಮಕ್ಕು ನೀಡುತ್ತಿದೆ’
ಶಿವಮೊಗ್ಗ ಸೆಪ್ಟೆಂಬರ್ 12: ಮಂಡ್ಯ ನಾಗಮಂಗಲ ಗಲಾಟೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ವಿರುದ್ಧ ವಿಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ. ಮಂಡ್ಯ ಗಲಭೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ದೂರಲಾಗುತ್ತಿದೆ. ಈ ಬಗ್ಗೆ ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದು ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಎಂದು ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಶಾಸಕ ಚನ್ನಬಸಪ್ಪ, ನಾಗಮಂಗಲ ಗಲಾಟೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. …
Read More »ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್’ ಗೆ 1 ದಿನ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ & ಗ್ಯಾಂಗ್ ಗೆ 1 ದಿನ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಮಾಡಿ ಕೋರ್ಟ್ ಆದೇಶ ಹೊರಡಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್ ಶೀಟ್ ಕೋರ್ಟ್ ಗೆ ಸಲ್ಲಿಕೆಯಾಗಿದ್ದು, ಪವಿತ್ರಾಗೌಡ ಎ-1 , ದರ್ಶನ್ ಎ-2 ಆರೋಪಿಯೆಂದು ಉಲ್ಲೇಖಿಸಲಾಗಿದೆ. ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬೆಂಗಳೂರಿನ 24 ನೇ ಎಸಿಎಂಎಂ ಕೋರ್ಟ್ ಗೆ ಚಾರ್ಜ್ ಶೀಟ್ …
Read More »ನಾನೇ ಸಿಎಂ ಆಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ: ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಈಗ ಯಾರೂ ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಸಿಎಂ ಸ್ಥಾನ ಖಾಲಿ ಇಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾವೇ ಸಿಎಂ ಆಗಿ ಮುಂದುವರಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬುಧವಾರ ಹೇಳಿದ್ದಾರೆ. ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ತಮ್ಮ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ನಾಯಕತ್ವ ಬದಲಾದರೆ ಸಿಎಂ ಆಗುವ ರೇಸ್‌ಗೆ ಕಾಂಗ್ರೆಸ್‌ನ ಕೆಲ …
Read More »ಅಳಿವಿನಂಚಿಗೆ ಗೊರವರ ಕುಣಿತ; ಈ ಕಲೆಯಿಂದ ದೂರವಾದ ಯುವ ಸಮುದಾಯ
ವಿಜಯಪುರ(ದೇವನಹಳ್ಳಿ): ಜಾನಪದ ನೃತ್ಯಗಳಲ್ಲಿ ಗೊರವರ ಕುಣಿತವೂ ಒಂದು. ಆದರೆ, ಈಚೆಗೆ ಕಣ್ಮರೆಯಾಗುತ್ತಿದೆ. ಯುವ ಸಮುದಾಯ ಈ ಕಲೆಯಿಂದ ದೂರ ಉಳಿದಿದೆ. ಶ್ರೀಮಂತ ಕಲೆಯೊಂದು ಅಳಿವಿನಂಚಿನಲ್ಲಿದೆ ಎಂದು ಕಲಾವಿದ ಕೃಷ್ಣಪ್ಪ ಆತಂಕ ವ್ಯಕ್ತಪಡಿಸುತ್ತಾರೆ. ‘ನಮ್ಮ ಹಿರಿಯರಿಂದ ಸಾಂಪ್ರದಾಯಿಕವಾಗಿ ಬಂದಿರುವ ಗೊರವರ ಕುಣಿತ ಆಧುನಿಕ ಸೆಳೆತಕ್ಕೆ ಸಿಲುಕಿದೆ. ನಮ್ಮ ತಲೆಮಾರಿಗೆ ಅಂತ್ಯವಾಗುವ ಆತಂಕವಿದೆ. ಯುವಕರು ಈ ನೃತ್ಯ ಮಾಡಲು ಮುಂದೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ. 9ರಿಂದ 12 ಮಂದಿ ತಂಡ ಕಟ್ಟಿಕೊಂಡು ಏಳುಕೋಟಿ …
Read More »ಮೊಟ್ಟ ಮೊದಲ ಬಾರಿಗೆ ನಾಲ್ವರು ‘GST ಅಧಿಕಾರಿ’ಗಳು ಅರೆಸ್ಟ್
ಬೆಂಗಳೂರು: ಬೆಂಗಳೂರಲ್ಲಿ ಮೊಟ್ಟಲ ಮೊದಲ ಬಾರಿ ಎನ್ನುವಂತೆ ಉದ್ಯಮಿಯೊಬ್ಬರಿಂದ ಹಣ ಪಡೆದು ಪರಾರಿಯಾಗಿದ್ದಂತ ನಾಲ್ವರು ಕೇಂದ್ರದ ಜಿಎಸ್ಟಿ ಅಧಿಕಾರಿಗಳನ್ನು ಪೊಲೀಸರು ಭರ್ಜರಿ ಬೇಟೆಯಾಡುವ ಮೂಲಕ ಬಂಧಿಸಿದ್ದಾರೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸರಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದ್ದು, ದಿನಾಂಕ:09-09-2024 ರಂದು ಸಂಜೆ 16-35 ಗಂಟೆಗೆ ಪಿರಾದುದಾರರಾದ ಕೇಶವ್ ಟಾಕ್ ರವರು ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ, Mexo Solutions Private Limited having …
Read More »ಚಂದ್ರಶೇಖರ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್
ಚಂದ್ರಶೇಖರ ಗುರೂಜಿ ಸಂಬಂಧಿಕರಿಗೆ ಜೀವ ಬೆದರಿಕೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು : ಹು-ಧಾ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಚಂದ್ರಶೇಖರ ಗುರೂಜಿಯವರ ಸಂಬಂಧಿಕರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು. ಚಂದ್ರಶೇಖರ ಗುರೂಜಿಯವರ ಸಂಬಂಧಿಕರಿಗೆ ಜೀವ ಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪೊಲೀಸ್ …
Read More »ಶಾಲೆಗಳಿಗೆ ಚಕ್ಕರ್ ಹಾಕುವ ಶಿಕ್ಷಕರಿಗೆ ಸಚಿವರ ಖಡಕ್ ವಾರ್ನಿಂಗ್..!!!
ಬೆಳಗಾವಿ :ಶಾಲೆಗೆ ಚಕ್ಕರ ಹಾಕಿ ಬೇರೆ ಬೇರೆ ಕೆಲಸ ಮಾಡುವ ಶಿಕ್ಷಕರ ಮೇಲೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರಾದವರು ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಬೇಕು. ಅದನ್ನು ಬಿಟ್ಟು ಬೇರೆ ಬೇರೆ ಕೆಲಸ, ಸಂಘಟನೆಯಲ್ಲಿ ಗುರುತಿಸಿಕೊಂಡರೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದರು. ಶಿಕ್ಷಕರು ಪ್ರತಿಭಟನೆ ಮಾಡುವ ಹಕ್ಕು ಇದೆ. ಹಾಗಂತ ಬೇರೆ ಬೇರೆ …
Read More »ದೇಶಿ ಸಂಸ್ಕೃತಿ ಉಳಿಸಿ: ಸಂಸದ ಜಗದೀಶ ಶೆಟ್ಟರ್
ರಾಮದುರ್ಗ: ‘ಪಾಶ್ಚಿಮಾತ್ಯ ಸಂಸ್ಕೃತಿಗೆ ವಾಲಿಕೊಂಡಿರುವ ಯುವ ಜನಾಂಗವನ್ನು ಮರಳಿ ದೇಶೀಯ ಸಂಸ್ಕೃತಿಗೆ ತರುವ ಕೆಲಸ ಧಾರ್ಮಿಕ ಕೇಂದ್ರಗಳಿಂದ ನಡೆಯಬೇಕಿದೆ’ ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು. ತಾಲ್ಲೂಕಿನ ಗೊಡಚಿಯಲ್ಲಿ ಜಗದ್ಗುರು ರೇಣುಕಾಚಾರ್ಯ ಮಂದಿರ, ರೇಣುಕಾಚಾರ್ಯ ಗುರುಕುಲ, ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಜ್ಞಾನ ಮಂಟಪ ಕಟ್ಟಡದ ಶಂಕುಸ್ಥಾಪನೆ, ವೀರಭದ್ರೇಶ್ವರ ಜಯಂತಿ ಮತ್ತು ಧರ್ಮಸಭೆ ಸಮಾರಂಭವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿ, ಮೊದಲಿನಿಂದಲೂ ರಂಭಾಪುರಿ ಪೀಠ ಧರ್ಮ ಜಾಗೃತಿ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು. …
Read More »