ಬೆಳ್ಮಣ್: ಸ್ವತ್ಛ ಭಾರತದ ಪರಿಕಲ್ಪನೆ ಕೇವಲ ಭಾಷಣ, ಬ್ಯಾನರ್‌ಗಳ ಪ್ರಚಾರಕ್ಕೆ ಸೀಮಿತವಾಗಿರದೆ ಕಾರ್ಯ ರೂಪದಲ್ಲಿಯೂ ಅಳವಡಿಕೆಯಾಗಬೇಕು ಎಂಬ ಚಿಂತನೆಯೊಂದಿಗೆ ನಿಟ್ಟೆ ಗ್ರಾ.ಪಂ. ಸದಸ್ಯೆಯೋರ್ವರು ಕಸ ಹಾಕುತ್ತಿದ್ದವರನ್ನು ಹಿಡಿದು ಅವರಿಂದಲೇ ಕಸ ವಿಲೇವಾರಿ ಗೊಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ನಿಟ್ಟೆ ಗ್ರಾ.ಪಂ. ಸದಸ್ಯೆ ರಶ್ಮಿ ಸದಾನಂದ ಶೆಟ್ಟಿ ಅವರು ರಸ್ತೆ ಬದಿಯಲ್ಲಿ ಕಸ ಹಾಕುತ್ತಿದ್ದವರನ್ನು ಪತ್ತೆ ಹಚ್ಚಿ ಅವರಿಂದಲೇ ಕಸ ವಿಲೇವಾರಿಗೊಳಿಸಿ ಪಂಚಾಯತ್‌ಗೆ ದಂಡ ಕಟ್ಟಿಸಿದ್ದಾರೆ. ಪಂಚಾಯತ್ ಸದಸ್ಯೆ ರಶ್ಮಿಯವರ ಈ …
Read More »ಗೋಕಾಕ: ನಗರದ ಮುಪ್ಪಯ್ಯನಮಠದಲ್ಲಿ ವಾರ್ಡ ನಂ 29ರಲ್ಲಿಯ ಜನತೆಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಚುಚ್ಚುಮದ್ದು ಹಾಕುತ್ತಿರುವುದು.
ಗೋಕಾಕ: ಜನತೆ ಸ್ವಪ್ರೇರಣೆಯಿಂದ ಕೋವಿಡ್ ಲಸಿಕೆ ಪಡೆದು ಮಹಾಮಾರಿ ಕೋರೋನಾದಿಂದ ರಕ್ಷಣೆ ಪಡೆಯುವಂತೆ ಕೆಎಲ್‍ಇ ಸಂಸ್ಥೆಯ ನಿರ್ದೇಶಕ ಜಯಾನಂದ ಮುನವಳ್ಳಿ ಹೇಳಿದರು. ಬುಧವಾರದಂದು ನಗರದ ಮುಪ್ಪಯ್ಯನಮಠದಲ್ಲಿ ವಾರ್ಡ ನಂ 29ರಲ್ಲಿಯ ಜನತೆಗೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ಕೋವಿಡ್ ಮಹಾಮಾರಿ ಹೆಚ್ಚಾಗುತ್ತಿದೆ. ಜನತೆ ಜಾಗೃತರಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಎಲ್ಲರೂ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೋರೋನಾ …
Read More »ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ
ರಾಂಚಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರ ತಂದೆ ತಾಯಿಗೆ ಕರೊನಾ ಸೋಂಕು ದೃಢವಾಗಿದೆ. ವರದಿ ಬಂದ ತಕ್ಷಣ ದಂಪತಿ ರಾಂಚಿಯ ಪ್ಲಸ್ ಆಸ್ಪತ್ರೆಗೆ ತೆರಳಿ ವೈದ್ಯರ ಸಲಹೆ ಪಡೆದಿರುವುದಾಗಿ ತಿಳಿಸಲಾಗಿದೆ. ಧೋನಿಯವರ ತಂದೆ ಪಾನ್ ಸಿಂಗ್ ಹಾಗೂ ತಾಯಿ ದೇವಕಿ ದೇವಿ ಅವರ ಆರೋಗ್ಯ ಸ್ಥಿರವಾಗಿದೆ. ಕರೊನಾ ದೃಢವಾಗಿದೆ ಹಾಗೂ ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಾಣಿಸಿಕೊಂಡಿಲ್ಲ. ಆಕ್ಸಿಜನ್ ಲೆವೆಲ್ ಉತ್ತಮವಾಗಿದೆ ಮತ್ತು ಶ್ವಾಸಕೋಶಗಳು …
Read More »ನಾಸಿಕ್ ನಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆ : 22 ಮಂದಿ ಸಾವು
ಮಹಾರಾಷ್ಟ್ರ : ಮಹಾರಾಷ್ಟ್ರದ ನಾಸಿಕ್ ನಲ್ಲಿ ಕೋವಿಡ್ -19 ರೋಗಿಗಳಿಗೆ ಸಿವಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ರೋಗಿಗಳು ಬುಧವಾರ (ಏಪ್ರಿಲ್ 21) ಸಾವನ್ನಪ್ಪಿದ್ದಾರೆ ಎಂಬ ವರದಿಯಾಗಿದೆ. ಜಾಕಿರ್ ಹುಸೇನ್ ಪುರಸಭೆಯ ಆಸ್ಪತ್ರೆಯಲ್ಲಿ ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಾಸದಿಂದಾಗಿ 22 ಜನರು ಸಾವನ್ನಪ್ಪಿದ್ದಾರೆ. ರೋಗಿಗಳು ವೆಂಟಿಲೇಟರ್ ಗಳಲ್ಲಿದ್ದರು ಮತ್ತು ಆಮ್ಲಜನಕದ ಪೂರೈಕೆಯಾಗುತ್ತಿದ್ದರೂ, ಆಮ್ಲಜನಕ ಪೂರೈಕೆ ತೊಟ್ಟಿಯಲ್ಲಿ ಸೋರಿಕೆಯ ಕಾರಣದಿಂದ ಈ ಅವಘಡ ಸಂಭವಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ …
Read More »ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಸಹಾಯ ಹಸ್ತ ! 24 ಕ್ರಯೋಜೆನಿಕ್ ಕಂಟೇನರ್ಗಳ ಆಮದು
ನವದೆಹಲಿ : ಭಾರತದಲ್ಲಿ ಉಂಟಾಗುತ್ತಿರುವ ಆಕ್ಸಿಜನ್ ಕೊರತೆಯನ್ನು ಕಡಿಮೆ ಮಾಡಲು ದ್ರವರೂಪದ ಆಕ್ಸಿಜನ್ಅನ್ನು ಸಾಗಣೆ ಮಾಡುವುದಕ್ಕಾಗಿ 24 ಕ್ರಯೋಜೆನಿಕ್ ಕಂಟೇನರ್ಗಳನ್ನು ಆಮದು ಮಾಡುವುದಾಗಿ ಟಾಟಾ ಕಂಪೆನಿಗಳ ಗುಂಪು ಪ್ರಕಟಿಸಿದೆ. ಕರೊನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಒಂದಾಗಿ ನಿಲ್ಲಬೇಕು ಎಂದು ನಿನ್ನೆ ಪ್ರಧಾನಿ ಮೋದಿ ಮಾಡಿದ ಮನವಿಗೆ ಸ್ಪಂದಿಸಿ, ಈ ಘೋಷಣೆ ಮಾಡಿದೆ. ನಿನ್ನೆ ರಾತ್ರಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರೊನಾ ರೋಗಿಗಳಿಗೆ ಉಂಟಾಗುತ್ತಿರುವ ಆಕ್ಸಿಜನ್ …
Read More »ಹೆಚ್ಚುತ್ತಿರುವ ಸಾವಿನ ಸಂಖ್ಯೆ :ಚಟ್ಟಗಳಿಗೆ ಡಿಮ್ಯಾಂಡ್, ಜನರಲ್ಲಿ ಆತಂಕ
ಮೈಸೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಬಿದಿರು ಚಟ್ಟಕ್ಕೆ ಬೇಡಿಕೆ ಕೂಡ ಹೆಚ್ಚಾಗತೊಡಗಿದೆ. ನಂಜುಮಳಿಗೆ ವೃತ್ತದ ಬಳಿ ಬಿದಿರಿನಿಂದ ಗೃಹೋಪಯೋಗಿ ಸೇರಿದಂತೆ ನಾನಾ ವಸ್ತುಗಳನ್ನು ಮಾಡುತ್ತಿದ್ದ ವ್ಯಾಪಾರಿಗಳು ಇದೀಗ ಅಂತ್ಯ ಸಂಸ್ಕಾರಕ್ಕಾಗಿ ಚಟ್ಟ ತಯಾರಿಸಲು ಮುಂದಾಗಿದ್ದಾರೆ. ಪ್ರತಿದಿನ 20ಕ್ಕೂ ಹೆಚ್ಚು ಚಟ್ಟಗಳ ವ್ಯಾಪಾರ ನಡೆಯುತ್ತಿದೆ.
Read More »ಬಸ್ಸಿನಿಂದ ಕೆಳಗಿಳಿಸಿದ ಉಡುಪಿ ಡಿಸಿ: ವಿದ್ಯಾರ್ಥಿನಿಯ ಆಕ್ರೋಶ; ವಿಡಿಯೋ ವೈರಲ್
ಉಡುಪಿ, ಏಪ್ರಿಲ್ 20: ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರ ಕಾಪಾಡದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರನ್ನು ಕೆಳಗಿಳಿಸಿದ ಉಡುಪಿ ಜಿಲ್ಲಾಧಿಕಾರಿಗಳ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ಹೊರಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಉಡುಪಿಯ ಸಂತೆಕಟ್ಟೆ ಬಳಿ ಬಸ್ ಅಡ್ಡಗಟ್ಟಿ ತಪಾಸಣೆ ನಡೆಸಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್, ವಿಪರೀತ ಪ್ರಯಾಣಿಕರನ್ನು ತುಂಬಿದ್ದಕ್ಕೆ ಸ್ಥಳದಲ್ಲೇ ಚಾಲಕನಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಅದರಲ್ಲೂ ವಿಶೇಷವಾಗಿ ಉಡುಪಿ, ಮಣಿಪಾಲ ನಗರದಲ್ಲಿ ಪ್ರತಿನಿತ್ಯ ನೂರಕ್ಕೂ …
Read More »ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದು
ನವದೆಹಲಿ, ಏಪ್ರಿಲ್ 19: ದೇಶದಲ್ಲಿ ಮೂರನೇ ಹಂತದ ಕೊರೊನಾ ಲಸಿಕಾ ಅಭಿಯಾನವು ಮೇ 1ರಿಂದ ಆರಂಭಗೊಳ್ಳಲಿದ್ದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಲು ಅರ್ಹ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ದೇಶದಲ್ಲಿ ಒಂದು ವರ್ಷದಿಂದಲೂ ಕೊರೊನಾ ಲಸಿಕೆ ಅಭಿವೃದ್ಧಿಯಲ್ಲಿ ಭಾರತ ಸರ್ಕಾರ ಪರಿಶ್ರಮ ಪಡುತ್ತಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಭಾರತೀಯರು ಲಸಿಕೆ ಪಡೆಯಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಪ್ರಧಾನಿ ನರೇಂದ್ರ …
Read More »ನೀತಿಪಾಠ ಹೇಳುವ ಮೋದಿ, ಕೊರೊನಾ ಸಂದಿಗ್ಧತೆಯಲ್ಲೂ ಬಂಗಾಳದಲ್ಲಿ ಜನ ಕಂಡು ಖುಷಿಪಟ್ಟಿದ್ದೇಕೆ?
ಮೈಸೂರು: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕಾರಣಿಗಳು ಕೊರೊನಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ನ್ಯಾಯಾಲಯ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿತು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೊರೊನಾ ಸೋಂಕಿನ ಪ್ರಕರಣಗಳು ವ್ಯಾಪಕವಾಗಿ ಹರಡುತ್ತಿವೆ. ಕೊರೊನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಎಂದು ಉಪದೇಶ ನೀಡುವ ಪ್ರಧಾನಿ ನರೇಂದ್ರ ಮೋದಿಯವರೇ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಹೆಚ್ಚು …
Read More »ಈ ಊರಿಗೆ 2 ಸಂಸದರು, 2 ಶಾಸಕರು : ಆಸ್ಪತ್ರೆಗೆ ಹೋಗಬೇಕಾದರೆ 25 ಕಿ.ಮೀ. ಸಂಚರಿಸಬೇಕು!
ಕುಂದಾಪುರ: ಈ ಪಂಚಾಯತ್ ಎರಡು ಲೋಕಸಭಾ ಕ್ಷೇತ್ರ, ಎರಡು ವಿಧಾನಸಭಾ ಕ್ಷೇತ್ರ, ಇಬ್ಬರು ಸಂಸದರು, ಇಬ್ಬರು ಶಾಸಕರ ವ್ಯಾಪ್ತಿಯಲ್ಲಿ ಬರುತ್ತದೆ. ಆದ್ದರಿಂದ ಊರು ಸರ್ವ ಸೌಲಭ್ಯಗಳನ್ನೂ ಹೊಂದಿರಬೇಕಿತ್ತು. ಆದರೆ ಇಲ್ಲಿನ ಜನರಿಗೆ ಏನಾದರೂ ಅನಾರೋಗ್ಯ ತಲೆದೋರಿದರೆ ತುರ್ತು ಚಿಕಿತ್ಸೆಗೆ 20-25 ಕಿ.ಮೀ. ದೂರ ಬರಬೇಕು; ಅದೂ ಸಣ್ಣ ಆಸ್ಪತ್ರೆಗೆ. ದೊಡ್ಡ ಆಸ್ಪತ್ರೆ ಆಗಬೇಕೆಂದರೆ 45 ಕಿ.ಮೀ. ದೂರ ಹೋಗಬೇಕು. ಇದು ಉಡುಪಿ – ಚಿಕ್ಕಮಗಳೂರು, ಶಿವಮೊಗ್ಗ ಲೋಕಸಭಾ ಕ್ಷೇತ್ರ, ಕುಂದಾಪುರ, …
Read More »
Laxmi News 24×7