ಹುಣಸೂರು: ರಸ್ತೆ ಪಕ್ಕದಲ್ಲಿ ನಿಂತಿದ್ದ ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಕಲ್ಬೆಟ್ಟ ಬಳಿ ನಡೆದಿದೆ. ಬಸ್ ಚಾಲಕ ಎಚ್.ಬಿ.ಮಹದೇವ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮರದ ದಿಮ್ಮಿಗಳನ್ನು ತುಂಬಿದ್ದ ಲಾರಿ ಹುಣಸೂರಿನ ಕಡೆ ಹೊರಟಿತ್ತು. ಈ ವೇಳೆ ಕಲ್ಬೆಟ್ಟದ ಬಳಿ ನಿಂತಿತ್ತು. ಲಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ …
Read More »ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು: ಡಿಕೆಶಿ ವಿರುದ್ಧ ಅನಿಲ್ ಬೆನಕೆ ವಾಗ್ದಾಳಿ
ಒಂದುವರ್ಷದಿಂದ ಇವರು ಬಾಯಿ ಮುಚ್ಚಿಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಅನಿಲ್ ಬೆನಕೆ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ಕೇಂದ್ರ ಸರ್ಕಾರ ಸುರೇಶ್ ಅಂಗಡಿ ಅವರ ಅಮಾನವೀಯ ಅಂತ್ಯಸಂಸ್ಕಾರ ಮಾಡಿತು ಎಂಬ ಡಿಕೆಶಿ ಆರೋಪ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸನ್ಮಾನ್ಯ ಸುರೇಶ ಅಂಗಡಿ ಕೊರೊನಾದಿಂದ ಮೃತಪಟ್ಟು ಒಂದು ವರ್ಷವಾಯಿತು. ಒಂದು ವರ್ಷದಿಂದ ಇವರು ಬಾಯಿ ಮುಚ್ಚಿದ್ರು. ಇವರು ಡಿ.ಕೆ ಶಿವಕುಮಾರ್ …
Read More »ಸ್ವಿಫ್ಟ್ ಕಾರಿನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರ ಬಂಧನ
ಹಾನಗಲ್ ಮೂಲದ ಮೌಲಾನಾ ತೋಟದ್ ಮತ್ತು ಮಂಜುನಾಥ್ ಓಲೇಕಾರ್ ಬಂಧಿತ ಆರೋಪಿಗಳಾಗಿದ್ದಾರೆ. ಮಾರುತಿ ಸ್ವಿಫ್ಟ್ ಕಾರಿನಲ್ಲಿ 170 ಕೆ.ಜಿ. ಮಾಂಸ ಸಾಗಾಟ ಮಾಡುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಕಾರವಾರ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ವಾಹನ ಸಮೇತ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಗೇರುಸೊಪ್ಪ ಸರ್ಕಲ್ ಬಳಿ ಪೊಲೀಸರಿಂದ ದಾಳಿ ನಡೆಸಲಾಗಿದೆ. ಹಾನಗಲ್ನಿಂದ ಮುರುಡೇಶ್ವರ …
Read More »ಎಫ್‌ಡಿ ಇಟ್ಟಿದ್ದ ಐದೂವರೆ ಲಕ್ಷ ಮಂಗಮಾಯ, ಕೋರ್ಟ್ ತೀರ್ಪಿಗೂ ತಲೆ ಕೆಡಿಸಿಕೊಳ್ಳದೆ ಹಣ ಹಿಂತಿರುಗಿಸಲು ಸತಾಯಿಸುತ್ತಿರುವ ಬ್ಯಾಂಕ್
ಆತ ಕಷ್ಟ ಪಟ್ಟು ದುಡಿದು, ಬ್ಯಾಂಕ್ನಲ್ಲಿ ಹಣ ಕೂಡಿಟ್ಟಿದ್ದ, ಇದೇ ಹಣದಲ್ಲಿ ಸಣ್ಣದೊಂದು ಸೂರು ಕಟ್ಟುವ ಕನಸು ಕಂಡಿದ್ದ, ಆದ್ರೀಗ ಆತನ ಫಿಕ್ಸ್ಡ್ ಡೆಪಾಸಿಟ್ ಅನಾಮತ್ತಾಗಿ ಲಪಟಾಯಿಸಲಾಗಿದೆ. ನ್ಯಾಯಾಲಯ ಪೂರ್ತಿ ಹಣ ವಾಪಾಸು ನೀಡುವಂತೆ, ತೀರ್ಪು ನೀಡಿದರೂ, ಬ್ಯಾಂಕ್ ಬಳಕೆದಾರರ ಹಣ ನೀಡದೆ ಸತಾಯಿಸುತ್ತಿದೆ. ಉಡುಪಿ ಜಿಲ್ಲೆಯ ಉಪ್ಪೂರಿನ ನಿವಾಸಿ ಹರೀಶ್ ಗುಡಿಗಾರ್ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದಲ್ಲಿ ಉಳಿತಾಯ ಖಾತೆ ಹೊಂದಿದ್ದರು. ಬೆಂಗಳೂರು ತೊರೆಯುತ್ತಿದ್ದಂತೆ ತಮ್ಮ ಖಾತೆಯನ್ನ …
Read More »ಕಾಲು ಕಳೆದಕೊಂಡ ಯುವಕನ ಚಿಕಿತ್ಸೆಗಾಗಿ ದಾನಿಗಳ ಮೊರೆ
ಮಂಗಳೂರು : ಎಲ್ಲರೂ ಚೆನ್ನಾಗಿರಬೇಕು ಎಲ್ಲರಿಗೂ ಒಳ್ಳೇದು ಮಾಡಬೇಕೆಂದು ಅನಿಸುದು ಸಹಜ ಆದ್ರೆ ಅಂತ ಮನಸ್ಸಿರುದು ತುಂಬಾ ಕಡಿಮೆ ಅಂತದ್ರಲ್ಲಿ “ಚೇತನ್ ಕುಮಾರ್ ” ಒಬ್ಬ ಬಹಳ ಸ್ವಚ್ಛ,ನಿಷ್ಕಲ್ಮಶ, ಪರೋಪಕಾರಿ ಮನುಷ್ಯ ಇಂದು ತನ್ನ ಪರೋಪಕಾರಿ ಮನೋಭಾವದಿಂದ ಸಾವು ಬದುಕಿ ನಡುವೆ ಹೊರಡ್ತಿದ್ದಾನೆ, ನಿಮ್ಮೆಲ್ಲರ ಸಹಾಯ, ಸಹಕಾರ ದೊರೆತರೆ ನನ್ನ ಸ್ನೇಹಿತ ಖಂಡಿತ ಗುಣಮುಖರಾಗಿ ಮರಳುವ ವಿಶ್ವಾಸ ವಿದೆ. ಇವತ್ತು ಬೆಳಿಗ್ಗೆ ತನ್ನ ಬಸ್ ಕ್ಲೀನರ್ ಕೆಲಸಕ್ಕೆ ಜೋಕಟ್ಟೆ ಯ …
Read More »ಹರ್ಯಾಣ: ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡ ರೈತ ಹೃದಯಾಘಾತದಿಂದ ಸಾವು
ಚಂಡಿಗಢ, ಅ. 29: ಕರ್ನಲ್ನಲ್ಲಿ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡಿದ್ದ ರೈತ ಶನಿವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಬಿಕೆಯು ಹಿರಿಯ ನಾಯಕ ಗುರ್ನಾಮ್ ಸಿಂಗ್ ಚಾದುನಿ ಹೇಳಿದ್ದಾರೆ. ಒಂದೂವರೆ ಎಕರೆ ಭೂಮಿ ಹೊಂದಿದ್ದ ರೈತ ಸುಶೀಲ್ ಕಾಜಲ್ ಕಳೆದ 9 ತಿಂಗಳಿಂದ ನಡೆಯುತ್ತಿರುವ ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಲ್ ಟೋಲ್ ಪ್ಲಾಝಾದಲ್ಲಿ ಶನಿವಾರ ನಡೆದ ಪ್ರತಿಭಟನೆ ಸಂದರ್ಭ ಪೊಲೀಸರ ಲಾಠಿ ಪ್ರಹಾರದಿಂದ ಗಂಭೀರ ಗಾಯಗೊಂಡಿದ್ದರು. ಚಿಂತಾಜನಕ ಸ್ಥಿತಿಯಲ್ಲಿದ್ದ …
Read More »ಹುಬ್ಬಳ್ಳಿ- ಧಾರವಾಡ: ಇನ್ನೊಮ್ಮೆ ಅಧಿಕಾರ ಕೊಟ್ಟರೆ ಅರ್ಧಕ್ಕೆ ನಿಂತ ಕಾಮಗಾರಿ ಪೂರ್ಣ ಮಾಡ್ತೇವೆ: ಪ್ರಲ್ಹಾದ್ ಜೋಶಿ
ಸೆಪ್ಟಂಬರ್ 3 ರಂದು ಹುಬ್ಬಳ್ಳಿ- ಧಾರವಾಡ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಗೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಮಾಜಿ ಸಿಎಂ ಜಗದೀಶ್ ಶೆಟ್ಟರ್ರಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಹುಬ್ಬಳ್ಳಿ: ಕಳೆದ ಬಾರಿ ನಾವು ನೀಡಿದ್ದ ಭರವಸೆ ಈಡೇರಿಸಿದ್ದೇವೆ. ಇನ್ನೊಮ್ಮೆ ಅಧಿಕಾರ ಕೊಟ್ಟರೆ ಕಾಮಗಾರಿಗಳು ಪೂರ್ಣ ಆಗಲಿವೆ. ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ಣ ಮಾಡ್ತೇವೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ …
Read More »ಶೌಚಾಲಯದಲ್ಲಿ ನೇಣಿಗೆ ಶರಣಾದ ಅತ್ಯಾಚಾರ ಆರೋಪಿ
ವಿಜಯಪುರ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಕ್ಸೋ ಕಾಯ್ದೆಯಡಿ ಬಂಧನಕ್ಕೀಡಾಗಿದ್ದ ಆರೋಪಿಯೋರ್ವ ಇದೀಗ ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಶೌಚಾಲಯದಲ್ಲಿಯೇ ತನ್ನ ಪ್ಯಾಂಟ್ ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಪೋಷಕರ ದೂರಿನ ಮೇರೆಗೆ ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ …
Read More »ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ನಗರದ ಕೆಲವೆಡೆ 112 ಸಹಾಯವಾಣಿ
ಮಹಾನಗರ: ಮಂಗಳೂರು ನಗರ ಪೊಲೀಸರು ಶನಿವಾರ “ತುರ್ತು ಸಹಾಯವಾಣಿ 112′ ಮೂಲಕ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸಿ ತ್ವರಿತ ವಾಗಿ ಸ್ಥಳಕ್ಕೆ ತೆರಳಿ ಸ್ಪಂದಿಸಿದರು. “ಮಹಿಳೆಯರ ಸುರಕ್ಷೆಗಾಗಿ ಒಂದು ದಿನ’ ಎಂಬ ಈ ಅಭಿಯಾನದಲ್ಲಿ ಸಬ್‌ಇನ್‌ಸ್ಪೆಕ್ಟರ್ ದರ್ಜೆಗಿಂತ ಮೇಲಿನ ದರ್ಜೆಯ ಪೊಲೀಸ್ ಅಧಿಕಾರಿಗಳು, ಮಹಿಳಾ ಪೊಲೀಸ್ ಅಧಿ ಕಾರಿ, ಸಿಬಂದಿಯನ್ನೊಳಗೊಂಡ 100ಕ್ಕೂ ಅಧಿಕ ಪೊಲೀಸರು ಪಾಲ್ಗೊಂಡಿ ದ್ದರು. ಬೆಳಗ್ಗೆ 8ರಿಂದ ಸಂಜೆ 5ರ ವರೆಗೆ ಈ ವಿಶೇಷ ಅಭಿಯಾನ ನಡೆಯಿತು. …
Read More »ಎರಡು ಪಲ್ಸರ್ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 3 ಮಂದಿ ಸಾವನ್ನಪ್ಪಿದರು.
ರಾಮನಗರ: ನಗರದ ಮಾಗಡಿ ರಸ್ತೆಯ ರಾಯರದೊಡ್ಡಿ ಬಳಿ ಶನಿವಾರ ರಾತ್ರಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಿಂದ ಸ್ಥಳದಲ್ಲೇ ಮೂವರು ಯುವಕರು ಸಾವನ್ನಪ್ಪಿದರು. ರಾಯರದೊಡ್ಡಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಬಳಿ ಅಪಘಾತ ನಡೆದಿದ್ದು, ರಾಮನಗರ ಬಾಲಗೇರಿಯ ಸಹೋದರರಾದ ಮೂರ್ತಿ (23), ವೆಂಕಟೇಶ್ (33) ಹಾಗೂ ಅಚ್ಚಲುದೊಡ್ಡಿ ನಿವಾಸಿ ರಘು (19) ಮೃತಪಟ್ಟವರು. ಎರಡು ಪಲ್ಸರ್ ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ 3 …
Read More »
Laxmi News 24×7