Breaking News
Home / ರಾಷ್ಟ್ರೀಯ (page 775)

ರಾಷ್ಟ್ರೀಯ

ಪ್ರಧಾನಿ ಮೋದಿ ದುರ್ಯೋಧನನಂತೆ’- ಪ್ರಿಯಾಂಕಾ ಗಾಂಧಿ ಟೀಕೆ

ಹರಿಯಾಣ :ಲೋಕಸಭೆ ಚುನಾವಣೆಗೆ ಇನ್ನೇನು ತೆರೆ ಬೀಳಲಿದೆ. ಆದ್ರೆ ಈ ಮಧ್ಯೆ ರಾಜಕೀಯ ನಾಯಕರು ತಮ್ಮ ನಾಲಿಗೆ ಮೇಲಿನ ಹಿಡಿತ ಕಳೆದುಕೊಳ್ತಿದ್ದಾರೆ. ಹರಿಯಾಣದ ಅಂಬಾಲಾದಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡ್ತಿದ್ದ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿಯನ್ನ ದುರ್ಯೋಧನನಿಗೆ ಹೋಲಿಸಿದ್ದಾರೆ. ಭಾರತದ ನೆಲದಲ್ಲಿ ಅಹಂಕಾರದಿಂದ ನಡೆದುಕೊಳ್ಳೋ ವ್ಯಕ್ತಿಗಳಿಗೆ ಶಿಕ್ಷೆಯಾಗಿದೆ. ಮಹಾಭಾರತದಲ್ಲಿ ಅಹಂಕಾರದಿಂದ ನಡೆದುಕೊಂಡ ದುರ್ಯೋಧನ. ಆತ ಕೃಷ್ಣ ಸಂಧಾನಕ್ಕೆ ಬಂದರೂ ಒಪ್ಪಲಿಲ್ಲ, ಹೀಗಾಗಿ ನಾಶವಾಗಿ ಹೋದ. ಹೀಗೆ ಮೋದಿ …

Read More »

ಕೊರೊನಾ ತಂದಿಟ್ಟ ಸಂಕಷ್ಟ: ಮರದ ಕೆಳಗೆ ಬದುಕು ಕಂಡುಕೊಂಡ ಮಹಿಳೆ

ಸಿದ್ದಾಪುರ: ಅಪ್ಪ, ಅಮ್ಮ, ಪತಿ, ಕುಟುಂಬದ ಯಾರೂ ಇಲ್ಲ. ತಾನು ಓದದೇ ಇದ್ದರೂ, ತನ್ನ ಮಕ್ಕಳನ್ನು ಓದಿಸಬೇಕೆಂಬ ಛಲದಿಂದ ಜೀವನ ಸಾಗಿಸುತ್ತಿದ್ದ ಮಹಿಳೆಗೆ ಕೊರೊನಾ ಸಂಕಷ್ಟ ತಂದೊಡ್ಡಿದ್ದು, ಇದೀಗ ಗುಡಿಸಲಿನಲ್ಲಿ ವಾಸ ಮಾಡುವ ಸ್ಥಿತಿ ಬಂದಿದೆ. ಸಿದ್ದಾಪುರ ಸಮೀಪದ ಮಾಲ್ದಾರೆ ಗ್ರಾಮ ಪಂಚಾಯಿತಿ ಸಮೀಪದ ತಟ್ಟಳ್ಳಿ ಹಾಡಿಯ ನಿವಾಸಿ ಸುನಿತ ಮದುವೆಯಾದ ಕೆಲವೇ ವರ್ಷಗಳಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಕುಟುಂಬವೂ ಸುನಿತಾರನ್ನು ಕೈಬಿಟ್ಟಾಗ ಅವರಿಗೆ ದಿಕ್ಕು ತೋಚದಾಗಿತ್ತು. ಮುದ್ದಾದ ಇಬ್ಬರು …

Read More »

ಮತ್ತೂಂದು ಸ್ಪೇಸ್‌ ಎಕ್ಸ್‌ ರಾಕೆಟ್‌ ಸ್ಫೋಟ

ಕ್ಯಾಲಿಫೋರ್ನಿಯಾ: ಅಮೆರಿಕದ ಪ್ರಸಿದ್ಧ ರಾಕೆಟ್‌ ನಿರ್ಮಾಣ ಸಂಸ್ಥೆ ಸ್ಪೇಸ್‌ ಎಕ್ಸ್‌ನ ಸ್ಟಾರ್‌ಶಿಪ್‌ ಪರೀಕ್ಷಾ ಮಾದರಿಯ ರಾಕೆಟ್‌, ಅತ್ಯುನ್ನತ ಎತ್ತರದ ಪರೀಕ್ಷಾ ಹಾರಾಟ ಮುಗಿಸಿ, ಲ್ಯಾಂಡ್‌ ಆಗುವ ವೇಳೆ ಸ್ಫೋಟಗೊಂಡಿದೆ. ಮುಂದಿನ ಪೀಳಿಗೆಯ ವಾಹನವಾದ “ಎಸ್‌ಎನ್‌- 10′ ರಾಕೆಟ್‌, ಟೆಕ್ಸಾಸ್‌ನ ಬೊಕಾ ಚಿಕಾ ಎಂಬಲ್ಲಿ ಸುರಕ್ಷಿತವಾಗಿಯೇ ಇಳಿದಿತ್ತು. ಆದರೆ ಕಾಂಕ್ರೀಟ್‌ ಲ್ಯಾಂಡಿಂಗ್‌ ಪ್ಯಾಡ್‌ ಮೇಲೆ ಇಳಿದ ಎಂಟೇ ನಿಮಿಷಗಳಲ್ಲಿ ಸ್ಫೋಟದಿಂದ ಛಿದ್ರವಾಗಿದೆ. ರ್ಯಾಪ್ಟರ್‌ ಎಂಜಿನ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದೇ ಸ್ಫೋಟಕ್ಕೆ ಕಾರಣ ಎಂದು …

Read More »

ಕಿರು ತೆರೆಗೆ ಬರ್ತಿದೆ ನಕಲಿ ಛಾಪಾ ಕಾಗದ ಹಗರಣದ ಸೂತ್ರಧಾರ ತೆಲಗಿ ಕತೆ

ಮುಂಬೈ: ಬೆಳಗಾವಿಯ ಖಾನಾಪುರದ ಅಬ್ದುಲ್‌ ಕರೀಂಲಾಲ್‌ ತೆಲಗಿಯ ಛಾಪಾಕಾಗದ ಹಗರಣವು ಸದ್ಯದಲ್ಲೇ ಕಿರುತೆರೆಗೆ ಬರಲಿದೆ. ಈ ಹಿಂದೆ Sony Livನಲ್ಲಿ ಈ ಹಿಂದೆ 1992 ಸ್ಕ್ಯಾಮ್‌ ಎನ್ನುವ ವೆಬ್‌ ಸರಣಿಯನ್ನು ನಿರ್ದೇಶಿಸಿದ್ದ ಹರ್ಷದ್‌ ಮೆಹ್ತಾ ಅವರು ಸ್ಕ್ಯಾಮ್‌ 2003 ಎನ್ನುವ ಹೊಸ ಸರಣಿಯನ್ನು ಅದೇ ಒಟಿಟಿ ವೇದಿಕೆಗೆ ವೆಬ್‌ ಸರಣಿ ರೂಪದಲ್ಲಿ ತರುತ್ತಿದ್ದು ಇದರಲ್ಲಿ ತೆಲಗಿಯ ಛಾಪಾ ಕಾಗದ ಹಗರಣವನ್ನು ಹೆಣೆಯಲಾಗಿದೆ. ತೆಲಗಿಯ ಕಥೆಯು ಪತ್ರಕರ್ತ ಸಂಜಯ್‌ ಸಿಂಗ್‌ ಅವರ …

Read More »

ಸುಶಾಂತ್ ಸಿಂಗ್ ಡ್ರಗ್ ಪ್ರಕರಣ: 33 ಜನರ ಹೆಸರು, 30 ಸಾವಿರ ಪುಟಗಳ ಚಾರ್ಜ್ ಶೀಟ್!

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ತಳುಕು ಹಾಕಿಕೊಂಡಿದ್ದ ಡ್ರಗ್ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಸಿಬಿ ಅಧಿಕಾರಿಗಳು ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಸುಮಾರು 30 ಸಾವಿರ ಪುಟಗಳಷ್ಟಿರುವ ಚಾರ್ಜ್ ಶೀಟನ್ನು ಎನ್ ಸಿಬಿ ಮುಖ್ಯಸ್ಥ ಸಮೀರ್ ವಾಂಖೆಡೆ ಸ್ವತಃ ಸಲ್ಲಿಕೆ ಮಾಡಲಿದ್ದಾರೆ. ಈ ಪ್ರಕರಣ ದೇಶದಲ್ಲಿ ಭಾರಿ ಸುದ್ದಿ ಮಾಡಿತ್ತು. ಸುಶಾಂತ್ ಸಿಂಗ್ ಸಾವಿನ ಬಳಿಕ ಹಲವಾರು ಡ್ರಗ್ ಪ್ರಕರಣಗಳು ಬೆಳಕಿಗೆ …

Read More »

ಕಮಲ ಹಾಸನ್ ಪಕ್ಷಕ್ಕೆ ಸೇರ್ಪಡೆಗೊಂಡ ಅಬ್ದುಲ್ ಕಲಾಂ ಆಪ್ತ

ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆ ತಮಿಳುನಾಡು ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಆಡಳಿತರೂಢ ಎಐಎಡಿಎಂಕೆ ಹಾಗೂ ಪ್ರತಿಪಕ್ಷ ಡಿಎಂಕೆ ಚುನಾವಣೆ ತಯಾರಿಯಲ್ಲಿ ತೊಡಗಿದ್ದು, ಸೀಟು ಹಂಚಿಕೆ ಕುರಿತಂತೆ ಮಿತ್ರ ಪಕ್ಷಗಳೊಂದಿಗೆ ಮಾತುಕತೆ ನಡೆಸುತ್ತಿವೆ. ಖ್ಯಾತ ನಟ ಕಮಲಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷವೂ ಕೂಡ ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದು, ಇದೀಗ ಅವರ ಪಕ್ಷಕ್ಕೆ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಆಪ್ತರೊಬ್ಬರು …

Read More »

ದುಬೈನಲ್ಲಿ 24 ಕೋಟಿ ರೂ. ಲಾಟರಿ ಗೆದ್ದಅದೃಷ್ಟವಂತ!

ದುಬೈ: ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿ ಕಳೆದ 15 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಶಿವಮೊಗ್ಗ ಮೂಲದ ವ್ಯಕ್ತಿ “ಲಕ್ಕಿ ಡ್ರಾ’ ಲಾಟರಿಯಲ್ಲಿ ಬರೋಬ್ಬರಿ 24 ಕೋಟಿ ರೂ. ಗೆದ್ದಿದ್ದಾರೆ! ಶಿವಮೊಗ್ಗ ಜಿಲ್ಲೆಯ ಶಿವಮೂರ್ತಿ ಕೃಷ್ಣಪ್ಪ ಈ ಅದೃಷ್ಟವಂತ. ಇವರ 202511 ನಂಬರಿನ ಲಾಟರಿ ಟಿಕೆಟ್‌ಗೆ ಈ ಬಹುಮಾನ ಸಿಕ್ಕಿದೆ ಎಂದು ಗಲ್ಫ್ ನ್ಯೂಸ್‌ ವರದಿಮಾಡಿದೆ. ಮನೆಯಲ್ಲಿ ಕುಳಿತು ಲಕ್ಕಿ ಡ್ರಾ ಫ‌ಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಶಿವಮೂರ್ತಿ ಅವರಿಗೆ ಇವರ ನಂಬರ್‌ ಆಯ್ಕೆಯಾದಾಗ …

Read More »

ಮಗಳನ್ನು ಕತ್ತರಿಸಿ, ರುಂಡ ಸಮೇತ ಸ್ವಯಂ ಪೊಲೀಸರಿಗೆ ಶರಣಾದ ತಂದೆ

ಲಖನೌ: ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ತಂದೆಯೊಬ್ಬ ತನ್ನ 17 ವರ್ಷದ ಮಗಳ ರುಂಡ ಕತ್ತರಿಸಿರುವ ಭಯಾನಕ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನಿನ್ನೆ ಸುಮಾರು ಮೂರು ಗಂಟೆಯ ಹೊತ್ತಿಗೆ ಮಗಳು ಪ್ರಿಯತಮನ ಜತೆಗೆ ಇರುವುದನ್ನು ಕಂಡು ಸಿಟ್ಟುಗೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಹರಿತವಾದ ಚಾಕು ತಂದು ಮಗಳ ತಲೆ ಕತ್ತರಿಸಿದ್ದಾನೆ. ಅಷ್ಟೇ …

Read More »

16ನೇ ಶರಣ ಸಂಸ್ಕೃತಿ ಉತ್ಸವದ ನಿಮಿತ್ಯವಾಗಿ ಹಮ್ಮಿಕೊಂಡ ಫಲ್ಲಕಿ ಉತ್ಸವದಲ್ಲಿ ಪಾಲ್ಗೊಂಡ ಶ್ರೀಗಳು ಹಾಗೂ ಗಣ್ಯರು.

ಗೋಕಾಕ: ನಗರದ ಶೂನ್ಯ ಸಂಪಾದನ ಮಠದ ಕಾಯಕಯೋಗಿ ಲಿಂಗೈಕ್ಯ ಬಸವ ಮಹಾಸ್ವಾಮಿಜಿಗಳವರ 16ನೇ ಪುಣ್ಯಸ್ಮರಣೋತ್ಸವ ಹಾಗೂ 16ನೇ ಶರಣ ಸಂಸ್ಕೃತಿ ಉತ್ಸವದ ಕೊನೆಯ ದಿನವಾದ ಗುರುವಾರದಂದು ಮುಂಜಾನೆ ಫಲ್ಲಕ್ಕಿ ಉತ್ಸವಕ್ಕೆ ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಅವರು ಚಾಲನೆ ನೀಡಿದರು. ಉತ್ಸವವು ನಗರದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳ ಹಾಗೂ ವಚನ ತಾಡೋಲೆ ಪ್ರತಿಗಳು, ವಿಶ್ವ ಗುರು ಬಸವಣ್ಣನವರ ಭಾವಚಿತ್ರ ಹಾಗೂ ಸಕಲ ಭಕ್ತರೊಂದಿಗೆ ಮೆರವಣಿಗೆ ಮೂಲಕ ಸಂಚರಿಸಿ …

Read More »

ರಮೇಶ ಜಾರಕಿಹೊಳಿ ಅಭಿಮಾನಿಗಳು ಹಾಗೂ ಬೆಂಬಲಿಗರಿಂದ ರಸ್ತೆ ತಡೆ, ಟೈರ್‍ಗೆ ಬೆಂಕಿ ಹಚ್ಚಿ ಪ್ರತಿಭಟನೆ.

ಗೋಕಾಕ: ರಮೇಶ ಜಾರಕಿಹೊಳಿ ಅವರ ಕೌಜಲಗಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಗುರುವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಗ್ರಾಮದ ರವಿವರ್ಮ ಚೌಕದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ, ಟೈರ್ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ, …

Read More »