Breaking News

ರಾಷ್ಟ್ರೀಯ

ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ: HIGH COURT

: ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡುವುದನ್ನು ತಡೆಯುವ ಅಧಿಕಾರ ಜಿಲ್ಲಾಧಿಕಾರಿಗೆ ಇಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಟ್ಟಡ ನಿರ್ಮಿಸುತ್ತಿರುವ ಜಾಗ ತಮ್ಮದು ಹಾಗೂ ಅದು ಕೃಷಿ ಭೂಮಿಯಾಗಿದೆ. ಅಲ್ಲಿ ಕಟ್ಟಡ ನಿರ್ಮಾಣ ಮಾಡದಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಚಲ್ಲಘಟ್ಟ ನಿವಾಸಿ ಲಕ್ಷಣರೆಡ್ಡಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಪೀಠ ಈ …

Read More »

2 ವರ್ಷದಲ್ಲಿ ಆನೆ ಕಾರಿಡಾರ್ ನಿರ್ಮಾಣ ಪೂರ್ಣ: ಸಚಿವ ಕತ್ತಿ

ಬೆಂಗಳೂರು: ಆನೆ ಹಾವಳಿ ನಿಯಂತ್ರಣಕ್ಕಾಗಿ ಕಾರಿಡಾರ್ ನಿರ್ಮಿಸಲು ಬೇಕಾಗುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಜೊತೆಗೂಡಿ ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರಲ್ಲಿ ಮನವಿ ಮಾಡಲಿದ್ದೇನೆ ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು. ವಿಧಾನಸಭೆಯಲ್ಲಿ ನಿಯಮ 69ರಡಿ ಕಾಡಾನೆಗಳು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ಉಂಟಾಗಿರುವ ಸಮಸ್ಯೆ, ಪರಿಹಾರೋಪಾಯ ಬಗ್ಗೆ ಚರ್ಚೆಗೆ ಅವರು ಉತ್ತರ ನೀಡಿದರು. ಈಗಾಗಲೇ ಕಾರಿಡಾರ್ ಕಟ್ಟುವ ಕೆಲಸ ನಡೆಯುತ್ತಿದೆ. ರಾಜ್ಯದಲ್ಲಿ …

Read More »

ಆಚಾರ್ಯ ತಾಂತ್ರಿಕ ಕಾಲೇಜಿನ ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಸ್ತವವಾಗಿ ಹಾರುವ ಅನುಭವ ನೀಡುವಂತಹ ವಿಮಾನವನ್ನು ನಿರ್ಮಿಸಿದ್ದಾರೆ

ಬೆಂಗಳೂರು: ವಿಮಾನದಲ್ಲಿ ಪೈಲೆಟ್​ಗಳು ಕಾರ್ಯ ನಿರ್ವಹಿಸುವ ರೀತಿಯಲ್ಲಿ ನೀವೂ ಸಹ ಪೈಲಟ್ ಸೀಟಲ್ಲಿ ಕುಳಿತು ಕೆಲ ಹೊತ್ತು ಪೈಲಟ್ ಅಗಬಹುದಾಗಿದೆ. ಏರೋಸ್ಪೇಸ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಂತೂ ಇದೊಂದು ನೈಜ ಅನುಭವ. ರಾಜಧಾನಿಯ ಚಿಕ್ಕಬಾಣಾವರ ಸಮೀಪದ ಆಚಾರ್ಯ ಶಿಕ್ಷಣ ಸಂಸ್ಥೆ ಆವರಣಕ್ಕೆ ಭೇಟಿ ನೀಡಿದರೆ ಈ ಎಲ್ಲ ವಿಶೇಷತೆ ಕಂಡುಬರುತ್ತದೆ. ಆಚಾರ್ಯ ತಾಂತ್ರಿಕ ಕಾಲೇಜಿನ ವೈಮಾನಿಕ, ಬಾಹ್ಯಾಕಾಶ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ವಾಸ್ತವವಾಗಿ ಹಾರುವ ಅನುಭವ ನೀಡುವಂತಹ ವಿಮಾನವನ್ನು ನಿರ್ಮಿಸಿದ್ದಾರೆ. ವಿಮಾನದ ಮುಖ್ಯ ವಿಭಾಗವಾದ …

Read More »

ವ್ಯಕ್ತಿಯ ಕೊಲೆ ಮಾಡಿ ಕಾರಿಗೆ ಬೆಂಕಿಯಿಟ್ಟ ಪ್ರಕರಣ: ಮೂವರು ಆರೋಪಿಗಳ ಬಂಧನ!

ಅರಕಲಗೂಡು (ಹಾಸನ): ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಮಾ.15ರಂದು ಕಾರಿನ ಸಮೇತ ವ್ಯಕ್ತಿ ಸುಟ್ಟು ಹಾಕಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಕೊಣನೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳವಾಡಿಯ ಹಿರಿಕೆರೆ ಏರಿಯ ಮೇಲೆ ಕಾರೊಂದು ಸುಟ್ಟು ಕರಕಲಾಗಿ, ಕಾರಿನ ಹಿಂಭಾಗದ ಡಿಕ್ಕಿಯಲ್ಲಿ ವ್ಯಕ್ತಿಯ ಶವ ದೊರಕಿತ್ತು.ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದ ಕೊಣನೂರು ಪೊಲೀಸರು 3 ಮಂದಿಯನ್ನು ಬಂಧಿಸಿದ್ದಾರೆ. ಕೊಡಗು ಜಿಲ್ಲೆಯ ಕುಶಾಲ ನಗರ ತಾಲೂಕಿನ ಗೊಂದಿಬಸವನಹಳ್ಳಿ ಗ್ರಾಮದ ಚಾಲಕರುಗಳಾದ ಶಶಿಕುಮಾರ್ …

Read More »

ದಲಿತ ಯುವಕನ ಮೇಲೆ ಹಲ್ಲೆ: ಆ್ಯಸಿಡ್​​ನಿಂದ ಹಣೆ ಮೇಲೆ ತ್ರಿಶೂಲ ಬಿಡಿಸಿ, ಚಿತ್ರಹಿಂಸೆ

ಸಹರಾನ್ಪುರ (ಉತ್ತರಪ್ರದೇಶ): ದಲಿತ ಯುವಕನ ಮೇಲೆ ಹಲ್ಲೆ ನಡೆಸಿರುವ ಕೆಲ ದುಷ್ಕರ್ಮಿಗಳು ಆತನ ಹಣೆ ಮೇಲೆ ಆ್ಯಸಿಡ್​​ನಿಂದ ತ್ರಿಶೂಲ​ ಬಿಡಿಸಿ, ಚಿತ್ರಹಿಂಸೆ ನೀಡಿರುವ ಘಟನೆ ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿರುವ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾನೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಹರಾನ್ಪುರ್ ಜಿಲ್ಲೆಯ ಆದೇಶ್ ಎಂಬ ದಲಿತ ಯುವಕನಿಗೆ ಹೋಳಿ ಹಬ್ಬದ ದಿನ ವಿಶಾಲ್ ರಾಣಾ ಎಂಬ ಮೇಲ್ಜಾತಿ ವ್ಯಕ್ತಿ …

Read More »

ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಂಧಾನದ ಫಲ ಯಶಸ್ವಿ

    ಮೂಡಲಗಿ : ಇಂದಿನಿoದ ನಡೆಯಬೇಕಿದ್ದ ಪದವಿ(ಕಲಾ ವಿಭಾಗ) ಪರೀಕ್ಷೆಗಳನ್ನು ಮಾರ್ಚ 25 ರಿಂದ ಎಪ್ರೀಲ್ 11 ರವರೆಗೆ ನಡೆಸಲು ಉದ್ಧೇಶಿಸಲಾಗಿದ್ದು, ಪರೀಕ್ಷಾ ಕೇಂದ್ರದ ಬದಲಾವಣೆ ಕುರಿತಂತೆ ಎದ್ದಿರುವ ವಿವಾದವು ಇದೀಗ ಕೆಎಂಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಮುತುವರ್ಜಿಯಿಂದ ಬಗೆಹರಿದಿದ್ದು, ಪರೀಕ್ಷೆಯನ್ನು ಮೂಡಲಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೂಡಲಗಿ ಪಟ್ಟಣದ ಎಂಇಎಸ್ ಕಾಲೇಜಿನ ಕಲಾ ವಿಭಾಗದ ಕೇಂದ್ರವನ್ನು ನೆರೆಯ …

Read More »

ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ ಕೇಸ್: ಮೂವರು ಸೇರಿ ಹಲವರ ಬಂಧನ

ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೂವರು ಆರೋಪಿಗಳನ್ನು ಬಂಧಿಸಿದ್ದ ಗ್ರಾಮೀಣ ಪೊಲೀಸರು ಇಂದು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹೌದು ಬೆಳಗಾವಿ ತಾಲೂಕಿನ ಹಲಗಾ ಬಸ್ತವಾಡ ಗ್ರಾಮದ ಸಧ್ಯ ಭವಾನಿ ನಗರದ ಸಂಸ್ಕøತಿ ಫಾಮ್ರ್ಸನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡ ಬೊಮ್ಮನ್ನವರನನ್ನು ಮಾರ್ಚ 15ರಂದು ಬೆಳ್ಳಂ ಬೆಳಿಗ್ಗೆ ಹತ್ಯೆ ಮಾಡಲಾಗಿತ್ತು. ಆರೋಪಿಗಳಿಗೆ …

Read More »

ಬಣ್ಣ ಆಡುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಜನರು ಆತಂಕದಲ್ಲಿ

ರಂಗ ಪಂಚಮಿ ಹಬ್ಬದ ಪ್ರಯುಕ್ತ ಬಣ್ಣ ಆಡುವ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ನಡೆದಿದೆ. ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ  ಬಣ್ಣ ಎರಚಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಗ್ರಾಮ ಪಂಚಾಯತ ಅಧ್ಯಕ್ಷನನ್ನು ತಳ್ಳಾಡುವುದರ ಜೊತೆಗೆ ಪೊಲೀಸರ ಮೇಲೆಯೇ ಯುವಕರ ಗುಂಪೊಂದು ಹಲ್ಲೆ ಮಾಡಿದೆ.ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ಪಿಎಸ್‍ಐ ಹಾಗೂ …

Read More »

ಪಾರ್ವತಮ್ಮ ರಾಜ್ ಕುಮಾರ್-ಪುನೀತ್ ಹೆಸರಿನಲ್ಲಿ ಮೈಸೂರು ವಿವಿಯಲ್ಲಿ 2 ಚಿನ್ನದ ಪದಕ

ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಪ್ರತಿ ವರ್ಷವೂ ಮೈಸೂರು ವಿಶ್ವವಿದ್ಯಾಲಯದಲ್ಲಿ ಓದಿದ ಪ್ರತಿಭಾವಂತರಿಗೆ 2 ಚಿನ್ನದ ಪದಕವನ್ನು ನೀಡುವುದಾಗಿ ರಾಘವೇಂದ್ರ ರಾಜ್ ಕುಮಾರ್ ಘೋಷಿಸಿದ್ದಾರೆ. ಇಂದು ಮೈಸೂರಿನ ವಿವಿಯಲ್ಲಿ ನಡೆಯುತ್ತಿರುವ 102ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ರಾಘವೇಂದ್ರ ರಾಜ್ ಕುಮಾರ್ ‘ಪುನೀತ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಹೆಸರಿನಲ್ಲಿ ಎರಡು ಚಿನ್ನದ ಪದಕಗಳನ್ನು ನೀಡುವುದಾಗಿ ತಿಳಿಸಿದರು. ಪಾರ್ವತಮ್ಮ ರಾಜಕುಮಾರ್ ಅವರ ಹೆಸರಿನಲ್ಲಿ, ಬ್ಯೂಸಿನೇಸ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಬಂಗಾರದ ಪದಕ ಮತ್ತು …

Read More »

ಎಸಿಬಿ ದಾಳಿ ಕಣ್ಣೊರೆಸುವ ತಂತ್ರ, ಭ್ರಷ್ಟರಿಗೆ ಶಿಕ್ಷೆ ಆಗುತ್ತಿಲ್ಲ: ಹೆಚ್‍ಡಿಕೆ

ಬೆಂಗಳೂರು: ಜನ ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅವರು ಸಮೃದ್ಧವಾಗಿದ್ದಾರೆ. ಜನರಿಗೆ ಬೆಲೆ ಏರಿಕೆಗಿಂತ ಭಾವನಾತ್ಮಕ ವಿಷಯಗಳೇ ಹೆಚ್ಚು ಖುಷಿ ನೀಡುತ್ತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದರು. ವಿಧಾನಸೌಧದಲ್ಲಿ ಪಂಚರಾಜ್ಯ ಚುನಾವಣೆಯ ನಂತರ ಬೆಲೆ ಏರಿಕೆ ಆದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬೆನ್ನಲ್ಲೇ ಗ್ಯಾಸ್ ಮತ್ತಿತರ ಬೆಲೆ ಏರಿಕೆ ಆಗಿದೆ. ಜನ ಇಂದು ಹಣವಂತರಾಗಿದ್ದಾರೆ. ಮೌನವಾಗಿ ಬೆಂಬಲಿಸಿದ್ದಾರೆ. ಜನರಿಗೆ ಈಗ ಧರ್ಮದ …

Read More »