ಬೆಂಗಳೂರು: ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ಸಚಿವ ಈಶ್ವರಪ್ಪ ವಿರುದ್ಧ ದೇಶದ್ರೋಹ ಪ್ರಕರಣ ತನಿಖೆ ನಡೆಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಆದೇಶ ನೀಡಿದೆ. ಶಿವಮೊಗ್ಗದಲ್ಲಿ ಕಳೆದ ತಿಂಗಳ 20ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ತನಿಖೆಯ ಹಂತದಲ್ಲಿರುವಾಗಲೇ ಈ ಸಂಬಂಧ ಪ್ರಚೋದನಕಾರಿ, ಸಾರ್ವಜನಿಕ ಹೇಳಿಕೆ ನೀಡಿ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ವೈರತ್ವ ಉಂಟಾಗುವಂತೆ ಮಾಡಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ …
Read More »ಹಲಾಲ್ ದಂಗಲ್ : ಸಸ್ಯಹಾರಿಗಳಿಗೆ ಯಾಕೆ ಬೇಕು ಮಾಂಸದ ‘ಉಸಾಬರಿ’?
ರಾಜ್ಯದಲ್ಲಿ ಹಲಾಲ್ ದಂಗಲ್ ಜೋರಾಗಿ ಬೀಸುತ್ತಿದೆ, ಈ ನಡುವೆ ಮಾಂಸವನ್ನೇ ತಿನ್ನದ ಸ್ವಾಮೀಜಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಮಾಂಸಹಾರಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಈ ಹಿಂದೆ ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಮೊಟ್ಟೆ ನೀಡಲು ಮುಂದಾದ ವೇಳೆಯಲ್ಲಿ ಮೊಟ್ಟೆ ನೀಡದಂತೆ ರಾಜ್ಯ ಸರ್ಕಾರದ ವಿರುದ್ದ ತೀವ್ರ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಿ ಮೊಟ್ಟೆ ಮಾಂಸಹಾರ ಎನ್ನುವಂತೆ ಬಿಂಬಿಸಿದರು. ಅಂದು ಮೊಟ್ಟೆ ಬೇಡ ಅಂತ ಹೇಳಿದವರು ಇಂದು ಇಂತದೇ ಮಾಂಸ ತಿನ್ನಿ ಅಂತ …
Read More »ಕರ್ನಾಟಕದಲ್ಲೇ ತಲೆಎತ್ತಲಿದೆ ದೇಶದ ಲೀಥಿಯಂ ಬ್ಯಾಟರಿ ತಯಾರಿಕೆಯ ಅತಿದೊಡ್ಡ ಕಾರ್ಖಾನೆ
ರಾಜ್ಯದಲ್ಲಿ ಲಿಥಿಯಂ-ಐಯಾನ್ ಸೆಲ್ ಉತ್ಪಾದನೆಗಾಗಿ ₹6,000 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲು ಎಕ್ಸೈಡ್ ಇಂಡಸ್ಟ್ರೀಸ್ ಮುಂದೆ ಬಂದಿದೆ. ಈ ನಿಟ್ಟಿನಲ್ಲಿ ಗುರುವಾರ ಎಕ್ಸೈಡ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನಿದೇರ್ಶಕ ಮತ್ತು ಸಿಇಒ ಸುಬೀರ್ ಚಕ್ರವರ್ತಿ ಅವರು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್ ನಿರಾಣಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದು ದೇಶದಲ್ಲೇ ಅತಿದೊಡ್ಡ ಲಿಥಿಯಂ ಆಧರಿತ ಬ್ಯಾಟರಿ ಕೋಶಗಳನ್ನು ಉತ್ಪಾದಿಸುವ ಗಿಗಾ ಫ್ಯಾಕ್ಟರಿ …
Read More »ರಾಜ್ಯಸಭೆಯಿಂದ ನಿವೃತ್ತಿಯಾಗುತ್ತಿರುವ 72 ಸಂಸದರಿಗೆ ಬೀಳ್ಕೊಡುಗೆ; ಫೋಟೋಗೆ ಫೋಸ್
ನವದೆಹಲಿ: ರಾಜ್ಯಸಭೆಯ 72 ನಿವೃತ್ತ ಸದಸ್ಯರಿಗೆ ಇಂದು ಬೀಳ್ಕೊಡುಗೆ ನೀಡಲಾಗಿದ್ದು, ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು, ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್, ಪ್ರಧಾನಿ ಮೋದಿ ಹಾಗೂ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಂಡರು. ಮೇಲ್ಮನೆಯ ಕೆಲ ಸದಸ್ಯರು ಈ ತಿಂಗಳು ನಿವೃತ್ತಿಯಾಗುತ್ತಿದ್ದು, ಇನ್ನು ಕೆಲವರು ಸ್ವಲ್ಪ ಸಮಯದ ನಂತರ ನಿವೃತ್ತರಾಗುತ್ತಿದ್ದಾರೆ. ಸಂಸತ್ತಿನ ಸಂಪ್ರದಾಯಕ್ಕೆ ಅನುಗುಣವಾಗಿ ಫೋಟೋ ಸೆಷನ್ ನಡೆಸಲಾಯಿತು. ರಾಜ್ಯಸಭೆಯು ನಿವೃತ್ತಿಯಾಗುವ ಸದಸ್ಯರಿಗೆ ಬೀಳ್ಕೊಡುಗೆ …
Read More »ಚುನಾವಣೆಗೆ ವರ್ಷವಿರುವಾಗಲೇ ಸಿದ್ದರಾಮಯ್ಯ ಸೋಲು ಒಪ್ಪಿಕೊಂಡಿದ್ದಾರೆ: ಬಿಜೆಪಿ Public TV03/31/2022
ಬೆಂಗಳೂರು: ಸಿದ್ದರಾಮಯ್ಯ ಅವರು ಚುನಾವಣೆಗೆ ವರ್ಷವಿರುವಾಗಲೇ ಸೋಲನ್ನು ಒಪ್ಪಿಕೊಂಡು ಬಿಟ್ಟಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಕಾಲೆಳಿದಿದೆ. ಟ್ವೀಟ್‍ನಲ್ಲಿ ಏನಿದೆ?: ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿದ್ದಾಗಲೇ ಸೋತ ಭಯ, ಇಂದು ವಿಪಕ್ಷ ನಾಯಕನಾಗಿರುವಾಗಲೂ ಕಾಡುತ್ತಿದೆ. ಚುನಾವಣೆಗೆ ವರ್ಷವಿರುವಾಗಲೇ ಸೋಲು ಒಪ್ಪಿಕೊಂಡು ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಜನರು ತಿರಸ್ಕರಿಸುವ ಭಯವನ್ನು ಮತಯಂತ್ರದ ಮೇಲೆ ಹಾಕುವುದೇಕೆ? ಎಂದು ಟೀಕಿಸಿದೆ.ಬುಧವಾರ ವಿಧಾನಸಭೆಯಲ್ಲಿ ಚುನಾವಣೆ ಸುಧಾರಣೆ ಅಗತ್ಯತೆ ಕುರಿತ ಚರ್ಚೆಯಲ್ಲಿ ಮಾತನಾಡಿದ್ದ ವಿರೋಧ ಪಕ್ಷದ ನಾಯಕ …
Read More »ನನ್ನ ಹತ್ತಿರ ಡೇಂಜರ್ಸ್ ಹುಡುಗೀರು ಇದ್ದಾರೆ-ರಾಮ್ ಗೋಪಾಲ್ ವರ್ಮಾ ಹೀಗಂದಿದ್ಯಾಕೆ..?
ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವಿಟ್ ವಾಪಸ್ಸು ಅವರ ಬುಡಕ್ಕೆ ಬಂದಿದೆ. ನಿರ್ದೇಶಕ ರಾಜಮೌಳಿ ಅವರನ್ನು ಕಾಲೆಳೆಯಲು ಹೋಗಿ, ಅಭಿಮಾನಿಗಳಿಂದ ತಾವೇ ಕಾಲೆಳಿಸಿಕೊಂಡಿದ್ದಾರೆ ವರ್ಮಾ.ರಾಜಮೌಳಿ, ಜೂನಿಯರ್ ಎನ್.ಟಿ.ಆರ್ ಮತ್ತು ರಾಮ್ ಚರಣ್ ತೇಜ ಮೂವರು ಇರುವ ಫೋಟೋವೊಂದನ್ನು ಹಾಕಿ, ‘ರಾಜಮೌಳಿ ಸರ್, ನಿಮ್ಮೊಂದಿಗೆ ಇಬ್ಬರು ಡೇಂಜರ್ಸ ಗಂಡಸರಿದ್ದರೆ, ನನ್ನ ಹತ್ತಿರ ಡೇಂಜರ್ಸ್ ಹುಡುಗಿಯರು ಇದ್ದಾರೆ’ ಎಂದು ಬರೆದು ಟ್ವಿಟ್ ಮಾಡಿದ್ದಾರೆ. ಆ ಹುಡುಗಿಯರು ಯಾರು ಎನ್ನುವುದನ್ನೂ ಬಹಿರಂಗ …
Read More »10ನೇ ದಿನದಲ್ಲಿ 9ನೇ ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನವದೆಹಲಿ: ಪೆಟ್ರೋಲ್, ಡೀಸೆಲ್ ದರವು ಕಳೆದ 10 ದಿನಗಳಲ್ಲಿ 9ನೇ ಬಾರಿ ಏರಿಕೆಯಾಗಿದ್ದು, ಗುರುವಾರವೂ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್‍ಗೆ 80 ಪೈಸೆ ಏರಿಕೆಯಾಗಿದೆ. ಒಟ್ಟಾರೆಯಾಗಿ ಒಂದೇ ವಾರದಲ್ಲಿ ಲೀಟರ್‌ಗೆ 6.40ರೂ. ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 106.48 ರೂ. ಇದ್ದ ಪೆಟ್ರೋಲ್ ದರ 107.32 ರೂಪಾಯಿಗೆ ಏರಿಕೆಯಾಗಿದೆ. ಪ್ರತಿ ಲೀಟರ್‌ಗೆ 90.50 ರೂ. ಇದ್ದ ಡೀಸೆಲ್ ದರ ರೂ. 91.29ಕ್ಕೆ ಏರಿಕೆಯಾಗಿದೆ.ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. …
Read More »ತರ ಹೆಸರಿಗೇ ಉಳುವ ಭೂಮಿ : ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು, ಮಾ.31- ಹಲವಾರು ವರ್ಷಗಳಿಂದ ರೈತರು ಉಳುಮೆ ಮಾಡುತ್ತಿರುವ ಭೂಮಿಯನ್ನು ಅವರ ಹೆಸರಿಗೆ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ ಸದಸ್ಯ ಕೆ.ಹರೀಶ್ ಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದಕ್ಷಿಣ ಕನ್ನಡ ಭಾಗದಲ್ಲಿ ಕುಮ್ಕಿ ಭಾಣಿ ಭೂಮಿಗಳಿವೆ, ಉತ್ತರ ಕನ್ನಡ ಜಿಲ್ಲಾಯಲ್ಲಿ ಬೆಟ್ಟ, ಹಾಡಿಗಳಿವೆ, ಮೈಸೂರು ಭಾಗದಲ್ಲಿ ಕಾನು ಮತ್ತು ಸೊಪ್ಪಿನ ಬೆಟ್ಟ ಭೂಮಿಗಳು, ಕೊಡಗಿನಲ್ಲಿ ಜಮ್ಮಾ ಮತ್ತು …
Read More »ಒಂದು ಅಂಕ ವ್ಯತ್ಯಾಸ ಇದ್ದರೂ ಅಂಕಪಟ್ಟಿ ಬದಲು?
ಬೆಂಗಳೂರು: ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ರಾಜ್ಯ ಪದವಿಪೂರ್ವ ಶಿಕ್ಷಣ ಇಲಾಖೆ ಮುಂದಾಗಿದ್ದು, ಇನ್ನು ಮುಂದೆ ಒಂದು ಅಂಕದ ವ್ಯತ್ಯಾಸ ಇದ್ದರೂ ಅಂಕ ಪಟ್ಟಿ ಬದಲಿಸಲು ನಿರ್ಧರಿಸಿದೆ. ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. ಹಾಲಿ ನಿಯಮದ ಪ್ರಕಾರ ಮರು ಮೌಲ್ಯಮಾಪನದ ವೇಳೆ ಆರು ಅಂಕಗಳಿಗಿಂತ ಹೆಚ್ಚು ಅಂಕಗಳ ವ್ಯತ್ಯಾಸ ಇದ್ದರೆ ಮಾತ್ರ …
Read More »ಟಿಪ್ಪು’ ಸ್ವಾತಂತ್ರ್ಯ ಯೋಧ ಎನ್ನುವುದೇ ಉತ್ಪ್ರೇಕ್ಷೆ: ಬಿಜೆಪಿ ಟೀಕೆ
ಬೆಂಗಳೂರು: ಟಿಪ್ಪು ಸುಲ್ತಾನ್ ಈ ದೇಶದ ಸ್ವಾತಂತ್ರ್ಯ ಯೋಧ ಎನ್ನುವುದೇ ಒಂದು ಉತ್ಪ್ರೇಕ್ಷೆ ಎಂದು ರಾಜ್ಯ ಬಿಜೆಪಿ ಘಟಕವು ಟೀಕಿಸಿದೆ. ಈ ಕುರಿತು ಬುಧವಾರ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಉತ್ತರ ಭಾರತದಲ್ಲಿ ಔರಂಗಜೇಬ್, ದಕ್ಷಿಣದಲ್ಲಿ ಟಿಪ್ಪು ಸುಲ್ತಾನ್ ಮತಾಂಧ ರಾಜಸತ್ತೆಯ ಸೃಷ್ಟಿಕರ್ತರು. ಕತ್ತಿಯ ಮೊನೆಯಿಂದ ಅಮಾಯಕರ ಬದುಕು ಕಸಿದುಕೊಂಡ ಮತಾಂಧರಿವರು. ಇಂಥ ಮತೀಯ ಸುಳ್ಳು ಇತಿಹಾಸವನ್ನು ನಮ್ಮ ಮಕ್ಕಳು ಓದಬೇಕೇ?’ ಎಂದು ಪ್ರಶ್ನಿಸಿದೆ. ‘ಟಿಪ್ಪು ಸುಲ್ತಾನ್ ಈ ದೇಶದ …
Read More »
Laxmi News 24×7