Breaking News

ರಾಷ್ಟ್ರೀಯ

ನಿನ್ನಿಂದ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು.. ಎಲ್ಲವನ್ನೂ ಟಿವಿಯಲ್ಲಿ ನೋಡಿದೆ. ಮಗನ ಮಾತಿಗೆ ಕಣ್ಣೀರಿಟ್ಟ ದಿವ್ಯಾ

ಕಲಬುರಗಿ: ಅಮ್ಮಾ ನಿನ್ನಿಂದಲೇ ಇದೆಲ್ಲಾ ಆಗಿದ್ದು, ನಿನ್ನಿಂದ ನನ್ನ ಅಪ್ಪ ಕೂಡ ಜೈಲಿಗೆ ಹೋಗುವಂತಾಯ್ತು… ನಾನು ಎಲ್ಲವನ್ನೂ ಟಿವಿಯಲ್ಲಿ ನೋಡಿದ್ದೇನೆ… ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಬಿಜೆಪಿ ದಿವ್ಯಾ ಹಾಗರಗಿ ತನ್ನ ಮಕ್ಕಳನ್ನು ನೋಡಿ ಕಣ್ಣೀರಿಟ್ಟಿದ್ದಾಳೆ. ತಾಯಿಯನ್ನು ನೋಡಲು ಭಾನುವಾರ ಸಿಐಡಿ ಕಚೇರಿ ಬಂದ ಇಬ್ಬರು ಮಕ್ಕಳು ಕೂಡ ತಾಯಿಯನ್ನು ನೋಡುತ್ತಿದ್ದಂತೆ ಕಣ್ಣೀರು ಸುರಿಸಿದರು. ಈ ವೇಳೆ ‘ಅಮ್ಮಾ ನಿನ್ನಿಂದಲೇ ಇದೆಲ್ಲಾ ಆಗಿದ್ದು, ನಿನ್ನಿಂದ ನನ್ನ ಅಪ್ಪ ಕೂಡ …

Read More »

ಕೆಜಿಎಫ್ ಚಿತ್ರದ ಅಬ್ಬರ ನೋಡಿ ಹೆದರಿದ್ದೆ: ಬಾಲಿವುಡ್ ನಟ ಅಮೀರ್ ಖಾನ್

ಮುಂಬೈ: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ದೇಶಾದ್ಯಂತ ನಾಗಾಲೋಟ ಮುಂದುವರೆಸಿದೆ. ಬಿಗ್ ಬಜೆಟ್ ಚಿತ್ರಗಳು ಬಿಡುಗಡೆಯಾದರೂ ಮೂರನೇ ವಾರವೂ ಕೆಜಿಎಫ್ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದೆ. ಕೆಜಿಎಫ್ 2 ಚಿತ್ರ ಸಾವಿರ ಗಡಿದಾಡಿದ ಭಾರತೀಯ ಚಿತ್ರರಂಗದ ನಾಲ್ಕನೇ ಚಿತ್ರವಾಗಿದೆ. ಇನ್ನು ಅಮೀರ್ ಖಾನ್ ಅಭಿನಯದ ದಂಗಲ್ ಚಿತ್ರ 2000 ಕೋಟಿ ಗಳಿಸಿ ಸಾರ್ವಕಾಲಿಕ ದಾಖಲೆ ಮಾಡಿದೆ. ಆದರೆ ಆ ಚಿತ್ರ ಹಿಂದಿಯಲ್ಲಿ 387 ಕೋಟಿ ರುಪಾಯಿ ಮಾತ್ರ ಗಳಿಕೆ …

Read More »

ಮೇ ತಿಂಗಳಲ್ಲಿ ಮಳೆಯ ದಿನಗಳು ಹೆಚ್ಚಿರಲಿದೆ

ಬೆಂಗಳೂರು: ಮಾರ್ಚ್‌ ಹಾಗೂ ಎಪ್ರಿಲ್‌ನಲ್ಲಿ ಉತ್ತರ ಭಾರತ ರಾಜ್ಯಗಳಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ನಷ್ಟು ಜಾಸ್ತಿಯಾಗಿದೆ. ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಸಿಗಾಳಿಯಿಂದ ಜನ ತತ್ತರಿಸಿದ್ದಾರೆ. ಅದರ ಪ್ರಭಾವ ರಾಜ್ಯದಲ್ಲೂ ಬೀರಲಿದೆ ಎಂಬ ಆತಂಕ ಮನೆಮಾಡಿತ್ತು. ಆದರೆ, ಇದೇ ಸಮಯದಲ್ಲಿ ವರುಣನ ಆಗಮನ ಹಾಗೂ ಹವಾಮಾನ ತಜ್ಞರ ಮುನ್ಸೂಚನೆಯು ಜನರ ಆತಂಕವನ್ನು ತಕ್ಕಮಟ್ಟಿಗೆ ದೂರ ಮಾಡಿದೆ. ಅದರಂತೆ ರಾಜ್ಯದಲ್ಲಿ “ಬೇಸಗೆಯ ಪೀಕ್‌’ ಅಂದರೆ ಮೇಯಲ್ಲೂ ಮಳೆಯ ದಿನಗಳು ಹೆಚ್ಚು ಇರಲಿದ್ದು, ಇದರಿಂದ …

Read More »

ಸವಾಲಿಗೆ ಜವಾಬ್ ವಾರ್‌ – ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದಾರಾ?

ಬೆಂಗಳೂರು: ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಈಗ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದು, ತನ್ನ ವಿರುದ್ಧ ತೊಡೆ ತಟ್ಟಿದವರನ್ನು ಎಕ್ಸ್ ಪೋಸ್ ಮಾಡಲು ಡಿಕೆ ಶಿವಕುಮಾರ್‌ ಟಾರ್ಗೆಟ್ ಫಿಕ್ಸ್ ಮಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಹೌದು. ಈ ಮೊದಲ ರಾಜಕೀಯವಾಗಿ ನಾಯಕರ ಮಧ್ಯೆ ಆರೋಪ, ಪ್ರತ್ಯಾರೋಪ, ವಾಗ್ದಾಳಿ ನಡೆಯುತ್ತಿದ್ದವು. ಆದರೆ ಸಮ್ಮಿಶ್ರ ಸರ್ಕಾರ ಪತನವಾದ ಬಳಿಕ ʼಸವಾಲಿಗೆ ಜವಾಬ್ʼ ಎಂಬ ಪೊಲಿಟಿಕ್ಸ್ ಶುರುವಾಗಿದೆ. ಸವಾಲಿಗೆ ಜವಾಬ್‌ʼ ಹೋರಾಟದಲ್ಲಿ ಕಾಕತಾಳಿಯವೋ ತಂತ್ರಗಾರಿಕೆಯೋ ಗೊತ್ತಿಲ್ಲ. ಆದರೆ ಡಿಕೆಶಿ …

Read More »

ಲಹರಿಗೆ 48 ವರುಷ : ಇಬ್ಬರ ಸಾಧನೆಗೆ ಮುಖ್ಯಮಂತ್ರಿಗಳು ಸೇರಿದಂತೆ ಅನೇಕ ಗಣ್ಯರಿಂದ ಅಭಿನಂದನೆ

ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿರುವ ಲಹರಿ ಸಂಸ್ಥೆ ಆರಂಭವಾಗಿ ನಲವತ್ತೆಂಟು ವರ್ಷಗಳು ಕಳೆದಿದೆ. ಈಗ ಮತ್ತೊಂದು ವಿಶೇಷವೆಂದರೆ ಈ ಸಂಸ್ಥೆಯ ಮೂಲಕ ಖ್ಯಾತ ಸಂಗೀತ ನಿರ್ದೇಶಕ ರಿಕ್ಕಿಕೇಜ್ ನೇತೃತ್ವದಲ್ಲಿ  “ಡಿವೈನ್ ಟೈಡ್ಸ್” ಎಂಬ ಅದ್ಭುತ ಆಲ್ಬಂ ಮೂಡಿಬಂದಿದೆ. ಈ ಆಲ್ಬಂ ಗಾಗಿ ರಿಕ್ಕಿಕೇಜ್ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದಾರೆ. ರಿಕ್ಕಿಕೇಜ್ ಅವರಿಗೆ ಗ್ರ್ಯಾಮಿ ಅವಾರ್ಡ್ ಬಂದಿರುವುದು ಇದು ಎರಡನೇ ಬಾರಿ. ಈ ಸಂತಸ ಹಂಚಿಕೊಳ್ಳಲು ಲಹರಿ ಸಂಸ್ಥೆ …

Read More »

ಬದಲಾವಣೆ ಕಾಲ ಪ್ರಾರಂಭವಾಗಿದೆ, ಸಬೂಬುಗಳ ಕಾಲ ಮುಗಿದಿದೆ: ಬೊಮ್ಮಾಯಿ

ಬೆಂಗಳೂರು: ಜನ ಕಲ್ಯಾಣಕ್ಕಾಗಿ ವಿವಿಧ ನಿಗಮಗಳಿಗೆ ನೀಡಲಾಗಿರುವ ಅನುದಾನ ನೇರವಾಗಿ ಫಲಾನುಭವಿಗಳಿಗೆ ಮುಟ್ಟಬೇಕೆನ್ನುವ ಗುರಿಯನ್ನು ಅಧಿಕಾರಿಗಳಿಗೆ ನೀಡಲಾಗಿದ್ದು, ಇದನ್ನು ನಾನೇ ಸ್ವತ: ಮೇಲ್ವಿಚಾರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕಲ್ಯಾಣ ಮಿತ್ರ ಸಹಾಯವಾಣಿ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವೃತ್ತಿ ಸಾಮರ್ಥ್ಯ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ಕೊಟ್ಟರು.  ಬದಲಾವಣೆಯ ಕಾಲ ಪ್ರಾರಂಭವಾಗಿದ್ದು, ಸಬೂಬುಗಳ ಕಾಲ ಮುಗಿದಿದೆ. ಶಿಕ್ಷಣ, …

Read More »

ಮೋದಿ ಬಂದ್ರೂ ಮಣಿದಿಲ್ಲ, ಸವದಿ ಏನ್‌ ಮಾಡ್ತಾನ್‌?

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿವೆ. “ಉದಯವಾಣಿ’ ಕಳೆದ ಏ.20ರಂದು “ಎಂ.ಬಿ.ಪಾಟೀಲ ವಿರುದ್ಧ ಲಕ್ಷ್ಮಣ ಸವದಿ ಸ್ಪರ್ಧೆ?’ ಎಂಬ ತಲೆಬರಹದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಇದೀಗ ಸಾಕಷ್ಟು ಸದ್ದು ಮಾಡಿದೆ. “ಬಬಲೇಶ್ವರ ಕ್ಷೇತ್ರದಲ್ಲಿ ಮೋದಿ ಬಂದ್ರೂ ಏನೂ ಮಾಡಿಕೊಳ್ಳಲಾಗಿಲ್ಲ, ಮಣಿಸಲಾಗಿಲ್ಲ. ಇನ್ನ ಸವದಿ ಬಂದೇನ್‌ ಮಾಡ್ತಾನ್‌’ ಎಂದು ಬಬಲೇಶ್ವರ ಹಾಲಿ ಶಾಸಕರೂ ಆಗಿರುವ ಮಾಜಿ ಮಂತ್ರಿ, ಕೆಪಿಸಿಸಿ ಪ್ರಚಾರ …

Read More »

ಇಂದು ಚಂದ್ರ ದರ್ಶನವಾಗದ ಕಾರಣ ನಾಳೆ ಬದಲು ನಾಡಿದ್ದು ಮಂಗಳವಾರ ರಂಜಾನ್

ಬೆಂಗಳೂರು: ಇಂದು ಚಂದ್ರದರ್ಶನ ವಾಗದ ಹಿನ್ನೆಲೆಯಲ್ಲಿ ಸೋಮವಾರದ ಬದಲು ಮಂಗಳವಾರ ರಂಜಾನ್ ಹಬ್ಬವನ್ನು ಆಚರಿಸಲಾಗುತ್ತದೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಚಂದ್ರದರ್ಶನವಾಗದ ಕಾರಣ ಮಂಗಳವಾರ ರಂಜಾನ್ ಆಚರಿಸಲಾಗುವುದು ಎನ್ನಲಾಗಿದೆ.   ಮೇ 3 ರಂದು ರಂಜಾನ್ ನಿಗದಿಯಾಗಿತ್ತು. ರಾಜ್ಯದಲ್ಲಿ ಮೇ 2 ರಂದು ಸರ್ಕಾರ ಸಾರ್ವತ್ರಿಕ ರಜೆ ಘೋಷಣೆ ಮಾಡಿದೆ. ಆದರೆ, ಚಂದ್ರದರ್ಶನವಾಗದ ಕಾರಣ ಸೋಮವಾರದ ಬದಲು ಮಂಗಳವಾರ ರಂಜಾನ್ …

Read More »

ಕಾರ್ಮಿಕ ದಿನದಂದೇ KSRTC ನೌಕರರಿಗೆ ಸಿಕ್ತು ಸಿಹಿ ಸುದ್ದಿ: 7200 ನೌಕರರ ಶಿಸ್ತು ಪ್ರಕರಣ ಮನ್ನಾ

ಬೆಂಗಳೂರು: ಇಂದು ಮೇ.1ರ ಕಾರ್ಮಿಕ ದಿನಾಚರಣೆ. ಈ ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿಯೇ, ಕೆ ಎಸ್ ಆರ್ ಟಿ ಸಿ ನೌಕರರಿಗೆ ( KSRTC Employees ) ನಿಗಮವು ಭರ್ಜರಿ ಗಿಫ್ಟ್ ನೀಡಿದೆ. ಅದೇ.. ನಿಗಮದ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ 7200 ನೌಕರರ ಶಿಸ್ತು ಪ್ರಕರಣಗಳನ್ನು ಒಂದು ಬಾರಿಗೆ ಮಾತ್ರ ಅನ್ವಯಿಸುವಂತೆ ಮನ್ನಾ‌ ಮಾಡಲಾಗಿದೆ. ಹತ್ತು ತಿಂಗಳುಗಳ ಅವಧಿಗಿಂತ ಕಡಿಮೆ ಅವಧಿಯ ಒಳಗಿನ ಗೈರುಹಾಜರಿಯನ್ನು ಮನ್ನಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾಗುವ ನೌಕರರ …

Read More »

PSI ನೇಮಕಾತಿ ಹಗರಣ: ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ದಿವ್ಯಾ ಹಾಗರಗಿ!

ಕಲಬುರಗಿ: ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ದಿವ್ಯಾ ಹಾಗರಗಿ ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಆರೋಪಿ ದಿವ್ಯಾ ಹಾಗರಗಿ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಒಡತಿ. ಇದೇ ಶಾಲೆಯಲ್ಲಿ ಅಕ್ರಮ ನಡೆದಿರುವ ಆರೋಪವಿದೆ. ಪರೀಕ್ಷೆ ಅಕ್ರಮದಲ್ಲಿ ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ದಿವ್ಯಾ ಒಪ್ಪಿಕೊಂಡಿದ್ದಾರೆಂದು ತಿಳಿದುಬಂದಿದೆ. ಎರಡು ಟೀಮ್​​ಗಳಿಂದಲು ದೊಡ್ಡ ಮೊತ್ತದ ಹಣ ಪಡೆದಿರುವ ಬಗ್ಗೆ ದಿವ್ಯಾ ಬಾಯಿಬಿಟ್ಟಿದ್ದಾರೆ. ಆ …

Read More »