ಬೆಂಗಳೂರು: ಕಳೆದೆರಡು ಶೈಕ್ಷಣಿಕ ವರ್ಷಗಳಂತೆ ಈ ವರ್ಷವೂ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದ ಸೈಕಲ್, ಶೂ ಮತ್ತು ಸಾಕ್ಸ್ ಗಳನ್ನು ರಾಜ್ಯ ಬಿಜೆಪಿ ಸರ್ಕಾರ ನಿಲ್ಲಿಸಿದೆಯಂತೆ. ಹಿಂದಿನ ವರ್ಷಗಳಲ್ಲಿ ಕೊರೊನಾ ಕಾರಣ ನೀಡಿದ್ದ ಸರ್ಕಾರ ಈ ವರ್ಷ 40% ಕಮಿಷನ್ ನಿಂದಾಗಿ ಖಾಲಿಯಾಗಿರುವ ಖಜಾನೆ ತೋರಿಸುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ‘ಒಂದೆಡೆ ರಾಜ್ಯಬಿಜೆಪಿ ಸರ್ಕಾರದ ಸಚಿವರು, ಆಡಳಿತ ಪಕ್ಷದ ನಾಯಕರು ಮತ್ತು ಅಧಿಕಾರಿಗಳ ದುಷ್ಟಕೂಟ ಕಮಿಷನ್ ದಂಧೆಯಲ್ಲಿ ತೊಡಗಿಕೊಂಡು ರಾಜ್ಯದ ಖಜಾನೆಯನ್ನು …
Read More »ಕೇಂದ್ರ ಸರ್ಕಾರದಿಂದ ಬಡಜನತೆಗೆ ಬಿಗ್ ಶಾಕ್: ‘ಗರೀಬ್ ಕಲ್ಯಾಣ್’ ಅನ್ನ ಯೋಜನೆಗೆ ಬ್ರೇಕ್.!?
ನವದೆಹಲಿ:ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ) ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳ ಸೌಲಭ್ಯವನ್ನುವನ್ನು ಕೊರೊನಾ ಅವಧಿಯಲ್ಲಿ, ದೇಶದ ಬಡ ಕುಟುಂಬಗಳಿಗೆ ನೀಡಲಾಗುತಿತ್ತು. ಈ ಇದನ್ನು ಸೆಪ್ಟೆಂಬರ್ ನಂತರ ನಿಲ್ಲಿಸಬಹುದು ಎನ್ನಲಾಗಿದೆ. ಹಣಕಾಸು ಸಚಿವಾಲಯದ ಅಡಿಯಲ್ಲಿನ ವೆಚ್ಚಗಳ ಇಲಾಖೆ ಈ ಯೋಜನೆಯನ್ನು ಸೆಪ್ಟೆಂಬರ್ ನಂತರ ವಿಸ್ತರಿಸಬಾರದು ಎಂದು ಸರ್ಕಾರಕ್ಕೆ ಸಲಹೆ ನೀಡಿದೆ ಎನ್ನಲಾಗಿದೆ. ‘ಈ ಯೋಜನೆಯು ದೇಶದ ಮೇಲೆ ಆರ್ಥಿಕ ಹೊರೆಯನ್ನು ತುಂಬಾ ಹೆಚ್ಚಿಸುತ್ತಿದೆ. ಇದು ದೇಶದ ಆರ್ಥಿಕ …
Read More »ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್;ಮರಣೋತ್ತರ ಪರೀಕ್ಷಾ ವರದಿ ಬಹಿರಂಗ
ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ, ವಾಸ್ತು ತಜ್ಞ ಡಾ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ವರದಿ ಬಹಿರಂಗವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಡಾ.ಸುನೀಲ್ ಬಿರಾದಾರ್ ನೇತೃತ್ವದಲ್ಲಿ ಚಂದ್ರಶೇಖರ್ ಗುರೂಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಗುರೂಜಿಯವರಿಗೆ ಬರೋಬ್ಬರಿ 42 ಬಾರಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಚಂದ್ರಶೇಖರ್ ಗುರೂಜಿ ಕುತ್ತಿಗೆಯ ಭಾಗದಲ್ಲಿ ಎರಡು ಕಡೆ ಇರಿದ ಗುರುತು ಪತ್ತೆಯಾಗಿದ್ದು, …
Read More »ಬೆಳಗಾವಿಗೆ ಇಂದು ಹಲವು ಸಚಿವರು ನಿಪ್ಪಾಣಿಯಲ್ಲಿ ಜ್ಯೋತಿ ಪ್ರಸಾದ ಜೊಲ್ಲೆ ವಿವಾಹ ಸಮಾರಂಭ
ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಗೆ ಇಂದು ಸಚಿವರ ದಂಡೆ ಆಗಮಿಸಲಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸೇರಿದಂತೆ ಹಲವು ಸಚಿವರು ಆಗಮಿಸಲಿದ್ದಾರೆ. ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸಂಸದ ಅಣ್ಣಾಸಾಹೇಬ ಜೊಲ್ಲೆ ಪುತ್ರ ಜ್ಯೊತಿ ಪ್ರಾಸಾದ್ ಜೊಲ್ಲೆ ಅವರ ವಿವಾಹ ಸಮಾರಂಭದ ಆರತಕ್ಷತೆ ಕಾರ್ಯಕ್ರಮ ಇಂದು ನಿಪ್ಪಾಣಿಯಲ್ಲಿ ನಡೆಯಲಿದ್ದು, ರಾಜ್ಯ ಸರ್ಕಾರದ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು-ವರರಿಗೆ ಶುಭ ಹಾರೈಸಲಿದ್ದಾರೆ. …
Read More »ಸಹಾಯಧನ ಚೇಕ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.!
ಸಹಾಯಧನ ಚೇಕ್ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ.! ಗೋಕಾಕ: ಆಕಸ್ಮೀಕ ಸಿಡಿಲು ಬಡಿದು ಮೃತಪಟ್ಟ ಜಾನುವಾರು ಮಾಲಕಿ ನಾಗವ್ವ ಪರಸನ್ನವರ ಅವರಿಗೆ ಶಾಸಕ ರಮೇಶ ಜಾರಕಿಹೊಳಿ ಬುಧವಾರದಂದು ತಮ್ಮ ಗೃಹ ಕಚೇರಿಯಲ್ಲಿ ೩೦ಸಾವಿರ ರೂಗಳ ಚೇಕ್ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಪ್ರಕಾಶ ಹೊಳೆಪ್ಪಗೋಳ, ಮಾಜಿ ಜಿಪಂ ಸದಸ್ಯ ಟಿ ಆರ್ ಕಾಗಲ, ಗ್ರಾಮ ಲೆಕ್ಕಾಧಿಗಳು ಇದ್ದರು.
Read More »ಮಹಾರಾಷ್ಟ್ರ ವ್ಯವಸ್ಥೆ ಬಗ್ಗೆ ತೀವ್ರ ಬೇಸರಗೊಂಡು ಐಎಎಸ್ ಹುದ್ದೆ ತ್ಯಜಿಸಿದ ಅಧಿಕಾರಿ!
ಪುಣೆ: ಮಹಾರಾಷ್ಟ್ರದ ವೈದ್ಯಕೀಯ ಶಿಕ್ಷಣ ಮತ್ತು ಔಷಧ ಇಲಾಖೆ(ಎಂಇಡಿಡಿ) ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ 2008ರ ಬ್ಯಾಚ್‌ನ ಐಎಎಸ್ ಅಧಿಕಾರಿ ದೌಲತ್ ದೇಸಾಯಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದು, ವ್ಯವಸ್ಥೆ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. MEDDಗೆ ವರ್ಗಾವಣೆಯಾಗುವ ಮೊದಲು ಅವರು ಕೊಲ್ಲಾಪುರದ ಕಲೆಕ್ಟರ್ ಆಗಿದ್ದರು ಮತ್ತು ಪಶ್ಚಿಮ ಮಹಾರಾಷ್ಟ್ರ ಜಿಲ್ಲೆಯನ್ನು ಕಾಡಿದ್ದ 2019 ರ ಪ್ರವಾಹ ಸ್ಥಿತಿಯನ್ನು ನಿಭಾಯಿಸಿದ್ದರು. …
Read More »ಮಾನವ ಗುರು’ ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ‘ಹೆಣ್ಣು – ಮಣ್ಣು” ಶಂಕೆ?
ಬೆಂಗಳೂರು: ಮಾನವ ಗುರು ಎಂದೇ ಟಿವಿ ವಾಹಿನಿಗಳಲ್ಲಿ ಹೆಸರು ಮಾಡಿರುವ ಸರಳ ವಾಸ್ತು ಮುಖ್ಯಸ್ಥ ಚಂದ್ರಶೇಖರ್ ಗುರೂಜಿ ಕೊಲೆ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು, ಈಗ ಈ ವಾಸ್ತು ಗುರುವಿನ ಹಿನ್ನೆಲೆ ಬಗ್ಗೆ ಭಾರಿ ಚರ್ಚೆ ಶುರುವಾಗಿದೆ. ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಚಂದ್ರಶೇಖರ್ ಗುರುಜಿ ಸೇನೆ ಸೇರಬೇಕೆಂಬ ಉದ್ದೇಶಕ್ಕೆ ಬೆಳಗಾವಿಗೆ ಬಂದು ಪ್ರಯತ್ನ ನಡೆಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಸಿವಿಲ್ ಎಂಜಿನಿಯರಿಂಗ್ ಹಿನ್ನೆಲೆಯ ಚಂದ್ರಶೇಖರ ಗುರೂಜಿ ಆ ಬಳಿಕ ಮುಂಬಯಿಗೆ …
Read More »ಬಕ್ರೀದ್ ಸಮೀಪಿಸುತ್ತಿದ್ದಂತೆ ಕುರಿ, ಮೇಕೆ, ಕೋಳಿಗಳ ವ್ಯಾಪಾರ ಜೋರಾಗಿದೆ
ರಾಯಬಾಗ : ಬಕ್ರೀದ್ (ಜುಲೈ 10) ಹಬ್ಬ ಸಮೀಪಿಸುತ್ತಿದ್ದಂತೆಯೇ ಪಟ್ಟಣದ ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ. ಕುರಿ, ಮೇಕೆ, ಕೋಳಿಗಳ ಸಂತೆಯಲ್ಲಿ ಈಗ ಜನಜಂಗುಳಿ ಉಂಟಾಗಿದೆ. ಪಟ್ಟಣದಲ್ಲಿ ಪ್ರತಿ ಸೋಮವಾರ ಸಂತೆ ನಡೆಯುತ್ತದೆ. ಆದರೆ, ಈಗ ತರಕಾರಿ, ಕಾಳು, ಹಣ್ಣುಗಳ ಮಾರಾಟಕ್ಕಿಂತ ಹೆಚ್ಚು ಸುದ್ದಿಯಲ್ಲಿರುವುದು ಕುರಿ, ಮೇಕೆಗಳು. ಪಟ್ಟಣ ಹೊರವಲಯದ ಬ್ಯಾಕುಡ ರಸ್ತೆಯಲ್ಲಿ ಈ ಕುರಿ- ಮೇಕೆ ಸಂತೆ ಸೇರು ತ್ತಿದೆ. ತಾಲ್ಲೂಕಿನ ವಿವಿಧ ಗ್ರಾಮಗಳ ಜನ ಕುರಿ- ಮೇಕೆ ಮಾರಲು ಬರುತ್ತಾರೆ. …
Read More »ಹೆಂಡತಿ ಶವ ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದ ಗಂಡ: ಇಬ್ಬರ ಬಂಧನ
ಬೆಂಗಳೂರು: ನೆಲಮಂಗಲ ತಾಲೂಕಿನ ದಾಬಸ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹೊನ್ನೇನಹಳ್ಳಿ ಕೆರೆಯಲ್ಲಿ ಇದೇ ತಿಂಗಳ 14ರಂದು ಸೂಟ್ಕೇಸ್ನಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಮಹಿಳೆ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ದಾಬಸ್‌ಪೇಟೆ ಪೊಲೀಸರು ತನಿಖೆ ನಡೆಸಿದ್ದಾರೆ. ಆಗ ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಿದ್ದ 35 ವರ್ಷದ ಮಹಿಳೆ ಮಂಜುಳ ಮೃತದೇಹ ಎಂದು ತಿಳಿದು ಬಂದಿದೆ. ಹೆಂಡತಿ ಶವವನ್ನು ಸೂಟ್ಕೇಸ್ನಲ್ಲಿ ತುಂಬಿ ಕೆರೆಗೆ ಎಸೆದ ಗಂಡ ಕಳೆದ ಎರಡು ವರ್ಷದ ಹಿಂದೆ ಈಕೆಯನ್ನು …
Read More »ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಹೋರಾಟ : ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ
ಗದಗ : ನಿಗದಿತ ಸಮಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಂಚಮಸಾಲಿ ಮಹಿಳಾ ಘಟಕದಿಂದ ಮತದಾನ ಬಹಿಷ್ಕಾರ ಮಾಡಲಿದ್ದೇವೆ. ಮೀಸಲಾತಿ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಪಂಚಮಸಾಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್ ಹೇಳಿದ್ದಾರೆ. ಇಲ್ಲಿ ಮಾತನಾಡಿದ ಅವರು, ಆಗಸ್ಟ್ 22 ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ. ಈ ಗಡುವಿನ ಒಳಗೆ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸಬೇಕು. ಸರ್ಕಾರ ಕಣ್ಣೋರೆಸುವ ತಂತ್ರ ಮಾಡಬಾರದು. ಇನ್ನು …
Read More »
Laxmi News 24×7