ಬಳ್ಳಾರಿ: ಶಾಸಕ ಭರತ ರೆಡ್ಡಿ ನೇತೃತ್ವದಲ್ಲಿ ನಿನ್ನೆ ಇಲ್ಲಿ ಗುಂಡಾಗರ್ದಿ ನಡೆದಿದೆ. ಸಾವಿರಾರು ಗೂಂಡಾಗಳನ್ನು ಕರೆತಂದು ಗೂಂಡಾಗಿರಿ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಬ್ಯಾನರ್ ಅಳವಡಿಕೆ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯ ಹಿನ್ನೆಲೆಯಲ್ಲಿ ಇಂದು ಬಳ್ಳಾರಿಗೆ ಆಗಮಿಸಿದ ಅವರು, ಗಾಯಗೊಂಡ ಬಿಜೆಪಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, “ಸತೀಶ್ ರೆಡ್ಡಿ ಅನ್ನೋ ವ್ಯಕ್ತಿ ಖಾಸಗಿ ವ್ಯಕ್ತಿಗಳನ್ನು ಬಳಸಿ ಫೈರ್ ಮಾಡಿರುವ ಮಾಹಿತಿ ಇದೆ. …
Read More »ಕಾಲ್ತುಳಿತದಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಕ್ರಿಕೆಟ್ ಟೂರ್ನಿ ನಡೆಸಬೇಕು ಎಂದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ
ಬೆಂಗಳೂರು: ಕಾಲ್ತುಳಿತ ದುರಂತ ಆಗಿದೆ ಎಂಬ ಕಾರಣಕ್ಕೆ ಕ್ರಿಕೆಟ್ ಪಂದ್ಯಾವಳಿ ನಿಲ್ಲಿಸುವುದು ಪರಿಹಾರವಲ್ಲ ಎಂದು ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ತಿಳಿಸಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, “ಕಾಲ್ತುಳಿತ ದುರಂತ ಆಗಿದೆ ಎಂಬ ಕಾರಣಕ್ಕೆ ಪಂದ್ಯಾವಳಿ ನಿಲ್ಲಿಸೋದು ಪರಿಹಾರವಲ್ಲ. ಮತ್ತೆ ಅಂತಹ ಘಟನೆಗಳು ನಡೆಯದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಆಟವಾಡಿಸಬೇಕು. ಪಂದ್ಯಾವಳಿ ನಡೆಯಬೇಕೆಂಬುದು ಎಲ್ಲರ ಬಯಕೆ. ದುರಂತ ಆಗಬಾರದಾಗಿತ್ತು, ಹನ್ನೊಂದು ಮಂದಿ ಸಾವನ್ನಪ್ಪಿದ್ದಾರೆ. ಈ ನೋವು ಸಾವನ್ನಪ್ಪಿದ ಕುಟುಂಬದವರಿಗೆ ಇದೆ” ಎಂದರು. ಕರ್ನಾಟಕ …
Read More »ಹಿರಿಯ ಲೇಖಕರಾದ ಶ್ರೀ ಯುತ ಜಿಬಿ ಪಾಟೀಲ್ ಅವರ ಸಮಯೋಚಿತ ಲೇಖನವಿದು ವಿಜಾಪುರದ ‘ಸಂಜಿವಿನಿ’ಗೆ ಸಂಚಕಾರ:
ಇದು ಸರಕಾರವೋ ಅಥವಾ ಸಾರ್ವಜನಿಕ ಆಸ್ತಿಯ ದಲ್ಲಾಳಿಯೋ? “ಬಡವನ ಆಸ್ತಿ ನುಂಗುವವನೇ ನಾಯಕ, ನ್ಯಾಯ ಕೇಳುವವನೇ ದೇಶದ್ರೋಹಿ!” – ಇದೇನಾ ನವ ಭಾರತದ ಪರಿಕಲ್ಪನೆ? ವಿಜಾಪುರದ ಬಿಸಿಲ ನಾಡಿನಲ್ಲಿ ಬಡವರ ಪಾಲಿಗೆ ಆಸರೆಯಾಗಿದ್ದ ೧೫೦ ಎಕರೆ ವಿಸ್ತೀರ್ಣದ ಸರಕಾರಿ ಆಸ್ಪತ್ರೆಯ ಜಮೀನು ಇಂದು ರಾಜಕಾರಣಿಗಳ ಮತ್ತು ಭೂಮಾಫಿಯಾದ ಕೆಟ್ಟ ಕಣ್ಣಿಗೆ ಬಿದ್ದಿದೆ. ಬ್ರಿಟಿಷರ ಕಾಲದ ಮಹಾತ್ಮರು ಬಡವರಿಗಾಗಿ ದಾನ ನೀಡಿದ ಈ ‘ಬಂಗಾರದ ಭೂಮಿ’ಯನ್ನು ‘ಪಿಪಿಪಿ’ (PPP) ಎಂಬ ಮುಸುಕಿನಡಿ …
Read More »ಬಳ್ಳಾರಿ ಗಲಭೆಯ ಬಗ್ಗೆ ತನಿಖೆಗೆ ಸೂಚನೆ ನೀಡಿದ್ದೇನೆ: ಸಿಎಂ
ಬೆಂಗಳೂರು: “ಬಳ್ಳಾರಿ ಗಲಭೆ ಪ್ರಕರಣವನ್ನು ತನಿಖೆ ಮಾಡುವುದಕ್ಕೆ ಹೇಳಿದ್ದೇನೆ. ಯಾರ ಗನ್ನಿಂದ ಬುಲೆಟ್ ಬಂದಿದೆ ಅನ್ನೋದು ಗೊತ್ತಾಗಬೇಕಲ್ವಾ?. ಬಿಜೆಪಿಯವರ ಗನ್ನಿಂದಲೋ ಅಥವಾ ಕಾಂಗ್ರೆಸ್‌ನವರ ಗನ್ನಿಂದ ಬಂದಿದ್ಯಾ ಎನ್ನುವುದು ಗೊತ್ತಾಗಬೇಕು. ಅದಕ್ಕೋಸ್ಕರ ತನಿಖೆ ಮಾಡಲು ಹೇಳಿದ್ದೇನೆ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಖಾಸಗಿ ಬುಲೆಟ್ ಎಂದು ಎಸ್ಪಿ ಮಾಹಿತಿ ನೀಡಿರುವ ವಿಚಾರಕ್ಕೆ, “ಅವರ ಸೆಕ್ಯುರಿಟಿಗಾಗಿ ಗನ್ ಇಟ್ಟುಕೊಂಡಿದ್ದಾರೆ. ಏರ್ನಲ್ಲಿ ಗನ್ ಫೈರ್ ಮಾಡಿದ್ದಾರೆ. ಫೈರ್ ಮಾಡಿರೋದು …
Read More »ಸುಗಮ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆ ಎರಡನೇ ಲೂಪ್ ಉದ್ಘಾಟಿಸಿದ ಡಿಸಿಎಂ ಡಿಕೆಶಿ
ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರಿಗೆ ವಾಹನ ಸಂಚಾರ ಸುಗಮವಾಗಲಿದೆ. ಇದೇ ವೇಳೆ ಮಾತನಾಡಿದ ಅವರು, “ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಬೆಂಗಳೂರಿನ ಉತ್ತರ ಭಾಗದ ಜನರ ಸುಗಮ ವಾಹನ ಸಂಚಾರಕ್ಕಾಗಿ ಹೆಬ್ಬಾಳ ಮೇಲ್ಸೇತುವೆಯ ಎರಡನೇ ಲೂಪ್ ಅನ್ನು ಇಂದು ಉದ್ಘಾಟನೆ ಮಾಡಿದ್ದೇವೆ. ಈ ಭಾಗದ ಜನರು ಹೆಬ್ಬಾಳ ಮೇಲ್ಸೇತುವೆ ಬಳಿ …
Read More »ಹಿಂಡಲಗಾ ಜೈಲಿನಲ್ಲಿ 12 ಮೊಬೈಲ್, ಗಾಂಜಾ, ಚಾರ್ಜರ್ ಪತ್ತೆ, 5 ಪ್ರಕರಣ ದಾಖಲು
ಬೆಳಗಾವಿ: ಹಿಂಡಲಗಾ ಗ್ರಾಮದಲ್ಲಿರುವ ಇಲ್ಲಿನ ಕೇಂದ್ರ ಕಾರಾಗೃಹದ ಗೋಡೆಯ ಮೇಲಿಂದ ಕಿಡಿಗೇಡಿಯೋರ್ವ ಮೊಬೈಲ್, ಡ್ರಗ್ಸ್ ಎಸೆದಿರುವ ಪ್ರಕರಣಕ್ಕೆ ಡಿಐಜಿ ಟಿ.ಪಿ.ಶೇಷ, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಪ್ರತಿಕ್ರಿಯಿಸಿದ್ದಾರೆ. ಮೊಬೈಲ್, ಡ್ರಗ್ಸ್ ಎಸೆದಿರುವ ಸಿಸಿಟಿವಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು ಜೈಲಿಗೆ ದೌಡಾಯಿಸಿದರು. ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಮಾಹಿತಿ ಕಲೆ ಹಾಕಿದರು. ಅಲ್ಲದೇ ಸಿಸಿಬಿ ಪೊಲೀಸರು ಕೂಡ ಪರಿಶೀಲನೆ ನಡೆಸಿದ್ದಾರೆ. …
Read More »ಖಾನಾಪುರ ಪಟ್ಟಣದಲ್ಲಿ ಹೆಚ್ಚಿದ ನಾಯಿಗಳ ಹಾವಳಿ: ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಇಸಾಕ್ ಖಾನ್ ಪಠಾಣ್ ಆಕ್ರೋಶ
ಖಾನಾಪುರ ಪಟ್ಟಣದಲ್ಲಿ ಹೆಚ್ಚಿದ ನಾಯಿಗಳ ಹಾವಳಿ: ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಇಸಾಕ್ ಖಾನ್ ಪಠಾಣ್ ಆಕ್ರೋಶ ಖಾನಾಪುರ ಪಟ್ಟಣದಲ್ಲಿ ಹೆಚ್ಚಿದ ನಾಯಿಗಳ ಹಾವಳಿ ಪಟ್ಟಣ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಇಸಾಕ್ ಖಾನ್ ಪಠಾಣ್ ಆಕ್ರೋಶ ಸಾರ್ವಜನಿಕರ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರ ಆಕ್ರೋಶ ಶೀಘ್ರವೇ ಕ್ರಮ ಕೈಗೊಳ್ಳದಿದ್ದರೇ ತೀವ್ರ ಪ್ರತಿಭಟನೆಯ ಎಚ್ಚರಿಕೆ ಖಾನಾಪುರ ಪಟ್ಟಣದ ಪ್ರಮುಖ ರಸ್ತೆ ಹಾಗೂ ಗಲ್ಲಿಗಳಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, …
Read More »ವಿಪಕ್ಷ ನಾಯಕರಿಗೆ ಈ ಸರ್ಕಾರ ಇನ್ನೂ ಸರ್ಕಾರಿ ನಿವಾಸ ಕೊಟ್ಟಿಲ್ಲ,
ಬೆಂಗಳೂರು: ಭೂ ಒತ್ತುವರಿ ಮಾಡುವವರಿಗೆ ಮನೆ ನಿರ್ಮಿಸಿಕೊಡುವ ಮೂಲಕ ಕಾಂಗ್ರೆಸ್ ಸರ್ಕಾರ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಮೂಲಕ ಭೂ ಮಾಫಿಯಾಗೆ ಪ್ರೋತ್ಸಾಹ ನೀಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ. ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಗಿಲು ಕ್ರಾಸ್‌ನಲ್ಲಿರುವ ಸರ್ಕಾರಿ ಜಮೀನಿನಲ್ಲಾದ ಒತ್ತುವರಿ ತೆರವು ಬಗ್ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಮಾತನಾಡಿದ್ದಾರೆ. ಇಲ್ಲಿ ಘನತ್ಯಾಜ್ಯ ನಿರ್ವಹಣೆ ಘಟಕ ಯೋಜನೆಗೆ 100 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬಾಂಗ್ಲಾದೇಶದಿಂದ …
Read More »ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸಂಸದರ ಯಾವುದೇ ಹಕ್ಕುಚ್ಯುತಿ ಉಲ್ಲಂಘಣೆ ಆಗಿಲ್ಲವೆಂದು ಸಮಗ್ರ ವಿಷಯದ ಕುರಿತು ವಿವರ ನೀಡಿ, ವಿಶೇಷ ಅಧಿಕಾರ ಕ್ರಮ ಕೈಗೊಳ್ಳಬಾರದೆಂದು ಮನವಿ ನೀಡಿ ಆಗ್ರಹಿಸಿದರು.
ಬೆಳಗಾವಿ: ಬೆಳಗಾವಿ ಜಿಲ್ಲಾಧಿಕಾರಿಗಳ ವಿರುದ್ಧ ಮಹಾರಾಷ್ಟ್ರ ಸಂಸದ ಧೈರ್ಯಶೀಲ್ ಮಾನೆ ಅವರು ಲೋಕಸಭಾ ಸ್ಪೀಕರ್ ಅವರಿಗೆ ದೂರು ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನವದೆಹಲಿಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮಾನ್ಯ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸಂಸದರ ಯಾವುದೇ ಹಕ್ಕುಚ್ಯುತಿ ಉಲ್ಲಂಘಣೆ ಆಗಿಲ್ಲವೆಂದು ಸಮಗ್ರ ವಿಷಯದ ಕುರಿತು ವಿವರ ನೀಡಿ, ವಿಶೇಷ ಅಧಿಕಾರ ಕ್ರಮ ಕೈಗೊಳ್ಳಬಾರದೆಂದು ಮನವಿ ನೀಡಿ ಆಗ್ರಹಿಸಿದರು. ಸೋಮವಾರ …
Read More »ಬೆಳಗಾವಿಯಲ್ಲಿ ಸ್ಕೌಟ್ಸ್ ಆ್ಯಂಡ್ ಗೈಡ್ಸ್ 29ನೇ ರಾಜ್ಯಮಟ್ಟದ ಜಾಂಬೋರೇಟ್ ಉದ್ಘಾಟನೆ (
ಬೆಳಗಾವಿ: “ಜಾಂಬೋರೇಟ್‌ನಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಭವಿಷ್ಯದ ಭಾರತ ನಿರ್ಮಾಣದ ಕಣ್ಣುಗಳು ನನಗೆ ಕಾಣಿಸಿದವು. ನೀವು ನಿಮ್ಮ ತಂದೆ-ತಾಯಿಯ ಆಸ್ತಿ ಅಷ್ಟೇ ಅಲ್ಲ. ಇಡೀ ದೇಶದ ಆಸ್ತಿಯನ್ನಾಗಿ ನಿಮ್ಮನ್ನು ರೂಪಿಸುವ ಕೆಲಸವನ್ನು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಮಾಡುತ್ತದೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಉತ್ತಮ ಭವಿಷ್ಯ ಮತ್ತು ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ” ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಕರೆ ಕೊಟ್ಟರು. ಬೆಳಗಾವಿ ತಾಲ್ಲೂಕಿನ ಹೊನಗಾ ಗ್ರಾಮದ ಬಳಿಯ ಫಿನಿಕ್ಸ್ ಶಾಲೆಯ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ …
Read More »
Laxmi News 24×7